ವಿಷಯಕ್ಕೆ ಹೋಗು

ನಥಾನ್ ಕೌಲ್ಟರ್ ನೈಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಥಾನ್ ಕೌಲ್ಟರ್ ನೈಲ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಪರ್ತ್ ಸ್ಕೊಚೆರ್ಸ್ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ನಥಾನ್ ರವರು ಅಕ್ತೋಬರ್ ೧೧, ೧೯೮೭ರಲ್ಲಿ ಆಸ್ಟ್ರೇಲಿಯಾದ ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ಜನಿಸಿದರು. ಇವರು ಕುಟುಂಬದ ಹಿರಿಯ ಮಗ, ಇವರಿಗೆ ಇಬ್ಬರು ಸಹೋದರಿಯರು. ಇವರು ತಮ್ಮ ಶಿಕ್ಷಣವನ್ನು ಅಕ್ವಿನಾಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವೆಸ್ಟರ್ನ್ ಆಸ್ಟ್ರೇಲಿಯಾ ರಾಜ್ಯದ ೧೭ರ ವಯೋಮಿತಿ ಹಾಗೂ ೧೯ರ ವಯೋಮಿತಿ ತಂಡವನ್ನು ಪ್ರತಿನಿಧಿಸಿದ್ದಾರೆ.[]

ವೃತ್ತಿ ಜೀವನ

[ಬದಲಾಯಿಸಿ]

ಫೆಬ್ರವರಿ ೧೯, ೨೦೧೦ರಲ್ಲಿ ಪರ್ತ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ತಸ್ಮೆನಿಯ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಫೆಬ್ರವರಿ ೧೩, ೨೦೧೩ ರಂದು ಬ್ರಿಸ್ಬೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುಧ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[] ಸೆಪ್ಟೆಂಬರ್ ೧೪, ೨೦೧೩ ರಂದು ಕಾರ್ಡಿಫ್ ನಲ್ಲಿ ಇಂಗ್ಲೆಂಡ್ ವಿರುಧ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[]

ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೩೨ ಪಂದ್ಯಗಳು[]
  • ಟಿ-೨೦ ಕ್ರಿಕೆಟ್ : ೨೮ ಪಂದ್ಯಗಳು

ಅರ್ಧ ಶತಕಗಳು

[ಬದಲಾಯಿಸಿ]
  1. ಏಕದಿನ ಪಂದ್ಯಗಳಲ್ಲಿ : ೦೧

ವಿಕೇಟ್ಗಳು

[ಬದಲಾಯಿಸಿ]
  1. ಏಕದಿನ ಪಂದ್ಯಗಳಲ್ಲಿ: ೫೨
  2. ಟಿ-೨೦ ಪಂದ್ಯಗಳಲ್ಲಿ: ೩೪

ಉಲ್ಲೇಖಗಳು

[ಬದಲಾಯಿಸಿ]
  1. https://www.cricbuzz.com/profiles/7774/nathan-coulter-nile
  2. https://cricketarchive.com/Archive/Players/98/98645/Miscellaneous_Matches.html
  3. https://www.espncricinfo.com/series/8043/scorecard/417661/western-australia-vs-tasmania-sheffield-shield-2009-10
  4. https://www.espncricinfo.com/series/12712/scorecard/514024/south-africa-vs-australia-2nd-t20i-australia-tour-of-south-africa-2011-12
  5. https://www.espncricinfo.com/series/12088/scorecard/566944/england-vs-australia-4th-odi-australia-tour-of-england-and-scotland-2013
  6. http://www.espncricinfo.com/australia/content/player/261354.html