ನಂದು ಮಹಾದೇವ್ ನಾಟೆಕರ್
ನಂದು ಎಂ. ನಾಟೇಕರ್ (೧೨ ಮೇ ೧೯೩೩[೧][೨] - ೨೮ ಜುಲೈ ೨೦೨೧) ಇವರು ಭಾರತದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಾರೆ.
ಜನನ
[ಬದಲಾಯಿಸಿ]ನಂದು ಮಹಾದೇವ್ ನಾಟೆಕರ್ ಅವರು ೧೨ ಮೇ ೧೯೩೩ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು.
ವೃತ್ತಿ
[ಬದಲಾಯಿಸಿ]ನಾಟೇಕರ್ ಅವರ ೧೫ ವರ್ಷಗಳ ವೃತ್ತಿಜೀವನದಲ್ಲಿ ೧೦೦ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೩] ಇವರು ೧೯೫೬ರಲ್ಲಿ ವಿದೇಶದಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದರು.[೪][೫] ನಾಟೇಕರ್ ಅವರು ನಾಟೇಕರ್ ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್(ಎನ್‌ಎಸ್‌ಎಫ್)ನ ನಿರ್ದೇಶಕರಾಗಿದ್ದರು.
ಇವರು ಪುರುಷರ ಡಬಲ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಒಟ್ಟು ಆರು ಬಾರಿ,[೬] ಪುರುಷರ ಸಿಂಗಲ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಒಟ್ಟು ಆರು ಬಾರಿ[೭] ಮತ್ತು ಮಿಶ್ರ ಡಬಲ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಒಟ್ಟು ಐದು ಬಾರಿ ಗೆದ್ದಿದ್ದಾರೆ.[೮]
ನಾಟೇಕರ್ ಇವರು ಮುಂಬೈನ ರಾಮ್‌ನಾರಾಯಣ್ ರುಯಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು.[೯] ಅವರ ಮಗ ಗೌರವ್ ನಾಟೇಕರ್ ಟೆನಿಸ್‌ನಲ್ಲಿ ಏಳು ಬಾರಿ ಭಾರತದ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.[೧೦]
ನಿಧನ
[ಬದಲಾಯಿಸಿ]ನಾಟೇಕರ್ ಅವರು ೨೮ ಜುಲೈ ೨೦೨೧ ರಂದು ಪುಣೆಯಲ್ಲಿ ನಿಧನರಾದರು. ಆಗ ಅವರಿಗೆ ೮೮ ವರ್ಷ.[೧೧][೧೨]
ಸಾಧನೆಗಳು
[ಬದಲಾಯಿಸಿ]- ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಸಿಂಗಲ್ಸ್ ಚಾಂಪಿಯನ್‌ಶಿಪ್ , ಡಬಲ್ಸ್ ಚಾಂಪಿಯನ್‌ಶಿಪ್ ಮತ್ತು ಮಿಶ್ರ ಡಬಲ್ಸ್ ಚಾಂಪಿಯನ್‌ಶಿಪ್ ಅನ್ನು ಅನೇಕ ಬಾರಿ ಗೆದ್ದಿದ್ದಾರೆ.[೩][೧೩]
- ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಇವರು ಕೊನೆಯ ೮ನೇ ಸ್ಥಾನಕ್ಕೆ ತಲುಪಿದ್ದಾರೆ.
- ೧೯೫೪-೫೫ರ ಥಾಮಸ್ ಕಪ್ ಸರಣಿಯ ಸಮಯದಲ್ಲಿ ಮಲೇಷ್ಯಾದಲ್ಲಿ ಪ್ರಕಟಿಸಿದ ಸ್ಮರಣಿಕೆಯನ್ನು 'ದಿ ಗ್ರೇಟ್‌ಗಳಲ್ಲಿ' ಸೇರಿಸಲಾಗಿದೆ.[೧೪]
- ೧೯೬೧ ರಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಎಂದು ಪ್ರಸಿದ್ಧರಾಗಿದ್ದರು.[೩]
- ನಾಟೇಕರ್ ಮತ್ತು ಮೀನಾ ಶಾ ಅವರು ೧೯೬೨ ರಲ್ಲಿ ಬ್ಯಾಂಕಾಕ್‌ನ ಕಿಂಗ್ಸ್ ಕಪ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು ಮತ್ತು ೧೯೬೩ರ ಅದೇ ಸಮಾರಂಭದಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.[೪]
- ೧೯೬೬ ರಲ್ಲಿ ಜಮೈಕಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು.[೧೪]
- ೧೯೮೯ ರಲ್ಲಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನಿಂದ ಮೆರಿಟೋರಿಯಸ್ ಸರ್ವೀಸ್ ಅವಾರ್ಡ್ ಅನ್ನು ನೀಡಲಾಯಿತು.[೧೫]
- ೧೯೯೧ ರಲ್ಲಿ ಮಾರಿಷಸ್‌ನ ಜಗತಿಕ್ ಮರಾಠಿ ಪರಿಷತ್ತಿನಲ್ಲಿ ಸನ್ಮಾನಿಸಲಾಯಿತು.[೧೪]
- ಜನವರಿ ೨೦೦೧ ರಲ್ಲಿ ಭಾರತದ ಪೆಟ್ರೋಲಿಯಂ ಕ್ರೀಡಾ ನಿಯಂತ್ರಣ ಮಂಡಳಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.[೧೬]
- ೨೦೦೨ರಲ್ಲಿ ಸಹ್ಯಾದ್ರಿ ನವರತ್ನ ಪುರಸ್ಕಾರ ಪ್ರಶಸ್ತಿಯನ್ನು ನೀಡಲಾಯಿತು.[೧೪]
ಉಲ್ಲೇಖಗಳು
[ಬದಲಾಯಿಸಿ]- ↑ "Reference India: M-R". 2003.
- ↑ "Nandu Natekar, India's first badminton hero, passes away | Badminton News – Times of India".
- ↑ ೩.೦ ೩.೧ ೩.೨ "Natekar.com". Archived from the original on 7 February 2005. Retrieved 25 December 2007.
- ↑ ೪.೦ ೪.೧ PIB.NIC.IN
- ↑ WebIndia123
- ↑ In the years 1955,1956,1958,1960,1961,1963 – Badminton India Archives – Men's Doubles
- ↑ In the years 1953,1954,1958,1960,1961,1965 – Badminton India Archives – Men's Singles
- ↑ In the years 1953,1954,1961,1966,1970 – Badminton India Archives – Mixed Doubles
- ↑ "Ruia College – Awards and Distinctions". Archived from the original on 5 January 2008. Retrieved 25 December 2007.
- ↑ Indian Express (newspaper)
- ↑ Scroll Staff. "Indian badminton legend Nandu Natekar dies at 88". Scroll.in (in ಅಮೆರಿಕನ್ ಇಂಗ್ಲಿಷ್). Retrieved 28 July 2021.
- ↑ "Indian badminton great Nandu Natekar passes away". www.telegraphindia.com. Retrieved 28 July 2021.
- ↑ Badminton India Archives – Individual Championships
- ↑ ೧೪.೦ ೧೪.೧ ೧೪.೨ ೧೪.೩ Indiantelevision.com
- ↑ Badminton India Archives – Awards
- ↑ "The Hindu (newspaper)". Archived from the original on 4 March 2007. Retrieved 25 December 2007.
{{cite web}}
: CS1 maint: unfit URL (link)