ನಂದಾ ಕುಮಾರಸ್ವಾಮಿ

ವಿಕಿಪೀಡಿಯ ಇಂದ
Jump to navigation Jump to search

ನಂದಾ ಕುಮಾರಸ್ವಾಮಿ ಅವರಿಗೆ ನಾಟಕ ಕ್ಷೇತ್ರದಲ್ಲಿ ಆಸಕ್ತಿ ಇತ್ತು.ಇವರು ಬರಹಗಾರ್ತಿಯಾಗಿ ಹಲವಾರು ಕೃತಿಗಳನ್ನು ರಚಿಸಿರುವರು. ನಾಟಕ, ಕಾವ್ಯ, ಮಕ್ಕಳ ಸಾಹಿತ್ಯ, ಲೇಖನಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಅವರ ಸಾಹಿತ್ಯ ಹರಹು.

ಜನನ[ಬದಲಾಯಿಸಿ]

ನಂದಾ ಅವರ ಹಿರಿಯರು ದೊಡ್ಡಬಳ್ಳಾಪುರದವರು .ತಂದೆ ಶಿವರಾಮಯ್ಯ ತಾಯಿ ಲಕ್ಷ್ಮೀದೇವಮ್ಮ. ಬಿ.ಎ ಪದವೀಧರೆಯಾದ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯ ಜ್ಞಾನಭಾರತಿಯಲ್ಲಿ ಕನ್ನಡ ಎಂ.ಎ. ವ್ಯಾಸಂಗ.ಆ ಕಾಲದಲ್ಲಿ ಜ್ಞಾನಭಾರತಿಯಲ್ಲಿ ಪ್ರಕಟವಾಗುತ್ತಿದ್ದ ತಾಯ್ನುಡಿ ಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟಗೊಂಡವು.೧೯೮೦ರಲ್ಲಿ ಕನ್ನಡ ಎಂ.ಎ. ಪದವೀಧರೆಯದರು.ಮುಂದೆ ಸುಳ್ಯದ ಕುಮಾರಸ್ವಾಮಿ ಎಂಬವರನ್ನು ವಿವಹವದರು.

ವೃತ್ತಿ[ಬದಲಾಯಿಸಿ]

 • ಬೆಂಗಳೂರಿನ ಎನ್.ಎಂ.ಕೆ.ಆರ್ವಿ ಕಾಲೇಜು, ದೊಡ್ಡ ಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜುಗಳಲ್ಲಿ ಉದ್ಯೋಗ.
 • ಮಂಗಳೂರಿನ ರಥಬೀದಿಯ ಮಹಿಳಾ ಪದವಿಪುರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಗಿದ್ದರು.
 • ಕರಾವಳಿ ಲೇಖಕಿಯರ ಸಂಘದ ಸದಸ್ಯರಾದರು.

ಕೃತಿಗಳು[ಬದಲಾಯಿಸಿ]

 1. ನನ್ನ ಸೂರ್ಯನ ನಾಡಿನಲ್ಲಿ (ಕವನ ಸಂಕಲನ)
 2. ಕತೆ ಹೇಳುವ ಸಮಯ (ಪುಟ್ಟ ಕವನ)
 3. ನೆರಳು (ಮುಕ್ತಕಗಳ ಸಂಕಲನ)
 4. ಗಾದೆ (ನಾಟಕ)
 5. ಮಹಿಳೆ ಮತ್ತು ಅಗ್ನಿ (ಗದ್ಯ ಕೃತಿ)-ಇವು ಪ್ರಕಟಗೊಂಡ ಕೃತಿಗಳು.
 6. ಸತಿ ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ
 7. ಚಾವಡಿಯೊಳಗೆ (ಕವನ ಸಂಕಲನ)
 8. ಚಂದ್ರಲೋಕದ ಕ ತೆರೆದಾಗ (ಐದು ಸಾಲಿನ ಪದ್ಯಗಳು)

ಇವು ಪ್ರಕಟವಾಗಲಿರುವ ಕೃತಿಗಳು.[೧]

ಸಾಧನೆಗಳು[ಬದಲಾಯಿಸಿ]

 • ಮಂಗಳೂರು ಆಕಾಶವಾಣಿ ಕಲಾವಿದೆಯಾಗಿದ್ದರು.
 • ಸ್ವಂತಿಕಾ ಸಾಹಿತ್ಯ ಬಳಗ,ಸುಳ್ಯ ಅಭಿನಯ ನಾಟಕ ತಂಡ,ಸುಳ್ಯ ಇವುಗಳ ಕಾರ್ಯನಿರ್ವಹಣೆಯಲ್ಲಿ ಪಾಲ್ಗೊಂಡಿರುವರು.
 • ಸುಳ್ಯ ತಾಲೂಕು ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 • ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.
 • ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವರು.

ಪ್ರಶಸ್ತಿಗಳು[ಬದಲಾಯಿಸಿ]

 1. ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ[೨]
 2. ಕುರುಂಜಿ ವೆಂಕಟರಮಣ ಗೌಡ ಪ್ರತಿಭ ಪ್ರಶಸ್ತಿ.

ಉಲ್ಲೇಖ[ಬದಲಾಯಿಸಿ]

 1. ಚಂದ್ರಗಿರಿ,ನಾಡೋಜ ಡಾ.ಸಾರಾ ಅಬೂಬಕ್ಕರ್ ಅಭಿನಂದನ ಗ್ರಂಥ,ಸಂಪಾದಕರು ಡಾ.ಸಬಿಹಾ,ಸಿರಿವರ ಪ್ರಕಶನ ,ಬೆಂಗಳೂರು, ಮೊದಲ ಮುದ್ರಣ ೨೦೦೯,೩೮೩
 2. timesofindia.indiatimes.com/topic/Kannada-Rajyotsava-award/news