ವಿಷಯಕ್ಕೆ ಹೋಗು

ನಂದನವನದ ಪಕ್ಷಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಂದನವನದ ಪಕ್ಷಿಗಳು ( ಬರ್ಡ್ಸ್ ಆಫ್ ಪ್ಯಾರಡೈಸ್) ಪಕ್ಷಿಸಂಕುಲದ ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದವಾಗಿವೆ. ಈ ಪಕ್ಷಿಗಳು ಪೂರ್ವ ಇಂಡೋನೇಷ್ಯಾ, ಟೋರೆಸ್ ಜಲಸಂಧಿಯ ದ್ವೀಪಗಳು, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾದ ವಾಯವ್ಯ ಭಾಗದಲ್ಲಿ ಕಾಣಬರುತ್ತವೆ. ಈ ಪಕ್ಷಿಕುಟುಂಬದ ಸದಸ್ಯ ಗಂಡು ಹಕ್ಕಿಗಳು ತಮ್ಮ ಅದ್ಭುತ ಗರಿಗಳ ಜೋಡಣೆ ಹಾಗೂ ಪುಕ್ಕಗಳ ಗುಚ್ಛಕ್ಕೆ ಹೆಸರಾಗಿವೆ. ಸೃಷ್ಟಿಯ ಅದ್ಭುತಗಳಲ್ಲಿ ಒಂದರಂತೆ ಕಾಣುವ ಈ ಗಂಡು ಪಕ್ಷಿಗಳ ತಲೆ ಯಾ ಕೊಕ್ಕು ಅಥವಾ ಬಾಲದಿಂದ ಅತಿ ಉದ್ದವಾದ ಗರಿಗಳ ರಚನೆ ಕಾಣುವುದು. ಅಲ್ಲದೆ ಅನೇಕ ಹಕ್ಕಿಗಳಲ್ಲಿ ಈ ಗರಿಗಳು ಹಿಂದಕ್ಕೆ ಸುರುಳಿಯಂತೆ ಬಾಗಿ ಸುತ್ತಿಕೊಂಡು ಇರುವುದು ಸಹ ಕಾಣಬಹುದು. ಇನ್ನು ಕೆಲವಲ್ಲಿ ಉದ್ದನೆಯ ತಂತಿಯಂತೆ ಗರಿಗಳು ಇರುತ್ತವೆ. ಈ ಗರಿಗಳ ವರ್ಣಮಿಶ್ರಣದ ಸೌಂದರ್ಯ ಅನೂಹ್ಯ. ಈ ಪಕ್ಷಿಗಳಲ್ಲಿ ಹಲವು ಪ್ರಕಾರಗಳಿದ್ದು ೧೫ರಿಂದ ೧೧೦ ಸೆ.ಮೀ.ವರೆಗೆ ಉದ್ದ (ಬಾಲವನ್ನು ಹೊರತುಪಡಿಸಿ) ಮತ್ತು ೫೦ ರಿಂದ ೪೩೦ ಗ್ರಾಂ ವರಗೆ ತೂಕ ಹೊಂದಿರುತ್ತವೆ. ಉಷ್ಣವಲಯದ ಮಳೆಕಾಡುಗಳ ನಿವಾಸಿಗಳಾದ ಇವು ಇಂದು ಬೇಟೆಯಾಡುವಿಕೆ ಮತ್ತು ನಿರಂತರ ಅರಣ್ಯನಾಶದಿಂದಾಗಿ ಕಂಗೆಟ್ಟಿವೆ. ತಮ್ಮ ಅತ್ಯಾಕರ್ಷಕ ಗರಿಗಳಿಂದಾಗಿ ಮಾನವನ ದುರಾಸೆಯ ಕಣ್ಣಿಗೆ ಬಿದ್ದಿರುವ ಈ ನಂದನವನದ ಪಕ್ಷಿಗಳ ಹಲವು ಪ್ರಬೇಧಗಳು ಇಂದು ಅಳಿವಿನಂಚಿನಲ್ಲಿವೆ.

ನಂದನವನದ ಪಕ್ಷಿಗಳ ಗ್ಯಾಲರಿ[ಬದಲಾಯಿಸಿ]