ವಿಷಯಕ್ಕೆ ಹೋಗು

ಧಾರವಾಡ ತಾಲೂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧಾರವಾಡ ತಾಲೂಕು :

ಧಾರವಾಡ ಜಿಲ್ಲೆ ಕಾಶ್ಮೀರ ಎಂದೆ ಹೆಸರಾದ ಧಾರವಾಡ ತಾಲೂಕು ಮಲೆನಾಡಿನ ಸೊಬಗನ್ನು, ಬೆಳವಲದ ಬೆಡಗನ್ನು, ಗಡಿನಾಡಿನ ಗದ್ದಿಗೆಯನ್ನು ಹೊಂದಿದ ಪ್ರಕೃತಿಯ ರಮಣೀಯ ನಾಡಾಗಿದೆ. ಈ ತಾಲೂಕಿನಲ್ಲಿ ೩೪ ಗ್ರಾಮಗಳಲ್ಲಿ ೭೫ ಕ್ಕೊ ಹೆಚ್ಚು ಶಾಸನಗಳು ತಾಲೂಕಿನ ಇತಿಹಾಸ, ಸಾಂಸ್ಕೃತಿಕ, ಧಾರ್ಮಿಕ ಬದುಕಿನ ಮೇಲೆ ಬೆಳಕನ್ನು ಚೆಲ್ಲಿವೆ. ರಾ‍ಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರ್ಯರು, ಯಾದವ, ವಿಜಯನಗರ ಹಾಗೂ ಅವರ ಮಾಂಡಲಿಕರು, ಗೋವೆ ಯ ಕದಂಬರು, ಆಳ್ವಿಕೆಗೆ ಒಳಪತಟ್ಟಿತ್ತು. ಕ್ರಿ.ಶ. ೯ನೆಯ ಶತಮಾನದ ಹೆಬ್ಬಳ್ಳಿಯ ಶಾಸನ, ಕ್ರಿ.ಶ. ೧೬ ನೇಯ ಶತಮಾನದ ಕಲ್ಲೆ ಶಾಸನ, ಕ್ರಿ.ಶ. ೧೦೪೫ ರ ಮುಗದ ಶಾಸನ, ಕ್ರಿ.ಶ. ೧೧೨೭ರ ಮಾಧನಭಾವಿ ಶಾಸನ, ೧೧೩೬ರ ವೆಂಕಟಾಪೂರ ಶಾಸನ, ಕ್ರಿ.ಶ ೧೧೪೬ರ ಅಮ್ಮಿನಬಾವಿ ಶಾಸನ, ಕ್ರಿ.ಶ ೧೨೬೪ ರ ಕೊಟಬಾಗಿ ಶಾಸನ, ಕ್ರಿ.ಶ ೧೨೮೪ ರ ತಡಕೋಡ ಶಾಸನ, ಕ್ರಿ.ಶ ೧೫೪೭ರ್ ದೇವರಹುಬ್ಬಳ್ಳಿಯ್ ಶಾಸನಗಳು ಈ ತಾಲೂಕಿನ ನೆನಪುಗಳಾಗಿದ್ದು ಇವು ನಮ್ಮ ನಾಡಿನ ಗತ ಇತಿಹಾಸವನ್ನು ನೆನಪಿಸುತ್ತವೆ.