ದ ಮಪೆಟ್ಸ್
ದ ಮಪೆಟ್ಸ್ ಎಂಬವು 1954–55ರ ಅವಧಿಯಲ್ಲಿ ಜಿಮ್ ಹೆನ್ಸನ್‌ರು ಸೃಷ್ಟಿಸಲಾರಂಭಿಸಿದ್ದ ಬೊಂಬೆ ಪಾತ್ರಗಳ ಸಮೂಹವಾಗಿವೆ. ಒಂದೊಂದಾಗಿ ಸ್ವತಃ ಜಿಮ್ ಹೆನ್ಸನ್‌ರಿಂದ ಅಥವಾ ಅವರ ಕಂಪೆನಿಯ ಕಾರ್ಯಾಗಾರದಿಂದ ಮಪೆಟ್‌ಗಳು ತಯಾರಿಸಲ್ಪಟ್ಟಿರುತ್ತವೆ. ದ ಮಪೆಟ್ ಷೋ ದ ವೈಶಿಷ್ಟ್ಯಸೂಚಕ ಶೈಲಿಯನ್ನು ಹೋಲುವ ಯಾವುದೇ ಬೊಂಬೆಯನ್ನು ಸೂಚಿಸಲು ಬಳಕೆಯಾಗುವುದಾದರೂ, ಈ ಪದವು ಹೆನ್ಸನ್‌ರು ಸೃಷ್ಟಿಸಿದ ಪಾತ್ರಗಳಿಗೆ ಸಂಬಂಧಿಸಿದ ವಿಧಿಬದ್ಧ ವ್ಯಾಪಾರಸ್ವಾಮ್ಯ ಮುದ್ರೆ ಹಾಗೂ ಅನೌಪಚಾರಿಕ ಹೆಸರಾಗಿ ಮಹತ್ವವನ್ನು ಪಡೆದುಕೊಂಡಿದೆ.
"ಮಪೆಟ್" ಎಂಬ ಪದವು 1956ರಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು, "ಮಾರಿಯೋನೆಟ್ " ಮತ್ತು "ಪಪೆಟ್ " ಎಂಬ ಪದಗಳನ್ನು ಸೇರಿಸಿ ಆ ಪದವನ್ನು ಟಂಕಿಸಿದ್ದಾಗಿ ಹೆನ್ಸನ್‌ರು ತಿಳಿಸಿದ್ದರು. ಆದಾಗ್ಯೂ, ಹೆನ್ಸನ್‌ರು ಅದನ್ನು ಕೇಳಲು ಒಂದು ರೀತಿಯಲ್ಲಿರುವುದು ಇಷ್ಟವಾಯಿತೆಂಬುದಾಗಿ ಹಾಗೂ ಹೀಗೆ ನಡೆಯಲು ಸಾಧ್ಯ ಎಂಬಂತೆ ಕಂಡುಬಂದುದರಿಂದ ಓರ್ವ ಪತ್ರಕರ್ತನೊಂದಿಗೆ ಮಾತನಾಡುವಾಗ ಸುಮ್ಮನೆ ಹೀಗೆ "ಸೂತ್ರದ ಗೊಂಬೆ/ಬೊಂಬೆ " ಕಥೆ ಹೇಳಿದುದಾಗಿಯೂ ತಿಳಿಸಿದ್ದರೆಂದು ಹೇಳಲಾಗಿದೆ.[೧]
ಆರಂಭಿಕ ವಿಫಲ ಯತ್ನಗಳ ನಂತರ ದ ವಾಲ್ಟ್ ಡಿಸ್ನಿ ಕಂಪೆನಿಯು ದ ಮಪೆಟ್ಸ್ ಅನ್ನು 2004ರಲ್ಲಿ ಕೊಂಡುಕೊಂಡಿತು.[೨] ಈ ಮಾರಾಟಕ್ಕೆ ಅಪವಾದಗಳಾಗಿ ಉಳಿದವೆಂದರೆ ಸೆಸೇಮ್ ಸ್ಟ್ರೀಟ್ (ಅವುಗಳನ್ನು ಈ ಹಿಂದೆಯೇ ಸೆಸೇಮ್ ವರ್ಕ್‌ಷಾಪ್‌ಗೆ ಮಾರಿದ್ದುದರಿಂದ, ಅವರು ಮೊದಲಿಂದಲೂ ಸೃಜನಾತ್ಮಕತೆಯ ಹಕ್ಕುಗಳನ್ನು ಹೊಂದಿದ್ದು, ತಮ್ಮ ಬಳಕೆಗೆ ಮಪೆಟ್ ಪಾತ್ರಗಳನ್ನು ರಚಿಸಿ ಒದಗಿಸಲು ಮಾತ್ರವೇ ದ ಜಿಮ್ ಹೆನ್ಸನ್ ಕಂಪೆನಿಗೆ ಹಣವನ್ನು ಪಾವತಿಸುತ್ತಿದ್ದರು) ಹಾಗೂ ಫ್ರ್ಯಾಗಲ್ಸ್ ಆಫ್ ಫ್ರ್ಯಾಗಲ್ ರಾಕ್ (ಇವುಗಳು ಈಗಲೂ ದ ಜಿಮ್ ಹೆನ್ಸನ್ ಕಂಪೆನಿಯ ಮಾಲೀಕತ್ವಕ್ಕೇ ಸೇರಿವೆ)ಗಳಲ್ಲಿ ಕಂಡುಬರುವ ಪಾತ್ರಗಳು ಸೇರಿವೆ. "ಮಪೆಟ್ " ಎಂಬ ಹೆಸರಿನ ಕಾನೂನುಬದ್ಧ ವ್ಯಾಪಾರಸ್ವಾಮ್ಯ ಮುದ್ರೆಯನ್ನು ಪ್ರಸ್ತುತ ದ ಮಪೆಟ್ಸ್ ಹೋಲ್ಡಿಂಗ್ ಕಂಪೆನಿಯು (ಈಗ ದ ಮಪೆಟ್ಸ್ ಸ್ಟುಡಿಯೋ, LLC,[ಸೂಕ್ತ ಉಲ್ಲೇಖನ ಬೇಕು] ದ ವಾಲ್ಟ್ ಡಿಸ್ನಿ ಕಂಪೆನಿಯ ಒಂದು ಅಂಗಸಂಸ್ಥೆ) ಹೊಂದಿದ್ದರೂ; ಸೆಸೇಮ್ ವರ್ಕ್‌ಷಾಪ್ ಮತ್ತು ದ ಜಿಮ್ ಹೆನ್ಸನ್ ಕಂಪೆನಿಗಳು ನಿರ್ದಿಷ್ಟ ಅನುಮತಿಗಳ ಮೇರೆಗೆ ತಮ್ಮ ಪಾತ್ರಗಳಿಗೆ ಆ ಪದವನ್ನು ಬಳಸುತ್ತಿವೆ.
10 ವರ್ಷಗಳಿಗೂ ಹೆಚ್ಚಿನ ಅವಧಿಯ ನಂತರ ಹೊಸದೊಂದು ಚಲನಚಿತ್ರವು ನಿರ್ಮಾಣದಲ್ಲಿದೆ. ಡಿಸ್ನಿ ಸಂಸ್ಥೆಯು ಇತ್ತೀಚೆಗೆ ತನ್ನ ಸ್ಟುಡಿಯೋದ ಮುಂದಿನ ಮಪೆಟ್ ಚಲನಚಿತ್ರಕ್ಕಾಗಿ ಜೇಸನ್ ಸೆಗೆಲ್ ಮತ್ತು ನಿಕೋಲಸ್ ಸ್ಟಾಲರ್‌ರನ್ನು ತನ್ನ ಪಟ್ಟಿಗೆ ಸೇರಿಸಿಕೊಂಡಿದೆ.[೩] ಇದು ಮಪೆಟ್ಸ್ ಫ್ರಮ್ ಸ್ಪೇಸ್ ನ ನಂತರದ ಮೊತ್ತಮೊದಲ ಚಲನಚಿತ್ರಮಂದಿರದಲ್ಲಿ ಪ್ರದರ್ಶನವಾಗುವಂತಹಾ ಮಪೆಟ್ ಚಲನಚಿತ್ರವಾಗಲಿದೆ. ಜನವರಿ 2010ರಲ್ಲಿ ಈ ಚಿತ್ರವನ್ನು ನಿರ್ದೇಶನವನ್ನು ವಹಿಸಿಕೊಳ್ಳುವ ಒಪ್ಪಂದಕ್ಕೆ ಜೇಮ್ಸ್ ಬಾಬಿನ್ ಸಹಿ ಹಾಕಿದ್ದರು.
ದ ಮಪೆಟ್ಸ್ A Muppets Christmas: Letters to Santa , ಎಂಬ ತೀರ ಇತ್ತೀಚಿನ ವಿಶೇಷ ಕಿರುತೆರೆ ಕಾರ್ಯಕ್ರಮವು, NBCಯಲ್ಲಿ ಡಿಸೆಂಬರ್ 17, 2008ರಂದು ಪ್ರಸಾರವಾಯಿತು. ಇದನ್ನು ಸೆಪ್ಟೆಂಬರ್ 29, 2009ರಂದು DVDಯ ರೂಪದಲ್ಲಿ ಬಿಡುಗಡೆಗೊಳಿಸಲಾಯಿತು.[೪][೫] ಮಪೆಟ್‌ಗಳನ್ನು ಪ್ರದರ್ಶಿಸುವ ಹಾಲೊವೀನ್ TVಯ ವಿಶೇಷ ಕಾರ್ಯಕ್ರಮವೊಂದು ABC ವಾಹಿನಿಯಲ್ಲಿ ಅಕ್ಟೋಬರ್ 2010ರಲ್ಲಿ,[೬][೭][೮] ಪ್ರಸಾರವಾಗಬೇಕಾಗಿತ್ತು, ಆದರೆ ಬರಲಿರುವ ಚಲನಚಿತ್ರದ ಕಾರಣದಿಂದಾಗಿ ಅದನ್ನು ನೆನೆಗುದಿಗೆ ಹಾಕಲಾಯಿತು.[೯]
ಶಾರೀರಿಕ ರೂಪ
[ಬದಲಾಯಿಸಿ]ಜಿಮ್ ಹೆನ್ಸನ್‌ರ ಮಪೆಟ್‌ನ ತೀರಾ ಸಾಮಾನ್ಯವೆನಿಸುವ ವಿನ್ಯಾಸವು ತೀರಾ ಅಗಲವಾದ ಬಾಯನ್ನು ಹಾಗೂ ದೊಡ್ಡದಾದ ಹೊರಕ್ಕೆ ಚಾಚಿಕೊಂಡಂತಿರುವ ಕಣ್ಣುಗಳಿರುವ ಪಾತ್ರವಾಗಿರುತ್ತದೆ.
ಬೊಂಬೆಗಳನ್ನು ಸಾಮಾನ್ಯವಾಗಿ ವಿವಿಧ ರೀತಿಯ ಫೋಮ್ ರಬ್ಬರುಗಳಿಂದ ಅಚ್ಚುಗಳಿಂದ ಮೂಡಿಸಲಾಗಿದ್ದು ಅಥವಾ ಕೆತ್ತಲಾಗಿದ್ದು, ನಂತರ ತುಪ್ಪಳ, ಉಣ್ಣೆ ಅಥವಾ ಇತರೆ ವಸ್ತುಗಳಿಂದ ಮುಚ್ಚಲಾಗಿರುತ್ತದೆ. ಮಾನವರು, ಮಾನವರೂಪಿ ಪ್ರಾಣಿಗಳು, ನಿಜವಾದ ಪ್ರಾಣಿಗಳು, ಯಂತ್ರಮಾನವರು, ಮಾನವರೂಪಿ ವಸ್ತುಗಳು, ಭೂಮ್ಯಾತೀತ ಪ್ರಾಣಿಗಳು, ಕಾಲ್ಪನಿಕ ಪ್ರಾಣಿಗಳು ಅಥವಾ ಇತರೆ ಗುರುತಿಸಲಾಗದ, ಹೊಸದಾಗಿ ಕಲ್ಪಿಸಲಾದ ಪ್ರಾಣಿಗಳು, ದೈತ್ಯಪ್ರಾಣಿಗಳು ಅಥವಾ ಅಮೂರ್ತ ಪಾತ್ರಗಳನ್ನು ಮಪೆಟ್‌ಗಳು ಪ್ರತಿನಿಧಿಸಬಹುದಾಗಿರುತ್ತದೆ.
ಮಪೆಟ್‌ಗಳನ್ನು ಯಕ್ಷಿಣಿಯಾಟದ "ಪ್ರತಿಮೆಗಳು"/"ಬೊಂಬೆಗಳಿಂದ " ಬೇರೆಯೆಂದು ಪರಿಗಣಿತವಾಗುತ್ತವೆ ಇದಕ್ಕೆ ಕಾರಣ ಸಾಧಾರಣವಾಗಿ ಅವು ಕೇವಲ ತಲೆ ಹಾಗೂ ಮುಖಭಾಗದಲ್ಲಿ ಮಾತ್ರವೇ ಚಲನೆಯನ್ನು ತೋರಿಸುವಂತಿಲ್ಲದೇ ಅವುಗಳ ತೋಳುಗಳು ಹಾಗೂ ಇತರೆ ಭಾಗಗಳೂ ಕೂಡಾ ಚಲನಶೀಲವಾಗಿದ್ದು ಸುವ್ಯಕ್ತವಾಗಿರುತ್ತವೆ. ಮಪೆಟ್‌ಗಳನ್ನು ಸಾಧಾರಣವಾಗಿ ಮೆದುವಾದ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗಿರುತ್ತದೆ. ಅವುಗಳನ್ನು ಸಾಧಾರಣವಾಗಿ ಕಾಣಿಸಿಕೊಳ್ಳದಂತೆ ದೃಶ್ಯಸಜ್ಜುವಿನ ಹಿಂದೆ ಮರೆಯಾಗಿರುವ ಅಥವಾ ಛಾಯಾಗ್ರಾಹಕದ ನೋಟದಿಂದ ಮರೆಯಾಗಿರುವ ಸೂತ್ರದಬೊಂಬೆಯಾಟಗಾರರುಗಳ ಮೇಲೆ ಆಧರಿಸಿಲ್ಲವೆಂಬಂತೆ ಕೂಡಾ ಪ್ರದರ್ಶಿಸಲಾಗುತ್ತದೆ. ಛಾಯಾಗ್ರಾಹಕದ ಚೌಕಟ್ಟನ್ನು "ದೃಶ್ಯಸಜ್ಜು"ವನ್ನಾಗಿ ಬಳಸಿಕೊಳ್ಳುವುದು ದ ಮಪೆಟ್ಸ್ ಕಾರ್ಯಕ್ರಮದ ಒಂದು ನಾವೀನ್ಯತೆಯಾಗಿತ್ತು.[೧೦] ಹಿಂದೆ ಕಿರುತೆರೆಯಲ್ಲಿ ಸಾಧಾರಣವಾಗಿ ಪ್ರತ್ಯಕ್ಷ ದೃಶ್ಯವೆಂಬಂತೆ ಭಾಸವಾಗುವಂತೆ ಮಾಡಲು ನಟರನ್ನು ಮರೆ ಮಾಡುವ ದೃಶ್ಯಸಜ್ಜಿನ ತೆರೆಯಿರುತ್ತಿತ್ತು. ಕೆಲವೊಮ್ಮೆ ಅವುಗಳ ಇಡೀ ದೇಹವನ್ನು ತೆರೆಯ ಮೇಲೆ ಕಾಣಿಸುವಂತೆ ಪ್ರದರ್ಶಿಸಲಾಗುತ್ತದೆ. ಪಾತ್ರಗಳ ದೇಹ ಮತ್ತು ಬಾಯಿಗಳನ್ನು ಚಲಿಸುವಂತೆ ಮಾಡುವ ಅದೃಶ್ಯ ದಾರಗಳನ್ನು ಬಳಸಿ ನಂತರ ಅದಕ್ಕೆ ಧ್ವನಿಗಳನ್ನು ಸೇರಿಸಿ ಹೀಗೆ ಭಾಸವಾಗುವಂತೆ ಮಾಡಲಾಗುತ್ತದೆ.
ಮಪೆಟ್‌ಗಳು ವಿಕಸನಗೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದು ಲೇಖಕ ಮೈಕೆಲ್ ಡೇವಿಸ್‌ರು ತಮ್ಮ ಪರಿಭಾಷೆಯಲ್ಲಿ ಹೇಳುವಂತೆ "ಅಂಶ ಅಂಶಿಕವಾಗಿ", ವಿಕಸನಗೊಳ್ಳುತ್ತವೆ, ಇದರರ್ಥವೇನೆಂದರೆ ಅನೇಕ ವೇಳೆ ಸುಮಾರು ಒಂದು ವರ್ಷದವರೆಗೆ ಸಮಯವನ್ನು ತೆಗೆದುಕೊಂಡು ಸೂತ್ರದಬೊಂಬೆಯಾಟಗಾರರು ನಿಧಾನವಾಗಿ ತಮ್ಮ ಪಾತ್ರಗಳನ್ನು ಹಾಗೂ ಧ್ವನಿಗಳನ್ನು ಪಳಗಿಸಿಕೊಳ್ಳುತ್ತಾರೆ. ಡೇವಿಸ್‌ರು ಹೇಳಿದಂತೆ ಮಪೆಟ್‌ಗಳು, "ಓರ್ವ ಹೆನ್ಸನ್ ತಂಡದ ಸದಸ್ಯನಿಂದ ಮತ್ತೊಬ್ಬ ಸದಸ್ಯನೆಡೆಗೆ ಪರಿಪೂರ್ಣವಾದ ಮಾನವ-ಮಪೆಟ್ ಹೊಂದಾಣಿಕೆಯನ್ನು ಕಂಡುಕೊಳ್ಳುವ ಆಶಯದೊಂದಿಗೆ ವರ್ಗಾಯಿಸಲ್ಪಡುತ್ತಿದ್ದವಾಗಿದ್ದು ಪರೀಕ್ಷೆಯಿಂದ-ಪ್ರೇರಿಸಲ್ಪಡುವಂತವಾಗಿದ್ದವು" ಕೂಡಾ.[೧೧]
ಸೂತ್ರದಬೊಂಬೆಯಾಟಗಾರರು ಕಂಡುಬರುವಂತಿದ್ದರೂ ಮಪೆಟ್‌ಗಳೊಂದಿಗೆ ಸಂವಾದಿಸುವಾಗ ಮಪೆಟ್‌ಗಳು ಜೀವತುಂಬಿದ ಪ್ರಾಣಿಗಳೇನೋ ಎಂಬಂತೆ ವರ್ತಿಸುವ ಪ್ರವೃತ್ತಿಯನ್ನು ಮಕ್ಕಳು ತೋರುತ್ತಿದ್ದರು.[೧೨]
ಕಾರ್ಯ ವಿಧಾನ
[ಬದಲಾಯಿಸಿ]ಮಪೆಟ್‌ಗಾರ ಅಥವಾ ಮಪೆಟ್ ಸೂತ್ರಧಾರ ಯಾವಾಗಲೂ ಮಪೆಟ್‌ಅನ್ನು ತನ್ನ ತಲೆಯ ಮೇಲೆ ಇಲ್ಲವೇ ತನ್ನ ದೇಹದ ಮುಂಭಾಗದಲ್ಲಿ ಇಟ್ಟುಕೊಂಡು ತಲೆ ಹಾಗೂ ಬಾಯಿಗಳನ್ನು ಒಂದು ಕೈನಿಂದ ಹಾಗೂ ಕೈಗಳು ಹಾಗೂ ತೋಳುಗಳನ್ನು ಮತ್ತೊಂದರಿಂದ ಎರಡು ಪ್ರತ್ಯೇಕ ನಿಯಂತ್ರಕ ಸಲಾಕೆಗಳ ಮೂಲಕ ಅಥವಾ ಕೈಗಳನ್ನು ಕೈಚೀಲದ ರೀತಿಯಲ್ಲಿ "ಧರಿಸುವ" ಮೂಲಕ ನಿಯಂತ್ರಿಸುತ್ತಿರುತ್ತಾನೆ. ಈ ವಿಧಾನದ ಪರಿಣಾಮವಾಗಿ ಬಹುತೇಕ ಮಪೆಟ್‌ಗಳು ಎಡಚವಾಗಿದ್ದು ಇದಕ್ಕೆ ಕಾರಣ ಸೂತ್ರದಬೊಂಬೆಯಾಟಗಾರ ತನ್ನ ಬಲಗೈಯನ್ನು ತಲೆಯನ್ನು ನಿಯಂತ್ರಿಸಲು ಬಳಸಿದರೆ ತೋಳುಗಳನ್ನು ಎಡಗೈನಿಂದ ನಿಯಂತ್ರಿಸುತ್ತಿರುತ್ತಾನೆ. ಇನ್ನೂ ಹಲವು ಸಾಧಾರಣ ವಿನ್ಯಾಸಗಳು ಹಾಗೂ ಕಾರ್ಯಾಚರಣೆಯ ಶೈಲಿಗಳಿವೆ. ಉನ್ನತ ಮಟ್ಟದ ಮಪೆಟ್ ಕಾರ್ಯಕ್ರಮಗಳಲ್ಲಿ, ಹಲವು ಮಪೆಟ್‌ಗಾರರು ಒಂದೇ ಪಾತ್ರವನ್ನು ನಿಯಂತ್ರಿಸಬಹುದು ; ಬಾಯಿಯನ್ನು ನಿಯಂತ್ರಿಸುವ ಆಟಗಾರನೇ ಧ್ವನಿಬೆಂಬಲವನ್ನು ಕೂಡಾ ಕೊಡುತ್ತಿರುತ್ತಾನೆ. ತಂತ್ರಜ್ಞಾನವು ವಿಕಸನವಾಗುತ್ತಾ ಹೋಗುತ್ತಿದ್ದ ಹಾಗೆ ಜಿಮ್ ಹೆನ್ಸನ್ ತಂಡ ಹಾಗೂ ಇತರೆ ಸೂತ್ರದಬೊಂಬೆಯಾಟಗಾರರು ಚಲನಚಿತ್ರಗಳಲ್ಲಿ ಹಾಗೂ ಕಿರುತೆರೆಯಲ್ಲಿ ತೂಗುಬಿಟ್ಟ ಪೋಷಾಕುಗಳು, ಆಂತರಿಕ ಮೋಟಾರುಗಳು, ದೂರನಿಯಂತ್ರಣ ರೇಡಿಯೋ ನಿಯಂತ್ರಕ ಮತ್ತು ಗಣಕ ವರ್ಧಿತ ಹಾಗೂ ಅಧ್ಯಾರೋಪಣ ಚಿತ್ರಗಳ ಬಳಕೆಯೂ ಸೇರಿದಂತೆ ಮಪೆಟ್‌ಗಳನ್ನು ಆಡಿಸುವ ಬಹಳಷ್ಟು ವೈವಿಧ್ಯಮಯ ಬಗೆಗಳನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ. ತಂತ್ರಜ್ಞಾನಗಳ ಸೂಕ್ತವಾದ ಸಂಯೋಜನೆಯು ಮಪೆಟ್‌ಗಳು ಸೈಕಲ್‌ಗಳನ್ನು ಹೊಡೆಯುವಂತೆ, ದೋಣಿಯನ್ನು ನಡೆಸುವಂತೆ ಹಾಗೂ ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ಯಾವುದೇ ಸೂತ್ರದಬೊಂಬೆಯಾಟಗಾರರು ದೃಶ್ಯಸಜ್ಜಿನಲ್ಲಿರದಿದ್ದರೂ ನೃತ್ಯ ಮಾಡುತ್ತಿರುವಂತೆ ಭಾಸವಾಗುವ ದೃಶ್ಯಗಳನ್ನು ಮೂಡಿಸಲು ಸಾಧ್ಯವಾಗಿದೆ.
ಮಪೆಟ್ಸ್‌ನ ಪಾತ್ರಗಳು
[ಬದಲಾಯಿಸಿ]ದ ಮಪೆಟ್ ಷೋ ದ ಜನಪ್ರಿಯ ಮಪೆಟ್‌ಗಳು ಹಾಗೂ ಅವುಗಳ ಹಲವು ಉಪೋತ್ಪನ್ನಗಳಲ್ಲಿ ಕರ್ಮಿಟ್ ದ ಫ್ರಾಗ್, ಮಿಸ್ ಪಿಗ್ಗಿ, ಫಾಜ್ಜೀ ಬೇರ್, ರಿಜ್ಜೋ ದ ರ್ರ್ಯಾಟ್, ಗಾನ್ಝೋ ದ ಗ್ರೇಟ್, ರೌಲ್ಫ್ ದ ಡಾಗ್, Dr. ಬನ್ಸೆನ್ ಹನಿಡ್ಯೂ ಮತ್ತು ಬೀಕರ್, ಸ್ಕೂಟರ್, ಸ್ಟಾಟ್ಲರ್ ಅಂಡ್ ವಾಲ್ಡಾರ್ಫ್, ಸ್ವೀಡಿಷ್ ಷೆಫ್, ಸ್ಯಾಮ್ ದ ಈಗಲ್, ಸ್ವೀಟಮ್ಸ್, ಪೆಪೆ ದ ಕಿಂಗ್ ಪ್ರಾನ್, ರಾಬಿನ್ ದ ಫ್ರಾಗ್ (ಕರ್ಮಿಟ್‌ನ ಸೋದರಸಂಬಂಧಿ)ನಂತಹಾ ಪಾತ್ರಗಳೂ ಹಾಗೂ Dr. ಟೀತ್ , ಜಾನಿಸ್, ಝೂಟ್, ಫ್ಲಾಯ್ಡ್ ಪೆಪ್ಪರ್, ಮತ್ತು ಅನಿಮಲ್‌ಗಳನ್ನು ಸದಸ್ಯರನ್ನಾಗಿ ಒಳಗೊಂಡಿದ್ದ Dr. ಟೀತ್ ಅಂಡ್ ದ ಎಲೆಕ್ಟ್ರಿಕ್ ಮೇಹೆಮ್ ಎಂಬ ವಾದ್ಯತಂಡವೂ ಸೇರಿವೆ. ಇತರೆ ಪ್ರಸಿದ್ಧ ಮಪೆಟ್‌ಗಳಲ್ಲಿ ಬಿಗ್ ಬರ್ಡ್, ಆಸ್ಕರ್ ದ ಗ್ರೌಚ್, ಎಲ್ಮೋ, ಝೋ, ಬರ್ಟ್ ಅಂಡ್ ಎರ್ನೀ, ಕುಕೀ ಮಾನ್‌ಸ್ಟರ್, ಗ್ರೋವರ್, ಅಬ್ಬಿ ಕ್ಯಾಡಬ್ಬಿ ಮತ್ತು ಕೌಂಟ್ ವಾನ್ ಕೌಂಟ್‌ಗಳಂತಹಾ ಸೆಸೇಮ್ ಸ್ಟ್ರೀಟ್ ಪಾತ್ರಗಳು ಹಾಗೂ ಫ್ರಾಗಲ್ ರಾಕ್ ಪ್ರಧಾನ ಪಾತ್ರಗಳು ಸೇರಿವೆ.
ಮಪೆಟ್‌ಗಳನ್ನು ತಮ್ಮ ಕಾರ್ಯಕ್ರಮದ ಭಾಗವಾಗಿ ಹೊಂದಿರುವ ಇತರೆ ವ್ಯಾಪಕವಾಗಿ ಜನಜನಿತವಾದ[ಸೂಕ್ತ ಉಲ್ಲೇಖನ ಬೇಕು] ಕಿರುತೆರೆ ಕಾರ್ಯಕ್ರಮಗಳಲ್ಲಿ ಸೆಸೇಮ್ ಸ್ಟ್ರೀಟ್ , ದ ಮಪೆಟ್ ಷೋ , ಫ್ರಾಗಲ್ ರಾಕ್ , ಬೇರ್ ಇನ್ ದ ಬಿಗ್ ಬ್ಲ್ಯೂ ಹೌಸ್ ಗಳು ಸೇರಿವೆ. ದ ಜಿಮ್ ಹೆನ್ಸನ್ ಅವರ್ , ದ ಘೋಸ್ಟ್ ಆಫ್ ಫಾಫ್ನರ್ ಹಾಲ್ , ಡಾಗ್ ಸಿಟಿ , ಸೀಕ್ರೆಟ್ ಲೈಫ್ ಆಫ್ ಟಾಯ್ಸ್ , ಮಪೆಟ್ಸ್ ಟುನೈಟ್ , ದ ವೂಬ್ಯುಲಸ್ ವರ್ಲ್ಡ್ ಆಫ್ Dr. ಸ್ಯೂಸ್ ಮತ್ತು Statler and Waldorf: From the Balcony ಇತರೆ ಕಾರ್ಯಕ್ರಮ ಸರಣಿಗಳಲ್ಲಿ ಸೇರಿವೆ. ಸ್ಯಾಟರ್‌ಡೇ ನೈಟ್ ಲೈವ್ ನ ಮೊದಲ ಋತುವಿನುದ್ದಕ್ಕೂ ಪ್ರೌಢರನ್ನುದ್ದೇಶಿಸಿ ಸೃಷ್ಟಿಸಿದ ಮಪೆಟ್ ಪಾತ್ರಗಳನ್ನು (ದ ಲ್ಯಾಂಡ್ ಆಫ್ ಗಾರ್ಚ್ ಎಂಬ ಹೆಸರಿನ ಕಾರ್ಯಕ್ರಮದಲ್ಲಿ) ಸತತವಾದ ಸರಣಿಗಳಲ್ಲಿ ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮಗಳಲ್ಲಿನ ಕೆಲವು ಅತಿಥಿ ತಾರೆಗಳು ಪ್ರಾಸಂಗಿಕವಾಗಿ ತಮ್ಮದೇ ಮಪೆಟ್ ಆವೃತ್ತಿಗಳನ್ನು ಕೂಡಾ ಹೊಂದಿದ್ದರು. ಇತರೆ ಕಾರ್ಯಕ್ರಮಗಳಲ್ಲಿ ದ ಮಪೆಟ್ ಷೋ ಮತ್ತು ZZ ಟಾಪ್‌ಗಳ ಮೊದಲ ಕೆಲವು ಪ್ರಕರಣಗಳಲ್ಲಿ ಕಾಣಿಸಿಕೊಳ್ಳುವುದೊಂದು ವಾಡಿಕೆಯಾದ ರೂಢಿಯಾಗಿತ್ತು, ಇದು ಅವರುಗಳದೇ ಮಪೆಟ್ ಆವೃತ್ತಿಗಳಾಗಿ ಸೆಸೇಮ್ ಸ್ಟ್ರೀಟ್ ನಲ್ಲಿ ಕಾಣಿಸಿಕೊಂಡಿತ್ತು. ನಿಜಜೀವನದ ವ್ಯಕ್ತಿಗಳ ಮಪೆಟ್ ಆವೃತ್ತಿಗಳು 30 ರಾಕ್ ನಂತಹಾ ಇತರೆ ಕಾರ್ಯಕ್ರಮಗಳಲ್ಲಿ ಕೂಡಾ ಕಂಡುಬಂದಿದ್ದು ಅವುಗಳ ಪಾತ್ರಗಳಲ್ಲಿ ಒಂದಾದ, ಕೆನ್ನೆತ್ ಪಾರ್ಸೆಲ್ ತನ್ನ ಸಹೋದ್ಯೋಗಿಗಳನ್ನು ಮಾರ್ಚ್ 26, 2009ರ "ಅಪೋಲೋ, ಅಪೋಲೋ" ಪ್ರಕರಣದಲ್ಲಿ ಮಪೆಟ್-ಆವೃತ್ತಿಗಳಾಗಿ ಕಂಡುಕೊಳ್ಳುತ್ತಾನೆ.
ಫಾರ್‌ಸ್ಕೇಪ್ , ದ ಸ್ಟೋರಿಟೆಲ್ಲರ್ , ಮದರ್ ಗೂಸ್ ಸ್ಟೋರೀಸ್ , ದ ಹೂಬ್ಸ್ , ಕನ್‌ಸ್ಟ್ರಕ್ಷನ್ ಸೈಟ್ ಮತ್ತು ಡೈನೋಸಾರ್ಸ್ ಗಳ ಹಾಗೂ ಲೇಬಿರಿಂತ್ , ಟೀನೇಜ್ ಮ್ಯೂಟೆಂಟ್ ನಿಂಜಾ ಟರ್ಟಲ್ಸ್ , ಬಡ್ಡಿ , ದ ಕಂಟ್ರಿ ಬೇರ್ಸ್ ಮತ್ತು ದ ಡಾರ್ಕ್ ಕ್ರಿಸ್ಟಲ್ ಗಳಂತಹಾ ಚಲನಚಿತ್ರಗಳ ಬೊಂಬೆ ಪಾತ್ರಗಳನ್ನು ಮಪೆಟ್‌ಗಳೆಂದು[ಸೂಕ್ತ ಉಲ್ಲೇಖನ ಬೇಕು], ಪರಿಗಣಿಸಲಾಗುವುದಿಲ್ಲ ಏಕೆಂದರೆ ಹೆನ್ಸನ್‌ರ ಮಪೆಟ್ ವರ್ಕ್‌ಷಾಪ್‌ನ ಬದಲಿಗೆ ಜಿಮ್ ಹೆನ್ಸನ್‌ರ ಕ್ರಿಯೇಚರ್ ಷಾಪ್‌ನಲ್ಲಿ ಸಿದ್ಧಪಡಿಸಲಾಗಿತ್ತು. ದ ಜಿಮ್ ಹೆನ್ಸನ್ ಕಂಪೆನಿಯಿಂದ ಮಾಡಲ್ಪಟ್ಟುದದಾದರಿಂದ 2004ರಲ್ಲಿ ದ ಮಪೆಟ್ಸ್‌ನ ಮಾರಾಟದ ನಂತರ ಪಪೆಟ್ ಅಪ್ ! ಮತ್ತು ಟಿನ್ಸೆಲ್‌ಟೌನ್ ಗಳ ಬೊಂಬೆ ಪಾತ್ರಗಳನ್ನು ಕೂಡಾ ಮಪೆಟ್‌ಗಳಾಗಿ ಪರಿಗಣಿಸಲಾಗುತ್ತಿರಲಿಲ್ಲ. ಸ್ಟಾರ್ ವಾರ್ಸ್ ಚಿತ್ರದ ಪಾತ್ರ ಯೋಡಾಗೆ ಹೆನ್ಸನ್‌ರ ರೂಢಿಗತ ಆಡಿಸುವವರಲ್ಲಿ ಒಬ್ಬರಾದ ಫ್ರಾಂಕ್ ಓಜ್‌ರು ಕಂಠದಾನ ಮಾಡಿದ್ದು, ಇವರನ್ನು ಮಾಧ್ಯಮ ಹಾಗೂ ಉಲ್ಲೇಖದ ಕೃತಿಗಳಲ್ಲಿ ಮಪೆಟ್ ಎಂದೇ ಅದನ್ನು ಅನೇಕ ವೇಳೆ ಪ್ರಸ್ತಾಪಿಸಲಾಗುತ್ತದೆ ; ಆದಾಗ್ಯೂ , ಅದೊಂದು ಮಪೆಟ್ ಪಾತ್ರವಲ್ಲ ಹಾಗೂ ಆ ಪಾತ್ರದ ವಿನ್ಯಾಸದಲ್ಲಿ ಹೆನ್ಸನ್‌ರ ಸಂಸ್ಥೆಯು ಒಳಗೊಂಡಿರಲಿಲ್ಲ.
ದ ಮಪೆಟ್ಸ್‌ನ ಜನಪ್ರಿಯತೆಯು ಎಷ್ಟು ವಿಸ್ತಾರವಾದುದಾಗಿತ್ತೆಂದರೆ ಮಪೆಟ್ ಪಾತ್ರಗಳು ತಮ್ಮ ಸ್ವಂತ ಹಕ್ಕಿನಿಂದಲೇ ಪ್ರತಿಷ್ಠಿತ ಸ್ಥಾನ ಪಡೆದಿರುತ್ತವೆ. ದ ಮಪೆಟ್ಸ್ ಕಾರ್ಯಕ್ರಮವನ್ನು ಅಕಾಡೆಮಿ ಪ್ರಶಸ್ತಿಗಳು ಮತ್ತು ಎಮ್ಮಿ ಪ್ರಶಸ್ತಿಗಳ [ಸೂಕ್ತ ಉಲ್ಲೇಖನ ಬೇಕು] ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗಿತ್ತು [ಸೂಕ್ತ ಉಲ್ಲೇಖನ ಬೇಕು]; ರಾಕಿ III ,[೧೩] ಆನ್ ಅಮೇರಿಕನ್ ವೆರ್‌ವೂಲ್ಫ್ ಇನ್ ಲಂಡನ್ [೧೪] ಮತ್ತು Mr. ಮೆಗೋರಿಯಮ್‌ಸ್ ವಂಡರ್ ಎಂಪೋರಿಯಮ್ ಗಳಂತಹಾ ಚಲನಚಿತ್ರಗಳಲ್ಲಿ ಗಮನ ಸೆಳೆಯುವಂತೆ ಕಾಣಿಸಲಾಗಿತ್ತು ;[೧೫] ಹಾಗೂ 60 ಮಿನಟ್ಸ್ ಎಂಬ ಸುದ್ದಿಪತ್ರಿಕೆಯಲ್ಲಿ ಸಂದರ್ಶನವನ್ನೂ ನಡೆಸಲಾಗಿತ್ತು. ಕರ್ಮಿಟ್ ದ ಫ್ರಾಗ್ ಜಾನ್ ಸ್ಟೀವರ್ಟ್‌ರು ನಡೆಸಿಕೊಡುತ್ತಿದ್ದ ದ ಡೈಲಿ ಷೋ ,[೧೬] ಅತಿಥಿಗಳು ನಡೆಸಿಕೊಡಲ್ಪಡುವ ಕಾರ್ಯಕ್ರಮ ದ ಟುನೈಟ್ ಷೋ , ಜಿಮ್ಮಿ ಕಿಮ್ಮೆಲ್ ಲೈವ್ , Extreme Makeover: Home Edition , ಅಮೇರಿಕಾ'ಸ್ ಫನ್ನೀಯೆಸ್ಟ್ ಹೋಮ್ ವಿಡಿಯೋಸ್ ಮತ್ತು ಲ್ಯಾರ್ರಿ ಕಿಂಗ್ ಲೈವ್ [ಸೂಕ್ತ ಉಲ್ಲೇಖನ ಬೇಕು]ನ ಮೂರ್ಖರ ದಿನಾಚರಣೆಯ ವಿಶೇಷ ಕಾರ್ಯಕ್ರಮದ ಆವೃತ್ತಿಗಳಲ್ಲಿ ಮುಂಚೆಯೇ ಸಂದರ್ಶನಗಳು ನಡೆದಿದ್ದವು; ಹಾಗೂ ಇದರಲ್ಲಿನ ಕಪ್ಪೆಯು ಟೂರ್ನಮೆಂಟ್ ಆಫ್ ರೋಸಸ್ ಪೆರೇಡ್ [ಸೂಕ್ತ ಉಲ್ಲೇಖನ ಬೇಕು]ನ ಗ್ರಾಂಡ್ ಮಾರ್ಷಲ್ ಆಗಿ ಕಾರ್ಯನಿರ್ವಹಿಸಿತ್ತು. ಈ ಪಾತ್ರಗಳು ದ ಕಾಸ್ಬಿ/ಕಾಸ್ಬೈ ಷೋ , ದ ವೆಸ್ಟ್ ವಿಂಗ್ ಮತ್ತು ದ ಟಾರ್ಕೆಲ್‌ಸನ್ಸ್ [ಸೂಕ್ತ ಉಲ್ಲೇಖನ ಬೇಕು]ಗಳಂತಹಾ ಸಾಂದರ್ಭಿಕ ಹಾಸ್ಯ ಕಾರ್ಯಕ್ರಮಗಳು ಹಾಗೂ ರೂಪಕಗಳಲ್ಲಿ ತಮ್ಮ ಸ್ವಭಾವಕ್ಕನುಗುಣವಾದೆಡೆಯಲ್ಲಿ ಕೂಡಾ ಕಾಣಿಸಿಕೊಂಡಿವೆ. "ಕೀಪ್ ಫಿಷಿಂಗ್ " ಎಂಬ ವೀಜರ್ ಗೀತೆಯ ಸಂಗೀತ ವಿಡಿಯೋದಲ್ಲಿ ದ ಮಪೆಟ್ ಷೋ ವನ್ನು ಆಧರಿಸಿ ರಚಿತವಾದ ವಾದ್ಯತಂಡದ ಕಾರ್ಯಕ್ರಮದಲ್ಲಿ ಸ್ಥಾನ ಪಡೆದುಕೊಂಡಿದ್ದು ಅದರಲ್ಲಿ ಹಲವು ಪಾತ್ರಗಳು ಕಾಣಿಸಿಕೊಂಡಿವೆ. ಸೆಪ್ಟೆಂಬರ್ 28, 2005ರಂದು ಯುನೈಟೆಡ್ ಸ್ಟೇಟ್ಸ್‌ನ ಅಂಚೆ ಇಲಾಖೆಯು ಜಿಮ್ ಹೆನ್ಸನ್ ಅಂಡ್ ದ ಮಪೆಟ್ಸ್ ಗಳನ್ನು ಚಿತ್ರಿಸುವ ಅಂಚೆ ಚೀಟಿಗಳ ಸರಣಿಯನ್ನು ಬಿಡುಗಡೆ ಮಾಡಿತು.[೧೭] ಡಿಕ್ ಕ್ಲಾರ್ಕ್‌ರ ನ್ಯೂ ಇಯರ್ಸ್ ರಾಕಿಂಗ್ ಈವ್ ಎಂಬ 2008ರ ಕ್ಷಣಗಣನೆಯ ಕಾರ್ಯಕ್ರಮದಲ್ಲಿ ಡಿಸೆಂಬರ್ 31, 2007ರಂದು ಕೂಡಾ ಮಪೆಟ್ಸ್ ಕಾಣಿಸಿಕೊಂಡಿತ್ತು. ಜಾಹಿರಾತಿನ ವಿರಾಮದ ನಂತರ ವೀಕ್ಷಕರು ಮರಳಿ ಬಂದಾಗ ಕರ್ಮಿಟ್, ರಿಝ್ಝೋ ಹಾಗೂ ಇತರೆ ಪಾತ್ರಗಳು ಅವರನ್ನು ಸಂದೇಶಗಳ ಸರಣಿಯೊಂದಿಗೆ ಸಜ್ಜಾಗಿ ಬಂದು ಸ್ವಾಗತಿಸಿದ್ದವು. ಅಂತಹಾ ಒಂದು ಕಾರ್ಯಭಾಗದ ನಂತರ ಟೈಮ್ ಸ್ಕ್ವೇರ್ ಚೌಕದಲ್ಲಿ ಕರ್ಮಿಟ್‌ನೊಂದಿಗೆ ಭಾಗವಹಿಸಿದ ಸಹ-ನಿರೂಪಕ ರ್ರ್ಯಾನ್ ಸೀಕ್ರೆಸ್ಟ್ ತನ್ನ ಸ್ನೇಹಿತ "ಕರ್ಮ್ಸ್"ಗೆ '08ನೆಯ ವರ್ಷವನ್ನು ಸ್ವಾಗತಿಸಲು ಮಾಡಿದ ಸಹಾಯಕ್ಕಾಗಿ ಧನ್ಯವಾದ ಅರ್ಪಿಸುತ್ತಾರೆ.[೧೮] ದ ಲೇಟ್ ಷೋ ಕಾರ್ಯಕ್ರಮದಲ್ಲಿ ಮಿಸ್ ಪಿಗ್ಗಿ ಓರ್ವ ಅತಿಥಿಯಾಗಿ ಕಾಣಿಸಿಕೊಂಡಿದ್ದರೆ ಮತ್ತು ಕರ್ಮಿಟ್ ದ ಫ್ರಾಗ್ ಹಾಲಿವುಡ್ ಸ್ಕ್ವೇರ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೇ VH1ನ ಐ ಲವ್ ಸಾಕ್ಷ್ಯಚಿತ್ರ ಸರಣಿಯಲ್ಲಿ ಪ್ರತಿಷ್ಠಿತ ನಿರೂಪಕರಲ್ಲಿ ಒಬ್ಬನಾಗಿತ್ತು. ABCಯ Extreme Makeover: Home Editionನಲ್ಲಿ ಜನವರಿ 3, 2010ರಂದು ವಿಶೇಷ ನಿರೂಪಕರಾಗಿ ಕೂಡಾ ಅವು ಕಾಣಿಸಿಕೊಂಡಿದ್ದವು. "ದ ಮಪೆಟ್ಸ್ ಕಿಚನ್ ವಿತ್ ಕ್ಯಾಟ್ ಕೋರಾ" ಎಂಬ ನವೀನ ಆನ್‌ಲೈನ್ ಅಡಿಗೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 2010ರಲ್ಲಿ ದ ಮಪೆಟ್ಸ್ ಆರಂಭಿಸಿತ್ತು.[೧೯]
ಜುಲೈ 25, 2007ರಂದು ಅಟ್ಲಾಂಟಾದಲ್ಲಿನ ಸೆಂಟರ್ ಫಾರ್ ಪಪೆಟ್ರಿ ಆರ್ಟ್ಸ್ ಸಂಸ್ಥೆಯು ಫ್ರಾಗಲ್ ರಾಕ್ ಮತ್ತು ಸೆಸೇಮ್ ಸ್ಟ್ರೀಟ್‌ಗಳವೂ ಸೇರಿದಂತೆ ಸುಮಾರು 500ರಿಂದ 700ರವರೆಗಿರಬಹುದಾದ ಬಳಕೆಯಲ್ಲಿಲ್ಲದ ಮಪೆಟ್‌ಗಳನ್ನು ತನ್ನಲ್ಲಿ ಹೊಂದುವ ನವೀನ ಜಿಮ್ ಹೆನ್ಸನ್ ಅಂಗಸಂಸ್ಥೆಯೊಂದರ ಪ್ರಾರಂಭವನ್ನು ಘೋಷಿಸಿತ್ತು. ಈ ನವೀನ ಅಂಗಸಂಸ್ಥೆಯು ಚಲನಚಿತ್ರಗಳು, ರೇಖಾಚಿತ್ರಗಳು ಹಾಗೂ ಇತರೆ ಜಿಮ್ ಹೆನ್ಸನ್ ಕಂಪೆನಿಯ ಚಿತ್ರಸಂಗ್ರಹಗಳನ್ನು ಕೂಡಾ ಹೊಂದಿರುತ್ತದೆ. 2012ರಲ್ಲಿ ಆರಂಭಿಸಲುದ್ದೇಶಿಸಲಿರುವ ಈ ಕಲಾಸಂಸ್ಥೆಯ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.[೨೦]
ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]ಅದರ ಆರಂಭಿಕ ಯೋಜನಾ ಹಂತದಿಂದಲೂ ಸೆಸೇಮ್ ಸ್ಟ್ರೀಟ್ ಅನ್ನು ಸಂಗೀತ ಹಾಗೂ ಗಾಯನಗಳನ್ನು ಹೇಳಿಕೊಡಲಾಗುತ್ತಿರುವ ವಿಷಯದ ಭಾಗವಾಗಿ ಬಳಸಿಕೊಳ್ಳಲು ಉದ್ದೇಶಿಸಿದ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿತ್ತು. ಮಕ್ಕಳು ಕಾರ್ಯಕ್ರಮವನ್ನು ವೀಕ್ಷಿಸದಿರುವ ಸಮಯದಲ್ಲಿ ಪಠ್ಯಕ್ರಮದ ಪಾಠಗಳನ್ನು ಮತ್ತಷ್ಟು ಮನನಗೊಳ್ಳಲು ಸಾಧ್ಯವಾಗುವ ಹಾಗೆ ಅದನ್ನು ಕೇಳಲನುವಾಗುವಂತೆ ಸಿದ್ಧಪಡಿಸಿದ್ದುದು ಮಾತ್ರವಲ್ಲದೇ ಸೆಸೇಮ್ ಸ್ಟ್ರೀಟ್ ಸಂಗೀತವು ಕೇವಲ ಸಂಗೀತವಾಗಿಯೇ ಆಹ್ಲಾದಿಸುವಂತಿತ್ತು ಆದ್ದರಿಂದ ಸಂಗೀತವಿಚಾರಗಳನ್ನು ಧ್ವನಿಮುದ್ರಿಕೆಗಳ ರೂಪದಲ್ಲಿ ಬಿಡುಗಡೆಗೊಳಿಸುವುದು ಸಹಜವಾಗಿತ್ತು.[ಸೂಕ್ತ ಉಲ್ಲೇಖನ ಬೇಕು]
ಮೊದಲ ಆರು ಆಲ್ಬಮ್‌ಗಳು ಹಲವು ವರ್ಷಗಳ ವಹಿವಾಟಿನ ಅನುಭವವನ್ನು ಹೊಂದಿರುವ ಎರಡು ಪ್ರಮುಖ ಸಂಗೀತ ಸಂಸ್ಥೆಗಳಾದ ಕೊಲಂಬಿಯಾ ರೆಕಾರ್ಡ್ಸ್ ಮತ್ತು ವಾರ್ನರ್ Bros. ರೆಕಾರ್ಡ್ಸ್‌ಗಳಿಂದ ಬಿಡುಗಡೆ ಮಾಡಲ್ಪಟ್ಟಿತ್ತು. ಇವುಗಳು ಡೀಲಕ್ಸ್ ಆಲ್ಬಮ್‌ಗಳಾಗಿದ್ದು ಸಾಧಾರಣವಾಗಿ ಜಾಹಿರಾತು ಪತ್ರಗಳು, ಗೀತಸಾಹಿತ್ಯದ ಪುಸ್ತಿಕೆಗಳು ಮತ್ತು ಕಾರ್ಯಕ್ರಮದ ಪಾತ್ರಗಳ ಛಾಯಾಚಿತ್ರಗಳು ಹಾಗೂ ರೇಖಾಚಿತ್ರಗಳಂತಹಾ ಹೆಚ್ಚುವರಿ ಕೊಡುಗೆ ವಸ್ತುಗಳೊಂದಿಗೆ ವರ್ಣಮಯ ಮಡಚುಹಾಳೆಯ ಆವರಣದೊಂದಿಗೆ ಲಭ್ಯವಿರುತ್ತಿತ್ತು. ಈ ವ್ಯವಸ್ಥೆಯು ಕಾರ್ಯಕ್ರಮದ ಮೊದಲ ಐದು ವರ್ಷಗಳ ಕಾಲ ಮುಂದುವರೆಯಿತು.
1970ರ ಬೇಸಿಗೆಯ ಅವಧಿಯಲ್ಲಿ, ದ ಸೆಸೇಮ್ ಸ್ಟ್ರೀಟ್ ಬುಕ್ & ರೆಕಾರ್ಡ್ ಅತ್ಯುತ್ತಮ ಮಾರಾಟದ ಸರಕು ಆಗುತ್ತಿದ್ದಂತೆಯೇ, ಬಾಬ್ ಮೆಕ್‌ಗ್ರಾತ್ ಮತ್ತು ಲೊರೆಟ್ಟಾ ಲಾಂಗ್‌ಗಳೂ ಕೂಡಾ ತಮ್ಮದೇ ಆದ ಮಕ್ಕಳ ಸಂಗೀತ ಆಲ್ಬಮ್‌ಗಳನ್ನು ಬಿಡುಗಡೆ ಮಾಡಿದವು. ಸೆಸೇಮ್ ಸ್ಟ್ರೀಟ್ ಉತ್ಪನ್ನ ಸಂಗ್ರಹದ ಭಾಗವಾಗಿರದಿದ್ದಾಗ್ಯೂ (ಎರಡೂ ತಮ್ಮ ಮುಖಭಾಗದ ಮೇಲೆ ಸೆಸೇಮ್ ಸ್ಟ್ರೀಟ್ ಎಂದು ನಮೂದಿಸಿದ್ದಾಗ್ಯೂ), ಕಾರ್ಯಕ್ರಮದ ಅದ್ಭುತ ಯಶಸ್ಸಿನಿಂದಾಗಿ ಅವುಗಳೂ ಕೂಡಾ ಪ್ರಸಿದ್ಧ ಆಲ್ಬಂಗಳಾಗಿಬಿಟ್ಟವು.
1974ರಲ್ಲಿ ಸೆಸೇಮ್ ಸ್ಟ್ರೀಟ್ ರೆಕಾರ್ಡ್ಸ್ ಎಂದು ಕರೆಯಲ್ಪಡುತ್ತಿದ್ದ ಸ್ವತಂತ್ರ ಹೆಸರಿನಲ್ಲಿ/ಟ್ರೇಡ್‌ಮಾರ್ಕಿನಲ್ಲಿ ಸೆಸೇಮ್ ಸ್ಟ್ರೀಟ್ ಸಂಗೀತ ಸಂಸ್ಥೆಯನ್ನು ನಮೂದಿಸಿದ ಗ್ರಾಹಕೀಕರಿಸಿದ ಚಿಹ್ನೆಯೊಂದಿಗಿನ ತನ್ನದೇ ಆದ ಧ್ವನಿಮುದ್ರಿಕೆಗಳ ಸರಣಿಯನ್ನೇ ಸೆಸೇಮ್ ಸ್ಟ್ರೀಟ್ ರಚಿಸಿತು. ಈ ಆಲ್ಬಮ್‌ಗಳನ್ನು 1974ರಿಂದ 1976ರವರೆಗೆ ಚಿಲ್ಟ್ರೆನ್'ಸ್ ರೆಕಾರ್ಡ್ಸ್ ಆಫ್ ಅಮೇರಿಕಾ ಸಂಸ್ಥೆಯಿಂದ ತಯಾರಿಸಲ್ಪಡುತ್ತಿದ್ದರೆ 1977ರಿಂದ 1984ರವರೆಗೆ ಡಿಸ್ಟಿಂಗ್ವಿಷ್‌ಡ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ತಯಾರಿಸಲ್ಪಡುತ್ತಿತ್ತು. ಹತ್ತು ವರ್ಷಗಳ ಕಾಲ ಮುಂದುವರೆದ ಈ ಹೆಸರಿ/ಟ್ರೇಡ್‌ಮಾರ್ಕಿನಡಿಯಲ್ಲಿ 70ಕ್ಕೂ ಮೀರಿದ ಧ್ವನಿಮುದ್ರಣಗಳನ್ನು ಉತ್ಪಾದಿಸಲಾಗಿತ್ತು. ಈ ಧ್ವನಿಮುದ್ರಣದ ಅನುಕ್ರಮಣಿಕೆಯು ಹಿಂದಿನ ಎಲ್ಲಾ ಕೊಲಂಬಿಯಾ ಮತ್ತು ದ ವಾರ್ನರ್ Bros. ಆಲ್ಬಮ್‌ಗಳ ಮರುಮುದ್ರಣವನ್ನು ಹೊಂದಿದ್ದು, ಮೂಲ ಆವೃತ್ತಿಗಳಿಗಿಂತ ಕಡಿಮೆ ಆಕರ್ಷಕವಾದ ಪ್ಯಾಕೇಜ್‌ಗಳ ರೂಪದಲ್ಲಿ ಹೊಂದಿತ್ತು. ಮೊದಲಿಗೆ ಈ ಧ್ವನಿಮುದ್ರಣಗಳನ್ನು ಕೇವಲ ವಿನೈಲ್‌ನ ರೂಪದಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗುತ್ತಿತ್ತು, ಆದರೆ ವರ್ಷಗಳುರುಳುತ್ತಾ ಹೋದಂತೆ, ಅವುಗಳನ್ನು ಕ್ಯಾಸೆಟ್‌ಗಳು ಹಾಗೂ 8-ಟ್ರ್ಯಾಕ್‌ಗಳ ಟೇಪ್‌ಗಳ ರೂಪದಲ್ಲಿ ಕೂಡಾ ಉತ್ಪಾದಿಸಲಾಯಿತು.
ದ ಸೆಸೇಮ್ ಸ್ಟ್ರೀಟ್ ರೆಕಾರ್ಡ್ಸ್ ಎಂಬ ಶೀರ್ಷಿಕೆಯನ್ನು ಸುಮಾರು 1984ರ ವೇಳೆಗೆ ನಿಲ್ಲಿಸಲಾಯಿತು. ಕೆಲವೇ ಸಮಯದ ನಂತರ ಹಲವು ಸೆಸೇಮ್ ಸ್ಟ್ರೀಟ್ ಧ್ವನಿಮುದ್ರಣಗಳನ್ನು ಸೈಟ್ & ಸೌಂಡ್ ಎಂಬ ಶೈಕ್ಷಣಿಕ ಕಂಪೆನಿಯು ಕ್ಯಾಸೆಟ್‌ಗಳ ರೂಪದಲ್ಲಿ ಮರುಉತ್ಪಾದನೆ ಮಾಡಲಾರಂಭಿಸಿತು. ಇವುಗಳಲ್ಲಿ ಕೆಲವು ಮೂಲ ಆವರಣ ಚಿತ್ರಗಳನ್ನು ಹೊಂದಿದ್ದರೆ, ಇತರವುಗಳು ನವೀನ ಆವರಣ ಚಿತ್ರಗಳನ್ನು ಹೊಂದಿದ್ದವು. ಈ ಅವಧಿಯಲ್ಲಿನ ಒಂದು ಐತಿಹಾಸಿಕ ಅಡಿಬರಹವೆಂದರೆ 1987ರಲ್ಲಿ, ದ ಬೆಸ್ಟ್ ಆಫ್ ಸೆಸೇಮ್ ಸ್ಟ್ರೀಟ್ ಎಂಬ ಹೆಸರಿನ ಪ್ರಪ್ರಥಮ ಸೆಸೇಮ್ ಸ್ಟ್ರೀಟ್ CDಯನ್ನು ಉತ್ಪಾದಿಸಲಾಗಿದ್ದು 1990ರ ದಶಕದ ಆರಂಭದವರೆಗೆ ಇದು ಹಾಗೆ ಉತ್ಪಾದನೆಯಾದ ಏಕೈಕ CD ಆಗಿತ್ತು. 1990ರಲ್ಲಿ ಗೋಲ್ಟನ್ ಬುಕ್ಸ್ ಸಂಸ್ಥೆಯ ಸಂಗೀತ ಅಂಗಸಂಸ್ಥೆಯಾಗಿದ್ದ ಗೋಲ್ಟನ್ ಮ್ಯೂಸಿಕ್‌ನ ಹೆಸರಿನಡಿಯಲ್ಲಿ ಧ್ವನಿಮುದ್ರಣಗಳು ಕಾಣಿಸಿಕೊಳ್ಳಲು ಆರಂಭಿಸಿತು. ಜಿಮ್ ಹೆನ್ಸನ್ ಮತ್ತು ಜೋ ರಾಪೊಸೋರವರುಗಳಿಗೆ ನೆನಪಿನಕಾಣಿಕೆ ಆಲ್ಬಮ್‌ಗಳಿಂದ ಆರಂಭಗೊಂಡು ಹಳೆಯ ಸಂಗೀತ ಮುದ್ರಣಗಳ ಮರುಮುದ್ರಣಗಳೊಂದಿಗೆ ಹೊಸ ಸಂಗೀತ ಮುದ್ರಣಗಳ ಮಿಶ್ರಣವೂ ಕಾಣಿಸಿಕೊಂಡಿತು. ಗೋಲ್ಡನ್ ಸಂಸ್ಥೆಯ ಪರವಾನಗಿಯು 1994ರವರೆಗೆ ಇತ್ತು.
ಸೋನಿ ವಂಡರ್ ಸಂಸ್ಥೆಯು ಸಂಗೀತಮುದ್ರಣಗಳ ಹೊಸ ಸರಣಿಗಳನ್ನು 1995ರಲ್ಲಿ ಬಿಡುಗಡೆ ಮಾಡಲಾರಂಭಿಸಿತು. ಕೊಲಂಬಿಯಾ ರೆಕಾರ್ಡ್ಸ್‌ನ ಹಿಂದಿನ ಸಂಗೀತಮುದ್ರಿಕೆಗಳ ಪಟ್ಟಿಕೆಯ ಮಾಲೀಕತ್ವವನ್ನು 1970ರಲ್ಲಿ ಮೊತ್ತಮೊದಲ ಸೆಸೇಮ್ ಸ್ಟ್ರೀಟ್ LPಯನ್ನು ಉತ್ಪಾದಿಸಿದ್ದ ಸೋನಿ ಹೊಂದಿರುವುದರಿಂದ ಕೆಲ ಸೆಸೇಮ್ ಸಂಗ್ರಹಕಾರಕರುಗಳು ಆಸಕ್ತಿಯಿಂದ ನಿರೀಕ್ಷಿಸಿರುತ್ತಿದ್ದರು. ಆ ಆಲ್ಬಮ್‌ಅನ್ನು CDಯ ರೂಪದಲ್ಲಿ ಸಂಪೂರ್ಣ ಸಂಗ್ರಹವಾಗಿ ಇದುವರೆಗೂ ಮರುಉತ್ಪಾದನೆ ಮಾಡಿಲ್ಲವಾದರೂ, ಎರಡನೆಯ ಕೊಲಂಬಿಯಾ ಆಲ್ಬಮ್ ಆದ ದ ಮಪೆಟ್ ಆಲ್ಫಾಬೆಟ್ ಆಲ್ಬಮ್ ಅನ್ನು ಸಿಂಗ್ ದ ಆಲ್ಫಾಬೆಟ್ ಎಂಬ ಹೆಸರಿನಲ್ಲಿ ಮರು ಉತ್ಪಾದಿಸಲಾಗಿತ್ತು. ಆದಾಗ್ಯೂ ಧ್ವನಿಮುದ್ರಿಕೆಯನ್ನು ತಿರುಗಿಸಿ ಹಾಕುವುದನ್ನು ಸೂಚಿಸುವ ಒಂದು ಸಂವಾದದ ಭಾಗವನ್ನು ಅದು CDಗಳ ಕೇಳುಗರಿಗೆ ಅಗತ್ಯವಲ್ಲವಾದುದರಿಂದ ತೆಗೆದುಹಾಕಲಾಗಿತ್ತು.
ಸೋನಿ ವಂಡರ್‌ನ ವರ್ಷಗಳು ಸೋನಿ ಮ್ಯೂಸಿಕ್ ಸಂಸ್ಥೆಯ ಲೆಗಸಿ ರೆಕಾರ್ಡಿಂಗ್ಸ್ ಯೋಜನೆಯ ಸಹಯೋಗದಲ್ಲಿ ಉತ್ಪಾದಿಸಲಾಗಿದ್ದ ವಿಸ್ತೃತವಾದ ಒಂದೇ ಸಂಪುಟದೊಳಗಿರುವ 3-CDಗಳ ಸಂಗ್ರಹವಾದ ಸಾಂಗ್ಸ್ ಫ್ರಮ್ ದ ಸ್ಟ್ರೀಟ್ ನೊಂದಿಗೆ ಉಚ್ಛ್ರಾಯವನ್ನು ತಲುಪಿದವು. ಈ ಸಂಗ್ರಹದಲ್ಲಿ ಕಾರ್ಯಕ್ರಮದ ಪ್ರತ್ಯಕ್ಷ ಪ್ರದರ್ಶನಗಳು ಹಾಗೂ ಧ್ವನಿಮುದ್ರಣಗಳೆರಡರಿಂದಲೂ ಆಯ್ದ ಉತ್ಕೃಷ್ಟ ಹಾಗೂ ಅಪರೂಪದ ಗೀತೆಗಳಿದ್ದವು. ಕ್ರಿಸ್ಟೋಫರ್ ಚೆರ್ಫ್‌ರು ರಚಿಸಿದ್ದ ಕಾರ್ಯಕ್ರಮದ ಇತಿಹಾಸದ ಬಗೆಗಿನ ವಿವರವಾದ ಪುಸ್ತಿಕೆಯನ್ನು ಕೂಡಾ ಇದು ಹೊಂದಿತ್ತು. ಸೆಸೇಮ್ ಸ್ಟ್ರೀಟ್ ರೆಕಾರ್ಡ್ಸ್‌ನ ಹೆಸರಿನಡಿಯಲ್ಲಿ ಹಲವು ವರ್ಷಗಳ ಅವಧಿಯಲ್ಲಿ ಅನೇಕ ಬಹು-LP ಸಂಪುಟರೂಪದ ಸಂಗ್ರಹಗಳು ಬಿಡುಗಡೆಯಾಗಿದ್ದಾಗ್ಯೂ ಇದೇ ಮೊದಲಬಾರಿಗೆ ಸೆಸೇಮ್ ಸ್ಟ್ರೀಟ್ ಪ್ರಮುಖ ಸಂಸ್ಥೆಯೊಂದರಿಂದ ಸಂಪುಟ ರೂಪದ ಮರ್ಯಾದೆಯನ್ನು ಪಡೆದುಕೊಂಡಿತ್ತು.
ಸೆಪ್ಟೆಂಬರ್ 17, 2002ರಂದು ರೈನೋ ಸಂಸ್ಥೆಯು The Muppet Show: Music, Mayhem, and More ಅನ್ನು ಬಿಡುಗಡೆ ಮಾಡಿತ್ತು. ಹಲವು ಸೆಸೇಮ್ ಸ್ಟ್ರೀಟ್ ಮತ್ತು ಮಪೆಟ್‌ಗಳ ಚಲನಚಿತ್ರಗಳ ಧ್ವನಿಪಥಗಳು ಲಭ್ಯವಿರುವುದರೊಂದಿಗೆ ಈ ಸಂಗ್ರಹವು ವಿವಿಧ ಮಪೆಟ್‌ಗಳ ಮೂಲಗಳಿಂದ ಗೀತೆಗಳನ್ನು ಸಂಗ್ರಹಿಸಿಕೊಂಡಿದೆ. ಹಿಂದೆ ದ ಮಪೆಟ್ ಮೂವೀ ಚಲನಚಿತ್ರದ CDಯ ಧ್ವನಿಪಥದಲ್ಲಿ ಮಾತ್ರವೇ ಲಭ್ಯವಿದ್ದ "ರೇನ್‌ಬೋ ಕನೆಕ್ಷನ್ " ಗೀತೆಯನ್ನು ಕೂಡಾ ಇದು ಹೊಂದಿದೆ.
2007ರಲ್ಲಿ ಕೊಚ್ ರೆಕಾರ್ಡ್ಸ್ ಸಂಸ್ಥೆಯು ಸೆಸೇಮ್ ಸ್ಟ್ರೀಟ್ ಸಂಗೀತ ಮುದ್ರಣಗಳನ್ನು ವಿತರಣೆಯನ್ನು ತಾನು ವಹಿಸಿಕೊಂಡಿರುವುದಾಗಿ ಘೋಷಿಸಿತು. ಸೋನಿ ವಂಡರ್‌ನಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ ಆಲ್ಬಮ್‌ಗಳ ಮರುಉತ್ಪಾದನೆಯೊಂದಿಗೆ ಇದರ ಮೊತ್ತಮೊದಲ ಧ್ವನಿಮುದ್ರಣಗಳು 2008ರಲ್ಲಿ ಕಾಣಿಸಿಕೊಳ್ಳಲು ಆರಂಭವಾದವು.
ಸೆಸೇಮ್ ಸ್ಟ್ರೀಟ್ ಸಂಗೀತ ಸಂಸ್ಥೆಯ ಪ್ರಧಾನ ಸಂಗ್ರಹಕ್ಕೆ ಹೆಚ್ಚುವರಿಯಾಗಿ ವರ್ಷಗಳ ಅವಧಿಯಲ್ಲಿ ಮೂಲ ನಟನೆಯ ಆಲ್ಬಮ್‌ಗಳು ಕೂಡಾ ಸೆಸೇಮ್ ಸ್ಟ್ರೀಟ್ ಪ್ರತ್ಯಕ್ಷ ಕಾರ್ಯಕ್ರಮಗಳಲ್ಲಿ ಮಾರಾಟ ಮಾಡಲ್ಪಟ್ಟಿವೆ.
ಚಲನಚಿತ್ರಪಟ್ಟಿ
[ಬದಲಾಯಿಸಿ]ಚಿತ್ರಮಂದಿರದಲ್ಲಿ ಪ್ರದರ್ಶಿಸಲಾದ ಚಿತ್ರಗಳು ಹಾಗೂ ಕಿರುತೆರೆಯ ಚಲನಚಿತ್ರಗಳು[ಬದಲಾಯಿಸಿ]
|
ಕಿರುತೆರೆ ಸರಣಿಗಳು[ಬದಲಾಯಿಸಿ]
|
ಕಿರುತೆರೆಯ ವಿಶೇಷ ಕಾರ್ಯಕ್ರಮಗಳು[ಬದಲಾಯಿಸಿ]
|
ಡೈರೆಕ್ಟ್-ಟು-ವಿಡಿಯೋ ಆವೃತ್ತಿಗಳು[ಬದಲಾಯಿಸಿ]
|
ಪರಸ್ಪರ-ಸಂವೇದಿ/ಇಂಟರ್ ಆಕ್ಟೀವ್ ಪುಸ್ತಕಗಳು
[ಬದಲಾಯಿಸಿ]The Muppets: Opening Day at Peppermint Park ಸೇರಿದಂತೆ ಹಲವು ಪುಸ್ತಕಗಳ/ಟೇಪ್‌ಗಳ ಸಂಗ್ರಹಗಳನ್ನು ಪ್ಲೇಸ್ಕೂಲ್‌ನ ಟಾಕ್ 'ಎನ್ ಪ್ಲೇಗೆಂದು ನಿರ್ಮಿಸಲಾಗಿತ್ತು.
ಸಚಿತ್ರ/ಕಾಮಿಕ್ ಪುಸ್ತಕ
[ಬದಲಾಯಿಸಿ]2009ರಲ್ಲಿ, BOOM! ಸ್ಟುಡಿಯೋಸ್ ದ ಮಪೆಟ್ ಷೋ ವನ್ನು ಆಧರಿಸಿದ್ದ ಹಾಗೂ ರೋಗರ್ ಲ್ಯಾಂಗ್‌ರಿಡ್ಜ್‌ರವರಿಂದ ಚಿತ್ರಿಸಲ್ಪಟ್ಟ ದ ಮಪೆಟ್ ಷೋ ಕಾಮಿಕ್ ಬುಕ್ ಎಂಬ ಸಚಿತ್ರಕಥಾ ಪುಸ್ತಕವನ್ನು ಪ್ರಕಟಿಸಲಾರಂಭಿಸಿತು.
ಭವಿಷ್ಯ
[ಬದಲಾಯಿಸಿ]ತಾವಿಬ್ಬರೂ ಸೇರಿ ದ ಮಪೆಟ್ಸ್ ಎಂಬ ಮುಂದಿನ ಮಪೆಟ್ ಚಲನಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಹೊಂದಿರುವ ಜೇಸನ್ ಸೆಗೆಲ್ ಮತ್ತು ನಿಕೋಲಸ್ ಸ್ಟಾಲರ್‌ರವರುಗಳು ನವೀನ ಚಿತ್ರವೊಂದರ ನಿರ್ಮಾಣವನ್ನು ಖಚಿತಪಡಿಸಿದ್ದಾರೆ.[೨೧] ಮುಂದಿನ ಚಿತ್ರಕ್ಕೆ ತಾವಿಬ್ಬರೂ ಕಥೆಯನ್ನು ಬರೆಯುವವರಿದ್ದೇವೆ ಎಂದು ಹೇಳಿಕೆ ನೀಡಿದ ಅವರು ಕೇವಲ ಸ್ಟಾಲರ್‌ರವರು ಮಾತ್ರವೇ ನಿರ್ದೇಶಿಸಲಿದ್ದಾರೆ ಎಂದೂ ತಿಳಿಸಿದ್ದರು.[೨೧]
ಮಾರ್ಚ್ 31, 2008ರಂದು ಫಸ್ಟ್ ಷೋಯಿಂಗ್ ಸಂಸ್ಥೆಯು, ನವೀನ ಮಪೆಟ್ ಚಿತ್ರದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿತ್ತು.[೨೨] ಕಮಿಂಗ್ ಸೂನ್ ಸಂಸ್ಥೆಯು ಕೂಡಾ ಇದೇ ರೀತಿಯ ಸುದ್ದಿಯನ್ನು ವರದಿ ಮಾಡಿತ್ತು.[೨೩] ಜೇಸನ್ ಸೆಗೆಲ್‌ರೊಂದಿಗೆ ಸಂದರ್ಶನವನ್ನು ನಡೆಸಿದ ನಂತರ ಫಸ್ಟ್ ಸಂಸ್ಥೆ ಯು "ಇದು ನಂಬಲಾಗದಷ್ಟು ಹಳೆಯ ರೀತಿಯದಾಗಿರಲಿದ್ದು, ಅದರಲ್ಲಿ ಹಳೆಯ ರಂಗಮಂದಿರವೊಂದನ್ನು ಉಳಿಸಲು ಸುಪರಿಚಿತ ಮಪೆಟ್ ಪಾತ್ರಗಳನ್ನು ಪ್ರದರ್ಶಿಸಲಾಗುತ್ತಿರುತ್ತದೆ. ಅದಕ್ಕಿದ್ದ ಅಪಾಯ? ದುಷ್ಟ ಪಾತ್ರವೊಂದು ಆ ಕಟ್ಟಡವನ್ನು ಧರೆಗುರುಳಿಸಿ ಅದರ ಕೆಳಗಿರುವ ತೈಲನಿಕ್ಷೇಪವನ್ನು ವಶಪಡಿಸಿಕೊಳ್ಳಲಿಚ್ಛಿಸಿರುತ್ತದೆ" ಎಂದು ಇದರ ಕಥೆಯನ್ನು ಘೋಷಿಸಿತ್ತು."[೨೨] ಈ ಯೋಜನೆಯ ಬಗೆಗೆ ತಾನು ಬಹಳವೇ ಉತ್ಸಾಹದಿಂದಿರುವುದಾಗಿ ಹೇಳಿದ್ದ ಸೆಗೆಲ್ ಹೀಗೆ ಅದನ್ನು ಮುಂದುವರೆಸಿದ್ದರು, "ನನಗೆ ಕೇವಲ 10 ವರ್ಷಗಳ ಬಾಲಕನಾಗಿದ್ದುದು ನೆನಪಿಗೆ ಬರುತ್ತಿದೆ, ಆಗ ನನ್ನ ಮಟ್ಟಿಗೆ ಕರ್ಮಿಟ್ ಎಂದರೆ ಟಾಮ್ ಹ್ಯಾಂಕ್ಸ್. ಒಂದು ತರಹದಲ್ಲಿ ಕರ್ಮಿಟ್ ಓರ್ವ ಜನಸಾಮಾನ್ಯ ಇದ್ದ ಹಾಗೆ ಹಾಗೂ ಹಳೆಯ ಮಪೆಟ್‌ಗಳನ್ನು ನನ್ನ ತಂದೆತಾಯಿಗಳೊಂದಿಗೆ ನೋಡುತ್ತಿರುವ ಹಾಗೆ ಹಾಗೂ ಪೀಟರ್ ಸೆಲ್ಲರ್ಸ್ ಹಾಗೂ ಅವರಂತಹವರನ್ನು ಅದರಲ್ಲಿ ಕಾಣುತ್ತಿರುವ ಹಾಗೆ ನೆನಪಿಸಿಕೊಳ್ಳುತ್ತಿರುತ್ತೇವೆ. ನನ್ನ ಮನೆಯ ಎಲ್ಲೆಡೆಯೂ ಮಪೆಟ್ ಚಿತ್ರಗಳನ್ನು ಹಾಗೂ ಚಿಕ್ಕ ಬೊಂಬೆಗಳಿರುತ್ತಿದ್ದವು. ನಾನು ಅದರ ಚಿತ್ರಕಥೆಯನ್ನು ಈಗ ಬರೆಯುತ್ತಿರುವೆನೆಂಬುದನ್ನು ನೆನೆಸಿಕೊಂಡಾಗ ನನ್ನ ಎಲ್ಲಾ ಕನಸುಗಳು ನನಸಾದಂತೆ ಭಾಸವಾಗುತ್ತಿದೆ."[೨೩] ಈ ಚಿತ್ರದಲ್ಲಿ ಪ್ರಮುಖವಾಗಿ ಹಲವು ಮೂಲ ಮಪೆಟ್‌ಗಳು ಪಾತ್ರ ವಹಿಸಲಿವೆ. D23 ಎಕ್ಸ್‌ಪೋ ಉತ್ಸವದಲ್ಲಿ ದ ಚೀಪೆಸ್ಟ್ ಮಪೆಟ್ ಮೂವೀ ಎವರ್ ಮೇಡ್ ಎಂಬುದು ಇದರ ಶೀರ್ಷಿಕೆಯಾಗಿರಲಿದೆ ಎಂದು ಘೋಷಿಸಲಾಗಿತ್ತು.[೨೪] ಇದರ ಶೀರ್ಷಿಕೆಯನ್ನು ನಂತರ ಸಾರ್ವಕಾಲಿಕ ಅತ್ಯದ್ಭುತ ಮಪೆಟ್ ಚಲನಚಿತ್ರ ವೆಂದು ಉಲ್ಲೇಖಿಸಲಾಗಿತ್ತು.[೨೫] ಜನವರಿ 2010ರಲ್ಲಿ ಜೇಮ್ಸ್ ಬಾಬಿನ್‌ರು ಈ ಚಿತ್ರದ ನಿರ್ದೇಶನಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದರು.
2010ರ ಜೂನ್ 8ರಂದು ಜೇಸನ್ ಸೆಗೆಲ್‌ರ ದ ಮಪೆಟ್ಸ್ ಚಿತ್ರವನ್ನು 2011ರ ಕ್ರಿಸ್‌ಮಸ್‌ನ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಬೆನ್ ಸ್ಟಿಲ್ಲರ್, ಜಾರ್ಜ್ ಕ್ಲೂನೆ, ಫ್ರೆಂಚ್ ಸ್ಟೀವರ್ಟ್/ಸ್ಟುವರ್ಟ್, ಸೀನ್ ಪೆನ್ ಹಾಗೂ ಇತರರುಗಳೊಂದಿಗೆ ಇದರಲ್ಲಿ ಸೆಗೆಲ್‌ರವರೂ ನಟಿಸಲಿದ್ದಾರೆ.[೨೬] ಅಕ್ಟೋಬರ್ 29ರಂದು ಈ ಚಿತ್ರದ ಚಿತ್ರೀಕರಣವು ಪ್ರಾರಂಭವಾಗಿತ್ತು ಹಾಗೂ ಅಂದಿನ ರಾತ್ರಿಯ ಕ್ರೆಗ್ ಫರ್ಗ್ಯೂಸನ್‌ರೊಂದಿಗಿನ ದ ಲೇಟ್ ಲೇಟ್ ಷೋ ಕಾರ್ಯಕ್ರಮದಲ್ಲಿ ಈ ಚಿತ್ರದ ಪ್ರಚಾರವನ್ನು ಕೈಗೊಳ್ಳುತ್ತಾ ಜೇಸನ್ ಸೆಗೆಲ್ ಈ ಸುದ್ದಿಯನ್ನು ಸ್ಫೋಟಗೊಳಿಸಿದರು.
ಜನಪ್ರಿಯ ವಿಡಿಯೋ ಹಂಚಿಕೆಯ ಜಾಲತಾಣ ಯೂಟ್ಯೂಬ್ ನಲ್ಲಿ ದ ಮಪೆಟ್ಸ್ ತಮ್ಮದೇ ಆದ ಕಿರು ಚಿತ್ರಿಕೆಗಳನ್ನು ಹರಿಯಬಿಡಲು ಕೂಡಾ ಆರಂಭಿಸಿದೆ. 'ಮಪೆಟ್‌ಸ್ ಬೊಹೆಮಿಯನ್ ರ್ರ್ಹಾಪ್ಸೊಡಿ' ಅನ್ನು ದ ಮಪೆಟ್ಸ್ ನ ಹೊಸ ಯೂಟ್ಯೂಬ್‌ನ ವಾಹಿನಿಯಲ್ಲಿ ದಾಖಲಿಸಿದ ನಂತರ ಈ ನವೀನ ಯೂಟ್ಯೂಬ್ ವಾಹಿನಿಯು ಮೊದಲಿನ ಎರಡು ವಾರಗಳಲ್ಲಿಯೇ 10 ದಶಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡು ಎರಡು ವೆಬ್ಬಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಈ ಜಾಲತಾಣದಲ್ಲಿ ವಿಡಿಯೋಗಳನ್ನು ನಿಯತವಾಗಿ ಹರಿಬಿಡಲಾಗುತ್ತಲಿದೆ.[೨೭] ಇತ್ತೀಚೆಗಷ್ಟೇ ದ ಮಪೆಟ್ಸ್ "ದ ಮಪೆಟ್ಸ್ ಕಿಚನ್ ವಿತ್ ಕ್ಯಾಟ್ ಕೊರಾ" ಎಂಬ ಹೆಸರಿನ ಆನ್‌ಲೈನ್ ಜಾಲ ಸರಣಿಯಲ್ಲಿ ಕ್ಯಾಟ್ ಕೊರಾರೊಂದಿಗೆ ಕಾಣಿಸಿಕೊಳ್ಳುತ್ತಾ ಜನರಿಗೆ ಹಲಬಗೆಯ ಖಾದ್ಯಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ಪ್ರದರ್ಶಿಸುತ್ತಿವೆ.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]ಮಪೆಟ್ -ತರಹದ ಹಾಗೂ ಮಪೆಟ್ -ಪ್ರೇರಿತ ಬೊಂಬೆಗಳು 2004ರ ಟೋನಿ ಪ್ರಶಸ್ತಿ ವಿಜೇತ ಬ್ರಾಡ್‌ವೇ ಸಂಗೀತ ಕಾರ್ಯಕ್ರಮ ಅವೆನ್ಯೂ Q (ಸೆಸೇಮ್ ವರ್ಕ್‌ಷಾಪ್ ಅಥವಾ ಜಿಮ್ ಹೆನ್ಸನ್ ಕಂಪೆನಿಗಳೊಂದಿಗೆ ಯಾವುದೇ ಸಂಬಂಧವನ್ನು ತಾನು ಹೊಂದಿಲ್ಲ ಎಂದು ಬಹುಶಃ ಅವೆರಡೂ ಕಂಪೆನಿಗಳಿಂದ ಕಾನೂನು ಹೋರಾಟ ನಡೆಯಬಹುದೆಂಬ ಭಯದಿಂದ ಘೋಷಿಸಿಕೊಂಡಿದೆ)ದಲ್ಲಿ ಕಾಣಿಸಿಕೊಳ್ಳುತ್ತವೆ. ಪೀಟರ್ ಜ್ಯಾಕ್ಸನ್‌ರ ಚಿತ್ರ, ಮೀಟ್ ದ ಫೀಬಲ್ಸ್ ಎಂಬುದು ದ ಮಪೆಟ್ಸ್‌ನ ಮತ್ತೊಂದು ವಿಡಂಬನವಾಗಿದೆ. ಲೇಟ್ ನೈಟ್ ವಿತ್ ಕೋನಾನ್ ಓ ಬ್ರಿಯೆನ್ ಕಾರ್ಯಕ್ರಮದಲ್ಲಿ ವಾಂತಿ ಮಾಡುವ ಕರ್ಮಿಟ್ ಕಪ್ಪೆಯು ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು ಹಾಗೂ ಯೂ ಕಾಂಟ್ ಡೂ ದಟ್ ಆನ್ ಟೆಲಿವಿಷನ್ ಎಂಬ ಕೆನಡಿಯನ್ ಕಾರ್ಯಕ್ರಮ ಸರಣಿಗಾಗಿ ಅನೇಕವೇಳೆ ಮಪೆಟ್‌ಗಳು ಪೂರ್ವಭಾವಿಯಾಗಿಯೇ ಮಾರಾಟವಾಗಿರುತ್ತಿದ್ದವು. ದ ಸಿಂಪ್ಸನ್ಸ್ , ಫ್ಯಾಮಿಲಿ ಗೈ , ದ ವೆಸ್ಟ್ ವಿಂಗ್ ಮತ್ತು ರೋಬೋಟ್ ಚಿಕನ್ ನಂತಹಾ ಹಲವು ಇತರೆ ಚಲನಚಿತ್ರಗಳು ಹಾಗೂ ಕಿರುತೆರೆ ಕಾರ್ಯಕ್ರಮಗಳು ದ ಮಪೆಟ್ಸ್ ಗಳನ್ನು ಉಲ್ಲೇಖಿಸಿವೆ — ಮತ್ತಷ್ಟು ವಿವರಪೂರ್ಣ ಮಾಹಿತಿಗಾಗಿ ನೋಡಿ ಮಪೆಟ್ ವಿಕಿ.
ಇವನ್ನೂ ಗಮನಿಸಿ
[ಬದಲಾಯಿಸಿ]- ಜಿಮ್ ಹೆನ್ಸನ್
- ಸೆಸೇಮ್ ಸ್ಟ್ರೀಟ್
- ದ ಮಪೆಟ್ ಷೋ
- ಫ್ರಾಗಲ್ ರಾಕ್
- ದ ಡಾರ್ಕ್ ಕ್ರಿಸ್ಟಲ್
- ಬೇರ್ ಇನ್ ದ ಬಿಗ್ ಬ್ಲ್ಯೂ ಹೌಸ್
- ಪೀಟರ್ ಜ್ಯಾಕ್ಸನ್
ಉಲ್ಲೇಖಗಳು
[ಬದಲಾಯಿಸಿ]- ↑ "Marionette and Puppet". Muppet Wiki.
- ↑ findarticles.com "ಬಿಡ್ಡುದಾರರು ಕೊಂಡುಕೊಳ್ಳುವ ಸಾಧ್ಯತೆ ಕ್ಷೀಣಿಸಿದುದರಿಂದ ಡಿಸ್ನಿ ಮಪೆಟ್ಸ್ ಅನ್ನು ಕೊಂಡುಕೊಂಡಿತು" 2/18/04
- ↑ ವೆರೈಟಿ , 3/11/08, ಸೆಗೆಲ್ ಹಾಗೂ ಸ್ಟಾಲರ್‌ರವರುಗಳು ಮಪೆಟ್‌ಸ್‌ಅನ್ನು ನಿರ್ವಹಿಸಲಿದ್ದಾರೆ
- ↑ DVDizzy.com and UltimateDisney.com: ದ ಅಲ್ಟಿಮೇಟ್ ಗೈಡ್ ಟು ಡಿಸ್ನಿ DVD ಅಂಡ್ ಬಿಯಾಂಡ್
- ↑ "ದ ಮಪೆಟ್ ನ್ಯೂಸ್‌ಫ್ಲ್ಯಾಷ್ : "ಲೆಟರ್ಸ್ ಟು ಸಾಂಟಾ " DVD ಡೀಟೇಲ್ಸ್!". Archived from the original on 2011-05-11. Retrieved 2011-05-17.
- ↑ "ಮಪೆಟ್ಸ್ D23ನಲ್ಲಿ: ಚಲನಚಿತ್ರಗಳು , DVDಗಳು, ಹಾಗೂ ಮಾರಾಟಗಾರಿಕೆ ಸರಕು ಸುದ್ದಿಗಳು!". Archived from the original on 2011-05-11. Retrieved 2011-05-17.
- ↑ "D23ನಲ್ಲಿ ದ ಮಪೆಟ್ಸ್". Archived from the original on 2011-05-11. Retrieved 2011-05-17.
- ↑ D23 ನವೀಕರಣ: ವಿಶೇಷ ಮಪೆಟ್‌ಗಳ ಪ್ರದರ್ಶನ
- ↑ "ಆರ್ಕೈವ್ ನಕಲು". Archived from the original on 2011-05-10. Retrieved 2011-05-17.
- ↑ ಕ್ರಿಸ್ಟೋಫರ್ ಫಿಂಚ್ ಜಿಮ್ ಹೆನ್ಸನ್ : ದ ವರ್ಕ್ಸ್ 1993, ISBN 0-679-41203-4
- ↑ Davis, Michael (2008). Street Gang: The Complete History of Sesame Street. New York: Viking Press. p. 166. ISBN 978-0-67001996-0.
- ↑ Morrow, Robert W. (2006). Sesame Street and the Reform of Children's Television. Baltimore, Maryland: Johns Hopkins University Press. p. 84. ISBN 0-8018-8230-3.
- ↑ ರಾಕಿ III (IMDB)
- ↑ ಆನ್ ಅಮೇರಿಕನ್ ವೆರ್‌ವೂಲ್ಫ್ ಇನ್ ಲಂಡನ್ (IMDB)
- ↑ Mr. ಮೆಗೋರಿಯಮ್ಸ್ ವಂಡರ್ ಎಂಪೋರಿಯಮ್ (IMDB)
- ↑ TheDailyShow.com
- ↑ ಯುನೈಟೆಡ್ ಸ್ಟೇಟ್ಸ್ ಪೋಸ್ಟಲ್ ಸರ್ವೀಸ್ (ಸೆಪ್ಟೆಂಬರ್ 28, 2005). ಜಿಮ್ ಹೆನ್ಸನ್, ಮಪೆಟ್‌ಸ್ , ಅಂಚೆ ಚೀಟಿಗಳ ಬಗ್ಗೆ ಒಪ್ಪಿಗೆಯನ್ನು ಪಡೆದರು . ಪತ್ರಿಕಾ ಹೇಳಿಕೆ ಬಿಡುಗಡೆ.
- ↑ ನ್ಯೂ ಇಯರ್ಸ್ ರಾಕಿಂಗ್ ಈವ್ 2008 (2007) (TV)
- ↑ "ಪೇಸ್ಟ್ ಮ್ಯಾಗಜೀನ್", "[೧] Archived 2011-09-07 ವೇಬ್ಯಾಕ್ ಮೆಷಿನ್ ನಲ್ಲಿ."
- ↑ "ಸೆಂಟರ್ ಫಾರ್ ಪಪೆಟ್ರಿ ಆರ್ಟ್ಸ್", "[೨] Archived 2011-05-03 ವೇಬ್ಯಾಕ್ ಮೆಷಿನ್ ನಲ್ಲಿ."
- ↑ ೨೧.೦ ೨೧.೧ ಫ್ಲೆಮಿಂಗ್, ಮೈಕೆಲ್. "ಸೆಗೆಲ್ ಹಾಗೂ ಸ್ಟಾಲರ್‌ರವರುಗಳು ಮಪೆಟ್‌ಸ್‌ಅನ್ನು ನಿರ್ವಹಿಸಲಿದ್ದಾರೆ." ವೆರೈಟಿ . ಏಪ್ರಿಲ್ 5, 2008ರಂದು ವೀಕ್ಷಿಸಲಾಯಿತು.
- ↑ ೨೨.೦ ೨೨.೧ ಬಿಲ್ಲಿಂಗ್‌ಟನ್, ಅಲೆಕ್ಸ್. "Jason Segel Reveals New Muppets Movie Details". First Showing. Retrieved 2008-05-08.
- ↑ ೨೩.೦ ೨೩.೧ ನ್ಯೂಗೆನ್, ಹೀಥರ್. "Exclusive: In the Future with Segel and Hader!". Coming Soon. Archived from the original on 2011-05-15. Retrieved 2008-05-09.
- ↑ "ನ್ಯೂ ಡಿಸ್ನಿ 'ಪೈರೇಟ್ಸ್,' 'ಮಪೆಟ್ ,' ಬೀಟಲ್ಸ್ ಮೂವೀಸ್ ಅನೌನ್ಸ್‌ಡ್ ಅಟ್ D23 ಎಕ್ಸ್‌ಪೋ | ಆಕ್ಸೆಸ್ ಹಾಲಿವುಡ್ - ಸೆಲೆಬ್ರಿಟಿ ನ್ಯೂಸ್ , ಫೋಟೋಸ್ & ವಿಡಿಯೋಸ್". Archived from the original on 2011-05-03. Retrieved 2011-05-17.
- ↑ ದ ಮಪೆಟ್ಸ್ ಆರ್ ಕಮಿಂಗ್! Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ.‘ಅಮೇರಿಕನ್ ವುಮನ್ ’ ಗೋಸ್ ವೈರಲ್ ಆನ್ ಮೆಮೋರಿಯಲ್ ಡೇ , ‘ಲಾಸ್ಟ್’ ಪ್ರೋಮೋ ದಿಸ್ ವೆನಸ್‌ಡೇ! Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ.» MTV ಮೂವೀಸ್ ಬ್ಲಾಗ್ Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Muppets To Invade Segel Style Christmas 2011". The Film Stage. June 8, 2010. Archived from the original on ಮೇ 11, 2011. Retrieved June 8, 2010.
{{cite web}}
: External link in
(help)|work=
- ↑ "ಆರ್ಕೈವ್ ನಕಲು". Archived from the original on 2010-11-25. Retrieved 2011-05-17.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Muppets.com - ಅಧಿಕೃತ ಜಾಲತಾಣ.
- ಮಪೆಟ್ ವಿಕಿ - ಅಭಿಮಾನಿಗಳ ವಿಕಿತಾಣ
- ಮಪೆಟ್ ಕ್ಯಾಸ್ಟ್ Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ. - ಅಭಿಮಾನಿಗಳ ಪಾಡ್ಕ್ಯಾಸ್ಟ್
- ಮಪೆಟ್ ಸೆಂಟ್ರಲ್ - ಅಭಿಮಾನಿಗಳ ಜಾಲತಾಣ
- ದ ಮಪೆಟ್ ನ್ಯೂಸ್ಫ್ಲಾಷ್ Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ. - ಅಭಿಮಾನಿಗಳ ಬ್ಲಾಗ್
- ಟಫ್ಪಿಗ್ಸ್ - ಅಭಿಮಾನಿಗಳ ಜಾಲತಾಣ
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: external links
- Pages using ISBN magic links
- Articles with hatnote templates targeting a nonexistent page
- Articles with unsourced statements from June 2008
- Articles with invalid date parameter in template
- Articles with unsourced statements from February 2008
- Articles with unsourced statements from May 2010
- ಮಪೆಟ್ಸ್
- ಸ್ಯಾಟರ್‌ಡೇ ನೈಟ್ ಲೈವ್ ರೇಖಾಚಿತ್ರಗಳು
- ಮನೋರಂಜನೆ