ವಿಷಯಕ್ಕೆ ಹೋಗು

ದೊದೋಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊದೋಲ್ ಒಂದು ಇಂಡೊನೇಷ್ಯನ್ ಸಿಹಿ ಟಾಫಿಯಂತಹ ಸಕ್ಕರೆ ತಾಳೆ ಆಧಾರಿತ ಮಿಠಾಯಿಯಾಗಿದೆ. ಇದು ಸಾಮಾನ್ಯವಾಗಿ ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುತ್ತದೆ.[] ಇದು ಇಂಡೊನೇಷ್ಯಾ, ಮಲೇಷ್ಯಾ, ಸಿಂಗಾಪುರ್, ಫಿಲಿಪೀನ್ಸ್, ದಕ್ಷಿಣ ಭಾರತ, ಶ್ರೀಲಂಕಾ, ಥೈಲಂಡ್ ಮತ್ತು ಬರ್ಮಾಗಳಲ್ಲಿ ಜನಪ್ರಿಯವಾಗಿದೆ. ಇದನ್ನು ತೆಂಗಿನ ಹಾಲು, ಬೆಲ್ಲ ಮತ್ತು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಗಟ್ಟಿ, ಸಿಹಿ ಮತ್ತು ಅಂಟಂಟಾಗಿರುತ್ತದೆ.[]

ದೊದೋಲ್ ಭಾರತದ ಪಶ್ಚಿಮ ಕರಾವಳಿಯ ರೋಮನ್ ಕ್ಯಾಥೊಲಿಕ್ಕರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಮುಂಬಯಿ, ಗೋವಾ ಮತ್ತು ಮಂಗಳೂರು ನಗರದ ಪೂರ್ವ ಭಾರತೀಯರು ಸೇರಿದ್ದಾರೆ.

ತಯಾರಿಸಲಾಗುವ ಪ್ರಕ್ರಿಯೆಯಲ್ಲಿ, ಎಲ್ಲ ಪದಾರ್ಥಗಳನ್ನು ಸೇರಿಸಿ ಒಲೆಯ ಮೇಲೆ ಬೇಯಿಸಲಾಗುತ್ತದೆ. ಪ್ರಮಾಣ ಅರ್ಧದಷ್ಟಾಗುವವರೆಗೂ ಬೇಯಿಸುತ್ತಿರಬೇಕು ಮತ್ತು ಈ ಸಂದರ್ಭದಲ್ಲಿ ದ್ರವವು ಆವಿಯಾಗುತ್ತದೆ. ಸಾಮಾನ್ಯವಾಗಿ ತಯಾರಾಗಲು ೯ ಗಂಟೆಯವರೆಗೆ ತೆಗೆದುಕೊಳ್ಳುತ್ತದೆ. ದೊದೋಲ್‍ನ್ನು ದೊಡ್ಡ ಬಾಣಲೆಯಲ್ಲಿ ನಿರಂತರವಾಗಿ ಕೈಯಾಡಿಸಬೇಕಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "What Is Dodol?". wiseGEEK.
  2. Bhuwon Sthapit; Hugo A.H. Lamers; V. Ramanatha Rao; Arwen Bailey, eds. (2016). Tropical Fruit Tree Diversity: Good Practices for in Situ and On-farm Conservation, Issues in Agricultural Biodiversity. Routledge. ISBN 9781317636229.

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ದೊದೋಲ್&oldid=994437" ಇಂದ ಪಡೆಯಲ್ಪಟ್ಟಿದೆ