ದೊಡ್ದರಸಿನಕೆರೆ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ದೊಡ್ಡರಸಿನಕೆರೆ, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗ್ರಾಮ. ಇದು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಿಂದ ಸುಮಾರು ೧ ಕಿ.ಮೀ. ದೂರದಲ್ಲಿದ್ದು, ೩ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಮಂಡ್ಯ ಜಿಲ್ಲಾಕೇಂದ್ರದಿಂದ ೧೬ ಮತ್ತು ಮದ್ದೂರು ತಾಲ್ಲೂಕು ಕೇಂದ್ರದಿಂದ ೧೨ ಕಿಲೋಮೀಟರ್ ಅಂತರದಲ್ಲಿದೆ.
ರಾಜ 'ದೊಡ್ಡರಸ'ನಿಂದ ನಿರ್ಮಾಣಗೊಂಡಿತೆಂದು ಹೇಳಲಾಗುವ ಈ ಊರಿನಲ್ಲಿ ಪ್ರಸ್ತುತ ೭೦೦೦ ಮತದಾರರಿದ್ದಾರೆ. ಇದು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದು. ವ್ಯವಸಾಯೋದ್ದೇಶಕ್ಕಾಗಿ ೨ ಕೆರೆಗಳನ್ನು ಹೊಂದಿದೆ. 'ದೊಡ್ದರಸಿನಕೆರೆ ಗ್ರಾಮ ಪಂಚಾಯಿತಿ'ಯು ಸುತ್ತಲಿನ ಮುಟ್ಟನಹಳ್ಳಿ, ಕುರಿಕೆಂಪನದೊಡ್ಡಿ, ದೇವರಹಳ್ಳಿ, ಗೌಡಯ್ಯನದೊಡ್ಡಿ, ಹಾಗೂ ಚಿಕ್ಕಮರಿಗೌಡನದೊಡ್ಡಿ ಎಂಬ ೫ ಗ್ರಾಮಗಳನ್ನು ಒಳಗೊಳ್ಳುತ್ತದೆ.
ಕೃಷಿ
[ಬದಲಾಯಿಸಿ]ಗ್ರಾಮದ ಪ್ರಮುಖ ಬೆಳೆಗಳು ಕಬ್ಬು, ಬತ್ತ ಮತ್ತು ತರಕಾರಿ. ಉಪಕಸುಬುಗಳಾದ ಮೀನುಗಾರಿಕೆ ಮತ್ತು ಹೈನುಗಾರಿಕೆ ಕೂಡ ಪ್ರಮುಖವಾಗಿವೆ.
ಜನಸಂಖ್ಯೆ
[ಬದಲಾಯಿಸಿ]೨೦೧೧ರ ಜನಗಣತಿಯ ಪ್ರಕಾರ ಜನಸಂಖ್ಯೆ ೯೩೯೨ ಹೊಂದಿದ್ದು ೪೮೨೪ ಗಂಡಸರು ಹಾಗೂ ೪೫೬೮ ಹೆಂಗಸರು ವಾಸಿಸುತ್ತಿದ್ದಾರೆ.
ದೇವಾಲಯಗಳು
[ಬದಲಾಯಿಸಿ]ದೊಡ್ಡರಸಿನಕೆರೆ ಗ್ರಾಮವು ಸುಮಾರು ೨೦ ದೇವಾಲಯಗಳನ್ನು ಹೊಂದಿದ್ದು, ಅದರಲ್ಲಿ ಪ್ರಮುಖವಾದವು, ಏಳೂರಮ್ಮ, ಕಾಳಮ್ಮ, ಕ್ಯಾತಮ್ಮ, ಹಿರಿಯಮ್ಮ, ಸಣ್ಣಕ್ಕಿರಾಯ, ಚೋಳರ ಕಾಲದ ಪೂರ್ವಾಭಿಮುಖ ಪಿಳ್ಳೆ ಜುಟ್ಟುಳ ಹನುಮಂತರಾಯ, ಪೊeತಲಿಂಗೇಶ್ವರ. ಚೋಳರ ಕಾಲದ 'ಮಾಧವರಾಯ' ದೇವಾಲಯ ಶಿಥಿಲಾವಸ್ಥೆಯಲ್ಲಿದೆ.
ಹಬ್ಬಗಳು
[ಬದಲಾಯಿಸಿ]ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವ 'ಸಿಡಿಹಬ್ಬ' ಪ್ರಮುಖವಾದುದು.
ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ]- ದೊಡ್ಡರಸಿನಕೆರೆ ತೋಟಶೆಟ್ಟಿ - ನಾಟಕಕಾರ
- ಅಂಬರೀಷ್ - ನಟ, ರಾಜಕಾರಣಿ
- ಡಿ. ಸಿ. ತಮ್ಮಣ್ಣ - ರಾಜಕಾರಣಿ