ಭೀಮರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Greater Racket-tailed Drongo
Nominate race from Kerala
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. paradiseus
Binomial name
Dicrurus paradiseus
Linnaeus, 1766
Synonyms

Dissemurus paradiseus
Dissemuroides paradiseus
Edolius grandis

ದೊಡ್ಡ ರ್ರ್ಯಾಕೆಟ್‌-ಬಾಲದ ಡ್ರೊಂಗೋ ಪಕ್ಷಿ , ಡಿಕ್ರುರಸ್‌ ಪ್ಯಾರಾಡೈಸಿಯಸ್ ‌ ಎಂಬ ಪಕ್ಷಿಯು ತುದಿಗೆ ಸೀಮಿತವಾದಂತಹ ಅಡ್ಡೆಳೆಗಳ ಹೆಣಿಗೆಯನ್ನು ಹೊಂದಿರುವ ಉದ್ದವಾದ ಬಾಲದ ಹೊರಗಿನ ಪುಕ್ಕ/ಗರಿಗಳ ವೈಶಿಷ್ಟ್ಯವನ್ನು ಹೊಂದಿರುವ ಮಧ್ಯಮ ಗಾತ್ರದ ಏಷ್ಯಾಪಕ್ಷಿಯಾಗಿದೆ. ಇವುಗಳನ್ನು ಕೂಡಾ ಡಿಕ್ರುರಿಡೇ ಕುಟುಂಬದ ಇತರ ಡ್ರೊಂಗೋಗಳ ವರ್ಗಕ್ಕೆ ಸೇರಿಸಲಾಗಿದೆ. ಮನುಷ್ಯರು ವಾಸಿಸುವ ಅರಣ್ಯಗಳಲ್ಲಿನ ವಾಸನೆಲೆಗಳ ಬಳಿಯ ಬಯಲಿನಲ್ಲಿ ಅನೇಕ ವೇಳೆ ನೆಲೆಸುವ ಇವು ಎದ್ದು ಕಾಣುವಂತೆ ಇರುತ್ತವಲ್ಲದೇ ಅನೇಕ ಇತರ ಪಕ್ಷಿಗಳ ಕೂಗುಗಳನ್ನು ಸ್ಪಷ್ಟ ಅನುಕರಣೆಗಳೂ ಸೇರಿದಂತೆ ಉಚ್ಚ ಸ್ಥಾಯಿಯಲ್ಲಿ ಕೂಗುವುದರ ಮೂಲಕ ಗಮನವನ್ನು ಸೆಳೆಯುತ್ತವೆ. ಹಲವು ಕೀಟ/ಹುಳ ಭಕ್ಷಕಗಳು ಒಟ್ಟಿಗೆ ಆಹಾರವನ್ನು ಹುಡುಕುತ್ತಾ ಹೋಗುವ ಅರಣ್ಯ ಪಕ್ಷಿ ಸಮುದಾಯಗಳಲ್ಲಿ ಕಂಡು ಬರುವ ಒಂದು ಗುಣಲಕ್ಷಣವಾದ ಈ ತರಹದ ಅನುಕರಣೆಗಳು ಆಹಾರವನ್ನು ಹುಡುಕುತ್ತಾ ಸಾಗುವ ಮಿಶ್ರ-ತಳಿಗಳ ಪಕ್ಷಿಗಳಿಂದ ಕೂಡಿದ ಹಿಂಡನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದು ಭಾವಿಸಲಾಗಿದೆ. ಈ ಡ್ರೊಂಗೋಗಳು ಹಲವು ಬಾರಿ ಹಿಂಡಿನಲ್ಲಿನ ಇತರ ಆಹಾರಾನ್ವೇಷಕಗಳು ಹಿಡಿದು ಹಾಕಿದ್ದ ಅಥವಾ ವಿಚಲಿತಗೊಳಿಸಿದ್ದ ಹುಳಹುಪ್ಪಟೆಯ ಶಿಕಾರಿಯನ್ನು ಕದ್ದು ಬಿಡುತ್ತವೆ. ಅವುಗಳು ದಿವಾಚರಗಳಾಗಿದ್ದರೂ ಅರುಣೋದಯಕ್ಕೆ ಸಾಕಷ್ಟು ಮುಂಚೆಯಿಂದಲೇ ಹಾಗೂ ಮುಸ್ಸಂಜೆಯಾದ ಮೇಲೂ ಸಾಕಷ್ಟು ತಡಹೊತ್ತಿನವರೆಗೆ ಚಟುವಟಿಕೆಯಿಂದಿರುತ್ತವೆ. ಅವುಗಳ ವ್ಯಾಪಕ ಚೆದುರುವಿಕೆ ಹಾಗೂ ಪ್ರಾದೇಶಿಕ ವೈಶಿಷ್ಟ್ಯತೆಗಳಲ್ಲಿನ ಭಿನ್ನತೆಯಿಂದಾಗಿ ಅನುವಂಶಿಕತೆಯ ಪಥಚ್ಯುತಿ ಹಾಗೂ ಬೇರ್ಪಡುವಿಕೆಗಳಿಂದ ಉಂಟಾಗುವ ಜಾತ್ಯುದ್ಭವಗಳಿಗೆ ಅವು ಪ್ರತಿಮಾರೂಪದ ಉದಾಹರಣೆಗಳಾಗಿ ಮಾರ್ಪಟ್ಟಿವೆ.[೨]

ವಿವರಣೆ[ಬದಲಾಯಿಸಿ]

ಪಶ್ಚಿಮ ಘಟ್ಟಗಳಿಂದ

ಏಷ್ಯಾದಲ್ಲಿ ಇವುಗಳು ವಾಸವಿರುವ ಬಹುತೇಕ ವ್ಯಾಪ್ತಿಯ ಪ್ರದೇಶಗಳಲ್ಲಿ ಇದು ಡ್ರೊಂಗೋ ಪಕ್ಷಿ ತಳಿಗಳಲ್ಲೇ ಅತ್ಯಂತ ದೊಡ್ಡದಾಗಿದೆಯಲ್ಲದೇ ತಮ್ಮ ಪ್ರತ್ಯೇಕತೆಯ ಬಾಲದ ರ್ರ್ಯಾಕೆಟ್‌ ತೋಕೆಗಳು ಹಾಗೂ ಉಪತಳಿಗಳ ನಡುವೆ ಪ್ರಮಾಣದಲ್ಲಿ ವ್ಯತ್ಯಾಸವನ್ನು ಹೊಂದಿರುವ ಸಾಧಾರಣವಾಗಿ ಮುಖದ ಮುಂಭಾಗದಲ್ಲಿ ಕೊಕ್ಕಿನ ಮೇಲ್ಭಾಗದಲ್ಲಿ ಆರಂಭವಾಗಿ ಶಿರೋಭಾಗದುದ್ದಕ್ಕೂ ಹೋಗಿರುವ ಸುರುಳಿ ಸುತ್ತಿರುವ ಗರಿಗಳ ಶಿಖೆಯಿಂದಾಗಿ ಸಹಜವಾಗಿಯೇ ಗುರುತಿಸಬಲ್ಲಂತಹುದಾಗಿದೆ. ವಂಕಿ ಸುತ್ತುಗಳಿರುವ ತೋಕೆಗಳನ್ನು ಹೊಂದಿರುವ ಬಾಲವು ವೈಶಿಷ್ಟ್ಯಸೂಚಕವಾಗಿದ್ದು ಹಾರುತ್ತಿರು ವಾಗ ಎರಡು ದೊಡ್ಡ ದುಂಬಿಗಳು ಕಪ್ಪು ಪಕ್ಷಿಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವಂತೆ ಕಾಣಿಸುತ್ತದೆ. ಹಿಮಾಲಯದ ಪೂರ್ವಭಾಗದ ಪ್ರದೇಶಗಳಲ್ಲಿ ಸಣ್ಣ ರ್ರ್ಯಾಕೆಟ್‌-ಬಾಲದ ಡ್ರೊಂಗೋ ಪಕ್ಷಿಗಳನ್ನೇ ಈ ತಳಿಗಳೆಂದು ತಿಳಿದು ಗೊಂದಲವಾಗುವ ಸಾಧ್ಯತೆಯಿರುವುದಾದರೂ, ಸಣ್ಣ ಪಕ್ಷಿ ಗಳು ಚಪ್ಪಟೆ ತೋಕೆಗಳನ್ನು ಹೊಂದಿದ್ದು ಅವುಗಳಿಗೆ ಶಿಖೆ ಬಹುಪಾಲು ಇಲ್ಲದಂತಿರುತ್ತದೆ.[೩]

ಪಕ್ಷಿವರ್ಗಗಳೊಂದಿಗೆ ಶಿಖೆಯ ಗಾತ್ರ ಹಾಗೂ ಸ್ವರೂಪ ಕೂಡಾ ವ್ಯತ್ಯಾಸಗಳನ್ನು ಹೊಂದಿರುತ್ತದೆ

ವಿವಿಧ ಪ್ರಭೇದಗಳು[ಬದಲಾಯಿಸಿ]

  • ಬಹುವ್ಯಾಪಕವಾದ ಈ ತಳಿಗಳಲ್ಲಿ ವೈಶಿಷ್ಟ್ಯದಾಯಕ ಭಿನ್ನತೆಗಳನ್ನು ಹೊಂದಿರುವ ಪಕ್ಷಿಗಳು ಸೇರಿದ್ದು, ಅವುಗಳಲ್ಲಿ ಹಲವು ಪಕ್ಷಿಗಳಿಗೆ ಉಪತಳಿಗಳನ್ನು ಹೆಸರಿಸಲಾಗಿದೆ. ನಾಮಸೂಚಿತ ಪ್ರಭೇದಗಳನ್ನು ದಕ್ಷಿಣ ಭಾರತದಲ್ಲಿ ಕಾಣಬಹುದಾಗಿದ್ದು ಪ್ರಧಾನವಾಗಿ ಪಶ್ಚಿಮ ಘಟ್ಟಗಳ ಅರಣ್ಯಗಳಿಂದ ಕೂಡಿದ ಪ್ರದೇಶಗಳಲ್ಲಿ ಹಾಗೂ ಭಾರತದ ಪರ್ಯಾಯದ್ವೀಪ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಬೆಟ್ಟಗಳ ಅರಣ್ಯಗಳಲ್ಲಿ ಇವುಗಳನ್ನು ಕಾಣಬಹುದಾಗಿದೆ.
  • ಶ್ರೀಲಂಕಾದಲ್ಲಿನ ಉಪತಳಿಗಳು ಸಿಲೋನಿಕಸ್‌ ಗಳಾಗಿದ್ದು ನಾಮಸೂಚಿತ ಪ್ರಭೇದಗಳನ್ನು ಹೋಲುವಂತಿದ್ದರೂ ಸ್ವಲ್ಪ ಸಣ್ಣದಾಗಿರುತ್ತವೆ.
  • ಹಿಮಾಲಯ ಪರ್ವತ ಪ್ರದೇಶದುದ್ದಕ್ಕೂ ಕಂಡು ಬರುವ ಉಪತಳಿಗಳು ಗ್ರಾಂಡಿಸ್‌ ಗಳಾಗಿದ್ದು ಇವು ಅತಿ ದೊಡ್ಡದಾಗಿದ್ದು ಉದ್ದವಾದ ಹೊಳಪಿನಿಂದ ಕೂಡಿದ ಕೊರಳಗರಿಗಳನ್ನು ಹೊಂದಿರುತ್ತವೆ.
  • ಅಂಡಮಾನ್‌ ದ್ವೀಪಗಳಲ್ಲಿ ಕಂಡುಬರುವ ಪ್ರಭೇದ ಒಟಿಯೋಸಸ್ ‌ಸಣ್ಣದಾದ ಕೊರಳಗರಿಗಳನ್ನು ಹೊಂದಿದ್ದು ಅದರ ಶಿಖೆಯು ತೀರ ಸಣ್ಣದಾಗಿದ್ದರೆ, ನಿಕೋಬಾರ್‌ ದ್ವೀಪದ ಪ್ರಭೇದ ನಿಕೋಬಾರಿಯೆನ್ಸಿಸ್‌ ಉದ್ದವಾದ ಮುಂಭಾಗದ ಶಿಖೆಯನ್ನು ಹೊಂದಿದ್ದು ಒಟಿಯೋಸಸ್‌ ಗಿಂತ ಚಿಕ್ಕದಾದ ಕೊರಳಗರಿಗಳನ್ನು ಹೊಂದಿರುತ್ತದೆ.[೩]
  • ಶ್ರೀಲಂಕಾದ ಪ್ರಭೇದ ಲೊಫೋರಿನಸ್ ‌ ಅನ್ನು ಅದು ಸಿಲೋನಿಕಸ್‌‌ ನೊಂದಿಗೆ ಸಂಕರವನ್ನು ಹೊಂದಿದೆ ಎಂಬ ಭಾವನೆಯಿಂದಾಗಿ ಅವುಗಳನ್ನು ಉಪತಳಿಗಳನ್ನಾಗಿ ಪರಿಗಣಿಸಲಾಗುತ್ತಿತ್ತು, ಆದರೆ ಅವುಗಳ ಅತಿವ್ಯಾಪನೆಯ ವ್ಯಾಪ್ತಿಗಳ ಅನುಸಾರವಾಗಿ ಅವುಗಳನ್ನು ಪ್ರತ್ಯೇಕ ತಳಿಗಳನ್ನಾಗಿ ನವೀನ ಜೀವಿ ವರ್ಗೀಕರಣ ವಿಧಾನದಲ್ಲಿ ಪರಿಗಣಿಸಲಾಗಿದೆ.[೩][೪]
  • ನಾಮಸೂಚಿತ ಪ್ರಭೇದಗಳ ಮಾದರಿಗಳನ್ನು ಕೆಲವೊಮ್ಮೆ ಲೊಫೋರಿನಸ್‌ ಪ್ರಭೇದವೆಂದು ಗೊಂದಲಕ್ಕೊಳಗಾಗಿದ್ದೂ ಇದೆ.[೫]
  • ಕೊಕ್ಕಿನ ಸ್ವರೂಪ, ಶಿಖೆ, ಕೊರಳ ಗರಿಗಳು ಹಾಗೂ ಬಾಲದ ತೋಕೆಗಳ ಹರಹುಗಳಲ್ಲಿ ಗಮನಾರ್ಹ ಭಿನ್ನತೆಯನ್ನು ಆಗ್ನೇಯ ಏಷ್ಯಾದಲ್ಲಿ ಕಾಣಬಹುದಾಗಿದೆ. ಬಂಗ್ಗಾಯಿ ದ್ವೀಪ ಸಮೂಹದ ಬಾಂಗ್ವೆ ದ್ವೀಪ ದ ಪ್ರಭೇದ ಬಾರ್ನಿಯನ್‌ ಬ್ರಾಕಿಫೋರಸ್ ‌ (=ಇನ್‌ಸುಲೇರಿಸ್ ‌) ಶಿಖೆಗಳನ್ನು ಹೊಂದಿರುವುದಿಲ್ಲವಾದರೆ(ಬಾಂಗ್ವೆ ಪ್ರಭೇದ ವು ಮುಮ್ಮುಖದ ಪುಕ್ಕ/ಗರಿಗಳನ್ನು ಹೊಂದಿದ್ದು ಅವು ಮುಂಭಾಗದೆಡೆಗೆ ಕಮಾನಿನಂತೆ ಬಾಗಿರುತ್ತವೆ) ತೀರ ಕಡಿಮೆ ಗಾತ್ರದ ಶಿಖೆಗಳನ್ನು ಮೈಕ್ರೋಲೋಫಸ್‌ (=ಎಂಡೋಮೈಕಸ್‌  ; ನ್ಯಾಟು/ಚುನಾಸ್‌, ಅನಂಬಾಸ್‌ ಮತ್ತು ಟಿಯೋಮನ್ಸ್‌ ) ಮತ್ತು ಪ್ಲಾಟುರಸ್‌ (ಸುಮಾತ್ರಾ)ಗಳಲ್ಲಿ ಕಾಣಬಹುದಾಗಿದೆ.
  • ಫಾರ್ಮೋಸಸ್‌ (ಜಾವಾ), ಹೈಪೋಬಾಲ್ಲಸ್‌ (ಥಾಯ್ಲೆಂಡ್‌), ರಂಗೂನೆನ್ಸಿಸ್‌ (ಉತ್ತರ ಬರ್ಮಾ, ಮಧ್ಯಭಾರತದ ಪ್ರಭೇದಗಳನ್ನು ಈ ಹಿಂದೆ ಇವುಗಳಲ್ಲಿ ಸೇರಿಸಲಾಗಿತ್ತು) ಮತ್ತು ಜೋಹಿನಿ (ಹೈನಾನ್‌)ಗಳೂ ಸೇರಿದಂತೆ ಅನೇಕ ಪ್ರಭೇದಗಳನ್ನು ಆಗ್ನೇಯ ಏಷ್ಯನ್‌/ಏಷ್ಯಾದ ದ್ವೀಪಗಳುದ್ದಕ್ಕೂ ಹಾಗೂ ಪ್ರಧಾನಭೂಮಿಯಲ್ಲಿ ಕಾಣಬಹುದಾಗಿದೆ.[೬]
  • ಎಳೆಯ ಪಕ್ಷಿಗಳು ಚುರುಕಿಲ್ಲದವಾಗಿರುತ್ತವಲ್ಲದೇ ಶಿಖೆಗಳನ್ನು ಹೊಂದಿರದಿರುವ ಸಾಧ್ಯತೆಯಿದ್ದರೆ ಗರಿಯುದುರುತ್ತಿರುವ ಪಕ್ಷಿಗಳು ಉದ್ದವಾದ ಬಾಲದ ತೋಕೆಗಳನ್ನು ಹೊಂದಿರದಿರುವ ಸಾಧ್ಯತೆಯಿರುತ್ತದೆ. ಇದರ ತೋಕೆಯು ಗರಿಯ ಚಪ್ಪಟೆ ತಳಭಾಗದ ಒಳ ಅಡ್ಡೆಳೆಗಳ ಹೆಣಿಗೆಯಿಂದ ರೂಪುಗೊಂಡರೂ ಬೆನ್ನುಮೂಳೆಯಲ್ಲಿ ಆಹಾರದ ಒತ್ತುಗಡ್ಡಿ ಯ ಸ್ವಲ್ಪವೇ ಮೇಲೆ ತಿರುಚನ್ನು ಹೊಂದಿರುವುದರಿಂದ ಹೊರ ಅಡ್ಡೆಳೆಗಳ ಹೆಣಿಗೆಯ ಮೇಲಿರುವಂತೆ ಕಾಣಿಸುತ್ತದೆ.[೭]

ಹರಡುವಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಈ ತಳಿಗಳ ಚೆದುರುವಿಕೆಯ ವ್ಯಾಪ್ತಿಯು ಪಶ್ಚಿಮ ಹಿಮಾಲಯದಿಂದ ಪೂರ್ವ ಹಿಮಾಲಯದವರೆಗೆ ಹಾಗೂ 4000 ಅಡಿಗಳ ಕೆಳಗಿನ ಅಡಿಗುಡ್ಡದಲ್ಲಿರುವ ಮಿಷ್ಮಿ ಪರ್ವತಗಳವರೆಗೆ ವಿಸ್ತರಿಸಿದೆ. ಪಶ್ಚಿಮದೆಡೆಗೆ ಬಾರ್ನಿಯೋ ದ್ವೀಪಗಳತ್ತ ಮುಂದುವರೆಯುತ್ತಾ ಹೋಗುವ ಇದು ಪೂರ್ವದ ಜಾವಾ ದ್ವೀಪಗಳೆಡೆಗೆ ಪ್ರಧಾನ ಭೂಭಾಗ ಹಾಗೂ ದ್ವೀಪಗಳವರೆಗೆ ಹರಡಿದೆ. ಅವುಗಳನ್ನು ಅರಣ್ಯದ ವಾಸನೆಲೆಗಳಲ್ಲಿ ಪ್ರಧಾನವಾಗಿ ಕಾಣಬಹುದಾಗಿರುತ್ತದೆ.[೮][೯]

ನಡವಳಿಕೆ ಮತ್ತು ಪರಿಸರವಿಜ್ಞಾನ[ಬದಲಾಯಿಸಿ]

  • ಇತರ ಡ್ರೊಂಗೋ ಪಕ್ಷಿಗಳ ಹಾಗೆಯೇ ಇವೂ ಕೂಡಾ ಪ್ರಧಾನವಾಗಿ ಹುಳಹುಪ್ಪಟೆಗಳನ್ನೇ ಆಹಾರವನ್ನಾಗಿ ಸೇವಿಸುತ್ತವಾದರೂ ಹಣ್ಣುಗಳನ್ನು ಕೂಡಾ ಆಹಾರವನ್ನಾಗಿ ಸೇವಿಸುತ್ತವಲ್ಲದೇ ಮಕರಂದಕ್ಕಾಗಿ ಹೂವುಗಳುಳ್ಳ ಮರಗಳಿಗೆ ಕೂಡಾ ಭೇಟಿ ನೀಡುತ್ತವೆ. ಸಣ್ಣದಾದ ಕಾಲುಗಳನ್ನು ಹೊಂದಿರುವ ಇವು ಲಂಬವಾಗಿ ಕುಳಿತಿರುತ್ತದಲ್ಲದೇ ಅನೇಕ ವೇಳೆ ಎತ್ತರವಿರುವ ಹಾಗೂ ಹೊರಚಾಚಿರುವ ಕೊಂಬೆಗಳ ಮೇಲೆ ಇರುತ್ತವೆ. ಅವುಗಳು ಆಕ್ರಮಣಶೀಲ ಪಕ್ಷಿಗಳಾಗಿದ್ದು ಇನ್ನೂ ದೊಡ್ಡ ಪಕ್ಷಿಗಳನ್ನು ಕೂಡಾ ಗುಂಪಾಗಿ ಸೇರಿಕೊಂಡು ಆಕ್ರಮಿಸುತ್ತವೆ ಇದು ಬಹುತೇಕ ಗೂಡುಗಳನ್ನು ಕಟ್ಟಿಕೊಳ್ಳುವಾಗ ಹೀಗೇ ಮಾಡುತ್ತವೆ.[೧೦]
  • ಅವುಗಳು ಅನೇಕ ವೇಳೆ ಮುಸ್ಸಂಜೆಯ ಹೊತ್ತಿನಲ್ಲಿಯೂ ಕೂಡಾ ಚಟುವಟಿಕೆಯಿಂದಿರುತ್ತವೆ.[೯]
ಹೊರಬಾಲದ ಬಾಲದ ಪುಕ್ಕ/ಗರಿಗಳು ಬೆಳೆಯುತ್ತಿರುವ ಪಕ್ಷಿ (ಕೇರಳದ ಪಶ್ಚಿಮ ಘಟ್ಟ)
  • ಅವುಗಳ ಕೂಗುಗಳು ವಿಪರೀತವಾದ ವ್ಯತ್ಯಾಸಗಳನ್ನು ಹೊಂದಿದ್ದು ಏಕತಾನತೆಯ ಪುನರುಚ್ಚಾರಿತ ಶೀಟಿಗಳ ಧ್ವನಿಗಳು, ಲೋಹನಾದ ಹಾಗೂ ಅನುನಾಸಿಕ ಧ್ವನಿಗಳನ್ನು ಹಾಗೂ ಮತ್ತೂ ಸಂಕೀರ್ಣವಾದ ಸ್ವರಗಳು ಹಾಗೂ ಇತರ ಪಕ್ಷಿಗಳ ಅನುಕರಣೆಗಳನ್ನು ಕೂಡಾ ಒಳಗೊಂಡಿರುತ್ತವೆ.
  • ಬೆಳದಿಂಗಳಿನ 4 am ನಷ್ಟು ಮುಂಚಿನ ಹೊತ್ತಿನಲ್ಲೇ ಇವು ಲೋಹನಾದಪೂರಿತ ಟಂಕ್‌-ಟಂಕ್‌-ಟಂಕ್‌ ಸರಣಿಯ ಧ್ವನಿಗಳನ್ನು ಹೊರಡಿಸುತ್ತಾ ಕೂಗುವುದನ್ನು ಆರಂಭಿಸುತ್ತವೆ.[೧೧]
  • ಸಂಕೀರ್ಣ-ತಳಿಗಳ ಹಿಂಡುಗಳೊಂದಿಗೆ ಪರಸ್ಪರ ವ್ಯವಹರಿಸುವ ಮೂಲಕ ಕಲಿತ ಇತರ ಪಕ್ಷಿಗಳ ಅಪಾಯದ ಕೂಗುಗಳನ್ನು ನಿಖರವಾಗಿ ಅನುಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಪಕ್ಷಿಗಳ ಧ್ವನಿಯ ಅನುಕರಣೆಯು ಇಲ್ಲಿಯವರೆಗೆ ಅನುಕರಣೆಯಾದ ಧ್ವನಿಗಳ ಮೂಲ ಸನ್ನಿವೇಶಗಳಿಗೆ ಹೊರತಾದದ್ದು ಎಂದೇ ಭಾವಿಸಲಾಗಿದ್ದುದರಿಂದ ಇದು ಬಹುಮಟ್ಟಿಗೆ ಅಸಾಧಾರಣವಾಗಿದೆ.
  • ಆಫ್ರಿಕಾದ ಬೂದು ಗಿಳಿಗಳು ಯಥಾರ್ಥ ಸಂದರ್ಭಕ್ಕೆ ತಕ್ಕ ಹಾಗೆ ಮಾನವರ ಮಾತುಗಳನ್ನು ಅನುಕರಿಸುವುದು ತಿಳಿದ ವಿಚಾರವೇ ಆಗಿದ್ದರೂ, ನೈಸರ್ಗಿಕವಾಗಿ ಅವು ಈ ನಡವಳಿಕೆಯನ್ನು ತೋರುವುದಿಲ್ಲ.[೧೨]
  • ಡ್ರೊಂಗೋ ಪಕ್ಷಿ'ಯ ಈ ರೀತಿಯ ಸಂದರ್ಭಕ್ಕೆ ತಕ್ಕನಾದ ಇತರ ತಳಿಗಳ ಅಪಾಯ ಸೂಚನೆಗಳ ಕೂಗುಗಳ ಬಳಕೆಯು ಹಲವು ವಿದೇಶಿ ಭಾಷೆಗಳಲ್ಲಿ ಉಪಯುಕ್ತವಾದ ಕಿರುವಾಕ್ಯಗಳನ್ನು ಹಾಗೂ ಉದ್ಗಾರಗಳನ್ನು ಮನುಷ್ಯರು ಕಲಿಯುವುದಕ್ಕೆ ಹೋಲುವಂತಿದೆ.
  • ಶಿಕ್ರಾ ಪಕ್ಷಿಗಳು ಹತ್ತಿರದಲ್ಲಿರುವ ಸಂದರ್ಭದಲ್ಲಿರುವ ವಿಶೇಷ ಎಚ್ಚರಿಕೆಯ ಧ್ವನಿಯನ್ನು ಉಚ್ಚ ಸ್ಥಾಯಿಯ ಕ್ವೀ-ಕ್ವೀ-ಕ್ವೀ...ಷೀ/ಶೀ-ಕುಕೂ-ಷೀ/ಶೀಕುಕೂ-ಷೀ/ಶೀಕುಕೂ-ವೈ/ವೀ! ಎಂದು ಮಾನವರಿಗೆ ಶ್ರವ್ಯವಾದ ರೂಪದಲ್ಲಿ ಹೇಳಬಹುದಾದ ಕೂಗನ್ನು ಹೊರಡಿಸುತ್ತವೆ.[೧೧] ಅವುಗಳು ಹಿಂಸ್ರ ಪಕ್ಷಿಗಳ ಕೂಗುಗಳನ್ನು ಕೂಡಾ ಅನುಕರಿಸಿ ಇತರ ಪಕ್ಷಿಗಳನ್ನು ಎಚ್ಚರಿಸಿ ಅವುಗಳು ದಿಗ್ಭ್ರಾಂತವಾಗಿರುವಾಗ ಅವುಗಳ ಬೇಟೆಯನ್ನು ಅವುಗಳಿಂದ ಕದ್ದು ಕೊಂಡು ಹೋಗುತ್ತವೆ ಎಂದು ಹೇಳಲಾಗುತ್ತದೆ.[೧೩][೧೪] ಅವುಗಳು ಸಾಂಕೇತಿಕವಾಗಿ ಹರಟೆಹಕ್ಕಿಗಳಂತಹಾ[೧೫]
  • ಮಿಶ್ರ-ತಳಿಗಳ ಹಿಂಡುಗಳ ಸದಸ್ಯರಾದ ಇತರ ತಳಿಗಳ (ಕಾಡು ಹರಟೆ ಹಕ್ಕಿಗಳಂತೆ ಗರಿಗಳನ್ನು ಕೆದರಿಕೊಂಡು ತಲೆ ಹಾಗೂ ದೇಹಗಳನ್ನು ಚಲಿಸುವ ರೀತಿ ಕೂಡಾ ಮಾಡುತ್ತವೆ ಎಂದು ತಿಳಿದು ಬಂದಿದೆ) ಕೂಗುಗಳನ್ನು ಕೂಡಾ ಅನುಕರಿಸುತ್ತವೆಂದು ಕೂಡಾ ತಿಳಿದು ಬಂದಿದ್ದು ಅವು ಹೀಗೆ ಮಾಡುವುದು ಮಿಶ್ರ-ತಳಿಗಳ ಹಿಂಡುಗಳು ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಂದು ಕೂಡಾ ಭಾವಿಸಲಾಗಿದೆ.[೧೬] ಅನೇಕ ಸ್ಥಳಗಳಲ್ಲಿ ಅವುಗಳ ಮಿಶ್ರ-ತಳಿಗಳ ಹಿಂಡುಗಳಲ್ಲಿನ ಇತರ ಪಕ್ಷಿಗಳ ಮೇಲೆ ಕಳ್ಳತನದಿಂದ ಆಹಾರ ಪಡೆದುಕೊಳ್ಳುವ ಮೂಲಕ ಅವಲಂಬಿತತೆಯನ್ನು ಹೊಂದಿರುತ್ತದೆ.
  • ಅದರಲ್ಲೂ ನಿರ್ದಿಷ್ಟವಾಗಿ ನಗುವ ಹಾಡುಹಕ್ಕಿಗಳು ಹೀಗೆನ್ನಲಾಗುವುದಾದರೂ ಅವುಗಳು ಅನೇಕ ವೇಳೆ ಪರಸ್ಪರ ಪ್ರಯೋಜಕವಾದ ಸಹಜೀವನದ ಹಾಗೂ ಸಹಭೋಜಿ ಸಂಬಂಧಗಳಲ್ಲಿ ಭಾಗಿಯಾಗಿರುತ್ತವೆ.[೧೭][೧೮][೧೯]
  • ಹಲವು ನಿರೀಕ್ಷಕರು ಈ ಡ್ರೊಂಗೋ ಪಕ್ಷಿಗಳು ಆಹಾರಾನ್ವೇಷಿಸುತ್ತಿರುವ ಮರಕುಟಿಗಗಳನ್ನು ಅನುಸರಿಸುತ್ತಿರುವುದನ್ನು [೨೦][೨೧][೨೨] ಕಂಡುಕೊಂಡಿದ್ದರು ಹಾಗೂ ಒಂದು ಪಕ್ಷಿಯು ಮಕ್ಯಾಕ್‌ ಕೋತಿಗಳ ತಂಡವನ್ನು ಅನುಸರಿಸುತ್ತಿರುವ ವರದಿಯೂ ಕಂಡು ಬಂದಿತ್ತು.[೨೩]
  • ದೊಡ್ಡ ರ್ರ್ಯಾಕೆಟ್‌-ಬಾಲದ ಡ್ರೊಂಗೋ ಪಕ್ಷಿಯು ತನ್ನ ಸಂಪೂರ್ಣ ವ್ಯಾಪ್ತಿಯ ಪ್ರದೇಶಗಳಲ್ಲೆಲ್ಲಾ ವಲಸೆ ಹೋಗದ ಸಂತಾನವನ್ನು ಬೆಳೆಸುವ ಪಕ್ಷಿಯಾಗಿದೆ. ಭಾರತದಲ್ಲಿನ ಸಂತಾನ ವೃದ್ಧಿಯ ಋತುವು ಏಪ್ರಿಲ್‌ನಿಂದ ಆಗಸ್ಟ್‌ ತಿಂಗಳವರೆಗೆ ಇರುತ್ತದೆ. ಅವುಗಳ ಪ್ರಣಯಚೇಷ್ಟೆಗಳ ಪ್ರಕಟಪಡಿಕೆಯು ಜಿಗಿಯುವಿಕೆಗಳು ಹಾಗೂ ಕೊಂಬೆಗಳ ಮೇಲೆ ಲಾಗ ಹಾಕುವುದು/ಪಲ್ಟಿ ಹೊಡೆಯುವಿಕೆಗಳನ್ನು ಒಳಗೊಂಡಿದ್ದು ಅವುಗಳ ಆಟದ ಚಟುವಟಿಕೆಗಳಲ್ಲಿ ವಸ್ತುವೊಂದನ್ನು ಕೆಳಕ್ಕೆ ಬೀಳಿಸಿ ಮಧ್ಯೆ ಗಾಳಿಯಲ್ಲೇ ಅದನ್ನು ಹಿಡಿಯುವುದು ಒಳಗೊಂಡಿರುತ್ತದೆ.[೧೧]
  • ಅವುಗಳ ಬಟ್ಟಲಾಕಾರದ ಗೂಡುಗಳನ್ನು ಮರಗಳ ಟಿಸಿಲಿನಲ್ಲಿ ಕಟ್ಟಲಾಗುತ್ತದೆ[೩] ಹಾಗೂ ಸಾಧಾರಣವಾಗಿ ಇವುಗಳ ಒಂದು ಕಾವಿನಲ್ಲಿ ಮೂರರಿಂದ ನಾಲ್ಕು ಮೊಟ್ಟೆಗಳಿರುತ್ತವೆ. ಈ ಮೊಟ್ಟೆಗಳು ಬಿಳಿ ಕೆನೆಬಣ್ಣದ್ದಾಗಿದ್ದು ಅಗಲ ಭಾಗದಲ್ಲಿ ಹೆಚ್ಚು ಗಾಢವಾದ ಬಣ್ಣವನ್ನು ಹೊಂದಿದ್ದು ನಸುಗೆಂಪಿನಿಂದ ಕೂಡಿದ ಕಂದು ಬಣ್ಣದ ಹೊಪ್ಪಳೆಗಳಿಂದ ಕೂಡಿರುತ್ತವೆ.[೧೦]

ಸಂಸ್ಕೃತಿಯಲ್ಲಿ[ಬದಲಾಯಿಸಿ]

ಅವುಗಳು ಹೊರಡಿಸುವ ಒಂದು ಸರ್ವೇ ಸಾಮಾನ್ಯವಾದ ಸಿಳ್ಳೆಯ ಧ್ವನಿಯು ಭಾರತದ ಹಲವು ಭಾಗಗಳಲ್ಲಿ ಅವುಗಳಿಗೆ ನೀಡಲಾಗಿರುವ ಸ್ಥಳೀಯ ಹೆಸರಾದ ಕೊತ್ವಾಲ ಪಕ್ಷಿ ಯೆಂಬ ಹೆಸರಿನ ಮೂಲವಾಗಿದೆ (ಅದರರ್ಥ ಇದೇ ರೀತಿಯ ಸಿಳ್ಳೆಯ ಧ್ವನಿಯನ್ನು ಬಳಸುವ ಓರ್ವ "ಆರಕ್ಷಕ ವ್ಯಕ್ತಿ" ಅಥವಾ "ರಕ್ಷಕ"), ಇದೇ ಹೆಸರನ್ನು ಕಪ್ಪು ಡ್ರೊಂಗೋ ಪಕ್ಷಿಗೆ ಕೂಡಾ ಇಡಲಾಗಿದೆಯಲ್ಲದೇ, ಇತರ ಅನೇಕ ಪ್ರದೇಶಗಳಲ್ಲಿ ಭೀಮರಾಜ ಅಥವಾ ಭೃಂಗರಾಜ ಎಂದು ಕರೆಯಲಾಗುತ್ತದೆ.[೨೪]

  • 1950ರ ದಶಕಕ್ಕಿಂತ ಮುಂಚೆ ಭಾರತದ ಹಲವು ಭಾಗಗಳಲ್ಲಿ ಜನರು ಅನೇಕ ವೇಳೆ ಇವುಗಳನ್ನು ಬಂಧನದಲ್ಲಿಟ್ಟುಕೊಂಡಿರುತ್ತಿದ್ದರು. ಇದು ತುಂಬಾ ಒರಟಾಗಿರುತ್ತದೆಂದು ಹಾಗೂ ಕಾಗೆಯಂತೆ ವೈವಿಧ್ಯಮಯ ಆಹಾರ ಪದ್ಧತಿಗೆ ಸೂಕ್ತವಾಗುತ್ತದೆಂದು ಹೇಳಲಾಗುತ್ತಿತ್ತು.[೨೫][೨೬]

ಉಲ್ಲೇಖಗಳು[ಬದಲಾಯಿಸಿ]

  1. BirdLife International (2008). Dicrurus paradiseus. In: IUCN 2008. IUCN Red List of Threatened Species. Retrieved 25 September 2009.
  2. Mayr, E.; Vaurie, C. (1948). "Evolution in the Family Dicruridae (Birds)". Evolution. 2 (3): 238–265. doi:10. 2307/2405383. PMID 18884665. {{cite journal}}: Check |doi= value (help)
  3. ೩.೦ ೩.೧ ೩.೨ ೩.೩ Rasmussen PC & JC Anderton (2005). Birds of South Asia: The Ripley Guide. Volume 2. Smithsonian Institution & Lynx Edicions. pp. 592–593.
  4. Saha, Bhabesh Chandra; Mukherjee, Ajit Kumar (1980). "Occurrence of Dicrurus paradiseus lophorhinus (Vieillot) in Goa (India)". J. Bombay Nat. Hist. Soc. 77 (3): 511–112.
  5. Ripley,S Dillon (1981). "Occurrence of Dicrurus paradiseus lophorhinus (Vieillot) in Goa (India) - a comment". J. Bombay Nat. Hist. Soc. 78 (1): 168–169.
  6. Vaurie, C (1949). "A revision of the bird family Dicruridae". Am. Mus. Nat. Hist. 93: 203–342.
  7. Ali, Salim (1929). "The racket-feathers of Dissemurus paradiseus". J. Bombay Nat. Hist. Soc. 33 (3): 709–710.
  8. Peters, JL (1962). archive.org/stream/ checklistofbirds151962pete#page/154/mode/2up/search/paradiseus Check-list of the birds of the world. Volume 15. Museum of Comparative Zoology. pp. 154–156. {{cite book}}: Check |url= value (help)
  9. ೯.೦ ೯.೧ Ali S & SD Ripley (1986). Handbook of the birds of India and Pakistan. Vol. 5 (2 ed.). Oxford University Press. pp. 135–143.
  10. ೧೦.೦ ೧೦.೧ Whistler, Hugh (1949). Popular handbook of Indian Birds. Fourth edition. Gurney and Jackson, London. pp. 160–161.
  11. ೧೧.೦ ೧೧.೧ ೧೧.೨ Neelakantan, KK (1972). "On the Southern Racket-tailed Drongo Dicrurus paradiseus paradiseus (Linn.)". J. Bombay Nat. Hist. Soc. 69 (1): 1–9.
  12. Goodale, E; Kotagama, SW (2006). "Context-dependent vocal mimicry in a passerine bird" (PDF). Proc. R. Soc. B. 273 (1588): 875–880. doi:10.1098/rspb.2005.3392. PMC 1560225. PMID 16618682. {{cite journal}}: More than one of |author= and |last1= specified (help)[ಶಾಶ್ವತವಾಗಿ ಮಡಿದ ಕೊಂಡಿ]
  13. Bourdillon, T. F. (1903). "The birds of Travancore". J. Bombay Nat. Hist. Soc. 15 (3): 455.
  14. S. Harsha K. Satischandra , Prasanna Kodituwakku , Sarath W. Kotagama , and Eben Goodale (2010). "Assessing "false" alarm calls by a drongo (Dicrurus paradiseus) in mixed-species bird flocks". Behavioral Ecology. 21: 396–403. doi:10.1093/beheco/arp203.{{cite journal}}: CS1 maint: multiple names: authors list (link)
  15. Daniel,JC (1966). "Behaviour mimicry by the Large Racket-tailed Drongo [Drongo paradiseus (Linnaeus)]". J. Bombay Nat. Hist. Soc. 63 (2): 443.
  16. Goodale, E & S. Kotagama (2006). goodale.googlepages.com/AnimalBehaviour2006.pdf "Vocal mimicry by a passerine bird attracts other species involved in mixed-species flocks" (PDF). Animal Behaviour. 72: 471 477. doi:10. 1016/j.anbehav. 2006.02.004. {{cite journal}}: Check |doi= value (help); Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  17. King, DI & JH Rappole (2001). "Kleptoparasitism of laughingthrushes Garrulax by Greater Racket-tailed Drongos Dicrurus paradiseus in Myanmar" (PDF). Forktail. 17: 121–122. Archived from the original (PDF) on 2008-10-11. Retrieved 2011-03-18.
  18. Harsha, S; K Satischandra, EP Kudavidanage (2007). "The benefits of joining mixed-species flocks for Greater Racket-tailed Drongos Dicrurus paradiseus" (PDF). Forktail. 23: 145–148.[ಶಾಶ್ವತವಾಗಿ ಮಡಿದ ಕೊಂಡಿ]
  19. Goodale, E. & Kotagama, S.W. (2008). "Response to conspecific and heterospecific alarm calls in mixed-species bird flocks of a Sri Lankan rainforest". Behavioral Ecology. 19 (4): 887–894. doi:10.1093/beheco/arn045.{{cite journal}}: CS1 maint: multiple names: authors list (link)
  20. Bates, RSP (1952). "Possible association between the Large Yellownaped Woodpecker (Picus flavinucha) and the Large Racket-tailed Drongo (Dissemurus paradiseus)". J. Bombay Nat. Hist. Soc. 50 (4): 941–942.
  21. Styring, AR & Kalan Ickes (2001). org/publications/ forktail /17pdfs/Styring-Drongo.pdf "Interactions between the Greater Racket-tailed Drongo Dicrurus paradiseus and woodpeckers in a lowland Malaysian rainforest" (PDF). Forktail. 17: 119–120. {{cite journal}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  22. Johnson,JM (1975). "The Racket Tailed Drongo - Dicrurus paradiseus behaviour of imitating the call of the Great Black Wood-pecker, Dryocopus javensis in Mudumalai Sanctuary". Indian Forester. 98 (7): 449–451.
  23. Ganesh,T (1992). "A silent association". J. Bombay Nat. Hist. Soc. 89 (3): 374. {{cite journal}}: Unknown parameter |note= ignored (help)
  24. Anonymous (1998). bnhsenvis.nic.in/pdf/ vol%203%20(1). pdf "Vernacular Names of the Birds of the IndianSubcontinent" (PDF). Buceros. 3 (1): 53–109. {{cite journal}}: Check |url= value (help)
  25. Finn, Frank (1900). "On a new species of Bhimraj (Dissemurus), with some observations on the so-called family Dicruridae". J. Bombay Nat. Hist. Soc. 13 (2): 377–378.
  26. Finn, Frank (1904). The Birds of Calcutta. Thacker, Spink & Co, Calcutta. p. 32.

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

"https://kn.wikipedia.org/w/index.php?title=ಭೀಮರಾಜ&oldid=1151130" ಇಂದ ಪಡೆಯಲ್ಪಟ್ಟಿದೆ