ದುರಾಸೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ದುರಾಸೆಯು (ಅತ್ಯಾಸೆ, ಲೋಭ) ಆಹಾರ, ಹಣ, ಸ್ಥಾನಮಾನ, ಅಥವಾ ಅಧಿಕಾರದಂತಹ ವಸ್ತುದ್ರವ್ಯ ಸಂಬಂಧಿ ಲಾಭಕ್ಕಾಗಿ ಅತ್ಯಧಿಕ ಅಥವಾ ತಣಿಯದ ಹಾತೊರೆತ.[೧]

ಪ್ರಾಪಂಚಿಕ ಮನೋವೈಜ್ಞಾನಿಕ ಪರಿಕಲ್ಪನೆಯಾಗಿ, ದುರಾಸೆಯು ಒಬ್ಬರಿಗೆ ಅಗತ್ಯವಾದದ್ದಕ್ಕಿಂತ ಹೆಚ್ಚು ಗಳಿಸುವ ಅಥವಾ ಹೊಂದುವ ಅತಿಯಾದ ಬಯಕೆ. ವಿಪರೀತತೆಯ ಪ್ರಮಾಣವು ಬಯಸಿದ "ಅಗತ್ಯಗಳು" ನಿವಾರಣೆಯಾದ ನಂತರ "ಬೇಕು"ಗಳ ಮರುನಿರೂಪಣೆಯನ್ನು ನಿಯಂತ್ರಿಸುವ ಅಸಾಮರ್ಥ್ಯಕ್ಕೆ ಸಂಬಂಧಿಸಿದೆ. ಎರಿಕ್ ಫ಼್ರಾಮ್ ದುರಾಸೆಯನ್ನು ಅಗತ್ಯವನ್ನು ತೃಪ್ತಿಪಡಿಸುವ ಮುಗಿಯದ ಪ್ರಯತ್ನದಲ್ಲಿ ಎಂದೂ ತೃಪ್ತಿಯನ್ನು ಮುಟ್ಟದೇ ವ್ಯಕ್ತಿಯನ್ನು ದಣಿಸುವ ತಳವಿಲ್ಲದ ಗುಂಡಿ ಎಂದು ವರ್ಣಿಸಿದರು. ಇದನ್ನು ಸಾಮಾನ್ಯವಾಗಿ ಅತಿಯಾದ ಪ್ರಾಪಂಚಿಕ ಸಂಪತ್ತನ್ನು ಅರಸುವವರನ್ನು ಟೀಕಿಸಲು ಬಳಸಲಾಗುತ್ತದೆ. ಆದರೆ ಇದು ಬೇರೆ ಯಾರಿಗಿಂತಲೂ ಹೆಚ್ಚು ವಿಪರೀತವಾಗಿ ನೈತಿಕ, ಸಾಮಾಜಿಕ ಅಥವಾ ಉತ್ತಮ ಅನಿಸುವ ಅಗತ್ಯಕ್ಕೆ ಅನ್ವಯಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ದುರಾಸೆ&oldid=949099" ಇಂದ ಪಡೆಯಲ್ಪಟ್ಟಿದೆ