ಅಧಿಕಾರ (ಸಾಮಾಜಿಕ ಮತ್ತು ರಾಜಕೀಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದರ ಯಾವುದೇ ರೂಪಗಳಲ್ಲಿ ಅಧಿಕಾರ ಚಲಾಯಿಸುವವರ ಮೇಲೆ ಪರಿಣಾಮ ಬೀರುವ ಭಾವನಾತ್ಮಕ ಅಸ್ವಸ್ಥತೆಗಳಿವೆ, ಅವುಗಳಲ್ಲಿ ಹಬ್ರಿಸ್ ಸಿಂಡ್ರೋಮ್, ಮೆಗಾಲೊಮೇನಿಯಾ, ಹಮಾರ್ಟಿಯಾ ಅಥವಾ ನಾರ್ಸಿಸಿಸಮ್ ಎದ್ದು ಕಾಣುತ್ತವೆ.

ಅಧಿಕಾರವು ಒಂದು ವಸ್ತುವು, ಇತರ ವಸ್ತುಗಳ ವರ್ತನೆಯನ್ನು ಒಳಗೊಂಡಂತೆ, ಅದರ ಸುತ್ತಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯದ ಪರಿಮಾಣ. ಹಲವುವೇಳೆ ಅಧಿಕಾರ ಪದದ ಬದಲು ಸಾಮಾಜಿಕ ವ್ಯವಸ್ಥೆಯಿಂದ ನ್ಯಾಯಬದ್ಧವೆಂದು ತಿಳಿಯಲಾದ ಪ್ರಾಧಿಕಾರ ಪದವನ್ನು ಬಳಸಲಾಗುತ್ತದೆ. ಅಧಿಕಾರವು ಅನ್ಯಾಯ ಅಥವಾ ಕೆಡುಕೆಂದು ಕಾಣಬಹುದಾದರೂ ಅಧಿಕಾರದ ಬಳಕೆಯು ಸಾಮಾಜಿಕ ಪ್ರಾಣಿಗಳಾಗಿರುವ ಮಾನವರಿಗೆ ಸಹಜವೆಂದು ಒಪ್ಪಿಕೊಳ್ಳಲಾಗುತ್ತದೆ.