ವಿಷಯಕ್ಕೆ ಹೋಗು

ದೀಪವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಪಾನ್‍ನ ಒಂದು ಪಟ್ಟಣದಲ್ಲಿ ಪ್ರಕಾಶಗೊಳಿಸಲಾದ ಗಿಡ, ಅಂಗಡಿ ಕಿಟಕಿಗಳಿಂದ ಬೆಳಕು ಬರುತ್ತಿರುವುದು ಮತ್ತು ಕಂದೀಲ

ದೀಪವ್ಯವಸ್ಥೆ ಅಥವಾ ಬೆಳಕಿನ ವ್ಯವಸ್ಥೆ ಎಂದರೆ ಕಾರ್ಯೋಪಯೋಗಿ ಅಥವಾ ಸೌಂದರ್ಯ ಸಂಬಂಧಿ ಪರಿಣಾಮವನ್ನು ಸಾಧಿಸಲು ಬೆಳಕಿನ ಉದ್ದೇಶಪೂರ್ವಕ ಬಳಕೆ. ದೀಪವ್ಯವಸ್ಥೆಯಲ್ಲಿ ದೀಪಗಳು ಹಾಗೂ ಬೆಳಕಿನ ಜೋಡಣೆಗಳಂತಹ ಕೃತಕ ಬೆಳಕಿನ ಮೂಲಗಳು, ಜೊತೆಗೆ ಸೂರ್ಯನ ಬೆಳಕನ್ನು ಸೆರೆಹಿಡಿದು ನೈಸರ್ಗಿಕ ಪ್ರಕಾಶನ ಎರಡರ ಬಳಕೆಯೂ ಸೇರಿದೆ. (ಕಿಟಕಿಗಳು, ಛಾವಣಿ ಕಿಟಕಿಗಳು, ಅಥವಾ ಬೆಳಕಿನ ಗೂಡುಗಳನ್ನು ಬಳಸಿ) ಸೂರ್ಯ ಬೆಳಕಿನ ವ್ಯವಸ್ಥೆಯನ್ನು ಹಗಲಿನಲ್ಲಿ ಕಟ್ಟಡಗಳಲ್ಲಿ ಕೆಲವೊಮ್ಮೆ ಬೆಳಕಿನ ಪ್ರಧಾನ ಮೂಲವಾಗಿ ಬಳಸಲಾಗುತ್ತದೆ. ಇದು ಕೃತಕ ದೀಪವ್ಯವಸ್ಥೆಯನ್ನು ಬಳಸುವುದರ ಬದಲು ಶಕ್ತಿಯನ್ನು ಉಳಿಸಬಲ್ಲದು. ಕೃತಕ ದೀಪವ್ಯವಸ್ಥೆಯು ಕಟ್ಟಡಗಳಲ್ಲಿನ ಶಕ್ತಿಯ ಬಳಕೆಯ ಪ್ರಮುಖ ಘಟಕವನ್ನು ಪ್ರತಿನಿಧಿಸುತ್ತದೆ. ಸರಿಯಾದ ದೀಪವ್ಯವಸ್ಥೆಯು ಕೆಲಸದ ಕಾರ್ಯಕ್ಷಮತೆಯನ್ನು ಹೆಚ್ಚಿಸಬಲ್ಲದು, ಒಂದು ಪ್ರದೇಶದ ನೋಟವನ್ನು ಸುಧಾರಿಸಬಲ್ಲದು, ಅಥವಾ ನಿವಾಸಿಗಳ ಮೇಲೆ ಧನಾತ್ಮಕ ಮಾನಸಿಕ ಪರಿಣಾಮಗಳನ್ನು ಹೊಂದಬಲ್ಲದು.

ಒಳಾಂಗಣ ದೀಪವ್ಯವಸ್ಥೆಯನ್ನು ಸಾಮಾನ್ಯವಾಗಿ ದೀಪ ಜೋಡಣೆಗಳನ್ನು ಬಳಸಿ ಪೂರೈಸಲಾಗುತ್ತದೆ, ಮತ್ತು ಆಂತರಿಕ ವಿನ್ಯಾಸದ ಒಂದು ಪ್ರಮುಖ ಭಾಗವಾಗಿದೆ. ದೀಪವ್ಯವಸ್ಥೆಯು ಭೂದೃಶ್ಯ ಯೋಜನೆಗಳ ಅತ್ಯಗತ್ಯ ಅಂಶವೂ ಆಗಬಹುದು.

ಬೆಂಕಿಯ ಶೋಧನೆಯೊಂದಿಗೆ, ಶಿಬಿರಾಗ್ನಿಗಳು ಅಥವಾ ಪಂಜುಗಳು ಒಂದು ಪ್ರದೇಶವನ್ನು ಪ್ರಕಾಶಪಡಿಸಲು ಬಳಸಲಾದ ಕೃತಕ ದೀಪವ್ಯವಸ್ಥೆಯ ಅತ್ಯಂತ ಮುಂಚಿನ ರೂಪವಾಗಿತ್ತು. ಕ್ರಿ.ಪೂ. ೪೦೦,೦೦೦ ರಷ್ಟು ಮುಂಚೆ, ಪೇಕಿಂಗ್ ಮ್ಯಾನ್‍ನ ಗುಹೆಗಳಲ್ಲಿ ಬೆಂಕಿಯನ್ನು ಹೊತ್ತಿಸಲಾಯಿತು. ಪ್ರಾಗೈತಿಹಾಸಿಕ ಜನರು ಸುತ್ತಮುತ್ತಲನ್ನು ಪ್ರಕಾಶಗೊಳಿಸಲು ಪ್ರಾಚೀನ ಎಣ್ಣೆ ದೀಪಗಳನ್ನು ಬಳಸುತ್ತಿದ್ದರು. ಈ ದೀಪಗಳನ್ನು ಕಲ್ಲುಗಳು, ಚಿಪ್ಪುಗಳು, ಕೊಂಬುಗಳು ಮತ್ತು ಬಂಡೆಗಳಂತಹ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ತಯಾರಿಸಲಾಗುತ್ತಿತ್ತು. ಇವು ನಾರಿನ ಬತ್ತಿಯನ್ನು ಹೊಂದಿದ್ದು, ಇವುಗಳಲ್ಲಿ ಚರಬಿಯನ್ನು ತುಂಬಿಸಲಾಗುತ್ತಿತ್ತು. ದೀಪಗಳು ಸಾಮಾನ್ಯವಾಗಿ ಪ್ರಾಣಿ ಅಥವಾ ತರಕಾರಿ ಕೊಬ್ಬನ್ನು ಇಂಧನವಾಗಿ ಬಳಸುತ್ತಿದ್ದವು. ಆಧುನಿಕ ಫ಼್ರಾನ್ಸ್‌ನ ಲಾಸ್ಕಾ ಗುಹೆಗಳಲ್ಲಿ ಸುಮಾರು ೧೫,೦೦೦ ವರ್ಷ ಹಳೆಯ ಕಾಲಮಾನದ (ಆಕಾರಕೊಟ್ಟ ಪೊಳ್ಳಾದ ಕಲ್ಲುಗಳ) ಇಂತಹ ನೂರಾರು ದೀಪಗಳು ಸಿಕ್ಕಿವೆ. ಬತ್ತಿ ಪೋಣಿಸಿದ ನಂತರ ಎಣ್ಣೆಯಿರುವ ಪ್ರಾಣಿಗಳನ್ನೂ (ಪಕ್ಷಿಗಳು ಮತ್ತು ಮೀನುಗಳು) ದೀಪಗಳಾಗಿ ಬಳಸಲಾಗಿತ್ತು. ಮಿಂಚುಹುಳುಗಳನ್ನು ದೀಪದ ಮೂಲಗಳಾಗಿ ಬಳಸಲಾಗಿದೆ. ಮೇಣದ ಬತ್ತಿಗಳು ಮತ್ತು ಗಾಜು ಹಾಗೂ ಮಣ್ಣಿನ ದೀಪಗಳನ್ನೂ ಆವಿಷ್ಕರಿಸಲಾಯಿತು.[೧] ಷ್ಯಾಂಡಲಿಯರ್‌ಗಳು ದೀಪ ಜೋಡಣೆಗಳ ಒಂದು ಮುಂಚಿನ ರೂಪವಾಗಿದ್ದವು.

ಉಲ್ಲೇಖಗಳು[ಬದಲಾಯಿಸಿ]

  1. Williams, Ben (1999). "A History of Light and Lighting". Archived from the original on 25 January 2013. Retrieved 23 November 2012. {{cite web}}: Unknown parameter |deadurl= ignored (help)