ವಿಷಯಕ್ಕೆ ಹೋಗು

ದಿಬ್ಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರೇವ್ ಕ್ರೀಕ್ ದಿಬ್ಬ, ಮೌಂಡ್ಸ್‌ವಿಲ್

ದಿಬ್ಬವು (ದಿಣ್ಣೆ, ಕುಪ್ಪೆ) ಮಣ್ಣು, ಜಲ್ಲಿ, ಮರಳು, ಕಲ್ಲುಗಳು, ಅಥವಾ ಅವಶೇಷಗಳ ಪೇರಿಸಿದ ರಾಶಿ. ಅತ್ಯಂತ ಸಾಮಾನ್ಯವಾಗಿ, ದಿಬ್ಬಗಳು ಬೆಟ್ಟಗಳು ಮತ್ತು ಪರ್ವತಗಳಂತಹ ಮೃಣ್ಮಯ ರಚನೆಗಳು, ವಿಶೇಷವಾಗಿ ಅವು ಕೃತಕವೆಂದು ಕಾಣಿಸಿದರೆ. ದಿಬ್ಬವು ಯಾವುದೇ ಮೇಲ್ಮೈ ಮೇಲಿನ ಭೌಗೋಳಿಕವಾಗಿ ಹೆಚ್ಚಿನ ಎತ್ತರದ ಯಾವುದೇ ದುಂಡಾದ ಪ್ರದೇಶವಾಗಿರಬಹುದು. ಇತಿಹಾಸದಾದ್ಯಂತ ವಿವಿಧ ಕಾರಣಗಳಿಗಾಗಿ ಕೃತಕ ದಿಬ್ಬಗಳನ್ನು ಸೃಷ್ಟಿಸಲಾಗಿದೆ. ಈ ಕಾರಣಗಳಲ್ಲಿ ವಿಧ್ಯುಕ್ತ (ವೇದಿಕೆ ದಿಬ್ಬ), ಸಮಾಧಿ (ಗೋರಿ ದಿಬ್ಬ), ಮತ್ತು ಸ್ಮರಣಾರ್ಥ ಉದ್ದೇಶಗಳು (ಉದಾ. ಕಾಶ್ಚ್ಯೂಷ್ಕಾವ್ ದಿಬ್ಬ) ಸೇರಿವೆ. ಕಂಕಾಲಿ ಟೀಲಾ ಉತ್ತರ ಪ್ರದೇಶದ ಮಥುರಾದಲ್ಲಿ ಸ್ಥಿತವಾಗಿರುವ ಪ್ರಸಿದ್ಧ ದಿಬ್ಬವಾಗಿದೆ. ಇಲ್ಲಿ ೧೮೯೦-೯೧ರಲ್ಲಿ ಡಾ. ಫ಼್ಯೂರರ್ ಒಂದು ಜೈನ ಸ್ತೂಪವನ್ನು ಉತ್ಖನನ ಮಾಡಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. Smith, Vincent Arthur (1901). The Jain stupa and other antiquities of Mathura. Retrieved 14 November 2015.
"https://kn.wikipedia.org/w/index.php?title=ದಿಬ್ಬ&oldid=889807" ಇಂದ ಪಡೆಯಲ್ಪಟ್ಟಿದೆ