ದಯಾನಂದ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಯಾನಂದ ಶೆಟ್ಟಿ
2018 ರಲ್ಲಿ ಬಂಟ್ ಸಮುದಾಯದ ಕಾರ್ಯಕ್ರಮದಲ್ಲಿ ಶೆಟ್ಟಿ
Born
ದಯಾನಂದ ಚಂದ್ರಶೇಖರ ಶೆಟ್ಟಿ

(1969-12-11) ೧೧ ಡಿಸೆಂಬರ್ ೧೯೬೯ (ವಯಸ್ಸು ೫೪)
Nationalityಭಾರತೀಯ
Other namesದಯಾ
Occupations
Years active1996–ಇಂದಿನವರೆಗೆ
Known forಹಿರಿಯ ಇನ್ಸ್ಪೆಕ್ಟರ್ ದಯಾ (ಸಿ ಐ ಡಿ)
Notable work
Spouseಸ್ಮಿತಾ ಶೆಟ್ಟಿ
Awards2 ಚಿನ್ನದ ಪ್ರಶಸ್ತಿಗಳು

ದಯಾನಂದ ಚಂದ್ರಶೇಖರ್ ಶೆಟ್ಟಿ (ಜನನ 11 ಡಿಸೆಂಬರ್ 1969) ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ ಮತ್ತು ರೂಪದರ್ಶಿ, ಭಾರತದ ದೀರ್ಘಾವಧಿಯ ದೂರದರ್ಶನ ಪೊಲೀಸ್ ಕಾರ್ಯವಿಧಾನದ ಸಿ ಐ ಡಿ ಯಲ್ಲಿ ಹಿರಿಯ ಇನ್‌ಸ್ಪೆಕ್ಟರ್ ದಯಾ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ . ಅವರನ್ನು 2018 ರಲ್ಲಿ ಗೋಲ್ಡ್ ಅವಾರ್ಡ್ಸ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು.

ಹುಟ್ಟು ಮತ್ತು ಬಾಲ್ಯ[ಬದಲಾಯಿಸಿ]

ದಯಾನಂದ ಶೆಟ್ಟಿಯವರು ಜನ್ಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಟಪಾಡಿ ನಡಿಬೆಟ್ಟು ಮನೆಯಲ್ಲಿ. ತಂದೆ ಹೆಸರಾಂತ ವೈಟ್ ಲಿಫ್ಟಿಂಗ್ ಛಾಂಪಿಯನ್ ಚಂದ್ರಶೇಖರ ಶೆಟ್ಟಿ, ಮಹಾರಷ್ಟ್ರ ಮಟ್ಟದ ಚಾಂಪಿಯನ್ ಆಗಿ ೭ ವರ್ಷಗಳ ಕಾಲ ಹೆಸರುಮಾಡಿದವರು. ದಯ ಬಾಂದ್ರ ಉಪನಗರಿಯ ರಿಜ್ವಿ ಕಾಲೇಜ್ ನಲ್ಲಿ ಬಿ. ಕಾಂ ಪದವಿ ಪಡೆದು, ಕ್ರೀಡಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದಯಾರವರು ಆಯ್ದ ಕ್ಷೇತ್ರ, ಶಾಟ್ ಪುಟ್, ಡಿಸ್ಕಸ್ ಥ್ರೋ. ಈ ಪಂದ್ಯಗಳಲ್ಲಿ ಸಾಕಷ್ಟು ಪಾರಿತೋಶಕಗಳನ್ನು ಗೆದ್ದುಕೊಂಡಿದ್ದಾರೆ. ೧೯೯೪ ರಲ್ಲಿ ಮಹಾರಾಷ್ಟ್ರ ರಾಜ್ಯ ಡಿಸ್ಕಸ್ ಥ್ರೋ ಪಂದ್ಯದಲ್ಲಿ ಆತ ಛಾಂಪಿಯನ್ ಆಗಿದ್ದರು. ಆದರೆ ಅವರಿಗೆ ಕಾಲು ನೋವಿನಿಂದ ಕ್ರೀಡಾ ಚಟುವಟಿಕೆಯನ್ನೇ ಕೈ-ಬಿಡಲು ವೈದ್ಯರು ಸೂಚಿಸಿದರು.

ಹಿಂದಿ ಮತ್ತು ತುಳು ರಂಗಭೂಮಿಯಲ್ಲಿ ವಿಶೇಷ ಚಟುವಟಿಕೆಯನ್ನು ಹೊಂದಿದ್ದಾರೆ[ಬದಲಾಯಿಸಿ]

ಚಂದ್ರ ಪ್ರಕಾಶ್ ಥಿಯೇಟರ್ ನ ಶೆಟ್ಟಿಯವರು, ಗಮನಿಸಿ, ತಮ್ಮ ನಾಟಕಗಳಲ್ಲಿ ಅಭಿನಯಿಸಲು ಆಹ್ವಾನಿಸಿದರು. ’ಸೀಕ್ರೆಟ್’, ’ಈಶ್ವರ್ ಅಲ್ಲಾ ತೇರೆ ನಾಮ್’, ನಾಟಕಗಳು ಹಿಂದಿ ಮತ್ತು ತುಳು ಭಾಷೆಗಳಲ್ಲಿ ಪ್ರದರ್ಶನಗೊಂಡವು. ಅವುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದಯಾಶೆಟ್ಟಿಯವರ ನಟನೆಯನ್ನು ಎಲ್ಲರೂ ಶ್ಲಾಘಿಸಿದರು. ’ಸೀಕ್ರೆಟ್ ನಾಟಕ ಸ್ಪರ್ಧೆ’ ಯೊಂದರಲ್ಲಿ ಅಭಿನಯಕ್ಕೆ ಶ್ರೇಷ್ಠ ಪ್ರಶಸ್ತಿ ಬಂದಿತು. ಇನ್ನೊಂದು ’ಜನಪ್ರಿಯ ನಾಟಕ ಕಾಲಚಕ್ರ’ ದಲ್ಲೂ ಅವರು ಮುಖ್ಯಪಾತ್ರವಹಿಸಿದ್ದಾರೆ. ಮರಾಠಿ ಹಿಂದಿ ಚಲನ ಚಿತ್ರಗಳ ನಟ ’ಶಿವಾಜಿ ಸಾಟಂ’ ಮುಖ್ಯಪಾತ್ರದಲ್ಲಿರುವ ’ಸಿ. ಐ. ಡಿ’ ಯಲ್ಲಿ ’ಇನ್ ಸ್ಪೆಕ್ಟರ್ ದಯಾ,’ ಆಗಿ ೧೫ ನೇ ಕಂತಿನಿಂದ ಪಾದಾರ್ಪಣೆ ಮಾಡಿದ ಶೆಟ್ಟಿಯವರು, ಈಗ ೫೦೦ ಕಂತನ್ನು ಪೂರೈಸಲಿರುವ ಸಿ ಐ. ಡಿ ಅತಿ ದೀರ್ಘ ಪ್ರಸಾರವಾಗುತ್ತಿರುವ ಧಾರಾವಾಹಿಯೆಂಬ ಹೆಗ್ಗಳಿಕೆ ಪಾತ್ರವಾಗಿದೆ.

ಅತಿಥಿ ಪಾತ್ರಗಳಲ್ಲಿ[ಬದಲಾಯಿಸಿ]

ಜೆಸ್ಸಿ ಜೈಸ ಕೋಯಿ ನಹಿ’, ’ಕುಸುಮ್’ ಮುಂತಾದ ಧಾರಾವಾಹಿಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರ‍ೆ. ಹೆಚ್ಚೆಂದರೆ, ಅವರ ಪಾತ್ರಾಭಿನಯವನ್ನು ಕಂಡು ಮೆಚ್ಚಿದವರು, ಸ್ವತಃ ಪೋಲೀಸರೆ. ಬೇರೆ ಕಡೆ ಅಭಿನಯಕ್ಕೆ ಆಹ್ವಾನ ಬರುತ್ತಿದ್ದಾಗ್ಯೂ ಅವರು ಅವನ್ನು ಹೆಚ್ಚು ಆಸಕ್ತಿ ತೆಗೆದುಕೊಳ್ಳದಿರುವುದಕ್ಕೆ ಕಾರಣ, ಬಿಡುವಿಲ್ಲದ ಕೆಲಸ. ಪ್ರತಿ ರಾತ್ರಿ ರಾತ್ರಿ ೧೦ ಗಂಟೆಗೆ ’ಸೋನಿ ಟೆಲಿವಿಶನ್’ ನವರು ಪ್ರಸಾರಮಾಡುತ್ತಿರುವ, ಒಂದು ತಾಸಿನ ಸಿ ಐ.ಡಿ. ಯಲ್ಲಿ,ಒಂದು ತಾಸಿನ ಕಂತಿಗಾಗಿ, ವಾರದ ೪-೫ ದಿನಗಳ ಶೂಟಿಂಗ್ ನಡೆಸಬೇಕಾಗುತ್ತದೆ.

ಕಿರುತೆರೆಯಿಂದ ಬಾಲಿವುಡ್ ನ ಬೆಳ್ಳಿತೆರೆಗೆ[ಬದಲಾಯಿಸಿ]

'ಜಾನಿ ಗದ್ದಾರ್,’ ಎಂಬ ಹಿಂದಿ ಚಲನ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಸದ್ಯ ದಯಾನಂದ ಶೆಟ್ಟಿ ಅವರು ಹಿಂದಿಯ ಖ್ಯಾತ ಆಕ್ಷನ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿರ್ದೇಶನದ ಸಿಂಘಂ ೨ ಚಿತ್ರದಲ್ಲಿ ಇನ್ಸಪೆಕ್ಟರ್ ದಯಾ ಆಗಿ ಪಾತ್ರ ಮಾಡಲಿದ್ದಾರೆ .

ದಯಾ ಪರಿವಾರ[ಬದಲಾಯಿಸಿ]

ದಯಾನಂದ ಶೆಟ್ಟಿಯವರದು ಪುಟ್ಟ ಕುಟುಂಬ. ಪತ್ನಿ ಸ್ಮಿತ ಮತ್ತು ಮಗಳು ವಿವಾಳೊಂದಿಗೆ, ಮುಂಬೈನ ಉಪನಗರ, ’ಕಾಂದಿವಲಿ ಚಾರ್ಕೋಪ್’ ನಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]