ವಿಷಯಕ್ಕೆ ಹೋಗು

ಥಾಮ್ಸನ್‌ ರಾಯಿಟರ್ಸ್‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Thomson Reuters
ಸಂಸ್ಥೆಯ ಪ್ರಕಾರPublic company (ಟೆಂಪ್ಲೇಟು:TSX, NYSETRI)
ಸ್ಥಾಪನೆApril 2008,
as Reuters October, 1851
as Thomson Corporation 1934
ಮುಖ್ಯ ಕಾರ್ಯಾಲಯನ್ಯೂ ಯಾರ್ಕ್ ನಗರ, New York, United States
ಪ್ರಮುಖ ವ್ಯಕ್ತಿ(ಗಳು)David Thomson, Chairman
Tom Glocer, CEO
ಉದ್ಯಮMedia
ಆದಾಯ$12.9 Billion (2009)
ಉದ್ಯೋಗಿಗಳುOver 55,000 in more than 100 countries(2009)[]
ಉಪಸಂಸ್ಥೆಗಳುONESOURCE
Reuters
Sweet & Maxwell
West
ಜಾಲತಾಣwww.thomsonreuters.com
ಮನ್‌‌ಹಾಟ್ಟನ್‌ ಮಿಡ್‌‌ಟೌನ್‌/ಪೇಟೆವಲಯದಲ್ಲಿನ ಟೈಮ್ಸ್‌‌ ಪತ್ರಿಕೆ ಚೌಕದಲ್ಲಿರುವ ಥಾಮ್ಸನ್‌ ರಾಯಿಟರ್ಸ್‌‌‌ ಕಟ್ಟಡ

ಟೆಂಪ್ಲೇಟು:Fix bunching ಥಾಮ್ಸನ್‌ ರಾಯಿಟರ್ಸ್‌‌‌ ಎಂಬುದು ರಾಯಿಟರ್ಸ್‌‌‌ ಕಂಪೆನಿಯನ್ನು 17 ಏಪ್ರಿಲ್‌ 2008ರಂದು ಥಾಮ್ಸನ್‌‌ ಕಾರ್ಪೋರೇಷನ್‌‌ ಕಂಪೆನಿಯು ಖರೀದಿಸಿದಾಗ ರಚಿಸಲಾದ ಮಾಹಿತಿ ಕಂಪೆನಿ[] ಯಾಗಿದೆ.[] ಟೊರೊಂಟೋ ಷೇರು ವಿನಿಮಯ ಕೇಂದ್ರ (TSX: TRI) ಮತ್ತು ನ್ಯೂಯಾರ್ಕ್‌‌ ಷೇರು ವಿನಿಮಯ ಕೇಂದ್ರಗಳ (NYSE: TRI) ಪಟ್ಟಿಯಲ್ಲಿ ಥಾಮ್ಸನ್‌ ರಾಯಿಟರ್ಸ್‌‌‌ನ ಷೇರುಗಳನ್ನು ನಮೂದಿಸಲಾಗುತ್ತದೆ. USAನ್ಯೂಯಾರ್ಕ್‌‌ ಮಹಾನಗರಮನ್‌‌ಹಾಟ್ಟನ್‌ ಮಿಡ್‌‌ಟೌನ್‌/ಪೇಟೆವಲಯದಲ್ಲಿ ಥಾಮ್ಸನ್‌ ರಾಯಿಟರ್ಸ್‌‌‌ ಕಂಪೆನಿಯು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ವುಡ್‌‌ಬ್ರಿಡ್ಜ್‌‌‌ ಕಂಪೆನಿಯು 100 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 55,000ಕ್ಕೂ ಮೀರಿದ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿ ಸಮುದಾಯದ,[] 53%ರಷ್ಟು ಸ್ವಾಮ್ಯವನ್ನು ಹೊಂದಿರುವ ಕೆನಡಾದ ಥಾಮ್ಸನ್‌ ಕುಟುಂಬದ ಹಿಡುವಳಿ ಕಂಪೆನಿಯಾಗಿದೆ.

ಇತಿಹಾಸ

[ಬದಲಾಯಿಸಿ]

ಥಾಮ್ಸನ್‌‌ ಕಾರ್ಪೋರೇಷನ್‌‌

[ಬದಲಾಯಿಸಿ]

ಒಂಟಾರಿಯೋ ನಗರದಲ್ಲಿ ಟಿಮ್ಮಿನ್ಸ್‌‌ ದೈನಿಕ/ಡೈಲಿ ಪ್ರೆಸ್‌‌ ಪತ್ರಿಕೆಪ್ರಕಾಶಕ ಕಂಪೆನಿಯಾಗಿ ರಾಯ್‌‌‌ ಥಾಮ್ಸನ್‌ರವರು ಈ ಕಂಪೆನಿಯನ್ನು 1934ರಲ್ಲಿ ಸ್ಥಾಪಿಸಿದ್ದರು. ಸ್ಕಾಟ್ಸ್‌‌ಮನ್‌‌ ವಾರ್ತಾಪತ್ರಿಕೆ ಸಂಸ್ಥೆಯನ್ನು 1953ರಲ್ಲಿ ಥಾಮ್ಸನ್‌ರವರು ಸ್ವಾಧೀನಪಡಿಸಿಕೊಂಡರಲ್ಲದೇ, ನಂತರದ ವರ್ಷ ಸ್ಕಾಟ್‌‌ಲೆಂಡ್‌‌ಗೆ ಸ್ಥಳಾಂತರಗೊಂಡರು. 1957ರಲ್ಲಿ ಸ್ಕಾಟಿಷ್‌ ಟೆಲಿವಿಷನ್‌‌ ಕಿರುತೆರೆ ವಾಹಿನಿಫ್ರಾಂಚೈಸಿ ಹಕ್ಕನ್ನು ಪಡೆದುಕೊಂಡಾಗ ಸ್ಕಾಟ್‌‌ಲೆಂಡ್‌‌ನಲ್ಲಿನ ತಮ್ಮ ಮಾಧ್ಯಮ ಸ್ಥಾನವನ್ನು ಅವರು ಬಲಪಡಿಸಿಕೊಂಡರು. ಅವರು ಕೆಮ್‌ಸ್ಲೇ ಕಂಪೆನಿ ಸಮೂಹ ವನ್ನು ಕೊಂಡುಕೊಳ್ಳುವ ಮೂಲಕ 1959ರಲ್ಲಿ ಸಂಡೇ ಟೈಮ್ಸ್‌‌ ಪತ್ರಿಕೆ ಯ ನಿಯಂತ್ರಣವನ್ನು ಪಡೆದುಕೊಂಡರು. 1967ರಲ್ಲಿ ಅವರು ಪ್ರತ್ಯೇಕವಾಗಿ ಟೈಮ್ಸ್‌‌ ಪತ್ರಿಕೆ ಯನ್ನು ಸ್ವಾಧೀನಪಡಿಸಿಕೊಂಡರು. 1965ರಲ್ಲಿ ಬ್ರಿಟಾನಿಯಾ ಏರ್‌ವೇಸ್‌ ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ವಿಮಾನಯಾನ ಉದ್ದಿಮೆಗೆ ಕಾಲಿಟ್ಟ ಅವರು, 1971ರಲ್ಲಿ ಉತ್ತರ ಸಮುದ್ರ/ನಾರ್ತ್‌‌‌ ಸೀದಲ್ಲಿನ ತೈಲ ನಿಕ್ಷೇಪಗಳ ಬಳಕೆಯ ಬಗೆಗಿನ ಒಕ್ಕೂಟದಲ್ಲಿ ಭಾಗವಹಿಸಿದಾಗ ತೈಲ ಮತ್ತು ಅನಿಲ ಹೊರತೆಗೆಯುವಿಕೆಯ ಉದ್ಯಮಕ್ಕಿಳಿದರು. ಲಾರ್ಡ್‌ ಥಾಮ್ಸನ್‌ರ ಸಾವಿನ ನಂತರ 1970ರ ದಶಕದಲ್ಲಿ, ಕಂಪೆನಿಯು ಟೈಮ್ಸ್‌‌ ಪತ್ರಿಕೆ , ಸಂಡೇ ಟೈಮ್ಸ್‌‌ ಮತ್ತು ಸ್ಕಾಟಿಷ್‌ ಟೆಲಿವಿಷನ್‌‌ ಕಿರುತೆರೆ ವಾಹಿನಿಗಳನ್ನು ಮಾರಾಟ ಮಾಡುವ ಮೂಲಕ ಮಾಧ್ಯಮದಿಂದ ಹಿಂದೆ ಸರಿದು ಬದಲಿಗೆ 1987ರಲ್ಲಿ ಸ್ವೀಟ್‌‌‌ & ಮ್ಯಾಕ್ಸ್‌‌ವೆಲ್‌‌‌ ಸಂಸ್ಥೆಯನ್ನು ಕೊಳ್ಳುವ ಮೂಲಕ ಪ್ರಕಾಶನ ಉದ್ದಿಮೆಗೆ ಕಾಲಿಟ್ಟಿತು. ಥಾಮ್ಸನ್‌ ಸಂಸ್ಥೆಯ ಸುದ್ದಿಪತ್ರಿಕೆಗಳನ್ನು/ಥಾಮ್ಸನ್‌ ನ್ಯೂಸ್‌‌ಪೇಪರ್ಸ್‌‌‌‌‌ ಸಂಸ್ಥೆಯನ್ನು 1989ರಲ್ಲಿ ಥಾಮ್ಸನ್‌‌ ಕಾರ್ಪೋರೇಷನ್‌‌ ಸಂಸ್ಥೆಯೊಂದಿಗೆ ವಿಲೀನಗೊಳಿಸಲಾಯಿತು. ಥಾಮ್ಸನ್‌‌ ಕಾರ್ಪೋರೇಷನ್‌‌ ಸಂಸ್ಥೆಯು 1996ರಲ್ಲಿ ಕಾರ್ಯಪೂರ್ವಕವಾಗಿ ತನ್ನ ಗಾತ್ರವನ್ನು ದುಪ್ಪಟ್ಟಾಗಿಸಿಕೊಂಡಿತಲ್ಲದೇ ವೆಸ್ಟ್‌ಲಾ ಸಂಸ್ಥೆ ಸೇರಿದಂತೆ ಕಾನೂನು ಸಂಶೋಧನೆ ಮತ್ತು ಪರಿಹಾರಗಳ ಪೂರೈಕೆದಾರ ಸಂಸ್ಥೆಯಾದ ವೆಸ್ಟ್‌ ಪಬ್ಲಿಷಿಂಗ್‌‌ ಸಂಸ್ಥೆಯನ್ನು ಖರೀದಿಸುವ ಮೂಲಕ ತನ್ನ ಭವಿಷ್ಯದ ಲಾಭಗಳಿಕೆಯನ್ನು ಖಾತ್ರಿ ಪಡಿಸಿಕೊಂಡಿತು.[]

ರಾಯಿಟರ್ಸ್

[ಬದಲಾಯಿಸಿ]

1851ರಲ್ಲಿ ಪಾಲ್‌‌ ಜ್ಯೂಲಿಯಸ್‌‌‌ ರಾಯಿಟರ್‌‌ರವರು ಷೇರು ಮಾರುಕಟ್ಟೆಯಲ್ಲಿನ ಹಾಲಿ ಮೌಲ್ಯಗಳನ್ನು ತಿಳಿಸುವ ಸಂಸ್ಥೆಯಾಗಿ ಲಂಡನ್‌‌‌ನಲ್ಲಿ ಕಂಪೆನಿಯನ್ನು ಸ್ಥಾಪಿಸಿದ್ದರು.[] ತಮ್ಮ "ಜಲಾಂತರ್ಗಾಮಿ ತಂತಿಸುದ್ದಿ" ಕಚೇರಿಯನ್ನು ರಾಯಿಟರ್‌‌‌‌‌‌‌‌‌‌ರವರು‌‌‌ ಅಕ್ಟೋಬರ್‌‌ 1851ರಲ್ಲಿ ಸ್ಥಾಪಿಸಿದರಲ್ಲದೇ ಐರೋಪ್ಯ ಷೇರು ವಿನಿಮಯ ಕೇಂದ್ರಗಳಿಂದ ಪಡೆದ ಷೇರು ದರಗಳ ಮಾಹಿತಿಯನ್ನು ಲಂಡನ್‌‌‌ನ ಮೌಲ್ಯ ಮಾಹಿತಿಗಳ ಬದಲಾಗಿ ಪಡೆಯುವಂತೆ ಲಂಡನ್‌‌‌ ಷೇರು ವಿನಿಮಯ ಕೇಂದ್ರದೊಡನೆ ಒಪ್ಪಂದವನ್ನು ಮಾಡಿಕೊಂಡರಲ್ಲದೇ, ಆ ಮಾಹಿತಿಯನ್ನು ನಂತರ ಫ್ರಾನ್ಸ್‌‌‌ನಲ್ಲಿನ ಪ್ಯಾರಿಸ್‌‌ನ ದಲ್ಲಾಳಿಗಳಿಗೆ ತಲುಪಿಸುತ್ತಿದ್ದರು.[] ಲಂಡನ್‌‌‌ನಲ್ಲಿ 1865ರಲ್ಲಿ ಅಬ್ರಹಾಂ ಲಿಂಕನ್‌‌‌ರ ಹತ್ಯೆಯ ಸುದ್ದಿಯನ್ನು ವರದಿ ಮಾಡಿದ ಪ್ರಪ್ರಥಮ ಸುದ್ದಿಸಂಸ್ಥೆಯು ರಾಯಿಟರ್ಸ್‌‌‌ ಆಗಿತ್ತು.[] 1923ರಲ್ಲಿ ನಿಸ್ತಂತು/ರೇಡಿಯೋ ತರಂಗಗಳ ಬಳಕೆಯನ್ನು ಅಭಿವೃದ್ಧಿಪಡಿಸುವುದರಲ್ಲಿ ಕೂಡಾ ಕಂಪೆನಿಯು ತೊಡಗಿಕೊಂಡಿತ್ತು.[] 1941ರಲ್ಲಿ ಬ್ರಿಟಿಷ್‌‌ ನ್ಯಾಷನಲ್‌ & ಪ್ರಾವಿನ್ಷಿಯಲ್‌‌ ಪ್ರೆಸ್‌ ಸಂಸ್ಥೆ ಯು ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿತಲ್ಲದೇ, ಕಂಪೆನಿಯು ಮೊದಲಿಗೆ 1984ರಲ್ಲಿ ಲಂಡನ್‌‌‌ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಿಸಲ್ಪಟ್ಟಿತು.[] 1980ರ ದಶಕದಲ್ಲಿ ತ್ವರಿತವಾಗಿ ಬೆಳೆಯಲು ಆರಂಭಿಸಿದ ರಾಯಿಟರ್ಸ್‌‌‌ ಕಂಪೆನಿಯು ಮಾಧ್ಯಮ, ಹಣಕಾಸು ಮತ್ತು ಆರ್ಥಿಕ ಸೇವೆಗಳಿಗೆ ಸಂಬಂಧಿಸಿದ ಜಾಗತಿಕ ವರದಿ ಜಾಲವನ್ನು ವಿಸ್ತರಿಸುವ ಮೂಲಕ ತನ್ನ ಉದ್ಯಮ ಉತ್ಪನ್ನಗಳ ವ್ಯಾಪ್ತಿಯನ್ನು ಹಿಗ್ಗಿಸಿತು, ಕಂಪೆನಿಯ ಪ್ರಮುಖ ಉತ್ಪನ್ನಗಳಲ್ಲಿ ಈಕ್ವಿಟೀಸ್‌‌/ಸಾಮಾನ್ಯ ಷೇರುಗಳು 2000 (1987), ಲೇವಾದೇವಿ/ಡೀಲಿಂಗ್‌‌‌ 2000–2 (1992), ಬಿಜಿನೆಸ್‌ ಬ್ರೀಫಿಂಗ್‌‌/ವ್ಯವಹಾರ ಸಲಹಾಸೇವೆ (1994), ಹಣಕಾಸು ಮಾರುಕಟ್ಟೆಗೆ ಸಂಬಂಧಿಸಿದ ರಾಯಿಟರ್ಸ್‌‌‌ ಟೆಲಿವಿಷನ್‌ ವಾಹಿನಿ (1994), 3000 ಸೀರೀಸ್‌/ಸರಣಿ (1996) ಮತ್ತು ರಾಯಿಟರ್ಸ್‌‌‌ 3000 ಎಕ್ಸ್‌ಟ್ರಾ ಸೇವೆಗಳು ಸೇರಿವೆ (1999).[]

ಸ್ವಾಧೀನಾನಂತರದ ಬೆಳವಣಿಗೆಗಳು

[ಬದಲಾಯಿಸಿ]

ಏಪ್ರಿಲ್‌ 17, 2008ರಂದು ಥಾಮ್ಸನ್‌‌ ಕಾರ್ಪೋರೇಷನ್‌‌ ಸಂಸ್ಥೆಯು ರಾಯಿಟರ್ಸ್‌‌‌ ಗ್ರೂಪ್‌‌ PLCಯನ್ನು ಸ್ವಾಧೀನಪಡಿಸಿಕೊಂಡು ಥಾಮ್ಸನ್‌ ರಾಯಿಟರ್ಸ್‌‌‌ಅನ್ನು ಸ್ಥಾಪಿಸಿತು.[] ಉಭಯ-ನಮೂದಿತ/ಡ್ಯೂಯಲ್‌-ಲಿಸ್ಟೆಡ್‌‌ ಕಂಪೆನಿ (“DLC”) ಸ್ವರೂಪದಡಿಯಲ್ಲಿ ಥಾಮ್ಸನ್‌ ರಾಯಿಟರ್ಸ್‌‌‌ ಕಂಪೆನಿಯು ಕಾರ್ಯಾಚರಿಸುತ್ತಿದ್ದು ಥಾಮ್ಸನ್‌ ರಾಯಿಟರ್ಸ್‌‌‌ ಕಾರ್ಪೋರೇಷನ್‌‌ ಮತ್ತು ಥಾಮ್ಸನ್‌ ರಾಯಿಟರ್ಸ್‌‌‌ PLC ಎಂಬ ಎರಡು ಸಾರ್ವಜನಿಕ ಸ್ಥಾಪನೆಯ ಪೋಷಕ ಕಂಪೆನಿಗಳನ್ನು ಹೊಂದಿದೆ. ಅದು ತನ್ನ ಉಭಯ ನಮೂದಿತ ಕಂಪೆನಿ ಸ್ವರೂಪವನ್ನು 2009ರಲ್ಲಿ ಏಕೀಕರಿಸಿತಲ್ಲದೇ ಲಂಡನ್‌‌‌ ಷೇರು ವಿನಿಮಯ ಕೇಂದ್ರ ಮತ್ತು NASDAQಗಳಲ್ಲಿ ತನ್ನ ಷೇರುದರ ನಮೂದನೆಯನ್ನು ಸ್ಥಗಿತಗೊಳಿಸಿತು. ಅದು ಈಗ ನ್ಯೂಯಾರ್ಕ್‌‌ ಷೇರು ವಿನಿಮಯ ಕೇಂದ್ರ ಮತ್ತು ಟೊರೊಂಟೋ ಷೇರು ವಿನಿಮಯ ಕೇಂದ್ರ (ಸಂಕೇತ : TRI)ಗಳಲ್ಲಿ ಮಾತ್ರವೇ ಥಾಮ್ಸನ್‌ ರಾಯಿಟರ್ಸ್‌‌‌ ಕಾರ್ಪೋರೇಷನ್‌‌ ಆಗಿ ನಮೂದಿಸಲ್ಪಡುತ್ತಿದೆ.[][]

UKನಲ್ಲಿನ ಸ್ವೀಟ್‌‌‌ & ಮ್ಯಾಕ್ಸ್‌‌ವೆಲ್‌‌‌ ಮತ್ತು ಉತ್ತರ ಅಮೇರಿಕಾದಲ್ಲಿನ ವೆಸ್ಟ್‌ ಪಬ್ಲಿಷಿಂಗ್‌‌ಗಳು ಥಾಮ್ಸನ್‌ ರಾಯಿಟರ್ಸ್‌‌‌ ಸಂಸ್ಥೆಯ ವ್ಯಾಪಾರ ಮುದ್ರೆಗಳಲ್ಲಿ ಸೇರಿವೆ. ಜಾಗತಿಕ ವ್ಯಾಪಾರ ಮುದ್ರೆಗಳಲ್ಲಿ ರಾಯಿಟರ್ಸ್‌‌‌ ಮತ್ತು ವೆಸ್ಟ್‌ಲಾ ಸೇರಿವೆ.

ಬ್ಲೂಮ್‌‌ಬರ್ಗ್‌‌ ಮತ್ತು CNBC ವಾಹಿನಿಗಳಿಗೆ ಪ್ರತಿಸ್ಪರ್ಧಿಯಾಗಿ ನವೀನ ಸುದ್ದಿ ವಾಹಿನಿಯೊಂದನ್ನು ಆರಂಭಿಸುವುದಾಗಿ ಕಂಪೆನಿಯು ಜೂನ್‌ 2008ರಲ್ಲಿ ಘೋಷಿಸಿತ್ತು.[]

ಕಾರ್ಯನಿರ್ವಹಣೆಗಳು

[ಬದಲಾಯಿಸಿ]

ರಾಯಿಟರ್ಸ್‌‌‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಟಾಮ್‌‌ ಗ್ಲೋಸರ್‌‌ರು ಏಕೀಕೃತ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಅದರ ಅಧ್ಯಕ್ಷರು ಥಾಮ್ಸನ್‌ ಕಂಪೆನಿಯ ಅಧ್ಯಕ್ಷರಾಗಿದ್ದ ಡೇವಿಡ್‌‌ ಥಾಮ್ಸನ್‌ರಾಗಿದ್ದಾರೆ.[][೧೦][೧೧]

ಕಂಪೆನಿಯನ್ನು ಎರಡು ವಿಭಾಗಗಳಾಗಿ ಸಂಘಟಿಸಲಾಗಿದೆ:[೧೨]

ಥಾಮ್ಸನ್‌ ರಾಯಿಟರ್ಸ್‌‌‌ನ ಷೇರುಗಳನ್ನು ಟೊರೊಂಟೋ ಷೇರು ವಿನಿಮಯ ಕೇಂದ್ರ (TSX: TRI) ಮತ್ತು ನ್ಯೂಯಾರ್ಕ್‌‌ ಷೇರು ವಿನಿಮಯ ಕೇಂದ್ರ (NYSE: TRI)ಗಳಲ್ಲಿ ನಮೂದಿಸಲಾಗುತ್ತದೆ.

ಮಾರುಕಟ್ಟೆಯ ಸ್ಥಿತಿಗತಿ ಮತ್ತು ಏಕಸ್ವಾಮ್ಯ ಸಂಘ ವಿರೋಧಿ ನೀತಿ ಪುನರಾವಲೋಕನ

[ಬದಲಾಯಿಸಿ]

U.S. ಕಾನೂನು/ನ್ಯಾಯಾಂಗ ಇಲಾಖೆ ಹಾಗೂ ಐರೋಪ್ಯ/ಯೂರೋಪಿಯನ್ ಕಮಿಷನ್‌ ಸಮಿತಿ‌ಗಳು ವ್ಯವಹಾರ ನಿರ್ವಹಣೆಯನ್ನು ಪರಿಶೀಲಿಸುತ್ತಿದ್ದವು. ಕಾನೂನು/ನ್ಯಾಯಾಂಗ ಇಲಾಖೆ ಮತ್ತು ಸಮಿತಿಗಳೆರಡೂ ವ್ಯವಹಾರ ನಿರ್ವಹಣೆಯನ್ನು ಕೆಲವೊಂದು ಸಣ್ಣಪುಟ್ಟ ಅಧಿಕಾರಗಳನ್ನು ನಿರಾಕರಿಸಿ ದೋಷರಹಿತವೆಂದು ಫೆಬ್ರವರಿ 19, 2008ರಂದು ಸಾರಿದವು.[೧೩] ಕಾನೂನು/ನ್ಯಾಯಾಂಗ ಇಲಾಖೆಯು ಜಾಗತಿಕ ಮೂಲಭೂತ ಉತ್ಪನ್ನವಾದ ಥಾಮ್ಸನ್‌ಸ್‌‌‌ ವರ್ಲ್ಡ್‌ಸ್ಕೋಪ್‌, ದುಡಿಮೆ ಅಂದಾಜಿನ ಉತ್ಪನ್ನ ರಾಯಿಟರ್ಸ್‌‌‌ ಎಸ್ಟಿಮೇಟ್ಸ್‌ ಮತ್ತು ವಿಶ್ಲೇಷಕ ಸಂಶೋಧನಾ ವಿತರಣೆ ಉತ್ಪನ್ನವಾದ ರಾಯಿಟರ್ಸ್‌‌‌ ಆಫ್ಟರ್‌‌ಮಾರ್ಕೆಟ್‌‌ (ನಿರ್ಬಂಧಿತ) ರಿಸರ್ಚ್‌ ಡಾಟಾಬೇಸ್‌‌ನಂತಹಾ ಉತ್ಪನ್ನಗಳಲ್ಲಿನ ದತ್ತಾಂಶಗಳ ಪ್ರತಿಗಳನ್ನು ಮಾರಾಟ ಮಾಡುವುದು ಆಯಾ ಸಂಸ್ಥೆಗಳಿಗೆ ಕಡ್ಡಾಯಗೊಳಿಸಿತ್ತು. ಹಾಗೆ ಪ್ರಸ್ತಾವಿತವಾದ ಹೊಂದಾಣಿಕೆಯು ಸಂಬಂಧಿತ ಬೌದ್ಧಿಕ ಸ್ವತ್ತುಗಳ ಪರವಾನಗೀಕರಣ, ವ್ಯಕ್ತಿಗಳಿಗೆ ಅದನ್ನು ನೀಡುವ ಸೌಲಭ್ಯ ಹಾಗೂ ಪ್ರತಿಯೊಂದು ದತ್ತಾಂಶ ಸಮೂಹದ ಕೊಳ್ಳುಗರು ತಮ್ಮ ದತ್ತಸಂಚಯವನ್ನು ನವೀಕರಿಸಿಕೊಂಡು ವಿಶ್ವಾಸಾರ್ಹ ಹಾಗೂ ಸ್ಪರ್ಧಾತ್ಮಕ ಉತ್ಪನ್ನವನ್ನು ನೀಡಲು ಅನುಕೂಲವಾಗುವಂತೆ ಮುಂದುವರೆಸಲಾಗುವ ನೆರವು/ಬೆಂಬಲವನ್ನು ನೀಡುವುದನ್ನು ಕಡ್ಡಾಯಗೊಳಿಸಿತ್ತು.[೧೪] ಇಂತಹುದೇ ನಿರ್ಬಂಧಗಳನ್ನು ಐರೋಪ್ಯ/ಯೂರೋಪಿಯನ್ ಕಮಿಷನ್‌ ಸಮಿತಿಯೂ ಕೂಡಾ ವಿಧಿಸಿತ್ತು : ಸಮಿತಿಯ ಪತ್ರಿಕಾ ಹೇಳಿಕೆಯ ಪ್ರಕಾರ, "ಆಯಾ ಕ್ಷೇತ್ರಗಳಲ್ಲಿನ ವಿಲೀನದ ಮುಂಚಿನ ಸ್ಪರ್ಧೆಯನ್ನು ಮುಂದುವರೆಸಲಾಗುವ ಮಟ್ಟಿಗೆ ದತ್ತಾಂಶಗಳು ಹಾಗೂ ಆಸ್ತಿಗಳ ಕೊಳ್ಳುಗರು ತಮ್ಮನ್ನು ವಿಲೀನಗೊಂಡ ಸಂಸ್ಥೆಯ ಪ್ರತಿಯಾದ ವಿಶ್ವಾಸಾರ್ಹ ಸ್ಪರ್ಧಾತ್ಮಕ ಸಂಸ್ಥೆಯಾಗಿ ಮಾರುಕಟ್ಟೆಯಲ್ಲಿ ತಮ್ಮನ್ನು ತ್ವರಿತವಾಗಿ ಸ್ಥಿರಪಡಿಸಿಕೊಳ್ಳಬಲ್ಲ ಹಾಗೆ ಸೂಕ್ತವಾದ ಆಸ್ತಿಗಳು, ವ್ಯಕ್ತಿಗಳು ಮತ್ತು ಗ್ರಾಹಕ ವಿವರಗಳ ಜೊತೆಗೆ ಹಣಕಾಸಿನ ಮಾಹಿತಿ ಉತ್ಪನ್ನಗಳ ಮಾಹಿತಿಕೋಶವನ್ನು ಹೊಂದಿರುವ ದತ್ತಸಂಚಯವನ್ನು ವಿತರಿಸಬೇಕೆಂಬುದನ್ನು ಕಡ್ಡಾಯಗೊಳಿಸಲಾಗಿದೆ.[೧೫]

ವ್ಯವಹಾರಗಳ ವ್ಯಾಪ್ತಿಗೆ ಹೋಲಿಸಿದರೆ ಈ ಪರಿಹಾರ ನಿಬಂಧನೆಗಳನ್ನು ಗೌಣ ನಿಬಂಧನೆಗಳೆಂದು ಭಾವಿಸಲಾಗುತ್ತದೆ. "ಸ್ಪರ್ಧಾತ್ಮಕ ವ್ಯವಹಾರಗಳ ನಿಯಂತ್ರಣಾ ಸಂಸ್ಥೆಗಳು ಪ್ರಸ್ತಾಪಿಸಿರುವ ನಿಬಂಧನೆ/ಪರಿಹಾರಗಳು ನವೀನ ಥಾಮ್ಸನ್‌ ರಾಯಿಟರ್ಸ್‌‌‌ ಸಮೂಹದ $13bn-ಕ್ಕೂ ಮಿಕ್ಕಿದ ಸಂಘಟಿತ ಆದಾಯದಲ್ಲಿ $25mರೊಳಗಿನ ಮೊತ್ತದ ವೆಚ್ಚವನ್ನು ಹೇರಬಹುದಷ್ಟೇ." ಎಂಬುದು ಫೈನಾನ್ಷಿಯಲ್‌‌ ಟೈಮ್ಸ್‌‌ ಪತ್ರಿಕೆಯ ಅಭಿಪ್ರಾಯವಾಗಿತ್ತು.[೧೬]

ಈ ವ್ಯವಹಾರವನ್ನು ಕೆನಡಿಯನ್‌‌ ಕಾಂಪೆಟಿಷನ್‌ ಬ್ಯೂರೋ ಸಂಸ್ಥೆಯು ದೋಷರಹಿತವೆಂದು ಸಾರಿತು.[೧೭]

ಖರೀದಿ ಪ್ರಕ್ರಿಯೆ

[ಬದಲಾಯಿಸಿ]

ಯಾವುದೇ ನಿರ್ದಿಷ್ಟ ವ್ಯಕ್ತಿಗೆ ರಾಯಿಟರ್ಸ್‌‌‌ನ 15%ಗಿಂತ ಹೆಚ್ಚಿನ ಷೇರುಗಳನ್ನು ಹೊಂದಲು ಐತಿಹಾಸಿಕವಾಗಿ ಅನುಮತಿ ನೀಡಲಾಗಿಲ್ಲ, ಇದಕ್ಕೆ ಸಂಬಂಧಿಸಿದಂತೆ ರಾಯಿಟರ್ಸ್‌‌‌ನ ಮೂಲನೀತಿಗಳಲ್ಲಿ ಮೊದಲನೆಯದು ಹೀಗೆ ಹೇಳುತ್ತದೆ, "ರಾಯಿಟರ್ಸ್‌‌‌ ಸಂಸ್ಥೆಯ ಅಧಿಕಾರವು ಯಾವುದೇ ಸಂದರ್ಭದಲ್ಲಿಯೂ ನಿರ್ದಿಷ್ಟ ಹಿತಾಸಕ್ತಿಯ ವ್ಯಕ್ತಿ, ಸಮೂಹ ಅಥವಾ ಪಂಗಡದ ನಿಯಂತ್ರಣಕ್ಕೆ ಒಳಪಡುವಂತಿಲ್ಲ."[೧೮] ಆದಾಗ್ಯೂ, ಥಾಮ್ಸನ್‌ ಕುಟುಂಬದ ಹಿಡುವಳಿ ಕಂಪೆನಿಯಾದ ವುಡ್‌‌ಬ್ರಿಡ್ಜ್‌‌‌ ಕಂಪೆನಿಯು ಪ್ರಸ್ತುತವಾಗಿ ವಿಸ್ತರಿಸಲ್ಪಟ್ಟ ವ್ಯವಹಾರದ 53%ರಷ್ಟು ಸ್ವಾಮ್ಯವನ್ನು ಹೊಂದಿರುವ ಥಾಮ್ಸನ್‌ ಸಮೂಹದ ಖರೀದಿಯಲ್ಲಿ ಈ ನಿರ್ಬಂಧಕ್ಕೆ ವಿನಾಯ್ತಿ ನೀಡಲಾಗಿದೆ. BBC ನ್ಯೂಸ್‌‌ ವಾಹಿನಿಯಲ್ಲಿ ವ್ಯವಹಾರಸುದ್ದಿ ವಿಭಾಗದ ಸಂಪಾದಕರಾದ ರಾಬರ್ಟ್‌‌ ಪೆಸ್ಟನ್‌‌ರವರು ರಾಯಿಟರ್ಸ್‌‌‌'ನ ಪತ್ರಿಕೋದ್ಯಮವು ಸಂಘಟಿತ ಕಂಪೆನಿಯ ಹಣಕಾಸು ದತ್ತ ಪೂರೈಕೆ ಉದ್ದಿಮೆಯಿಂದಾಗಿ ಅಪ್ರಧಾನಗೊಳ್ಳುತ್ತದೆ ಎಂದು ಹಾಗೂ, ಪೂರ್ವಾಗ್ರಹರಹಿತ ವರದಿ ನೀಡುವ ರಾಯಿಟರ್ಸ್‌‌‌'ನ ಖ್ಯಾತಿಗೆ ಓರ್ವ ಪ್ರಧಾನ ಷೇರುದಾರರಾಗುವ ಮೂಲಕ ತಟ್ಟಬಹುದಾದ ಅಪವಾದದ ಅಪಾಯವಿದೆ ಎಂದೂ ರಾಯಿಟರ್ಸ್‌‌‌ನ ಪತ್ರಕರ್ತರು ಚಿಂತಿತರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ರಾಯಿಟರ್ಸ್‌‌‌ ಫೌಂಡರ್ಸ್‌ ಷೇರ್‌‌ ಕಂಪೆನಿಯ ಅಧ್ಯಕ್ಷರಾದ ಪೆಹ್ರ್‌‌ ಗಿಲ್ಲೆನ್‌ಹಾಮ್ಮರ್‌ರು, ರಾಯಿಟರ್ಸ್‌‌‌ ಪ್ರತಿಷ್ಠಾನದ ಪ್ರಥಮ ನಿಯಮದ ವಿಚಾರದಲ್ಲಿ ಥಾಮ್ಸನ್‌ ಕುಟುಂಬಕ್ಕೆ ಸಂಬಂಧಿಸಿದಂತೆ ವಿನಾಯ್ತಿಯನ್ನು ನೀಡಿದ್ದು ರಾಯಿಟರ್ಸ್‌‌‌ ಸಂಸ್ಥೆಯು ಅನುಭವಿಸುತ್ತಿದ್ದ ತೀವ್ರ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಎಂದು, "ರಾಯಿಟರ್ಸ್‌‌‌ ಸಂಸ್ಥೆಯ ಭವಿಷ್ಯವು ಅದರ ಮೂಲಭೂತ ನಿಯಮಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದ ವಿಚಾರವಾಗಿದೆ. ರಾಯಿಟರ್ಸ್‌‌‌ ತನ್ನ ಸ್ವಂತ ಸಾಮರ್ಥ್ಯದ ಮೇರೆಗೆ ಮುಂದುವರೆಯಲು ಸಾಧ್ಯವಾಗುವುದಿಲ್ಲವಾದರೆ, ಅದರ ಮೂಲಭೂತ ನಿಯಮಗಳು ತನ್ನ ಅರ್ಥವನ್ನು ಕಳೆದುಕೊಳ್ಳುತ್ತವೆ." ಎಂದು ಹೇಳುವ ಮೂಲಕ ವಿವರಿಸಿದರು. ತಾವು ಡೇವಿಡ್‌‌ ಥಾಮ್ಸನ್‌ರನ್ನು ಭೇಟಿ ಮಾಡಿಲ್ಲವಾದರೂ ಈ ವಿಚಾರದ ಬಗ್ಗೆ ವುಡ್‌‌ಬ್ರಿಡ್ಜ್‌‌‌ನ ಅಧ್ಯಕ್ಷರಾದ ಜಿಯಾಫ್‌ ಬೀಟ್ಟೀರೊಡನೆ ಚರ್ಚಿಸಿದ್ದು, ರಾಯಿಟರ್ಸ್‌‌‌ ಪ್ರತಿಷ್ಠಾನದ ಐದು ಮೂಲಭೂತ ನಿಯಮಗಳಿಗೆ ವಿರುದ್ಧವಾಗಬಹುದಾದ ಯಾವುದೇ ವಿಚಾರಕ್ಕೆ ಸಂಬಂಧಪಟ್ಟಂತೆ ರಾಯಿಟರ್ಸ್‌‌‌ ಫೌಂಡರ್ಸ್‌ ಷೇರ್‌‌ ಕಂಪೆನಿಯು ಸೂಚಿಸುವ ಹಾಗೆ ತಮ್ಮ ಸಲಹಾ ಮತವನ್ನು ಚಲಾಯಿಸಲು ತಾವು ಸಿದ್ಧರಿರುವುದಾಗಿ ಥಾಮ್ಸನ್‌ ಕುಟುಂಬವು ಒಪ್ಪಿಕೊಂಡಿದೆ ಎಂದೂ ಅವರು ಹೇಳಿದ್ದಾರೆ. ಥಾಮ್ಸನ್‌ ಕುಟುಂಬದ ನಿಯಂತ್ರಣದಲ್ಲಿರುವವರೆಗೆ ವುಡ್‌‌ಬ್ರಿಡ್ಜ್‌‌‌ ಕಂಪೆನಿಯು ಪ್ರಥಮ ಮೂಲಭೂತ ನಿಯಮಕ್ಕೆ ವಿನಾಯ್ತಿಯನ್ನು ಹೊಂದಿರುತ್ತದೆ.[೧೯][೨೦][೨೧][೨೨]

ಸ್ವಾಧೀನಪಡಿಸುವಿಕೆಗಳು

[ಬದಲಾಯಿಸಿ]

ಸ್ಟ್ರೀಮ್‌‌ಲಾಜಿಕ್ಸ್‌‌‌ ಸಂಸ್ಥೆಯನ್ನು ಜುಲೈ 2009ರಲ್ಲಿ ಥಾಮ್ಸನ್‌ ರಾಯಿಟರ್ಸ್‌‌‌ ಸಂಸ್ಥೆಯು ಸ್ವಾಧೀನಪಡಿಸಿಕೊಂಡಿತು.[೨೩] ಹಣಕಾಸು ಸೇವೆಗಳು, ತಂತ್ರಜ್ಞಾನ ಮತ್ತು ಆರೋಗ್ಯಪಾಲನೆ/ಜೀವ ವಿಜ್ಞಾನಗಳೂ ಸೇರಿದಂತೆ ವಿವಿಧ ಉದ್ಯಮ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ನೂರಾರು ಉದ್ಯಮಗಳಿಗೆ ಫಲಿತಾಂಶ-ಚೋದಿತ ಜಾಲಮಾಹಿತಿ ಪ್ರಸಾರ ಉತ್ಪನ್ನಗಳ[clarification needed] ಮುಂಚೂಣಿ ಜಾಗತಿಕ ಪೂರೈಕೆದಾರ ಸಂಸ್ಥೆಯಾದ ಸ್ಟ್ರೀಮ್‌‌ಲಾಜಿಕ್ಸ್‌‌‌ ಕಂಪೆನಿಯು 1999ರಲ್ಲಿ ಸ್ಥಾಪನೆಯಾಗಿತ್ತು. ತರಬೇತಿ ಮತ್ತು ಪ್ರಮಾಣೀಕರಣ, ಪ್ರಚಾರ ಮತ್ತು ಮಾರಾಟಾವಕಾಶ ಸೃಷ್ಟಿಸುವಿಕೆ ಹಾಗೂ ಸಾಂಸ್ಥಿಕ ಸಂವಹನಗಳ ಕ್ಷೇತ್ರಗಳಲ್ಲಿ ಸ್ಟ್ರೀಮ್‌‌ಲಾಜಿಕ್ಸ್‌‌‌ ಕಂಪೆನಿಯ ಜಾಲಮಾಹಿತಿ ಪ್ರಸಾರ ಉತ್ಪನ್ನಗಳನ್ನು ಬಳಸಲಾಗುತ್ತದೆ.[೨೪]

ವಾಯು ಟೆಕ್ನಾಲಜೀಸ್‌ ಕಂಪೆನಿಯನ್ನು ಆಗಸ್ಟ್‌ 2009ರಲ್ಲಿ ಥಾಮ್ಸನ್‌ ರಾಯಿಟರ್ಸ್‌‌‌ ಸಂಸ್ಥೆಯು ಕೊಂಡಿತು. ಸಾಲ/ಕಡ/ಟಿಕ್‌ ದತ್ತಾಂಶ ಸೇವೆಗಳ ವಿಶ್ವದ ಮುಂಚೂಣಿ ಪೂರೈಕೆದಾರ ಸಂಸ್ಥೆಯಾಗಿದ್ದ ವಾಯು ಕಂಪೆನಿಗೆ ಥಾಮ್ಸನ್‌ ರಾಯಿಟರ್ಸ್‌‌‌ ಸಂಸ್ಥೆಯು ಸ್ವಾಧೀನಪಡಿಸಿಕೊಳ್ಳುವಿಕೆಯ ಮುನ್ನ ನಾಲ್ಕು ವರ್ಷಗಳ ಕಾಲ ರಾಯಿಟರ್ಸ್‌‌‌ ಟಿಕ್‌ ಕ್ಯಾಪ್ಚರ್‌‌ ಎಂಜಿನ್‌ ವ್ಯವಹಾರ ನಾಮದಡಿಯಲ್ಲಿ ತನ್ನ ವೆಲಾಸಿಟಿ ಉತ್ಪನ್ನವನ್ನು ವಿತರಿಸುತ್ತಿತ್ತು.[೨೫]

ಥಾಮ್ಸನ್‌ ರಾಯಿಟರ್ಸ್‌‌ ಸಂಸ್ಥೆಯು ಐರೋಪ್ಯ IR ಮತ್ತು PR ವಿತರಣಾ ಸಮೂಹವಾಗಿದ್ದ ಹ್ಯೂಜಿ/ಗಿನ್‌ ಸಮೂಹವನ್ನು NYSE ಯೂರೋನೆಕ್ಸ್‌ಟ್‌‌ನಿಂದ ಸೆಪ್ಟೆಂಬರ್‌ 21, 2009ರಂದು ಕೊಂಡಿತು. ಈ ವ್ಯವಹಾರದ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲವಾದರೂ ಡೆನ್ಮಾರ್ಕಿನ ವಾರ್ತಾಪತ್ರಿಕೆಗಳಲ್ಲಿ ವರದಿಯಾದ ಪ್ರಕಾರ ಅದರ ಬೆಲೆ €40 ದಶಲಕ್ಷಗಳಿಂದ €42mರಷ್ಟಿರಬಹುದಾಗಿದೆ.[೨೬]

ತೆರಿಗೆ & ಕರಣಿಕಶಾಸ್ತ್ರ ಉದ್ಯಮವು ವ್ಯವಹಾರಗಳ ತೆರಿಗೆ ನಿರ್ವಹನಾ ತಂತ್ರಾಂಶ ಅನ್ವಯಿಕೆಗಳು ಹಾಗೂ ಸಂಬಂಧಿತ ಸೇವೆಗಳ ಮುಂಚೂಣಿ ಜಾಗತಿಕ ಪೂರೈಕೆದಾರ ಸಂಸ್ಥೆ ಸ್ಯಾಬ್ರಿಕ್ಸ್‌, Inc/ಇಂಕ್‌‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಬಗೆಗಿನ ನಿರ್ಧಾರಕ ಒಪ್ಪಂದಕ್ಕೆ ನವೆಂಬರ್‌ 2009ರಲ್ಲಿ ಸಹಿ ಹಾಕಿತು.[೨೭]

ಐಗಿಸಾಫ್ಟ್‌‌‌ LLC ಸಂಸ್ಥೆಯನ್ನು ನೇರ ಮಾರುಕಟ್ಟೆ ಲಭ್ಯತೆಯ ಅವಕಾಶ ನೀಡುವ ಮೂಲಕ ತಮ್ಮ ವಿದ್ಯುನ್ಮಾನ ವ್ಯಾವಹಾರ್ಯತೆಯನ್ನು ಸುಧಾರಿಸಿಕೊಳ್ಳುವ ಉದ್ದೇಶದೊಂದಿಗೆ ಫೆಬ್ರವರಿ 2010ರಲ್ಲಿ ಥಾಮ್ಸನ್‌ ರಾಯಿಟರ್ಸ್‌‌‌ ಕೊಂಡಿತು.[೨೮]

ಪ್ರಾಯೋಜಕತ್ವಗಳು

[ಬದಲಾಯಿಸಿ]

ಥಾಮ್ಸನ್‌ ರಾಯಿಟರ್ಸ್‌‌‌ ಕಂಪೆನಿಯು ಕೆನಡಾದ ಗಾಲ್ಫ್‌ ಚಾಂಪಿಯನ್‌ ಮೈಕ್‌ ವೇರ್‌ ಹಾಗೂ AT&T ವಿಲಿಯಮ್ಸ್ಫಾರ್ಮುಲಾ ಒನ್‌ ತಂಡಗಳನ್ನು ಪ್ರಾಯೋಜಿಸಿತ್ತು.

ಆಕರಗಳು

[ಬದಲಾಯಿಸಿ]
  1. ೧.೦ ೧.೧ "About Us". Archived from the original on 2011-01-01. Retrieved 2010-08-05.
  2. Haycock, Gavin. "Thomson Reuters debuts amid global market jitters". Reuters. Retrieved 2008-04-18. {{cite news}}: Unknown parameter |coauthors= ignored (|author= suggested) (help)
  3. "ನಮ್ಮ ಬಗ್ಗೆ Archived 2011-01-01 ವೇಬ್ಯಾಕ್ ಮೆಷಿನ್ ನಲ್ಲಿ.." ಥಾಮ್ಸನ್‌ ರಾಯಿಟರ್ಸ್. ಪಡೆದಿದ್ದು ಆಗಸ್ಟ್‌‌ 28, 2009ರಂದು.
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ ಥಾಮ್ಸನ್‌ ರಾಯಿಟರ್ಸ್‌‌‌ ಇತಿಹಾಸ
  5. "ಥಾಮ್ಸನ್‌ ಕಂಪೆನಿಯು ರಾಯಿಟರ್ಸ್‌‌‌ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರೈಸಿತು". Archived from the original on 2010-08-19. Retrieved 2010-08-05.
  6. ಕಂಪೆನಿ ಇತಿಹಾಸ
  7. "2008ರ ಸಾಲಿನ ಥಾಮ್ಸನ್‌ ರಾಯಿಟರ್ಸ್‌‌‌ PLC ಹಣಕಾಸಿನ ತಃಖ್ತೆಪಟ್ಟಿ" (PDF). Archived from the original (PDF) on 2010-02-05. Retrieved 2010-08-05.
  8. "ಥಾಮ್ಸನ್‌ ರಾಯಿಟರ್ಸ್‌‌‌ ಕಿರುತೆರೆ ಉದ್ಯಮಕ್ಕೆ ಕಾಲಿಡಲಿದೆ". Archived from the original on 2008-08-05. Retrieved 2021-08-10.
  9. Wikinews (2007-05-16). "Thomson Corporation and Reuters agree to merge". Wikinews.
  10. Robert Schroeder (2007-05-17). "Thomson, Reuters face antitrust review". Times Argus. Archived from the original on 2008-02-09. Retrieved 2021-08-28.
  11. Kevin Bell and Joe Schneider (2007-05-16). "Thomson Emerges From Father's Shadow With Reuters Buy". Bloomberg L.P.
  12. ಥಾಮ್ಸನ್‌ ರಾಯಿಟರ್ಸ್: ನಮ್ಮ ಬಗ್ಗೆ
  13. EU ಒಕ್ಕೂಟವು ಥಾಮ್ಸನ್‌–ರಾಯಿಟರ್ಸ್‌‌‌ ವಿಲೀನಕ್ಕೆ ಅನುಮೋದನೆ ನೀಡಿದೆ
  14. ನ್ಯಾಯ/ಕಾನೂನು ಇಲಾಖೆಯು ರಾಯಿಟರ್ಸ್‌‌ಅನ್ನು ಸ್ವಾಧೀನಪಡಿಸಿಕೊಳ್ಳಬೇಕಾದರೆ ‌ಥಾಮ್ಸನ್‌ ಕಂಪೆನಿಯು ಹಣಕಾಸಿನ ದತ್ತಾಂಶ ಹಾಗೂ ಸಂಬಂಧಿತ ಆಸ್ತಿಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿದೆ
  15. EUROPA – ರ್ರ್ಯಾಪಿಡ್‌ – ಪತ್ರಿಕಾ ಹೇಳಿಕೆಗಳು
  16. FT.com / ಕಂಪೆನಿಗಳು / ಮಾಧ್ಯಮ & ಅಂತರಜಾಲ - ರಾಯಿಟರ್ಸ್‌‌‌ ವಿಲೀನಕ್ಕೆ ಥಾಮ್ಸನ್‌ ಕಂಪೆನಿಗೆ ಹಸಿರು ನಿಶಾನೆ ನೀಡಿದೆ
  17. "ಕಾಂಪೆಟಿಷನ್‌ ಬ್ಯೂರೋ – ರಾಯಿಟರ್ಸ್‌‌‌ನ ಸ್ವಾಧೀನಪಡಿಸಿಕೊಳ್ಳುವಿಕೆಗೆ ಕಾಂಪೆಟಿಷನ್‌ ಬ್ಯೂರೋ ಥಾಮ್ಸನ್‌ ಕಂಪೆನಿಗೆ ಹಸಿರು ನಿಶಾನೆ ನೀಡಿದೆ". Archived from the original on 2008-10-15. Retrieved 2010-08-05.
  18. "ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟಗಳು ಥಾಮ್ಸನ್‌–ರಾಯಿಟರ್ಸ್‌‌‌ ವ್ಯವಹಾರಗಳ ಬಗ್ಗೆ ಅಪಸ್ವರಗಳನ್ನೆತ್ತಿವೆ". Archived from the original on 2008-05-07. Retrieved 2010-08-05.
  19. "Reuters agrees to Thomson buyout". BBC News. BBC. 2007-05-15.
  20. Andrew Edgecliffe-Johnson (2007-05-16). "Thomson accepts Reuters voting code". Financial Times. The Financial Times Ltd.
  21. "Thomson accepts Reuters voting code". Financial Times. eFinancialNews Ltd. 2007-05-17. Archived from the original on 2008-02-10. Retrieved 2010-08-05.
  22. "Q&A: Why Reuters is news". BBC News. BBC. 2007-05-15.
  23. "ಪತ್ರಿಕಾ ಹೇಳಿಕೆ". Archived from the original on 2010-07-23. Retrieved 2010-08-05.
  24. ಥಾಮ್ಸನ್‌ ರಾಯಿಟರ್ಸ್‌‌‌ ಸ್ಟ್ರೀಮ್‌‌ಲಾಜಿಕ್ಸ್‌ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿತು
  25. ಥಾಮ್ಸನ್‌ ರಾಯಿಟರ್ಸ್‌‌‌ ಸಂಸ್ಥೆಯು ವಾಯು ಟೆಕ್ನಾಲಜೀಸ್‌ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದೆ Archived 2009-10-12 ವೇಬ್ಯಾಕ್ ಮೆಷಿನ್ ನಲ್ಲಿ. ಆಗಸ್ಟ್‌ 3, 2009, ಫಾಕ್ಸ್‌ ಬಿಸಿನೆಸ್‌
  26. ಥಾಮ್ಸನ್‌ ರಾಯಿಟರ್ಸ್‌‌‌ NYSE ಯೂರೋನೆಕ್ಸ್‌ಟ್‌ನಿಂದ ಹ್ಯೂಜಿ/ಗಿನ್‌‌ ಸಮೂಹವನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ Archived 2016-03-07 ವೇಬ್ಯಾಕ್ ಮೆಷಿನ್ ನಲ್ಲಿ. ಕಮ್ಯುನಿಕೇಟ್‌ ನಿಯತಕಾಲಿಕೆ, 2009-09-21
  27. "Thomson Reuters To Acquire Sabrix. Terms of the transaction were not disclosed". Taume News. 2009-10-17. Retrieved 2009-10-17.
  28. "ಪತ್ರಿಕಾ ಹೇಳಿಕೆ". Archived from the original on 2010-04-05. Retrieved 2010-08-05.


ಮುಂದಿನ ಓದಿಗಾಗಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]