ತೊರೆ ಮತ್ತಿ

ವಿಕಿಪೀಡಿಯ ಇಂದ
Jump to navigation Jump to search

60 ಅಡಿಯವರೆಗೂ ಬೆಳೆಯುವ ದೊಡ್ಡ ಮರ, ನೀಳವಾದ ಬೊಡ್ಡೆ, ನುಣುಪಾದ ತಿಳಿಹಸಿರು ಬಿಳಿ ತೊಗಟೆಯಿರುವುದು. ಎಲೆಗಳು ಉದ್ದವಾಗಿರುವುದು ಮತ್ತು ಕಾಯಿಗಳು ಆಳವಾದ ಗಟ್ಟಿಯಾಗಿದ್ದು ಮೇಲೆ ಸಾಲುಗಳಿರುವುವು. ಮೇ ಮತ್ತು ಜೂನ್ ತಿಂಗಳಲ್ಲಿ ಚಿಕ್ಕ ಚಿಕ್ಕ ಕೆಂಪು ಹಳದಿ ಹೂಗಳನ್ನು ಬಿಡುವುದು. ಮರಗಳ ಕೆಳಗೆ ಕಾಯಿಗಳು ಒತ್ತೊತ್ತಾಗಿ ಬಿದ್ದಿರುವುವು. ಈ ಮೂಲಿಕೆಯು ಹೃದಯ ರೋಗದಲ್ಲಿ ಅಧಿಕ ಬಳೆಕೆಯಲ್ಲಿದೆ.[೧]

ಔಷಧೀಯ ಗುಣಗಳು[ಬದಲಾಯಿಸಿ]

 • ಹೃದಯ ದೌರ್ಬಲ್ಯ ಮತ್ತು ಎದೆ ನೋವು

ಒಣಗಿದ ತೊರೆಮತ್ತಿಮರದ ತೊಗಟೆಯನ್ನು ನಯವಾಗಿ ಚೂರ್ಣಿಸುವುದು. ಪ್ರತಿ ಪ್ರಾತಃಕಾಲ ಬರೀ ಹೊಟ್ಟೆಯಲ್ಲಿ ಅರ್ಥ ಟೀ ಚಮಚ ಚೂರ್ಣವನ್ನು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ಕದಡಿ ಕುಡಿಯುವುದು. ಮತ್ತಿ ಮರದ ತೊಗಟೆ ಚೂರ್ಣ ಒಂದು ಟೀ ಚಮಚ, ಕಾಲು ಲೀಟರು ನೀರು ಮತ್ತು ಕಾಲು ಲೀಟರು ಹಸುವಿನ ಹಾಲು ಹಾಕಿ ಮುಂದಾಗ್ನಿಯಿಂದ ಕಾಯಿಸಿ ಕಷಾಯ ಮಾಡುವುದು ಈ ಕಷಾಯವನ್ನು ಶೋಧಿಸಿ ಎರಡು ಚಮಚ ಕಷಾಯಕ್ಕೆ 2 ಚಮಚ ಕೆಂಪು ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದು.

 • ವಸಡುಗಳ ಊತದಲ್ಲಿ

ಬಿಳಿ ಮತ್ತಿಯ ತಿರುಳಿನ ಕಷಾಯ ಮಾಡಿ, ಬಾಯಿ ಮುಕ್ಕಳಿಸುವುದು, ಹೀಗೆ ಪ್ರತಿನಿತ್ಯ 4-5 ಸಾರಿ.

 • ಮೂಳೆ ಮುರಿತ ಮತ್ತು ಮೂಳೆಗೆ ಪೆಟ್ಟು

ಬಿಳಿ ಮತ್ತಿ ಒಣಗಿದ ತಿರುಳಿನ ನಯವಾದ ಚೂರ್ಣವನ್ನು ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಪುಡಿ ಮತ್ತು ಹಸುವಿನ ತುಪ್ಪ ಸೇರಿಸಿ, ನೇವಿಸುವುದು. ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ವೇಳೆ ತೆಗೆದುಕೊಳ್ಳುವುದು. ಮುರಿದ ಮೂಳೆಯನ್ನು ತಿಳಿದವರಿಂದ ಸರಿಯಾಗಿ ಕೂಡಿಸಿ, ಮತ್ತಿ ಮರದ ತಿರುಳಿನ ನಯವಾದ ಪುಡಿಯನ್ನು ಹಸುವಿನ ತುಪ್ಪದಲ್ಲಿ ಕಲೆಸಿ ಪಟ್ಟಿ ಹಾಕುವುದು. ಮತ್ತು ಬಟ್ಟೆಯಿಂದ ಕಟ್ಟು ಹಾಕುವುದು. ಇದರಿಂದ ನೋವು ನಿವಾರಣೆಯಾಗಿ ಮುರಿದ ಮೂಳೆಗಳು ಕೂಡಿಕೊಳ್ಳುವುವು. ಬಿಳಿ ಮತ್ತಿ ತಿರುಳು, ಸರ್ಪಗಂಧ ಮತ್ತು ಶತಾವರಿ ಸಮತೂಕ ಕುಟ್ಟಿ ನಯವಾದ ಚೂರ್ಣ ಮಾಡುವುದು ಈ ಚೂರ್ಣದ ಅರ್ಧ ಟೀ ಚಮಚಕ್ಕೆ ಸಕ್ಕರೆ ಹಾಲು ಸೇರಿಸಿ ಸೇವಿಸುವುದು.

 • ಗಾಯ ಹುಣ್ಣು ಮತ್ತು ಕೆಟ್ಟ ವ್ರಣಗಳಿಗೆ*

ಮತ್ತಿ ಮರದ ತೊಗಟೆಯ ಕಷಾಯದಲ್ಲಿ ಹುಣ್ಣುಗಳನ್ನು ತೊಳೆಯುವುದು. ನಯವಾದ ತೊಗಟೆಯ ಚೂರ್ಣವನ್ನು ಗಾಯದ ಮೇಲೆ ಉದುರಿಸಿ, ಬಟ್ಟೆ ಕಟ್ಟುವುದು.[೨]

 • ಕುಗ್ಗಿದ ಇಂದ್ರಿಯ ಶಕ್ತಿ ಮತ್ತು ಶೀಘ್ರ ಸ್ಖಲನಕ್ಕೆ

ಒಣಗಿದ ಮತ್ತಿತೊಗಟೆಯ ಚೂಣ್ವನ್ನು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ಸೇವಿಸುವುದು. ಒಂದು ಬಟ್ಟಲು ಹಾಲಿಗೆ 1/4ಟೀ ಚಮಚ ಚೂರ್ಣ ಹಾಕುವುದು.

 • ಸ್ತ್ರೀಯರ ಶ್ವೇತಪ್ರದರ ಮತ್ತು ರಕ್ತ ಪ್ರದರದಲ್ಲಿ

ಬಿಳಿ ಮತ್ತಿಮರದ ತಿರುಳಿನ ಕಷಾಯ ಮಾಡಿ, ಕೆಂಪು ಕಲ್ಲು ಸಕ್ಕರೆ ಪುಡಿ ಮತ್ತು ಅಪ್ಪಟವಾದ ಜೇನುತುಪ್ಪ ಸೇರಿಸಿ ಸೇವಿಸುವುದು.

 • ರಕ್ತಬೇಧಿ ಮತ್ತು ಅತಿ ಸಾರದಲ್ಲಿ

ಬಿಳಿ ಮತ್ತಿಮರದ ತೊಗಟೆಯ ಅರ್ಧ ಟೀ ಚಮಚ ನಯವಾದ ಚೂರ್ಣಕ್ಕೆ ಒಂದು ಲೋಟ ಆಡಿನ ಹಾಲು ಹಾಕಿ ಸೇವಿಸುವುದು. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ 10ಗ್ರಾಂ ಚಿರಿಯಾತ ಮತ್ತು 10ಗ್ರಾಂ ಅತಿಮಧುರವನ್ನು ಚೆನ್ನಾಗಿ ಕುಟ್ಟಿ ನುಣ್ಣಗೆ ಪುಡಿ ಮಾಡುವುದು. ಹೊತ್ತಿಗೆ 21/2ಗ್ರಾಂ ಚೂರ್ಣವನ್ನು ಸೇವಿಸಿ ಮೇಲೆ ಸಕ್ಕರೆ ಸೇರಿಸಿದ ಬಿಸಿಯಾದ ಹಾಲು ಕುಡಿಯುವುದು.

ಉಲ್ಲೇಖ[ಬದಲಾಯಿಸಿ]

 1. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

  ಇತರೆ ಹೆಸರು[ಬದಲಾಯಿಸಿ]

  ಮತ್ತಿ, ತೊರಮತ್ತಿ, ಬಿಳಿಮತ್ತಿ, ಸೋಹೊನ್ನೆ, ಕುದುರೆಕಿವಿಗನಗಿಡ ತಮಿಳು : ಮರುದಯಿ ತೆಲುಗು : ತೆಲ್ಲಮದ್ದಿಚೆಟ್ಟು ಮಲಿಯಾಳಂ : ವೆಳುಮರುತು ಸಂಸ್ಕøತ :ಅರ್ಜುನನಾಮಾ, ಇಂದ್ರವೃಕ್ಷ ಹಿಂದಿ :ಕೋತಾ, ಕಾಹು.

  ವೈಜ್ಞಾನಿಕ ಹೆಸರು[ಬದಲಾಯಿಸಿ]

  ಟರ್ಮಿನಾಲಿಯಾಅರ್ಜುನಾ

  ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್

  ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು

 2. https://www.webmd.com/vitamins/ai/ingredientmono-811/terminalia