ತುಳುನಾಡಿನ ಮೊದಲ ಪ್ರೆಸ್
ಗೋಚರ
೧೮೩೪ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳು ೧೮೪೧ರಲ್ಲಿ ಕನಾಟಕದ ಮಂಗಳೂರಿನಲ್ಲಿ ಒಂದು ಪ್ರೆಸನ್ನು ಸ್ಥಾಪಿಸಿದರು. ಭಾರತಕ್ಕೆ ಬಂದು ಮಂಗಳೂರಿನಲ್ಲಿ ೧೮೩೬ರಲ್ಲಿ ಮೊದಲ ಪ್ರಾಥಮಿಕ ಶಾಲೆ ತೆರೆದ ಇವರಿಗೆ ಶಾಲಾ ಪಠ್ಯ ಮುದ್ರಿಸಲು ಇಲ್ಲಿ ಮುದ್ರಣ ವ್ಯವಸ್ಥೆ ಇರಲಿಲ್ಲ.ಕನ್ನಡದಲ್ಲಿ ಕಲ್ಲಚ್ಚು ಮುದ್ರಣ ಮಾಡುವ ವ್ಯವಸ್ಥೆ ಮದ್ರಾಸ್ ಮತ್ತು ಮುಂಬಯಿಯಲ್ಲಿ ಮಾತ್ರ ಲಭ್ಯವಿತ್ತು. ೧೮೪೧ರಲ್ಲಿ ಮುಂಬಯಿಯಿಂದ ಒಂದು ಕಲ್ಲಚ್ಚು ಮುದ್ರಣ ಯಂತ್ರವನ್ನು ಇಲ್ಲಿಗೆ ತಂದು ಇಲ್ಲಿ ಮುದ್ರಣ ಪ್ರಾರಂಭವಾಯಿತು. ಸುಮಾರು ೧೮೫೨ ತನಕ ಇಲ್ಲಿ ಕಲ್ಲಚ್ಚು ಮುದ್ರಣದಲ್ಲಿಯೇ ಪುಸ್ತಕಗಳು ಮುದ್ರಣವಾಗುತ್ತಿತ್ತು. ದಾಸ ಸಾಹಿತ್ಯದ ಮೊದಲ ಮುದ್ರಿತ ಕೃತಿಗಳಾದ ಚೆನ್ನ ಬಸವ ಪುರಾಣ, ರಾವಣ ದಿಗ್ವಿಜಯ, ದಾಸರ ಪದಗಳು, ಕನ್ನಡ ಗಾದೆಗಳು, ಕನಕದಾಸರ ಹರಿಭಕ್ತಿಸಾರ, ಕನ್ನಡ ಪಠ್ಯಗಳು, ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ , ಕನ್ನಡ ಮತ್ತು ತುಳು ಭಾಷೆಯಲ್ಲಿ ಸತ್ಯವೇದ ಮುಂತಾದವುಗಳು ಕಲ್ಲಚ್ಚು ಮುದ್ರಣದಲ್ಲಿಯೇ ಇಲ್ಲಿಯೇ ಮುದ್ರಣವಾಗುತ್ತಿತ್ತು.