ವಿಷಯಕ್ಕೆ ಹೋಗು

ತಾರಿಕೊಂಡ ವೆಂಕಮಾಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾರಿಕೊಂಡ ವೆಂಕಮಾಂಬ
ಜನನ20 April 1730[]
Tarikonda village,ಆಂದ್ರ ಪ್ರದೇಶ
ಮರಣ21 August 1817 (aged 87)[]
ತಿರುಮಲೆ
ಭಾಷೆತೆಲುಗು
ರಾಷ್ಟ್ರೀಯತೆಭಾರತೀಯ
ಕಾಲ೧೮ನೇ ಶತಮಾನ
ಪ್ರಕಾರ/ಶೈಲಿಕವಯತ್ರಿ
ಪ್ರಮುಖ ಕೆಲಸ(ಗಳು)ವಿಷ್ಣು ಪಾರಿಜಾತಮ್,ಚೆಂಚು ನಾಟಕಂ,ರುಕ್ಮಿಣಿ ನಾಟಕಂ,ಜಲ ಕೃದ ವಿಲಾಸಂ, ಮುಕ್ತಿ,ಕಾಂತಿ ವಿಲಾಸಂ, ಗೋಪಿ ನಾಟಕಂ, ರಾಮ ಪರಿಣಯಂ, ಶ್ರೀ ಭಾಗವತಂ, ಶ್ರೀ ಕೃಷ್ಣ ಮತ್ತು ಕಂಠವಾಮ್ ವಾಸ್ತಮ್ ಅಷ್ಟಾಂಗ ಯೋಗ, ಸರಮ್ (ಪಾದಕೃತಿ)

ತಾರಿಕೊಂಡ ವೆಂಕಮಾಂಬ, ತೆಲುಗು ಭಾಷೆಯಲ್ಲಿ ಹಲವಾರು ಪದ್ಯ ಹಾಗೂ ಭಕ್ತಿ ಗೀತೆಗಳನ್ನು ರಚಿಸಿದವರು.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ವೆಂಕಮಾಂಬರು ನಂದವಾರೀಕ ಎಂಬ ನಿಯೋಗಿ ಬ್ರಾಹ್ಮಣರ ಪಂತದಲ್ಲಿ ಹುಟ್ಟಿದರು. ಇವರು ೧೭೩೦ರಲ್ಲಿ ಆಂಧ್ರಪ್ರದೇಶದ ತಾರಿಕೊಂಡ ಎಂಬ ಹಳ್ಳಿಯಲ್ಲಿ[] ಜನಿಸಿದ್ದರು. ಇವರ ತಂದೆ ಕೃಷ್ಣಮಾತ್ಯಾ ಮತ್ತು ತಾಯಿ ಮಾನ್ಗ್ ಮಾಂಬ. ವೆಂಕಮಾಂಬ ಚಿಕ್ಕವಯಸ್ಸಿನಿಂದಲೇ ವೆಂಕಟೇಶ್ವರನ ಭಕ್ತರು. ಈಕೆಯ ಅಪಾರ ಭಕ್ತಿಯನ್ನು ಕಂಡು ಹಳ್ಳಿಯ ಜನರು ವೆಂಕಮಾಂಬನನ್ನು ಹುಚ್ಚಿ ಎಂದು ತಿಳಿದ್ದಿದರು. ವೆಂಕಮಾಂಬ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿ ಗಂಡನನ್ನು ಕಳೆದುಕೊಂಡು ಬಾಲವಿಧವೆಯಾದರು. ಇವರು ದೇವರನ್ನೇ ತನ್ನ ಗಂಡನೆಂದು ಭಾವಿಸಿ ಮದುವೆ ಆಗಿರುವ ಹೆಂಗಸರಂತೆ ಅಲಂಕರಿಸಿಕೊಳ್ಳುತ್ತಿದ್ದರು. ಇವರು ಯೋಗ ವಿಜ್ಞಾನವನ್ನು ಅಚರಯ ಸುಬ್ರಮಣ್ಯನಯುಡು ಬಳಿ ಕಲಿತು ಯೋಗಿನಿಯಾದರು. ಇದರಿಂದ ಅವರು ಹಳಿಯಲ್ಲಿದ್ದ ಪುರೋಹಿತರ ಕೋಪಕ್ಕೆ ಗುರಿಯಾದರು. ನಂತರ ಇವರು ತಿರುಮಲಕ್ಕೆ ಬಂದು ನೆಲಸಿದರು. ಇವರ ಭಕ್ತಿಗೆ ಮೆಚ್ಚಿ ವೆಂಕಟೇಶ್ವರ ಸ್ವಾಮಿಯು ವೆಂಕಮಾಂಬ ರಚಿಸಿರುವ ಹಾಡುಗಳನ್ನು ಕೇಳಲು ದೇವಾಲಯ ಮುಚ್ಚಿರುವ ವೇಳೆಯಲ್ಲೂ ಈಕೆಗಾಗಿ ದೇವಾಲಯವನ್ನು ತೆರೆಯುತ್ತಿದ್ದರು. ರಾತ್ರಿವೇಳೆ ವೆಂಕಮಾಂಬ ತಾನು ರಚಿಸಿರುವ ಹಾಡುಗಳನ್ನು ಹೇಳಿ ಸ್ವಾಮಿಗೆ ಆರತಿ ಮಾಡಿ, ಮುತ್ತು ರತ್ನಗಳನ್ನು ಸ್ವಾಮಿಗೆ ಅರ್ಪಿಸುತ್ತಿದ್ದರು. ದೇವರ ಬಳಿ ಇರುವ ಮುತ್ತು ರತ್ನಗಳನ್ನು ಗಮನಿಸಿದ ದೇವಾಲಯದ ಪುರೋಹಿತರು ತನಿಖೆ ಆರಂಭಿಸಿದಾಗ ಇದು ವೆಂಕಮಾಂಬನ ಕೆಲಸವೆಂದು ತಿಳಿದು ಆಕೆಗೆ ಶಿಕ್ಷೆಯನ್ನು ವಿಧಿಸಲಾಯಿತ್ತು. ಆಕೆಯನ್ನು ತಿರುಮಲದಿಂದ ೧೫ ಮೈಲಿ ದೂರದಲ್ಲಿರುವ ತುಂಬೂರಕೇಣವೆಂಬ ಗುಹೆಯಲ್ಲಿ ಇರಿಸಲಾಯಿತು. ವೆಂಕಟೇಶ್ವರ ಸ್ವಾಮಿಯೇ ಆಕೆಯನ್ನು ಇರಿಸಿರುವ ಗುಹೆಯಿಂದ ದೇವಾಲಯದವರೆಗೆ ಸುರಂಗ ಮಾರ್ಗವನ್ನು ನಿರ್ಮಿಸಿ ಆಕೆಯ ಭಕ್ತಿಯ ಸೇವೆ ಮುಂದುವರೆಯಲು ಅನುಕೂಲ ಮಾಡಿಕೊಟ್ಟರು. ಈ ರೀತಿ ರಾತ್ರಿ ಆರತಿ ಆರು ವರ್ಷದವರೆಗೆ ಮುಂದುವರೆಯಿತು. ನಂತರ ದೇವಾಲಯದ ಪುರೋಹಿತರಿಗೆ ತಮ್ಮ ತಪ್ಪಿನ ಅರಿವಾಗಿ, ಆಕೆಯ ಶ್ರದ್ಧೆ ಮತ್ತು ಭಕ್ತಿಯನ್ನು ಅರಿತು ಆಕೆಯನ್ನು ಶಿಕ್ಷೆಯಿಂದ ಮುಕ್ತಗೊಳಿಸಿದರು. ಆಕೆ ವಾಪಸ್ಸು ಬಂದ ಮೇಲೆ ವೆಂಕಮಾಂಬ ಅವರ ಏಕಾಂತ ಸೇವೆಗೆ ಅನುವುಮಾಡಿಕೊಡಲಾಯಿತು. ವೆಂಕಮಾಂಬ ಅವರ ಸಮಾಧಿ ಇರುವ ಸುತ್ತಮುತ್ತಲಿನ ಜಾಗವನ್ನು ಶಾಲೆಯಾಗಿ ಪರಿವರ್ತಿಸಲಾಗಿದೆ ಮತ್ತು ಅವರ ಸಮಾಧಿಯನ್ನು ಶಾಲೆಯ ಮೈದಾನದಲ್ಲಿ ಈಗಲೂ ಪೂಜಿಸಲಾಗುತ್ತಿದೆ.

ರಚನೆಗಳು

[ಬದಲಾಯಿಸಿ]

ಇವರ ಮೊದಲನೇ ಪದ್ಯ ತಾರಿಕೊಂಡ ನ್ರುಸಿಂಹ ಸಾತಕಮ್ ಮತ್ತು ಇದರ ಮುಂದಿನ ಭಾಗ ನ್ರುಸಿಂಹ ವಿಲಾಸ ಕಥಾ, ಶಿವ ನಾಟಕಂ ಮತ್ತು ಬಾಲಕ್ರಿಷ್ನ ನಾಟಕಂ, ಯಕ್ಷಗಾನ ಮತ್ತು ರಾಜಯೋಗಾಮೃತ ಸಾರಂ, ಇವು ದ್ವಿಪದಿ ಕಾವ್ಯಗಳು. ಈ ಕಾವ್ಯಗಳನ್ನು ವೆಂಕಮಾಂಬರವರು ತಾರಿಕೊಂಡದಲ್ಲಿ ಇರುವಾಗ ರಚಿಸಿದರು. ತುಂಬುರುಕೋಣ ಗುಹೆಯಿಂದ ತಿರುಮಲಕ್ಕೆ ವಾಪಸ್ಸು ಬಂದ ಮೇಲೆ ಆಕೆ ವಿಷ್ಣು ಪಾರಿಜಾತಂ, ಚೇಚು ನಾಟಕಂ, ರುಕ್ಮಿಣಿ ನಾಟಕಂ ಮತ್ತು ಜಲಕ್ರೀಡೆ ವಿಲಾಸಂ, ಮುಕ್ತಿ ಕಾಂತಿ ವಿಲಾಸಂ, ಗೋಪಿ ನಾಟಕಂ, ರಾಮ ಪರಿಣಯಂ, ಶ್ರೀ ಭಾಗವತಂ, ಶ್ರೀ ಕೃಷ್ಣ ಮಂಜರಿ, ತತ್ವ ಕೀರ್ತನಲು ಮತ್ತು ವಸಿಷ್ಟ ರಾಮಾಯಣಂ, ಶ್ರೀ ವೆಂಕಟಾಚಲ ಮಹತ್ಮೆ ಮತ್ತು ಅಪ್ಬಾಂಗ ಯೋಗ ಸಾರಂ ರಚಿಸಿದರು.

ಏಕಾಂತ ಸೇವೆ

[ಬದಲಾಯಿಸಿ]

ವೆಂಕಟೇಶ್ವರ ಸ್ವಾಮಿಯು ವೆಂಕಮಾಂಬನ ಭಕ್ತಿಗೆ ಮೆಚ್ಚಿ ಆಕೆಯ ಏಕಾಂತ ಸೇವೆಯ ಆರತಿಯನ್ನು ಪ್ರತಿದಿನ ರಾತ್ರಿ ಸ್ವೀಕರಿಸುತ್ತಿದ್ದರು. ವೆಂಕಮಾಂಬ ಮಾಡುವ ಆರತಿಯನ್ನು ವೆಂಕಮಾಂಬ ಆರತಿ ಎಂದು ಕರೆಯಲಾಯಿತು.

ವೆಂಕಮಾಂಬ ಅವರನ್ನು ಕುರಿತ ಚಲನಚಿತ್ರಗಳು

[ಬದಲಾಯಿಸಿ]

ವೆಂಕಮಾಂಬ ಏಂಬ ಚಲನಚಿತ್ರ ೨೦೦೯ ರಲ್ಲಿ ಬಿಡುಗಡೆಯಾಯಿತು.[] ಮೀನ ದುರೈರಜ್ ಈ ಚಲನಚಿತ್ರದ ಮುಖ್ಯ ಪಾತ್ರಗಾರರು. ವೆಂಕಮಾಂಬ ಅವರ ಪಾತ್ರವನ್ನು ಮೀನಾ ದುರೈರಜ್[] ಅವರು ಮಾಡಿದ್ದಾರೆ. ಮ್ ಮ್ ಕೀರವನಿ ವೆಂಕಮಾಂಬ ಅವರು ಬರೆದಿರುವ ಕೃತಿಗಳನ್ನು ಚಲನಚಿತ್ರದಲ್ಲಿ ಹಾಡಿದ್ದಾರೆ. ವೆಂಕಮಾಂಬ ಅವರು ಅರತಿ ಮಾಡುವಾಗ ಹಾಡುತ್ತಿದ್ದ ಕೃತಿ ಸಂರ್ಪೂಣವಾಗಿ ಇದೆ. ಟಿಟಿಡಿ ಶ್ರೀ ವೆಂಕಟೇಶ್ ಭಕ್ತಿ ಚಾನಲ್‍ನಲ್ಲಿ ತೆಲೆ ಎಂಬ ದಾರವಾಹಿಯನ್ನು ಪ್ರಕಟಿಸಿದೆ. ಈ ದಾರವಾಹಿ ತಾರಿಕೊಂಡ ವೆಂಕಮಾಂಬ ಅವರ ಜೀವನದ ಬಗ್ಗೆ. ಈ ದಾರವಾಹಿಯಲ್ಲಿ ಮೀನಾ ದುರೈರಜ ಅವರು ವೆಂಕಮಾಂಬ ಅವರ ಪಾತ್ರವನ್ನು ಮಾಡಿದ್ದಾರೆ. ಈ ದಾರವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ತೆಲೆ ದಾರವಾಹಿಯು ಉತ್ತಮವಾದದ್ದು ಎಂದು ಹೆಸರುಗಳಿಸಿದೆ.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Tarigonda Vengamamba Archived 2018-03-07 ವೇಬ್ಯಾಕ್ ಮೆಷಿನ್ ನಲ್ಲಿ.. postagestamps.gov.in
  2. ಹಳ್ಳಿ [೧]
  3. "ಶ್ರೀ ವೆಂಕಮಾಂಬ ಚಲನಚಿತ್ರ".
  4. ನಾಯಕಿ-ಮೀನ ದುರೈರಜ್ [೨]