ತಪನ್ ಮಿಶ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ. ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ , ಬಾಹ್ಯಾಕಾಶ ಅನ್ವಯಗಳ ಕೇಂದ್ರದ ನಿರ್ದೇಶಕರಾಗಿದ್ದರು.

ಜನನ[ಬದಲಾಯಿಸಿ]

ತಪನ್ ಮಿಶ್ರಾ ರವರು ೧೯೬೧ ರಲ್ಲಿ ಒಡಿಶಾದ ರಾಯಗಡದಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

೧೯೮೪ ರಲ್ಲಿ ಜೆ.ಸಿ.ಬೋಸ್ ನ್ಯಾಷನಲ್ ಟ್ಯಾಲೆಂಟ್‌ ಸರ್ಚ್ (ಜೆಬಿಎನ್ಎಸ್ಟಿಎಸ್) ಸ್ಕಾಲರ್ ಆಗಿ ಜಾದವ್ಪುರ್ವ ಯುನಿವರ್ಸಿಟಿ, ಕಲ್ಕತ್ತಾದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್,ಅಧ್ಯಯನ ಮಾಡಿದರು.[೧]

ವೃತ್ತಿಜೀವನ[ಬದಲಾಯಿಸಿ]

 • ಮಿಶ್ರಾ ರವರು ತಮ್ಮ ವೃತ್ತಿಜೀವನವನ್ನು ಡಿಜಿಟಲ್ ಹಾರ್ಡ್‌ವೇರ್ ಎಂಜಿನಿಯರ್ ಆಗಿ ಪ್ರಾರಂಭಿಸಿದರು ಹಾಗೂ ಮೈಕ್ರೋವೇವ್ ರಿಮೋಟ್‌ ಸೆನ್ಸಿಂಗ್ ಪೇಲೋಡ್ಗಳಲ್ಲಿ ಸ್ಪೇಸ್ ಅಪ್ಲಿಕೇಷನ್‌ ಸೆಂಟರ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.
 • ೧೯೯೦ ರಲ್ಲಿ ಜರ್ಮನ್ ಏರೋಸ್ಪೇಸ್ ಏಜೆನ್ಸಿಯಲ್ಲಿನ ಅತಿಥಿ ವಿಜ್ಞಾನಿಯಾಗಿ ಎಸ್ಎಆರ್ (SAR)ಡಾಟಾದ ನೈಜ - ಸಮಯ ಸಂಸ್ಕರಣೆಗೆ ಅವರು ಆಲ್ಗರಿದಮ್ ಅನ್ನು ಬರೆದರು.
 • ಅವರು ೧೯೯೫ - ೧೯೯೯ ರ ಅವಧಿಯಲ್ಲಿ ಐಆರ್ ಎಸ್ - ಪಿ4 ಗಾಗಿ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋ ಮೀಟರ್ (ಎಮ್ಎಸ್ಎಮ್ಆರ್) ಪೇಲೋಡ್ ಸಿಸ್ಟಮ್ ಎಂಜಿನಿಯರಿಂಗ್ ನಿರ್ವಹಿಸುತ್ತಿದ್ದರು.
 • ಅವರು ರಿಸ್ಯಾಟ್ -1 ರ ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡರ್(ಎಸ್ಎಆರ್) ಅಭಿವೃದ್ಧಿಯ ವಿನ್ಯಾಸದಲ್ಲಿ ತೊಡಗಿದ್ದರು.
 • ೨೦೧೫, ಫೆಬ್ರವರಿಯಲ್ಲಿ ನಿರ್ದೇಶಕರಾಗಿ ನೇಮಕವಾಗುವ ಮೊದಲು ಅವರು ಬಾಹ್ಯಾಕಾಶ ಅನ್ವಯಗಳ ಕೇಂದ್ರದ ಮೈಕ್ರೋವೇವ್ ರಿಮೋಟ್ ಸಂವೇದಿ ಪ್ರದೇಶದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
 • ಓಶಿಯನ್ ಸ್ಯಾಟ್ -1 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ಮೀಟರ್ನ ಓಶಿಯನ್ ಸ್ಯಾಟ್ -2 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ ಮೀಟರ್‌ಗಳ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋಮೀಟರ್ ಸಾಧನದ ಅಭಿವೃದ್ಧಿಯೊಂದಿಗೆ ಸಹ ಸಂಬಂಧ ಹೊಂದಿದ್ದರು.[೨]

ಸದಸ್ಯತ್ವ[ಬದಲಾಯಿಸಿ]

 • ಅವರು ೨೦೦೭ರಲ್ಲಿ ಭಾರತೀಯ ರಾಷ್ಟ್ರೀಯ ಅಕಾಡೆಮಿ ಆಫ್ ಇಂಜಿನಿಯರಿಂಗ್ ಫೆಲೋ ಆಗಿ ಆಯ್ಕೆಯಾದರು.
 • ಅವರು ೨೦೦೮ರಲ್ಲಿ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೊನಾಟಿಕ್ಸ್ ನ ಸದಸ್ಯರಾಗಿದ್ದರು.
 • ಅವರಿಗೆ ಐದು ಹಕ್ಕು ಸ್ವಾಮ್ಯಗಳನ್ನು ಮತ್ತು ಇಪ್ಪತ್ತೈದು ಪತ್ರಿಕೆಗಳನ್ನು ತಮ್ಮ ಕ್ರೆಡಿಟ್ಗೆ ನೀಡಲಾಗಿದೆ.

ಪ್ರಶಸ್ತಿಗಳು[ಬದಲಾಯಿಸಿ]

 • ವಿಕ್ರಮ್ ಸಾರಾಭಾಯ್ ಸಂಶೋಧನಾ ಪ್ರಶಸ್ತಿ - ೨೦೦೪.
 • ಇಸ್ರೋ ಮೆರಿಟ್ ಪ್ರಶಸ್ತಿ - ೨೦೦೮.

ಉಲ್ಲೇಖಗಳು[ಬದಲಾಯಿಸಿ]

 1. https://www-ndtv-com.cdn.ampproject.org/v/s/www.ndtv.com/india-news/indias-key-spy-satellite-maker-sacked-made-advisor-to-isro-chairman-1886609?amp_js_v=a2&amp_gsa=1&amp=1&akamai-rum=off&usqp=mq331AQECAFYAQ%3D%3D#referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fwww.ndtv.com%2Findia-news%2Findias-key-spy-satellite-maker-sacked-made-advisor-to-isro-chairman-1886609
 2. https://m-economictimes-com.cdn.ampproject.org/v/s/m.economictimes.com/topic/Tapan-Misra/amp?amp_js_v=a2&amp_gsa=1&usqp=mq331AQECAFYAQ%3D%3D#referrer=https://www.google.com&amp_tf=From%20%251%24s