ವಿಷಯಕ್ಕೆ ಹೋಗು

ತತ್ತ್ವಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ತತ್ತ್ವಶಾಸ್ತ್ರಜ್ಞ ಇಂದ ಪುನರ್ನಿರ್ದೇಶಿತ)

ತರ್ಕ ಮತ್ತು ವಿವೇಚನೆಗಳ ಸಹಾಯದಿಂದ ಪ್ರಪಂಚ, ಜೀವನ, ಅಸ್ತಿತ್ವ, ದೈವತ್ವ, ನೈಜತೆ, ಮುಂತಾದ ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮಾನವನ ಯತ್ನವನ್ನು ತತ್ತ್ವಶಾಸ್ತ್ರ ಎಂದು ಪರಿಗಣಿಸಬಹುದು. ಪ್ರಪಂಚವನ್ನು ಪರಿಶೀಲಿಸುವ ಇತರ ಮಾನವ ಯತ್ನಗಳು ವಿಜ್ಞಾನ ಮತ್ತು ಧಾರ್ಮಿಕತೆ. ಆದರೆ ತತ್ತ್ವಶಾಸ್ತ್ರದಲ್ಲಿ ವಾದಗಳನ್ನು ವಿಜ್ಞಾನದಂತೆ ಪ್ರಯೋಗ ಅಥವಾ ಅನುಭವದಿಂದ ಧೃಡಪಡಿಸಲಾಗುವುದಿಲ್ಲ ಮತ್ತು ಧಾರ್ಮಿಕತೆಯಲ್ಲಿರುವಂತೆ ನಂಬಿಕೆ ಅಥವಾ ದೈವಪ್ರೇರಣೆಯನ್ನು ಅವಲಂಬಿಸುವುದಿಲ್ಲ. ಆದರೆ ಈ ಮೂರು ತತ್ತ್ವಗಳು ಒಂದನ್ನೊಂದು ಪ್ರಭಾವಗೊಳಿಸುವುದರಿಂದ ಇವುಗಳ ಕಟ್ಟು ನಿಟ್ಟಾದ ವಿಂಗಡಣೆ ಕಷ್ಟಸಾಧ್ಯ.

ಭಾರತೀಯ ತತ್ತ್ವಶಾಸ್ತ್ರ

[ಬದಲಾಯಿಸಿ]

ಭಾರತದಲ್ಲಿ ತತ್ತ್ವಶಾಸ್ತ್ರ ಪ್ರಾಚೀನ ಕಾಲದಿಂದಲೂ ಧಾರ್ಮಿಕತೆಯ ನೆರಳಿನಲ್ಲಿಯೆ ಬೆಳೆದು ಬಂದಿತು. ಹೀಗಾಗಿ ವೈದಿಕ ವಿಚಾರಗಳು ಭಾರತೀಯ ತತ್ತ್ವಶಾಸ್ತ್ರದ ಮುಖ್ಯ ಅವಯವ. ಬೌದ್ಧಧರ್ಮ ಮತ್ತು ಜೈನಧರ್ಮ ತತ್ತ್ವಶಾಸ್ತ್ರಕ್ಕೆ ನವೀನ ವಿಷಯಗಳನ್ನು ಪರಿಚಯಿಸಿ ದವು. ವಸ್ತುತಃ, ಎಲ್ಲ ಭಾರತೀಯ ತತ್ತ್ವಶಾಸ್ತ್ರ ತಜ್ಞರು ಧಾರ್ಮಿಕ ಮುಖಂಡರೇ ಆಗಿದ್ದರು. ಭಾರತದ ದರ್ಶನಶಾಸ್ತ್ರ ಗಳು ತತ್ವಶಾಸ್ತ್ರದ ಅಂಗಗಳಾಗಿವೆ. ಉಪನಿಷತ್ ಗಳು | ಭಗವದ್ಗೀತೆ |ದರ್ಶನಶಾಸ್ತ್ರ (ದರ್ಶನಗಳು) ತತ್ವ್ಸಶಾಸ್ತ್ರಕ್ಕೆ ಆಧಾರ ಗ್ರಂಥಗಳಾಗಿವೆ.

ಇತರ ಪೌರ್ವಾತ್ಯ ತತ್ತ್ವಶಾಸ್ತ್ರ

[ಬದಲಾಯಿಸಿ]

ಭಾರತದಂತೆ ಇತರ ಪೌರ್ವಾತ್ಯ ದೇಶಗಳಲ್ಲೂ ತತ್ತ್ವಶಾಸ್ತ್ರ ಧಾರ್ಮಿಕತೆಯನ್ನು ಅವಲಂಬಿಸಿ ಬೆಳೆದುಬಂದಿತು.

ಪ್ರಮುಖ ತತ್ತ್ವಶಾಸ್ತ್ರ ತಜ್ಞರು

[ಬದಲಾಯಿಸಿ]
  1. ಸಾಕ್ರಟೀಸ್
  2. ಪ್ಲೇಟೊ
  3. ಅರಿಸ್ಟಾಟಲ್
  4. ಲಿಯೊ ಟಾಲ್‍ಸ್ಟಾಯ್
  5. ಜಿಡ್ಡು ಕೃಷ್ಣಮೂರ್ತಿ
  6. ಸ್ವಾಮಿ ವಿವೇಕಾನಂದ
  7. ಶ್ರೀ ಅರಬಿಂದೋ
  8. ಜಾನ್ ರಸ್ಕಿನ್
  9. ಸರ್ವೆಪಲ್ಲಿ ರಾಧಾಕೃಷ್ಣನ್

ಪಾಶ್ಚಿಮಾತ್ಯ ತತ್ತ್ವಶಾಸ್ತ್ರ

[ಬದಲಾಯಿಸಿ]

ವಿಭಾಗಗಳು

[ಬದಲಾಯಿಸಿ]

ಇತಿಹಾಸ ಮತ್ತು ಬೆಳವಣೆಗೆ

[ಬದಲಾಯಿಸಿ]

ಅಲ್ಲಮನ ತತ್ತ್ವ ದೃಷ್ಠಿ

[ಬದಲಾಯಿಸಿ]
ಅಲ್ಲಮ ಪ್ರಭು ತನ್ನ ಬೆಡಗಿನ ವಚನದಲ್ಲಿ ತತ್ತ್ವಜ್ಞಾನದ ಒಳಗುಟ್ಟನ್ನು ಹೀಗೆ ಹೇಳಿದ್ದಾನೆ:
ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು!
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
ಮಾಬುದು ಗುಹೇಶ್ವರಾ.
ಅರ್ಥ
ಕಚ್ಚದಿರುವ ಚೇಳಿನ ಆಗದೇ ಇರುವ ನೋವಿನಿಂದ (ಇಲ್ಲದ ನೋವಿನಿಂದ) ಮೂರು ಲೋಕವೂ ನರಳಿತು! ಹುಟ್ಟದೇ ಇರುವ ಗಿಡದ ಎಲೆಯನ್ನು ತಂದು, ಅದನ್ನು ಮುಟ್ಟದೆ ಹಚ್ಚಲು ಗಾಯ/ನೋವು ಮಾಯಿತು(ವಾಸಿಯಾಯಿತು). ಅಂದರೆ, ಚೇಳೇ ಇರಲಿಲ್ಲ, ಆದರೆ ಕಚ್ಚಿತೆಂಬ ಬ್ರಮೆ.ಭ್ರಮೆಯಿಂದ ನೋವಿಲ್ಲದಿದ್ದರೂ ಭ್ರಮೆಯಿಂದ ನೋವು; ಈ ನೋವಿಗೆ 'ಇಲ್ಲ ಇಲ್ಲ' ಎಂಬುದೇ ಮದ್ದು! (ಅದ್ವೈತ ಸಿದ್ಧಾಂತದ ಸಂಕ್ಷಿಪ್ತ ನಿರೂಪಣೆ)[]

ಉಲ್ಲೇಖಗಳು

[ಬದಲಾಯಿಸಿ]
  1. [https://www.prajavani.net/community/religion/what-are-benifits-philosophy-674568.html ತತ್ವಶಾಸ್ತ್ರದಿಂದ ಏನು ಪ್ರಯೋಜನ? ರಘು ಕೆ. ಸಿ.d: 19 ಅಕ್ಟೋಬರ್ 2019]