ತಗಡು

ವಿಕಿಪೀಡಿಯ ಇಂದ
Jump to navigation Jump to search
ತುಕ್ಕುರಹಿತ ಉಕ್ಕಿನ ತಗಡುಗಳು ಕ್ರೈಸ್ಲರ್ ಕಟ್ಟಡದ ಹೊದಿಕೆಯಾಗಿವೆ

ತಗಡು ಎಂದರೆ ಕೈಗಾರಿಕಾ ಪ್ರಕ್ರಿಯೆಯಿಂದ ತೆಳುವಾದ, ಚಪ್ಪಟೆ ತುಂಡುಗಳಾಗಿ ರೂಪಿಸಲಾದ ಲೋಹ. ತಗಡು ಲೋಹಗೆಲಸದಲ್ಲಿ ಬಳಸಲಾಗುವ ಮೂಲಭೂತ ರೂಪಗಳಲ್ಲಿ ಒಂದಾಗಿದೆ ಮತ್ತು ಇದನ್ನು ವಿವಿಧ ಆಕಾರಗಳಾಗಿ ಕತ್ತರಿಸಿ ಬಗ್ಗಿಸಬಹುದು. ತಗಡಿನಿಂದ ಅಸಂಖ್ಯಾತ ದೈನಂದಿನ ವಸ್ತುಗಳನ್ನು ರಚಿಸಲಾಗುತ್ತದೆ. ಇದರ ದಪ್ಪ ಬಹಳ ಗಣನೀಯವಾಗಿ ಬದಲಾಗಬಹುದು; ಅತ್ಯಂತ ತೆಳುವಾದ ತಗಡುಗಳನ್ನು ರೇಕು/ವರ್ತಿರೇಕು ಎಂದು ಪರಿಗಣಿಸಲಾಗುತ್ತದೆ.

ತಗಡಾಗಿ ರೂಪಿಸಬಲ್ಲ ಅನೇಕ ವಿಭಿನ್ನ ಲೋಹಗಳಿವೆ, ಉದಾಹರಣೆಗೆ ಅಲ್ಯೂಮಿನಿಯಮ್, ಹಿತ್ತಾಳೆ, ತಾಮ್ರ, ಉಕ್ಕು, ತವರ, ನಿಕಲ್ ಮತ್ತು ಟೈಟೇನಿಯಮ್. ಅಲಂಕಾರಿಕ ಉಪಯೋಗಗಳಿಗಾಗಿ, ಕೆಲವು ಪ್ರಮುಖ ತಗಡುಗಳಲ್ಲಿ ಬೆಳ್ಳಿ, ಚಿನ್ನ ಮತ್ತು ಪ್ಲಾಟಿನಮ್ ಸೇರಿವೆ (ಪ್ಲಾಟಿನಮ್ ತಗಡನ್ನು ವೇಗವರ್ಧಕವಾಗಿಯೂ ಬಳಸಲಾಗುತ್ತದೆ).

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • "Manufacturers Standard Gauge History". Steel Market Update.
  • "Sheet Steel Gauges and Thicknesses" (PDF). Sheet Steel Facts. Canadian Sheet Steel Building Institute. April 2009.
"https://kn.wikipedia.org/w/index.php?title=ತಗಡು&oldid=914523" ಇಂದ ಪಡೆಯಲ್ಪಟ್ಟಿದೆ