ಡೊಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೊಮ್ ಮನುಷ್ಯ-1860 - ಬಂಗಾಳ

ಡೊಂಬ ಎಂಬುದು ಅಥವಾ ಡೊಮ್ ( ಸಂಸ್ಕೃತ ಡೊಮ್, ಆಡುಭಾಷೆಯಲ್ಲಿ ಡೊಂಬೊ, ಡೊಮ್ರಾ, ಡೊಮಾಕ, ಡೊಂಬರಿ ಮತ್ತು ರೂಪಾಂತರಗಳು) ಭಾರತದಾದ್ಯಂತ ಹರಡಿರುವ ಜನಾಂಗೀಯ ಗುಂಪು ಅಥವಾ ಗುಂಪುಗಳಾಗಿವೆ.

ಡೊಂಬರು ಉತ್ತರ ಪ್ರದೇಶದ ಅಲೆಮಾರಿಗಳಾಗಿದ್ದು, ಬಂಗಾಳ, ಭಂಟು, ಬಾಝಿಗರ್, ಹಬುರ, ಕಂಜರ್ ಮತ್ತು ಸಂಸಿ ಸ್ಥಳಗಳ ಡೊಮ್ ಮೂಲದವರೆಂದು ಹೇಳಲಾಗುತ್ತದೆ. ಯಾವುದೇ ಅಲೆಮಾರಿಗಳನ್ನು ವಿವರಿಸಲು ಡೊಮ್ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ, ಏಕೆಂದರೆ ಈ ಎಲ್ಲಾ ಗುಂಪುಗಳು ವಿಭಿನ್ನವಾಗಿವೆ ಮತ್ತು ಕಟ್ಟುನಿಟ್ಟಾಗಿ ತಮ್ಮ ತಮ್ಮ ಪಂಗಡಗಳ ಒಳಗೇ ವಿವಾಹ ಮಾಡಿಕೊಳ್ಳುವವರಾಗಿರುತ್ತಾರೆ. ಕೆಲವರು ತಮ್ಮದೇ ಆದ ಉಪಭಾಷೆ ಅಥವಾ ಆಡುಭಾಷೆಯನ್ನು ಮಾತನಾಡುತ್ತಾರೆ, ಆದರೆ ಇತರರು ಚಾಲ್ತಿಯಲ್ಲಿರುವ ಪ್ರಮುಖ ಭಾಷೆ ಮಾತನಾಡುತ್ತಾರೆ. [೧] 2011 ರ ಭಾರತದ ಜನಗಣತಿಯು ಉತ್ತರ ಪ್ರದೇಶದಲ್ಲಿ 110,353 ಜನಸಂಖ್ಯೆ ಇರುವ ಡೊಮ್ ಜನಾಂಗವನ್ನು ಪರಿಶಿಷ್ಟ ಜಾತಿ ಎಂದು ಪರಿಸಿದೆ. [೨] ಯುರೋಪ್‌ನ ರೋಮಾ ಜೊತೆಗೆ ಮಧ್ಯಪ್ರಾಚ್ಯದ ಡೊಮ್ ಅಥವಾ ಡೊಮಿ ಜನರು [೩]  ಡೊಂಬ ಜನಾಂಗದ ವಂಶಸ್ಥರು ಎಂದು ನಂಬಲಾಗಿದೆ.

ಡಮರು ಎಂಬ ಮೂಲದಿಂದ ಡೊಂಬ ಪದ ಬಂದಿದೆ ಎಂದು ನಂಬಲಾಗಿದೆ. [೪]

ಈ ಜನರನ್ನು ಬೆರಿಚೋ, ಡೊಮ್ ಅಥವಾ ಡೊಮಾ ಎಂದು ಕರೆಯಲಾಗುತ್ತದೆ. ಸಂಗೀತಗಾರಾಗಿರುವುದರಿಂದ ಅವರನ್ನು ಡೊಮ್ ಎಂದು ಗುರುತಿಸಲಾಯಿತು. ಡೋಮ್ ವಂಶಸ್ಥರು ವಿವಿಧ ಸ್ಥಳೀಯ ಆಡಳಿತಗಾರರಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ಹುಂಝ ಕಣಿವೆಯ ನಿಝಾರಿ ಇಸ್ಮಾಯಿಲಿ ಪಂಗಡಕ್ಕೆ ಡೋಮ್ ಸೇರಿದೆ. [೫]

ಒಡಿಶಾದಲ್ಲಿ ಸುಮಾರು 706,000 ಡೊಮ್‌ಗಳಿದ್ದಾರೆ. [೬]

ಹಿಂದೂಗಳ ಪವಿತ್ರ ನಗರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ, ಡೊಮ್ ಜನರು ಮೃತ ದೇಹಗಳ ದಹನದ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Nomads in India : proceedings of the National Seminar / edited by P.K. Misra, K.C. Malhotra
  2. "A-10 Individual Scheduled Caste Primary Census Abstract Data and its Appendix – Uttar Pradesh". Registrar General & Census Commissioner, India. Retrieved 6 February 2017.
  3. Matras, Yaron (1 June 1995). Romani in Contact. John Benjamins Publishing Company. p. 21. ISBN 978-9-02727-648-3.
  4. T. Burrow and M.B. Emeneau, A Dravidian Etymological Dictionary 2nd ed. (Oxford: Clarendon Press, 1984), p. 257, entry #2949.
  5. Disappearing peoples? : indigenous groups and ethnic minorities in South and Central Asia. Brower, Barbara Anne., Johnston, Barbara Rose. Walnut Creek, CA: Left Coast Press. 2007. ISBN 978-1-59874-726-3. OCLC 647914842.{{cite book}}: CS1 maint: others (link)
  6. "Census of India Website : Office of the Registrar General & Census Commissioner, India". censusindia.gov.in. Retrieved 2020-05-11.

 

"https://kn.wikipedia.org/w/index.php?title=ಡೊಂಬ&oldid=1088350" ಇಂದ ಪಡೆಯಲ್ಪಟ್ಟಿದೆ