ಡೆಫ್ ಲೆಪ್ಪಾರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Def Leppard
ಮೂಲಸ್ಥಳSheffield, ಇಂಗ್ಲೆಂಡ್
ಸಂಗೀತ ಶೈಲಿHard rock, heavy metal[೧][೨]
ಸಕ್ರಿಯ ವರ್ಷಗಳು1977–present
L‍abelsMercury, Universal, Phonogram, Vertigo, PolyGram, Bludgeon-Riffola, Island (US)
Associated actsAtomic Mass, Cybernauts
ಅಧೀಕೃತ ಜಾಲತಾಣOfficial Site
ಸಧ್ಯದ ಸದಸ್ಯರುRick Savage
Joe Elliott
Rick Allen
Phil Collen
Vivian Campbell
ಮಾಜಿ ಸದಸ್ಯರುSteve Clark (Deceased)
Pete Willis
Tony Kenning

ಡೆಫ್ ಲೆಪ್ಪಾರ್ಡ್ , ಬ್ರಿಟೀಷ್ ಹೆವಿ ಮೆಟಲ್ ಚಳುವಳಿಯ ಹೊಸ ಅಲೆಯ ಭಾಗವಾಗಿ 1977ರಲ್ಲಿ ರೂಪುಗೊಂಡ ಇಂಗ್ಲೆಂಡಿನ ಶೆಫ್ಫೀಲ್ಡ್ನ ಒಂದು ಹಾರ್ಡ್ ರಾಕ್ ಮತ್ತು ಹೆವಿ ಮೆಟಲ್ ಬ್ಯಾಂಡ್. 1992ರ ಹೊತ್ತಿಗೆ, ಈ ಬ್ಯಾಂಡ್ ಜೋ ಎಲಿಯಾಟ್(ಗಾಯನ), ಫಿಲ್ ಕೊಲ್ಲೆನ್ (ಗಿಟಾರ್), ವಿವಿಯನ್ ಕ್ಯಾಂಪ್ಬೆಲ್ (ಗಿಟಾರ್), ರಿಕ್ ಸಾವೇಜ್ (ಬಾಸ್ ಗಿಟಾರ್), ಮತ್ತು ರಿಕ್ ಅಲ್ಲೆನ್ (ಡ್ರಮ್ಸ್) ಇವರುಗಳನ್ನು ಒಳಗೊಂಡಿತ್ತು. ಈ ಬ್ಯಾಂಡ್ ಜಗತ್ತಿನಾದ್ಯಂತ ಸುಮಾರ್ ೬೫ ಮಿಲಿಯನ್ ಆಲ್ಬಮ್ ಗಳನ್ನು ಮಾರಿದೆ, ಮತ್ತು ಆರ್ ಐಎಎ ವಜ್ರ ಪ್ರಮಾಣೀಕರಣವನ್ನು ಹೊಂದಿರುವ ಎರಡು ಆಲ್ಬಂಗಳನ್ನು, ಪೈರೋಮೇನಿಯ ಮತ್ತು ಹಿಸ್ಟೀರಿಯ , ಹೊಂದಿದೆ.[೩]

ಇತಿಹಾಸ[ಬದಲಾಯಿಸಿ]

ಮುಂಚಿನ ವರ್ಷಗಳು (1977–1979)[ಬದಲಾಯಿಸಿ]

ಶೆಫ್ಫೀಲ್ಡ್ಟಾಪ್ಟನ್ ಶಾಲೆಯಲ್ಲಿ ವಿದ್ಯಾರ್ಥಿಗಳಾಗಿದ್ದ ರಿಕ್ ಸಾವೇಜ್, ಪೀಟ್ ವಿಲ್ಲಿಸ್ ಮತ್ತು ಟೋನಿ ಕೆನ್ನಿಂಗ್ ಅಟಾಮಿಕ್ ಮಾಸ್ ಎಂಬ ಹೆಸರಿನ ಬ್ಯಾಂಡ್ ಒಂದನ್ನು 1977ರಲ್ಲಿ ರೂಪಿಸಿದರು. ಈ ಬ್ಯಾಂಡು, ಮೂಲತಃ ವಿಲ್ಲಿಸ್ ಅನ್ನು ಗಿಟಾರ್ ಮೇಲೆ, ಸಾವೇಜ್ ಅನ್ನು ಬಾಸ್ ಮೇಲೆ (ಮೂಲತಃ ಗಿಟಾರ್ ನುಡಿಸಿದ ನಂತರ), ಕೆನ್ನಿಂಗ್ ಅನ್ನು ಡ್ರಮ್ಸ್ ಮೇಲೆ ಹೊಂದಿತ್ತು. ಆ ಸಮಯದಲ್ಲಿ ಕೇವಲ 18 ವರ್ಷದವನಾಗಿದ್ದ ಜೋ ಎಲಿಯಾಟ್, ಒಂದು ಬಸ್ ತಪ್ಪಿದಾಗ ವಿಲ್ಲಿಸ್ ಅನ್ನು ಆಕಸ್ಮಿಕವಾಗಿ ಭೇಟಿಯಾದ ನಂತರ ಆ ಬ್ಯಾಂಡ್ ಅನ್ನು ಒಬ್ಬ ಗಿಟಾರಿಗನಾಗಿ ಸೇರಲು ಪ್ರಯತ್ನಿಸಿದನು. ಆದರೆ, ಅವನ ಧ್ವನಿಪರೀಕ್ಷೆಯ ಸಂದರ್ಭದಲ್ಲಿ, ಅವನು ಮುಖ್ಯ ಗಾಯಕನಾಗಲು ಹೆಚ್ಚು ಸೂಕ್ತವಾಗಿದ್ದನೆಂದು ನಿರ್ಧರಿಸಲಾಯಿತು. ಅವರ ಮೊಟ್ಟಮೊದಲ ಸಾರ್ವಜನಿಕ ಸಂಗೀತ ಪ್ರದರ್ಶನವು ಷೆಫೀಲ್ಡ್ ನ ಮೋಸ್ಬೋರೋನಲ್ಲಿನ ವೆಸ್ಟ್ ಫೀಲ್ಡ್ ಶಾಲೆಯ ಎ ವಿಭಾಗದ ಊಟದ ಪ್ರಾಂಗಣದಲ್ಲಿ ಆಗಿತ್ತು.

ಸ್ವಲ್ಪ ಕಾಲದಲ್ಲೇ ಅವರು ಎಲಿಯಾಟ್ ಸೂಚಿಸಿದ ಒಂದು ಹೆಸರು, "ಡೆಫ್ ಲಿಯೋಪರ್ಡ್", ಅನ್ನು ಅಳವಡಿಸಿಕೊಂಡರು. ಮೂಲತಃ ಇದು ತನ್ನ ಆಂಗ್ಲಭಾಷಾ ತರಗತಿಯಲ್ಲಿ ಕಾಲ್ಪನಿಕ ರಾಕ್ ಬ್ಯಾಂಡ್ ಗಳ ವಿಮರ್ಶೆಗಳನ್ನು ಬರೆಯುವಾಗ ಅವನು ಆಲೋಚಿಸಿದ್ದ ಒಂದು ಬ್ಯಾಂಡ್ ಹೆಸರಾಗಿತ್ತು. (ಮತ್ತು ಲೆಡ್ ಜೆಪ್ಪೆಲಿನ್ ಬ್ಯಾಂಡ್ ನ ಉಲ್ಲೇಖದಲ್ಲಿ ಕನಿಷ್ಠ).[೪] ಕೆನ್ನಿಂಗ್ ನ ಸಲಹೆಯ ಮೇರೆಗೆ, ಒಂದು ಪಂಕ್ ಬ್ಯಾಂಡ್ ಎಂಬಂತೆ ಭಾಸವಾಗುವುದನ್ನು ಕಡಿಮೆ ಮಾಡಲು ಹೆಸರಿನ ಕಾಗುಣಿತವನ್ನು ಸ್ವಲ್ಪ ಬದಲಾಯಿಸಲಾಯಿತು. 1978ರ ಜನವರಿಯಲ್ಲಿ ಸ್ಟೀವ್ ಕ್ಲಾರ್ಕ್ ಈ ಬ್ಯಾಂಡ್ ಅನ್ನು ಸೇರಿದ. ಜೋ ಎಲಿಯಾಟ್ ನ ಪ್ರಕಾರ, ಅವನು ಲಿನಿರ್ಡ್ ಸ್ಕೈನಿರ್ಡ್ ನ "ಫ್ರೀಬರ್ಡ್" ಅನ್ನು ಸಂಪೂರ್ಣವಾಗಿ ನುಡಿಸುವ ಮೂಲಕ ಈ ಬ್ಯಾಂಡ್ ಅನ್ನು ಸೇರಲು ಯಶಸ್ವಿಯಾಗಿ ಧ್ವನಿಪರೀಕ್ಷೆಯನ್ನೊಳಗೊಂಡ.

ನವೆಂಬರ್ ನಲ್ಲಿ, ಡೆಫ್ ಲೆಪ್ಪಾರ್ಡ್ ಈಪಿ ಎಂದು ಕರೆಯಲ್ಪಟ್ಟ ಒಂದು ಮೂರು-ಗೀತೆಗಳ ಬಿಡುಗಡೆಗಾಗಿ ನಡೆಸಿದ್ದ ಧ್ವನಿಗ್ರಹಣದ ಅಧಿವೇಶನಗಳ ಕೊಂಚ ಮುನ್ನ, ಕೆನ್ನಿಂಗ್ ಏಕಾಏಕಿ ಬ್ಯಾಂಡ್ ಅನ್ನು ತೊರೆದ, ನಂತರದಲ್ಲಿ ಅವನು ಕಾಯಿರೋ ಬ್ಯಾಂಡ್ ಅನ್ನು ರೂಪಿಸಿದ. ಆ ಅಧಿವೇಶನಗಳಿಗಾಗಿ ಫ್ರಾಂಕ್ ನೂನ್ನಿಂದ ಅವನ ಸ್ಥಾನವನ್ನು ತುಂಬಲಾಯಿತು. ಆ ತಿಂಗಳ ಕೊನೆಯ ಹೊತ್ತಿಗೆ, ಆಗ ಕೇವಲ 15 ವರ್ಷದವನಾಗಿದ್ದ ರಿಕ್ ಅಲ್ಲೆನ್, ಬ್ಯಾಂಡಿನ ಪೂರ್ಣಕಾಲೀನ ಡ್ರಮ್ಮರ್ ಆಗಿ ಸೇರಿಕೊಂಡಿದ್ದ.

ಈಪಿ ಯ ಮಾರಾಟಗಳು, "ಗೆಚ್ಚಾ ರಾಕ್ಸ್ ಆಫ್" ಗೀತೆಗೆ ಆ ಕಾಲದಲ್ಲಿ ಪಂಕ್ ಸಂಗೀತ ಮತ್ತು ಹೊಸ ಅಲೆಯ ಸಂಗೀತದ ರೂವಾರಿಯಾಗಿ ಪರಿಗಣಿಸಲಾಗಿದ್ದ ಬಿಬಿಸಿ ರೇಡಿಯೋದ ಖ್ಯಾತ ಡಿಜೆ ಜಾನ್ ಪೀಲ್ ವಿಸ್ತಾರವಾದ ವಾಯುಪ್ರಸಾರದ ಅವಕಾಶಗಳನ್ನೊದಗಿಸಿದ ಮೇಲೆ, ಚೆನ್ನಾಗಿ ಉಬ್ಬಿದವು.

1979ರ ವರ್ಷವಿಡೀ ತಂಡವು ಬ್ರಿಟೀಷ್ ಹಾರ್ಡ್ ರಾಕ್ ಹೆವಿ ಮೆಟಲ್ ಅಭಿಮಾನಿಗಳ ನಡುವೆ ಒಂದು ಪ್ರಾಮಾಣಿಕ ಅನುಸರಣೆಯನ್ನು ಬೆಳೆಸಿಕೊಂಡಿತ್ತು, ಮತ್ತು ಪ್ರಾರಂಭಿಕವಾಗಿ ಬ್ರಿಟೀಷ್ ಹೆವಿ ಮೆಟಲ್ಸ್ ನ ಹೊಸ ಅಲೆಯ ನಾಯಕರಾಗಿ ಕೂಡ ಪರಿಗಣಿಸಲ್ಪಟ್ಟರು. (ಈ ಸ್ಥಾನಕ್ಕೆ ಕಾಲಾನಂತರ ಐರನ್ ಮೈಡೆನ್ ತಂಡವು ಹಕ್ಕು ಚಲಾಯಿಸಿತು.) ಅವರ ಬೆಳೆಯುತ್ತಿದ್ದ ಜನಪ್ರಿಯತೆಯು ಪ್ರಮುಖ ಲೇಬಲ್ ಆದ ಫೋನೋಗ್ರಾಂ/ವರ್ಟಿಗೋ (ಯುಎಸ್ ನಲ್ಲಿ ಮರ್ಕ್ಯುರಿ ರೆಕಾರ್ಡ್ಸ್)ನೊಂದಿಗೆ ದಾಖಲೆ ಒಪ್ಪಂದದಕ್ಕೆ ಕಾರಣವಾಯಿತು.

ಪ್ರಸಿದ್ಧಿಯೆಡೆಗೆ ಬೆಳವಣಿಗೆ (1980-1983)[ಬದಲಾಯಿಸಿ]

ಡೆಫ್ ಲೆಪ್ಪಾರ್ಡ್ ನ ಚೊಚ್ಚಲ ಗೀತಸಂಗ್ರಹ, ಆನ್ ತ್ರೂ ದ ನೈಟ್ , 1980ರ ಮಾರ್ಚ್ 14ರಂದು ಬಿಡುಗಡೆಗೊಂಡಿತು. ಈ ಗೀತಸಂಗ್ರಹವು ಯುಕೆ ಯಲ್ಲು ಮೇಲಿನ 15ರ ಸಾಲನ್ನು ಸೇರಿತಾದರೂ ಕೂಡ, "ಹಲೋ ಅಮೇರಿಕ" ದಂತಹ ಗೀತೆಗಳನ್ನು ಧ್ವನಿಗ್ರಹಣಮಾಡಿದ್ದು ಮತ್ತು ಯುಎಸ್ ನಲ್ಲಿ ಹೆಚ್ಚಾಗಿ ಪ್ರವಾಸ ಮಾಡಿದ್ದು (ಪಾಟ್ ಟ್ರವೆರ್ಸ್, ಎಸಿ/ಡಿಸಿ, ಮತ್ತು ಟೆಡ್ ನ್ಯೂಜೆಂಟ್ರನ್ನು ಬೆಂಬಲಿಸಿ) ಅಮೇರಿಕಾದ ಕೇಳುಗರನ್ನು ಮೆಚ್ಚಿಸಲು ಬ್ಯಾಂಡು ಬಹಳ ಕಷ್ಟದಿಂದ ಪ್ರಯತ್ನಿಸುತ್ತಿದೆ ಎಂಬ ಭಾವನೆಯು ಹಲವು ಆರಂಭಿಕ ಅಭಿಮಾನಿಗಳನ್ನು ನಿರುತ್ಸಾಹಗೊಳಿಸಿತು. ಆಗಸ್ಟ್ ನಲ್ಲಿ (ಐರನ್ ಮೈಡನ್ ಸಹ ಪಾಲ್ಗೊಂಡಂತಹ) ರೀಡಿಂಗ್ ಹಬ್ಬದಲ್ಲಿನ ಒಂದು ಪ್ರದರ್ಶನವು ಕೆಲವು ಕೇಳುಗರು ಅವರ ಅಸಂತೋಷವನ್ನು ಬ್ಯಾಂಡ್ ಕಡೆಗೆ ಕಸವನ್ನು ಎಸೆಯುವ ಮೂಲಕ ವ್ಯಕ್ತಪಡಿಸಿದಾಗ ಕಪ್ಪು ಚುಕ್ಕೆಯಾಯಿತು.

ತಂಡವು ಅಷ್ಟು ಹೊತ್ತಿಗೆ ಎಸಿ/ಡಿಸಿ ನಿರ್ಮಾಪಕ ರಾಬರ್ಟ್ ಜಾನ್ "ಮುಟ್ಟ್" ಲಾಂಜೆಯ ಗಮನವನ್ನು ಸೆಳೆದಿತ್ತಾಗಿ, ಅವನು, 1981ರ ಜುಲೈ 11ಕ್ಕೆ ಬಿಡುಗಡೆಗೊಂಡ, ಅವರ ಎರಡನೆಯ ಗೀತಸಂಗ್ರಹ ಹೈ 'ನ್' ಡ್ರೈ ಮೇಲೆ ಕೆಲಸ ಮಾಡಲು ಒಪ್ಪಿಕೊಂಡನನು. ಸ್ಟುಡಿಯೋದಲ್ಲಿ ನಿಖರತೆಯೊಂದಿಗೆ ಕಾರ್ಯನಿರ್ವಹಿಸುವ ಲಾಂಜೆಯ ಕಾರ್ಯಶೈಲಿಯು ಅವರ ಶಬ್ದವನ್ನು ನಿರೂಪಣೆ ಮಾಡಲು ಆರಂಭಿಸುವಲ್ಲಿ ಅವರಿಗೆ ಸಹಾಯ ಮಾಡಿತು. ಈ ಗೀತಸಂಗ್ರಹದ ಗಮನಾರ್ಹವಲ್ಲದ ಮಾರಾಟ ಸಂಖ್ಯೆಯ ಪಕ್ಷದಲ್ಲಿ ಕೂಡ, "ಬ್ರಿಂಗಿಂಗ್ ಆನ್ ದ ಹಾರ್ಟ್ ಬ್ರೇಕ್" ಉತ್ತೇಜಕ ತುಣುಕು, 1982ರಲ್ಲಿ ಎಂಟಿವಿಯಲ್ಲಿ ಪ್ರಸಾರಗೊಂಡಂತಹ ಮೊದಲ ಮೆಟಲ್ ವೀಡಿಯೋಗಳಲ್ಲಿ ಒಂದಾಗಿ, ತಂಡಕ್ಕೆ ಸ್ಟೇಟ್ಸ್ ನಲ್ಲಿ ಹೆಚ್ಚಿನ ಗೋಚರತೆಯನ್ನು ತಂದುಕೊಟ್ಟಿತು. ಈ ಗೀತಸಂಗ್ರಹದ ಬಿಡುಗಡೆಯ ನಂತರ, ಒಂದು ಯೂರೋಪೀಯ ಪ್ರವಾಸವು ನಡೆಯಿತು. ಓಜಿ ಓಸ್ಬೌರ್ನ್ ಮತ್ತು ಬ್ಲಾಕ್ ಫೂಟ್ಗೆ ತಂಡವು ತೆರೆಯಿತು.[೫]

ಥಳುಕಿನ ಸಂಗೀತತಂಡವಾದ ಗರ್ಲ್ ನೊಂದಿಗೆ ಮುಂಚೆ ಗಿಟಾರಿಗನಾಗಿದ್ದಂತಹ ಫಿಲ್ ಕೊಲ್ಲೆನ್, ಕೆಲಸದ ಸಮಯದಲ್ಲಿ ಸಿಕ್ಕಾಪಟ್ಟೆ ಹೆಂಡ ಕುಡಿದುದರಿಂದಾಗಿ 1982ರ ಜುಲೈ 11ರಂದು ತೆಗೆದುಹಾಕಲ್ಪಟ್ಟ ಪೀಟ್ ವಿಲ್ಲಿಸ್ ನ ಜಾಗ ತೆಗೆದುಕೊಂಡ. (ವಿಲ್ಲಿಸ್ ಬಳಿಕ ಗೋಗ್ಮಗೋಗ್ ಮತ್ತು ರೋಡ್ಹೌಸ್ ಸಂಗೀತತಂಡಗಳೊಂದಿಗೆ ಮತ್ತೆ ಬೆಳಕಿಗೆ ಬರುತ್ತಾನೆ.) ಈ ಸದಸ್ಯರ ಬದಲಾವಣೆಯು ಅವರು ತಮ್ಮ ಮೂರನೇ ಗೀತಸಂಗ್ರಹ, 1983ರ ಜನವರಿ 20ರಂದು ಬಿಡುಗಡೆಯಾದ ಮತ್ತು ಲಾಂಗೆಯಿಂದಲೆ ನಿರ್ಮಿಸಲ್ಪಟ್ಟ ಪೈರೋಮೇನಿಯ ದ ಧ್ವನಿಗ್ರಹಣ ಮಾಡುತ್ತಿದ್ದ ಸಮಯದಲ್ಲಿ ಸಂಭವಿಸಿತು. ಲೀಡ್ ಸಿಂಗಲ್ ಗೀತೆ, "ಫೋಟೋಗ್ರಾಫ್", ಡೆಫ್ ಲೆಪ್ಪಾರ್ಡ್ ಅನ್ನು ಮನೆಮನೆ ಹೆಸರಾಗಿಸಿತು, supplanting ಮೈಕೆಲ್ ಜಾಕ್ಸನ್ನ "ಬೀಟ್ ಇಟ್" ಅನ್ನು ಎಂಟಿವಿಯಲ್ಲಿ ಅತ್ಯಂತ ಹೆಚ್ಚು ಕೇಳಲಾದ ವೀಡಿಯೋ ತುಣುಕಾಗಿ ಮತ್ತು ರಾಕ್ ರೇಡಿಯೋದ ಒಂದು ಖಾಯಂ ಗೀತೆಯಾಯಿತು(ಯುಎಸ್ ಆಲ್ಬಂ ರಾಕ್ ಚಾರ್ಟ್ ಅನ್ನು ಆರು ವಾರಗಳವರೆಗೆ ). ಪಾಪ್ ಚಾರ್ಟ್ ಗಳಲ್ಲಿ #12ರ ಸ್ಥಾನವನನ್ನೂ ಇದು ಆಕ್ರಮಿಸಿತು.

"ಫೋಟೋಗ್ರಾಫ್" ಮತ್ತು ಅನಂತರದ ಸಿಂಗಲ್ ಗಳಾದ "ರಾಕ್ ಆಫ್ ಏಜಸ್" ಮತ್ತು "ಫೂಲಿಂಗ್"ಗಳಿಂದ ಶಕ್ತಿಪಡೆದ ಪೈರೋಮೇನಿಯ 1983ರಲ್ಲಿ ಆರು ಮಿಲಿಯನ್ ಪ್ರತಿಗಳಷ್ಟು ಮಾರಾಟವಾಯಿತು.(ಆ ವರ್ಷದಲ್ಲಿ ಪ್ರತಿ ವಾರ 100,000 ಪ್ರತಿಗಳಿಗಿಂತ ಹೆಚ್ಚಿಗೆ) ಮತ್ತು ಯುಎಸ್ ಆಲ್ಬಂ ಚಾರ್ಟ್ ಗಳ ಮೇರು ಸ್ಥಾನದಿಂದ ಮೈಕೆಲ್ ಜಾಕ್ಸನ್ ನ ಥ್ರಿಲ್ಲರ್ ಒಂದರಿಂದಲೇ ದೂರ ಇರಿಸಲ್ಪಟ್ಟಿತ್ತು. ಆಗಿನಿಂದ ಯುಎಸ್ ನಲ್ಲಿ ಈ ಗೀತಸಂಗ್ರಹವು ಆಐಎಎನಿಂದ ವಜ್ರ ಎಂದು ಪ್ರಮಾಣೀಕರಿಸಲ್ಪಿಟ್ಟಿದೆ. ಪೈರೋಮೇನಿಯ ದ ಬೆಂಬಲದಲ್ಲಿ ಡೆಫ್ ಲೆಪ್ಪಾರ್ಡ್ ಮಾಡಿದ ಯುಎಸ್ ಪ್ರವಾಸವು ಬಿಲ್ಲಿ ಸ್ಕಿಯರ್ಗಾಗಿ ಮಾರ್ಚಿನಲ್ಲಿ ತೆರವನ್ನು ಆರಂಭಿಸಿತು ಮತ್ತು ಸೆಪ್ಟೆಂಬರ್ ನಲ್ಲಿ ಸಿಎ ಸಾನ್ ಡಿಯೆಗೋದಲ್ಲಿನ ಜಾಕ್ ಮರ್ಫಿ ಕ್ರೀಡಾಂಗಣದಲ್ಲಿ 55,000 ಕೇಳುಗರ ಮುಂದೆ ಒಂದು ಶಿರೋಪ್ರದವಾದ ಪ್ರದರ್ಶನದೊಂದಿಗೆ ಮುಗಿಯಿತು. ಆ ಸಮಯದ ತಂಡದ ಜನಪ್ರಿಯತೆಗೆ ಸಾಕ್ಷಿಯೆಂಬಂತೆ, 1984ರಲ್ಲಿ ಒಂದು ಯುಎಸ್ ಗಾಲ್ಲಪ್ ಪೋಲ್ ಡೆಫ್ ಲೆಪ್ಪಾರ್ಡ್ ಸಂಗಡಿಗ ತಂಡಗಳಾದ ದ ರೋಲಿಂಗ್ ಸ್ಟೋನ್ಸ್, ಎಸಿ/ಡಿಸಿ, ಮತ್ತು ಜರ್ನಿಗಳ ಎದುರು ಅಚ್ಚುಮೆಚ್ಚಿನ ರಾಕ್ ಸಂಗೀತ ತಂಡವಾಗಿ ಮತಗಳನ್ನು ಪಡೆದದ್ದನ್ನು ಕಂಡಿತು. ಆದರೆ, ಈ ಜನಪ್ರಿಯತೆಯು ತಮ್ಮ ಮೂಲ ಇಂಗ್ಲೆಂಡಿನಲ್ಲಿ ಸಮವಾಗಿರಲಿಲ್ಲವಾಗಿ, ಈ ಸಂಗತಿಯು ಅವರನ್ನು ಬಹಳವಾಗಿ

ಹಿಸ್ಟೀರಿಯಾ ಯುಗ (1984–1989)[ಬದಲಾಯಿಸಿ]

ಅವರ ಯಶಸ್ಸಿನ ಹಿಂದೆಯೇ, ತಂಡವು 1984ರ ಫೆಬ್ರವರಿಯಲ್ಲಿ ತೆರಿಗೆ ಕಾರಣಗಳಿಂದಾಗಿ ಪೈರೋಮೇನಿಯ ಗೆ ಒಂದು ಅನ್ನು ಬರೆಯಲು ಆರಂಭಿಸಲು ಡೂಬ್ಲಿನ್ಗೆ ಸ್ಥಳಾಂತರಗೊಂಡಿತು. ಮುಟ್ ಲಾಂಗೆಯು ಆರಂಭದಲ್ಲಿ ಹಾಡು ಬರೆಯುವ ಅವಧಿಗಳಲ್ಲಿ ಸೇರಿಕೊಳ್ಳುತ್ತಿದ್ದನು. ಆದರೆ, ಮತ್ತೆ ಸುಸ್ತಾಗಿ ದಿಢೀರನೇ ನಿರ್ಮಾಪಕನಾಗಿ ಹಿಂತಿರುಗಲು ಹಿಂದೇಟು ಹಾಕಿದನು. ಬದಲಿಗೆ, (ಮೀಟ್ ಲೋಫ್ಬ್ಯಾಟ್ ಔಟ್ ಆಫ್ ಹೆಲ್ ಖ್ಯಾತಿಯ) ಜಿಮ್ ಸ್ಟೈನ್ ಮ್ಯಾನ್ಅನ್ನು ತರಲಾಯಿತು.

1984ರ ಡಿಸೆಂಬರ್ 31ರಂದು, ಡ್ರಮ್ಮರ್ ರಿಕ್ ಅಲ್ಲೆನ್, ಶೆಫ್ಫೀಲ್ಡ್ ನ ಹೊರಗಣ ಬೆಟ್ಟಗಳಲ್ಲಿ ಎ57ನ ಮೇಲಾದ ಕಾರು ಅಪಘಾತದಲ್ಲಿ ತನ್ನ ಎಡ ತೋಳನ್ನು ಕಳೆದುಕೊಂಡನು. ಅವನ (1}ಕಾರ್ವೆಟ್ಟೆ ಒಂದು ಚೂಪು ಮಡಕೆಯ ಮೇಲೆ ರಸ್ತೆಯಿಂದ ಹೊರಕ್ಕುರುಳಿ ಒಂದು ಒಣಕಲ್ಲು ಗೋಡೆಯೊಳಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಯ ತರುವಾಯ ಕೂಡ, ರಿಕ್ ಡೆಫ್ ಲೆಪ್ಪಾರ್ಡ್ ನ ಡ್ರಮ್ಮರ್ ನ ಪಾತ್ರದಲ್ಲಿ ಮುಂದುವರಿಯಲು ಬದ್ಧತೆ ಹೊಂದಿದ್ದನು. ಅವನು ಡ್ರಮ್ಮಿಂಗ್ ಅನ್ನು ದಿಂಬುಗಳೊಂದಿಗೆ ಅಭ್ಯಾಸ ಮಾಡಿ ಅವನು ಮುಂಚೆ ಅವನ ತೋಳುಗಳಿಂದ ಮಾಡುತ್ತಿದ್ದ ಡ್ರಮ್ಮಿಂಗ್ ಕೆಲಸದಲ್ಲಿ ಕೆಲವನ್ನು ಮಾಡಲು ತನ್ನ ಕಾಲುಗಳನ್ನು ಬಳಸಬಹುದೆಂದು ಅರಿತುಕಕೊಂಡ.[ಸೂಕ್ತ ಉಲ್ಲೇಖನ ಬೇಕು] ನಂತರ ಅವನು ಒಂದು ಸೂಕ್ತವಾದ ಎಲೆಕ್ಟ್ರಾನಿಕ್ ಡ್ರಂ ಕಿಟ್ಅನ್ನು ವಿನ್ಯಾಸಗೊಳಿಸಲು ಸಿಮ್ಮನ್ಸ್ನೊಂದಿಗೆ ಕಾರ್ಯತತ್ಪರನಾದ. ತಂಡದ ಇತರ ಸದಸ್ಯರು ಅಲೆನ್ ನ ಚೇತರಿಕೆಯನ್ನು ಬೆಂಬಲಿಸಿದರು ಹಾಗೂ ಯಾವುದೇ ಹಂತದಲ್ಲಿ ಅವನ ಜಾಗಕ್ಕೆ ಬೇರೊಬ್ಬರನ್ನು ತರಲು ಹೋಗಲಿಲ್ಲ. ಈ ಅವಧಿಯಲ್ಲಿ, ಮುಟ್ ಲಾಂಗೆಯು ನಿರ್ಮಾಪಕನಾಗಿ ಹಿಂತಿರುಗಿದ, ಮತ್ತು ಅಲ್ಲೆನ್ ಜಯಶಾಲಿ ವಾಪಸಾತಿಯು 1986ರ ಡಾನಿಂಗ್ಟನ್ ಮಾನ್ಸ್ಟರ್ಸ್ ಆಫ್ ರಾಕ್ ಹಬ್ಬದಲ್ಲಿ ಜೋ ಈಲಿಯಟ್ ಅವನನ್ನು ಪರಿಚಿಸಿದ ಮೇಲೆ ಒಂದು ಭಾವನಾತ್ಮಕವಾದ ಕೈತೂಗಾಟದೊಂದಿಗೆ ಮುದ್ರಿತವಾಯಿತು.

ಧ್ವನಿಗ್ರಹಣದ ಸುಮಾರು ನಾಲ್ಕು ವರ್ಷಗಳ ನಂತರ, ಡೆಫ್ ಲೆಪ್ಪಾರ್ಡ್ ನ ನಾಲ್ಕನೇ ಗೀತಸಂಗ್ರಹ, ಹಿಸ್ಟೀರಿಯಾ , 1987ರ ಆಗಸ್ಟ್ 3ರಂದು ಬಿಡುಗಡೆಯಾಯಿತು. ಯುಕೆ ಯಲ್ಲಿ, ಈ ಸಂಗ್ರಹದ ಮೊದಲ ಸಿಂಗಲ್ "ಅನಿಮಲ್", ಆರನೇ ಸ್ಥಾನ ತಲುಪಿ, ಅವರ ಮಾತೃ ರಾಷ್ಟ್ರದಲ್ಲಿ ಅವರ ಮೊದಲನೇ ಯಶಸ್ವೀ ಸಿಂಗಲ್ ಅನ್ನು ಅವರಿಗೆ ನೀಡಿತು. ಹಿಸ್ಟೀರಿಯ ತಕ್ಷಣವೇ, ಅದರ ಬಿಡುಗಡೆಯ ಮೊದಲನೇ ವಾರದಲ್ಲೇ, ಚಾರ್ಟುಗಳ ಮೇಲ್ಪಂಕ್ತಿಯನ್ನು ಸೇರಿತು. ಆದಾಗ್ಯೂ, ಯುಎಸ್ ನಲ್ಲಿ ಈ ಗೀತಸಂಗ್ರಹದ ಮಾರಾಟಗಳು ಕೊಂಚ ನಿಧಾನವಾಗಿತ್ತು (ಪೈರೋಮೇನಿಯ )ಗೆ ಹೋಲಿಸಿದಾಗ, ಅದರ ನಾಲ್ಕನೇ ಸಿಂಗಲ್, "ಪೌರ್ ಸಮ್ ಶುಗರ್ ಆನ್ ಮಿ"ಯ ಬಿಡುಗಡೆಯವರೆಗೂ. ಈ ಹಾಡು ಎರಡನೇ ಸಂಖ್ಯೆಯನ್ನು ತಲುಪಿತು, ಮತ್ತು ಕೊನೆಗೂ ಹಿಸ್ಟೀರಿಯ 1988ರ ಜುಲೈನಲ್ಲಿ ಯುಎಸ್ ಗೀತಸಂಗ್ರಹ ಚಾರ್ಟುಗಳ ಮೇಲಕ್ಕೆ ತಲುಪಿತು. "ಪೌರ್ ಸಂ ಶಶುಗರ್ ಆನ್ ಮಿ"ಯ ವೀಡಿಯೋ ಡಯಲ್ ಎಂಟಿವಿಯಲ್ಲಿ ಮೊದಲನೇ ಸಂಖ್ಯೆಯಲ್ಲಿತ್ತು, ಅದೂ ದಾಖಲೆ 73 ದಿನಗಳ ಕಾಲ (1988ರ ಮೇ 26 ರಿಂದ ಸೆಪ್ಟೆಂಬರ್ 5ರವರೆಗೆ). ಅಕ್ಟೋಬರ್ ನಲ್ಲಿ, ದ ಪವರ್ ಆಫ್ ಬಲ್ಲಾಡ್ "ಲವ್ ಬೈಟ್ಸ್", ಡೆಫ್ ಲೆಪ್ಪಾರ್ಡ್ ನ ಮೊದಲನೇ (ಮತ್ತು ಏಕೈಕ)ಬಿಲ್ಬೋರ್ಡ್ ಹಾಟ್ 100ರ ಮೇಲಿನ ನಂಬರ್ ಒನ್ ಸಿಂಗಲ್ ಆಗುವುದು ಮತ್ತು 1989ರ ಜನವರಿಯಲ್ಲಿ ತಂಡವು "ಆರ್ಮಗೆಡ್ಡಾನ್ ಇಟ್"ನೊಂದಿಗೆ ಇನ್ನೊಂದು ಯುಎಸ್ ಟಾಪ್ 5ಅನ್ನು ಸೇರಿತು.

ಹಿಸ್ಟೀರಿಯ ವು ಯುಎಸ್ ಹಾಟ್ ೧೦೦ ರಲ್ಲಿ ಏಳು ಅಥವಾ ಹೆಚ್ಚು ಸಿಂಗಲ್ ಗಳನ್ನು ಚಾರ್ಟ್ ಮಾಡಿದ ಕೆಲವೇ ಗೀತಸಂಗ್ರಹಗಳಲ್ಲಿ ಒಂದು (ಮತ್ತು ರಾಕ್ ಇತಿಹಾಸದಲ್ಲಿ ಮೂರನೆಯದು): "ವುಮೆನ್" (#80), "ಅನಿಮಲ್" (#19), "ಹಿಸ್ಟೀರಿಯ" (#10), "ಪೌರ್ ಸಂ ಶುಗರ್ ಆನ್ ಮಿ" (#2), "ಲವ್ ಬೈಟ್ಸ್" (#1), "ಆರ್ಮಗೆಡ್ಡಾನ್ ಇಟ್" (#3), ಮತ್ತು "ರಾಕೆಟ್" (#12). ಅದು ಮೂರು ವರ್ಷಗಳವರೆಗೆ ಚಾರ್ಟ್ ಗಳ ಮೇಲೆ ಉಳಿಯಿತು ಮತ್ತು ಜಗತ್ತಿನಾದ್ಯಂತ 18 ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿದೆ. ಸಮಾನವಾಗಿ ಯಶಸ್ವಿಯಾದುದೆಂದರೆ ಜೊತೆಯಲ್ಲೇ ಮಾಡಿದ ಹಿಸ್ಟೀರಿಯ ವಿಶ್ವ ಪ್ರವಾಸ. 15 ತಿಂಗಳವರೆಗೆ ನಡೆದ ೀ ಪ್ರವಾಸವು ಡೆಫ್ ಲೆಪ್ಪಾರ್ಡ್ "ಇನ್ ದ ರೌಂಡ್"ಅನ್ನು ಪ್ರದರ್ಶಿಸುವುದನ್ನು ಕಂಡಿತು. "ಪೋರ್ ಸಂ ಶುಗರ್ ಆನ್ ಮಿ" ಮತ್ತು ಆರ್ಮಗೆಡ್ಡಾನ್ ಇಟ್"ಗಾಗಿನ ವೀಡಿಯೋಗಳಲ್ಲಿ ತೋರಿದಂತೆ (ಮತ್ತು ನಂತರದಲ್ಲಿ ಅಡ್ರಿನಲೈಸ್ ನ ಪ್ರವಾಸಕ್ಕಾಗಿ ಮತ್ತೆ ಬಳಸಲಾದುದು), ಈ ಪರಿಕಲ್ಪನೆಯು ಅಭಿಮಾನಿಗಳ ನಡುವೆ ಉಗ್ರ ಜನಪ್ರಿಯತೆಯನ್ನು ಪಡೆಯಿತು.

1989ರಲ್ಲಿ ಅಮೇರಿಕನ್ ಸಂಗೀತ ಪ್ರಶಸ್ತಿಗಳ ಸಂದರ್ಭದಲ್ಲಿ ಡೆಫ್ ಲೆಪ್ಪಾರ್ಡ್, ಅಚ್ಚುಮೆಚ್ಚಿನ ಹೆಚಿ ಮೆಟಲ್ ಕಲಾವಿದ ಹಾಗೆಯೇ ಅಚ್ಚುಮೆಚ್ಚಿನ ಹೆಚಿ ಮೆಟಲ್ ಗೀತಸಂಗ್ರಹ ("ಹಿಸ್ಟೀರಿಯಾ" ಗಾಗಿ) ಪ್ರಶಸ್ತಿಗಳನ್ನು ಗೆದ್ದಿತು. ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿಗಳ ಪ್ರದರ್ಶನಕ್ಕೆ ಒಂದು ಹೆವಿ ಮೆಟಲ್ ವಿಭಾಗವನ್ನು ಸೇರಿಸಲಾಗಿತ್ತು. (ಈ ವಿಭಾಗವು ಅದರಿಂದ ನಂತರದಲ್ಲಿ ತೆಗೆಯಲ್ಪಟ್ಟಿದೆ.) ಆ ದಶಕದ ಕೊನೆಯ ವೇಳೆಗೆ, ಗನ್ಸ್ ನ್' ರೋಸಸ್, ಮೋಟ್ಲೇ ಕ್ರೂ, ಮತ್ತು ಬೋನ್ ಜೋವಿ ಹೆಚ್ಚು ಮುಖ್ಯವಾಹಿನಿಯ ಪ್ರಕಟಗೊಳಿಸುವಿಕೆಯನ್ನು ಪಡೆದಿತ್ತಾದರೂ, ಡೆಫ್ ಲೆಪ್ಪಾರ್ಡ್ 1980ರ ದಶಕದಲ್ಲಿ ಯುಎಸ್ ನಲ್ಲಿ ಯಾವುದೇ ರಾಕ್ ಸಂಗೀತ ತಂಡವು ಮಾರಾಟಮಾಡಿದ್ದಕ್ಕಿಂತ ಹೆಚ್ಚು ರೆಕಾರ್ಡುಗಳನ್ನು ಮಾರಿತ್ತು.

ದ ರಾಕ್ ಸರ್ವೈವರ್ಸ್(1990–1999)[ಬದಲಾಯಿಸಿ]

ಹಿಸ್ಟೀರಿಯ ದ ನಂತರ, ಇನ್ನೊಂದು ದೀರ್ಘವಾದ ಅಂತರವನ್ನು ತಡೆಯಲು ಇಚ್ಛಿಸಿ, ತಂಡವು ಬೇಗನೇ ಅವರ ಐದನೇ ಗೀತಸಂಗ್ರಹದ ಮೇಲೆ ಕೆಲಸ ಮಾಡಲು ಹೊರಟಿತು. ಆದರೆ, ಸ್ಟೀವ್ ಕ್ಲಾರ್ಕ್ಕುಡುಕತನವು ಎಷ್ಟು ಅಧ್ವಾನವನ್ನು ತಲುಪಿತೆಂದರೆ, ಅವನು ಸತತವಾಗಿ ಪುನರ್ವಸತಿಯ ಒಳಗೆ ಹೊರಗೆ ಆಗುತ್ತಿದ್ದನು. ಧ್ವನಿಗ್ರಹಣ ಅವಧಿಗಳು ಈ ವಿಘ್ನದಿಂದಾಗಿ ನರಳಿತು, ಮತ್ತು 1990ರ ಮಧ್ಯದಲ್ಲಿ ಸ್ಟೀವ್ ಗೆ ತಂಡದಿಂದ ಆರು ತಿಂಗಳ ಅನುಪಸ್ಥಿತಿಯ ರಜಾ ಅನುಮತಿಯನ್ನು ನೀಡಲಾಯಿತು. ಕ್ಲಾರ್ಕ್ ಅವನ ರಜೆಯ ಕೊನೆಯನ್ನು ತಲುಪಲೇ ಇಲ್ಲ. ಅವನು ತನ್ನ ಲಂಡನ್ ನ ಮನೆಯಲ್ಲಿ 1991ರ ಜನವರಿ 8ರಂದು ಔಷಧಿಗಳ ಮತ್ತು ಹೆಂಡದ ಆಕಸ್ಮಿಕ ಮಿಶ್ರಣದಿಂದಾಗಿ ಸಾವನ್ನಪ್ಪಿದನು. ತಂಡದ ಉಳಿದ ಸದಸ್ಯರು ಮುಂದುವರೆಯಲು ನಿರ್ಧರಿಸಿ, ನಾಲ್ಕರ ತುಂಡಾಗಿ ಗೀತಸಂಗ್ರಹವನ್ನು ಧ್ವನಿಗ್ರಹಣ ಮಾಡಿದರು - ಕೊಲ್ಲೆನ್ ಕ್ಲಾರ್ಕ್ ನ ಶೈಲಿಯನ್ನು ಅವನು ಉದ್ದೇಶಿಸಿದ ಗಿಟಾರ್ ಭಾಗಗಳಲ್ಲಿ ಅನುಕರಿಸಿದನು. ಡೆಫ್ ಲೆಪ್ಪಾರ್ಡ್ ನ ಐದನೆಯ ಗೀತಸಂಗ್ರಹ ಅಡ್ರಿನಲೈಝ್ , ಅಂತಿಮವಾಗಿ 1992ರ ಮಾರ್ಚ್ 31ರಂದು ಬಿಡುಗಡೆಗೊಂಡಿತು. ಈ ಗೀತಸಂಗ್ರಹವು ಒಮ್ಮೆಲೇ ಯುಕೆ ಮತ್ತು ಯುಎಸ್ ಗೀತಸಂಗ್ರಹ ಚಾರ್ಟುಗಳೆರಡನ್ನೂ ಮೊದಲ ಸ್ಥಾನದಲ್ಲಿ ಪ್ರವೇಶಿಸಿತು, ಮತ್ತು ಯುಎಸ್ ಚಾರ್ಟ್ ನಲ್ಲಿ ಐದು ವಾರಗಳವರೆಗೆ ಅದೇ ಸ್ಥಾನದಲ್ಲಿತ್ತು. ಮೊದಲ ಸಿಂಗಲ್ ಆದ "ಲೆಟ್ಸ್ ಗೆಟ್ ರಾಕ್ಡ್", ಒಂದು ದಿಢೀರ್ ಭಾರೀ ಹಿಟ್ ಆಯಿತು, ಮತ್ತು ಅದರ ವೀಡಿಯೋ ನಂತರದಲ್ಲಿ 1992ರ ಎಂಟಿವಿ ವೀಡಿಯೋ ಮ್ಯೂಸಿಕ್ ಅವಾರ್ಡ್ಸ್ನಲ್ಲಿ ವರ್ಷದ ಅತ್ಯುತ್ತಮ ವೀಡಿಯೋ ಪ್ರಶಸ್ತಿಗಾಗಿ ನಾಮನಿರ್ದೇಶಿತವಾಯಿತು.

1992ರ ಏಪ್ರಿಲ್ ನಲ್ಲಿ, ಮತ್ತೊಂದು ವಿಶ್ವ ಪ್ರವಾಸದ ನಂತರ ವಿವಿಯನ್ ಕ್ಯಾಂಪ್ಬೆಲ್ ತಂಡವನ್ನು ಸೇರಿದನು. ಆದರೆ, ತಂಡದ ಅದೃಷ್ಟವು ಗ್ರಂಜ್ ಮತ್ತು ಪರ್ಯಾಯ ರಾಕ್ ನ ಉತ್ಥಾನದಿಂದ ವ್ಯತ್ಯಾಸಗೊಂಡಿತು.

1984 ಮತ್ತು 1993ರ ನಡುವಿನ ಬಿ-ಸೈಡುಗಳ ಮತ್ತು ಬಿಡುಗಡೆಯಾಗದ ಟ್ರಾಕುಗಳ ಒಂದು ಸಂಗ್ರಹವು, ರೆಟ್ರೋ ಆಕ್ಟೀವ್ ಎಂಬ ಹೆಸರಿನೊಂದಿಗೆ 1993ರ ಅಕ್ಟೋಬರ್ ನಲ್ಲಿ ಬಿಡುಗಡೆಗೊಂಡಿತು. ಅದಕ್ಕೆ ಮುಂಚಿತವಾಗಿ (ಆರ್ನಾಲ್ಡ್ ಶ್ವಾಜನಗ್ಗೆರ್ಲಾಸ್ಟ್ ಆಕ್ಷನ್ ಹೀರೋ ಚಿತ್ರದ) "ಟೂ ಸ್ಟೆಪ್ಸ್ ಬಿಹೈಂಡ್" ಗೀತೆಯು ಯಶಸ್ಸು ಕಂಡಿತ್ತು. ಇನ್ನೊಂದು ಸಿಂಗಲ್, "ಮಿಸ್ ಯು ಇನ್ ಎ ಹಾರ್ಟ್ ಬೀಟ್", ಕನಡಾದಲ್ಲಿ ಟಾಪ್ 5ಅನ್ನು ಪ್ರವೇಸಿಸಿ, ಆ ಪ್ರಾಂತ್ಯದಲ್ಲಿನ ಅವರ ಅತ್ಯಂತ ದೊಡ್ಡ ಹಿಟ್ ಗಳಲ್ಲಿ ಒಂದಾಯಿತು. ಇಲ್ಲಿಯವರೆಗೆ ರೆಟ್ರೋ ಆಕ್ಟೀವ್ ಜಗತ್ತಿನಾದ್ಯಂತ 3 ಮಿಲಿಯನ್ ಪ್ರತಿಗಳು ಮಾರಾಟವಾಗಿದೆ. ಎರಡು ವರ್ಷಗಳ ನಂತರ, ಡೆಫ್ ಲೆಪ್ಪಾರ್ಡ್ ಅವರ ಮೊದಲ ಬಹುದೊಡ್ಡ ಹಿಟ್ ಗಳ ಸಂಗ್ರಹವನ್ನು ಬಿಡುಗಡೆ ಮಾಡಿದರು, Vault: Def Leppard Greatest Hits (1980–1995) ಮತ್ತು ಇದು ಜಗತ್ತಿನಾದ್ಯಂತ 8 ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿದೆ. ಉತ್ತರ ಅಮೇರಿಕ, ಯುಕೆ ಮತ್ತು ಜಪಾನ್ ಗಳಿಗಾಗಿ ಈ ಗೀತಸಂಗ್ರಹದ ಪರ್ಯಾಯ ಟ್ರಾಕ್ ಲಿಸ್ಟಿಂಗ್ ಗಳನ್ನು ಬಿಡುಗಡೆ ಮಾಡಲಾಗಿತ್ತು. ಸಂಗ್ರಹದಲ್ಲಿ ಒಂದು ಹೊಸ ಟ್ರಾಕ್ -ಎರಡನೇ ಸ್ಥಾನವನ್ನು ತಲುಪಿ ಯುಕೆಯಲ್ಲಿ ಎಂದೆಂದಿನ ದೊಡ್ಡ ಹಿಟ್ ಆದಂತಹ ಬಲ್ಲದ್, "ವೆನ್ ಲವ್ ಅಂಡ್ ಹೇಟ್ ಕೊಲ್ಲೈಡ್" ಸೇರಿತ್ತು. ಅದು ಯುಎಸ್ ನಲ್ಲಿ #58ಕ್ಕೇರಿತ್ತು.

1995ರ ಅಕ್ಟೋಬರ್ 23ರಂದು, ತಂಡವು ಒಂದೇ ದಿನದಲ್ಲಿ ಮೂರು ಖಂಡಗಳಲ್ಲಿ ಮೂರು ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರವೇಶಿಸಿತು(ಟ್ಯಾಂಜಿಯರ್ಸ್, ಮೊರೋಕ್ಕೋ; ಲಂಡನ್, ಇಂಗ್ಲೆಂಡ್; ಮತ್ತು ವ್ಯಾಂಕೋವರ್, ಕೆನಡಾ).

ಮೇ 1996ರಲ್ಲಿ ಬಿಡುಗಡೆಯಾದ ಸ್ಲ್ಯಾಂಗ್ ,ದಟ್ಟಛಾಯೆಯ ಗೀತೆಗಳು ಮತ್ತು ಕಡಿಮೆಗೊಳಿಸಿದ ಪರ್ಯಾರ ರಾಕ್ ಎಡ್ಜ್ ಗಳನ್ನು ಹೊಂದಿದ್ದು, ತಂಡದ ಮೊದಲಿನ ಸಂಗೀತದ ಪ್ರಕಾರದಿಂದ ತೀವ್ರತರವಾದ ನಿರ್ಗಮನವನ್ನು ಸೂಚಿಸಿತು. ಸ್ಲ್ಯಾಂಗ್ ಮತ್ತು ಅದರ ನಂತರದ ಪ್ರವಾಸಕ್ಕೆ ಯುಎಸ್ ಶ್ರೋತೃಗಳು ಒಂದು ದಶಕದ ಹಿಂದಿನದಕ್ಕಿಂತಲೂ ಬಹಳ ಕಡಿಮೆ ಅಪೇಕ್ಷೆ ವ್ಯಕ್ತಪಡಿಸಿದರಾದರೂ Q ಮ್ಯಾಗಝೈನ್ ಸ್ಲ್ಯಾಂಗ್ 1996ರ ಹತ್ತು ಶ್ರೇಷ್ಠ ಆಲ್ಬಂಗಳಲ್ಲಿ ಒಂದೆಂದು ಪಟ್ಟಿ ಮಾಡಿತು. ಈ ಆಲ್ಬಂ ರಿಕಿ ಆಲನ್ ಅಪಘಾತದ ನಂತರ, ಹಿಸ್ಟೀರಿಯಾದಲ್ಲಿ ಬಳಸಿದ್ದ ವಿದ್ಯುನ್ಮಾನ ಸೆಟ್ ನ ಬದಲಿಗೆ ಸೆಮಿ-ಅಕೌಸ್ಟಿಕ್ ಡ್ರಂ ವಾದನಗೈದು ರೆಕಾರ್ಡ್ ಮಾಡಿದ ಮೊದಲ ಪ್ರದರ್ಶನವಾಗಿತ್ತು

ಬಿಹೈಂಡ್ ದ ಮ್ಯೂಸಿಕ್ ನ ಮೊದಲ ಕಂತುಗಳಲ್ಲೊಂದರಲ್ಲಿ ಈ ತಂಡವನ್ನು ಪರಿಚಯಿಸುವುದರ ಮೂಲಕ VH1 1998ರಲ್ಲಿ ಈ ತಂಡದ ಭಾಗ್ಯದ ಬಾಗಿಲನ್ನು ಮತ್ತೆ ತೆರೆಯಿತು. ಇದನ್ನು ಮತ್ತೆ ಮತ್ತೆ ಪ್ರಸಾರ ಮಾಡಿದಾಗ ಕೆಲವು ಕಂತುಗಳು ಆ ಧಾರವಾಹಿಯ ಶ್ರೇಷ್ಠ ರೇಟಿಂಗ್ ಗಳನ್ನು ಪಡೆಯಿತು ಮತ್ತು ತಂಡದ ಸಂಗೀತವನ್ನು ಮತ್ತೆ ಸಾರ್ವಜನಿಕರ ಗಮನಕ್ಕೆ ತಂದಿತು(ಪರ್ಯಾಯ ರಾಕ್ ವಾತಾವರಣದಲ್ಲಿ ಹಲವಾರು ವರ್ಷ ಇದು ಹುದುಗಿಹೋಗಿತ್ತು). ಈ ಕಂತುಗಳ ಅಣಕವೂ ಸ್ಯಾಟರ್ಡೇ ನೈಟ್ ಲೈವ್ ನಲ್ಲಿ ಪ್ರದರ್ಶನಗೊಂಡಿತು. ಈ ಸಿಕ್ಕ ಅವಕಾಶವನ್ನು ಸದುಪಯೋಗಗೊಳಿಸಿಕೊಳ್ಳುವ ಸಲುವಾಗಿ ಡೆಫ್ ಲೆಪ್ಪಾರ್ಡ್ ತನ್ನ ಶಾಸ್ತ್ರೀಯ ಸಂಗೀತಕ್ಕೆ 1999ರ ಆಲ್ಬಂ ಆದ ಯೂಫೋರಿಯಾ ಮೂಲಕ ಮರಳಿತು. ಮೊದಲ ಸಿಂಗಲ್ ಆದ "ಪ್ರಾಮಿಸಸ್" ತಂಡವನ್ನು ಮಟ್ ಲಾಂಜೆಯೊಂದಿಗೆ ಪುನರ್ಮಿಲನಗೈಸಿತು ಮತ್ತು US ಮುಖ್ಯವಾಹಿನಿಯ ರಾಕ್ ಪಟ್ಟಿಗಳಲ್ಲಿ ಮೂರು ವಾರಗಳ ಕಾಲ ಮೊದಲನೆಯ ಸ್ಥಾನವನ್ನು ಅಲಂಕರಿಸಿತು. US ಮತ್ತು ಕೆನಡಾಗಳಲ್ಲಿ ಈ ಆಲ್ಬಂ ಅನ್ನು ಚಿನ್ನ ಎಂದು ಪ್ರಮಾಣೀಕರಿಸಲಾಯಿತು.

ಹೊಸದಾಗಿ ಬಂದ ಜನಪ್ರಿಯತೆ (2000–2007)[ಬದಲಾಯಿಸಿ]

5ನೆಯ ಸೆಪ್ಟೆಂಬರ್ 2000ದಂದು, ಡೆಫ್ ಲೆಪ್ಪಾರ್ಡ್ ಅನ್ನು ಹಾಲಿವುಡ್ಸನ್ಸೆಟ್ ಬೋಲೆವಾರ್ಡ್ ನಲ್ಲಿರುವ ದ ರಾಕ್ ವಾಕ್ ಆಫ್ ಫೇಮ್ ಗೆ ತಂಡದ ಸ್ನೇಹಿತ,ಕ್ವೀನ್ಬ್ರಿಯಾನ್ ಮೇಯಿಂದ ಪರಿಚಯಿಸಲಾಯಿತು.

2001ರಲ್ಲಿ, VH1 ಹಿಸ್ಟೀರಿಯಾ - ದ ಡೆಫ್ ಲೆಪ್ಪಾರ್ಡ್ ಸ್ಟೋರಿ  ಎಂಬ ಒಂದು ಜೀವನಕಥನಚಿತ್ರವನ್ನು ನಿರ್ಮಾಣ ಮಾಡಿ, ಪ್ರಸಾರ ಮಾಡಿತು;  ಈ ಚಿತ್ರದಲ್ಲಿ ಆಂಥೋನಿ ಮೈಕಲ್ ಹಾಲ್ ಮಟ್ ಲಾಂಜೆಯಾಗಿ ಮತ್ತು ಆಂಬರ್ ವ್ಯಾಲೆಟ್ಟಾ ಲೋರೆಲ್ಲೀ ಷೆಲ್ಲಿಸ್ಟ್ ಆಗಿ(ಸ್ಟೀವ್ ಕ್ಲಾರ್ಕ್ ನ ಗೆಳತಿ)ಪಾತ್ರವಹಿಸಿದರು.
ಈ ಸಾಕ್ಷ್ಯನಾಟಕವು ತಂಡದ ಚರಿತ್ರೆಯನ್ನು 1977ರಿಂದ 1986ರವರೆಗೆ ಬಿಂಬಿಸಿ, ರಿಕ್ ಆಲನ್ ಮತ್ತು ಸ್ಟೀವ್ ಕ್ಲಾರ್ಕ್ ರ ನೋವುಗಳು ಹಾಗೂ ನಲಿವುಗಳನ್ನು ಮರುಸ್ಮರಿಸಿದೆ. 

ಜುಲೈ 18ರಂದು ಪ್ರಸಾರವಾದ ಈ ಚಿತ್ರವು ಚಾನಲ್ ನ ಹಲವು ಗರಿಷ್ಠ ರೇಟಿಂಗ್ ಪಡೆದ ಕಾರ್ಯಕರ್ಮಗಳಲ್ಲಿ ಒಂದಾಗಿದ್ದು, DVD ರೂಪದಲ್ಲಿ ಲಭ್ಯವಿದೆ.

ಡೆಫ್ ಲೆಪ್ಪಾರ್ಡ್ ನ ಹತ್ತನೆಯ ಆಲ್ಬಂ, X , ತಂಡವು ತನ್ನ ಹಾರ್ಡ್ ರಾಕ್ ಮೂಲಗಳಿಂದ ಹೊರಹೋಗಿ ಪಾಪ್ ನತ್ತ ಸಾಗುತ್ತಿರುವುದನ್ನು ಸೂಚಿಸಿತು.

ಸಾಮಾನ್ಯವಾಗಿ ಒಳ್ಳೆಯ ವಿಮರ್ಶೆಗಳನ್ನೇ ಪಡೆದರೂ, X  ಬೇಗ ಪಟ್ಟಿಗಳಿಂದ ಮಾಯವಾಗಿ, ಕಡೆಗೆ ತಂಡ ಕಂಡ ಕನಿಷ್ಠ ಯಶ ಗಳಿಸಿದ ಬಿಡುಗಡೆಯಾಯಿತು.
ಆದರೆ ಅದರೊಡನೆ ಕೈಗೊಂಡ ಪ್ರವಾಸವು ಅಡ್ರೆನಲೈಝ್  ಕಾಲದ ನಂತರ ತಂಡದ ಘನ ಆಭಿಮಾನಿ ಶ್ರೋತೃಗಳಿಗೆ ಪ್ರದರ್ಶನ ನೀಡಿತು.

ಒಂದು ವಿಸ್ತರಿತ ಮತ್ತು ಅಂದಿನವರೆಗೆ ಪ್ರಸ್ತುತವಾದ ಬೆಸ್ಟ್-ಆಫ್ ಸಂಗ್ರಹವಾದ, ಬೆಸ್ಟ್ ಆಫ್ ಅಂತರರಾಷ್ಟ್ರೀಯವಾಗಿ ಅಕ್ಟೋಬರ್ 2004ರಲ್ಲಿ ಬಿಡುಗಡೆ ಮಾಡಲಾಯಿತು. ಉತ್ತರ ಅಮೆರಿಕದ-ಒಂದೇ ಆವೃತ್ತಿ, ರಾಕ್ ಆಫ್ ಏಜಸ್- ದ ಡೆಫೆನಿಟಿವ್ ಕಲೆಕ್ಷನ್ , ಮರು ಮೇನಲ್ಲಿ ಬಿಡುಗಡೆ ಕಂಡಿತು. ಡೆಫ್ ಲೆಪ್ಪಾರ್ಡ್ ಲೈವ್ 8 ಎಂಬ ಫಿಲಡೆಲ್ಫಿಯಾದಲ್ಲಿ ನಡೆಯುವ ಪ್ರದರ್ಶನದಲ್ಲಿ ಪಾಲ್ಗೊಂಡಿತು ಮತ್ತು ಆ ಬೇಸಿಗೆಯಲ್ಲಿ ಬ್ರಿಯಾನ್ ಆಡಮ್ಸ್ ರೊಡನೆ ಪ್ರವಾಸ ಕೈಗೊಂಡಿತು. 2005ರಲ್ಲಿ, ತಂಡವು ತಮ್ಮ ದೀರ್ಘಕಾಲಿಕ ವ್ಯವಸ್ಥಾಪಕ ತಂಡವಾದ Q-ಪ್ರೈಂ ಅನ್ನು ತೊರೆಯಿತು ಮತ್ತು HK ಮ್ಯಾನೇಜ್ಮೆಂಟ್ ನೊಡನೆ ಸಹಿ ಹಾಕಿತು.

23ನೆಯ May 2006ರಂದು, ಡೆಫ್ ಲೆಪ್ಪಾರ್ಡ್ ಯೀಹ್! ಎಂಬ ಶೀರ್ಷಿಕೆ ಹೊತ್ತ ಸಕಲ-ಕವಚಗಳ ಆಲ್ಬಂ ಅನ್ನು ಬಿಡುಗಡೆ ಮಾಡಿತು. ಈ ಡಿಸ್ಕ್ ತಮ್ಮ ಬಾಲ್ಯದಲ್ಲಿನ ಶಾಸ್ತ್ರೀಯ ರಾಕ್ ಹಾಡುಗಳನ್ನು ಸ್ಮರಿಸುತ್ತದೆ; ಮೊದಲಿಗೆ ಅದರ ರೆಕಾರ್ಡ್ ಮಾಡಿದವರು ಬ್ಲಾಂಡೀ, ದ ಕಿಂಕ್ಸ್, ಸ್ವೀಟ್, ELO, ಮತ್ತು ಬ್ಯಾಡ್ ಫಿಂಗರ್ ಹಾಗೂ ಇತರರು. ಅದು ಯುಎಸ್ ನಲ್ಲಿ #16ರಲ್ಲಿ ಆರಂಭಗೊಂಡಿತು; ಇದು ಅವರ ಹತ್ತನೆಯ ಸತತ ಶ್ರೇಷ್ಠ 20 ಆಲ್ಬಂಗಳಲ್ಲಿ ಒಂದಾಗಿತ್ತು ಮತ್ತು ಇಂದಿನವರೆಗೆ 140,000ಕ್ಕೂ ಹೆಚ್ಚಿನ ಪ್ರತಿಗಳು ಮಾರಾಟಗಾಗಿವೆ.

ಈ ತಂಡವು, ಕ್ವೀನ್, ಕಿಸ್, ಮತ್ತು ಜುದಾಸ್ ಪ್ರೀಸ್ಟ್ ರೊಂದಿಗೆ, 31ನೆಯ ಮೇ 1006ರಂದು "VH1 ರಾಕ್ ಆನರ್ಸ್" ನ ಮೂರು ಮೊದಲನೆಯ ಪರಿಚಯಗೊಳಿಸಲ್ಪಟ್ಟ ತಂಡಗಳಾದವು. ಪ್ರದರ್ಶನದ ವೇಳೆಯಲ್ಲಿ, ಆಲ್-ಅಮೆರಿಕನ್ ರಿಜೆಕ್ಟ್ಸ್ "ಫೋಟೋಗ್ರಾಫ್"ನ ಒಂದು ಹೊರಹೊದಿಕೆಯನ್ನು ನೀಡುವುದರ ಮೂಲಕ ಈ ತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಕೆಲವೇ ಸಮಯದಲ್ಲಿ, ಜರ್ನಿಯೊಂದಿಗೆ ಅವರು ಒಂದು ಅಮೆರಿಕ ಪ್ರವಾಸಕ್ಕೆ ಹೊರಟರು. ಆ ಅಕ್ಟೋಬರ್ ನಲ್ಲಿ ಹಿಸ್ಟೀರಿಯಾ ಎರಡು-ಡಿಸ್ಕ್ ಗಳ ಡಿಲಕ್ಸ್ ಆವೃತ್ತಿಯ ವಿಧದಲ್ಲಿ ಮರುಬಿಡುಗಡೆ ಮಾಡಲಾಯಿತು; ಇದರಲ್ಲಿ ಅಸಲಿ ಮರುಮಾಸ್ಟರ್ ಮಾಡಿದ ಆಲ್ಬಂ ಮತ್ತು ಬಿ-ಪಾರ್ಶ್ವಗಳು, ಮರುಸಂಕಲನಗಳು, ಮತ್ತು ಸಿಂಗಲ್ ಬಿಡುಗಡೆಗಳಿಂದ ಬೋನಸ್ (ಹೆಚ್ಚುವರಿ)ಗೀತೆಗಳನ್ನು ನೀಡಲಾಯಿತು. ಡೆಫ್ ಲೆಪ್ಪಾರ್ಡ್ ತನ್ನ "ಡೌನ್ ಸ್ಟೇಜ್ ಥ್ರಸ್ಟ್ ಟೂರ್" ಅನ್ನು ಜೂನ್ 29ರಂದು ಆರಂಭಿಸಿ, ಯುಎಸ್ ನ ಅಡ್ಡಗಲ ಪ್ರವಾಸ ಮಾಡಿ ಕೆನಡಾ ತಲುಪಿತು. ಬೆಂಬಲಿಸಿದ ತಂಡಗಳು ಫಾರಿನರ್ ಮತ್ತು ಸ್ಟಿಕ್ಸ್.

ಇತ್ತೀಚಿನ ಘಟನೆಗಳು (2008-ಈಗಿನವರೆಗೆ)[ಬದಲಾಯಿಸಿ]

2008ರ ಸ್ವೀಡನ್ ರಾಕ್ ಉತ್ಸವದಲ್ಲಿ ಡೆಫ್ ಲೆಪ್ಪಾರ್ಡ್

ಸಾಂಗ್ಸ್ ಫ್ರಂ ದ ಸ್ಪಾರ್ಕಲ್ ಲೌಂಜ್ ಎಂಬ ಶೀರ್ಷಿಕೆ ಹೊತ್ತ ಈ ತಂಡದ ಹೊಸ ಆಲ್ಬಂ ಅನ್ನು , ವಿಶ್ವದಾದ್ಯಂತ 28 ಏಪ್ರಿಲ್ 2008ರಂದು ಮತ್ತು ಜಪಾನ್ ನಲ್ಲಿ 30 ಏಪ್ರಿಲ್ 2008ರಂದು ಬಿಡುಗಡೆ ಮಾಡಲಾಯಿತು. ಈ ಆಲ್ಬಂ ಚೊಚ್ಚಲಿನಲ್ಲೇ ಅಮೆರಿಕದ ಬಿಲ್ ಮೋರ್ಡ್ 200 ರಲ್ಲಿ #5 ಸ್ಥಾನವನ್ನು ಗಿಟ್ಟಿಸಿಕೊಂಡಿತು. ಇದರಲ್ಲಿನ ಮೊದಲ ಸಿಂಗಲ್ "ನೈನ್ ಲೈವ್ಸ್" ಎಂದು ಹೆಸರಿಸಲಾಗಿದೆ ಮತ್ತು ಜನಪದ ಗಾಯಕ ಟಿಮ್ ಮೆಕ್ ಗ್ರಾ ರನ್ನು ಒಳಗೊಂಡಿದೆ; ಅವರು ಈ ಹಾಡನ್ನು ಜೋ ಎಲಿಯಾಟ್, ಫಿಲ್ ಕಾಲ್ಲೆನ್ ಮತ್ತು ರಿಕ್ ಸ್ಯಾವೇಜ್ ರೊಡಗೂಡಿ ಬರೆದರು.

ಒಂದು ಪ್ರವಾಸವು ಈ ಆಲ್ಬಂ ಅನ್ನು ಬೆಂಬಲಿಸಲೆಂದೇ 27 ಮಾರ್ಚ್ 2008ರಂದು in ಗ್ರೀನ್ಸ್ಬರೋ, NC,ಯಿಂದ ಆರಂಭವಾಯಿತು;[೬] ಜೊತೆಗೆ ಸ್ಟಿಕ್ಸ್ ಮತ್ತು REO ಸ್ಪೀಡ್ ವ್ಯಾಗನ್ US ದಿನಾಂಕಗಳಂದು ಈ ತಂಡವನ್ನು ಸೇರಿದರು. ಈ ತಂಡವು ಹಲವಾರು ಯೂರೋಪಿಯನ್ ಉತ್ಸವಗಳಲ್ಲಿಯೂ ಪ್ರದರ್ಶನ ನೀಡಿತು. ಯುಕೆಯ ಒಂದು ಕಾರ್ಯಕ್ಷೇತ್ರಗಳ ಪ್ರವಾಸವನ್ನು ಜೂನ್ ತಿಂಗಳಲ್ಲಿ ಕೈಗೊಳ್ಳಲಾಗಿ, ಈ ತಂಡವು ವೈಟ್ ಸ್ನೇಕ್ ನೊಡನೆ ಶೀರ್ಷಿಕೆಗಳನ್ನು ಹಂಚಿಕೊಂಡಿತು ಹಾಗೂ ದಕ್ಷಿಣ ಯುಎಸ್ ನ ರಾಕರ್ ಗಳಾದ ಬ್ಲ್ಯಾಕ್ ಸ್ಟೋನ್ ಚೆರ್ರಿ ಯಿಂದ ಬೆಂಬಲಿತವಾಯಿತು. ತಂಡವು ನಂತರ ಯೂರೋಪ್ ಗೆ ಮರಳಿ, ಮತ್ತೆ ಜೂನ್ ನಲ್ಲಿ ಯುಕೆ ಎರಡನೆಯ ಬಾರಿಗೆ ಪ್ರವಾಸಗೈದಿತು. ಈ ಪ್ರವಾಸದ ಮೊದಲ ದಿನಾಂಕವು ಗ್ಲ್ಯಾಸ್ಗೋದ SECC ಯಲ್ಲಿನ ಪ್ರದರ್ಶನದ 17ನೆಯ ಜೂನ್ ಆಗಿತ್ತು. ಮತ್ತೆ ವೈಟ್ ಸ್ನೇಕ್ ಅವರನ್ನು ಕೂಡಿತು; ಆದರೆ ಹಾರ್ಡ್ ರಾಕ್ ತಂಡವಾದ ಥಂಡರ್ ಕೆಲವು ಪ್ರದರ್ಶನಗಳಲ್ಲಿ ಬೆಂಬಲ ನೀಡಿತು. ಬ್ಲ್ಯಾಕ್ ಸ್ಟೋನ್ ಚೆರಿ, ಕೆಲವು ಥಂಡರ್ ದಿನಗಳನ್ನೂ ಸೇರಿದಂತೆ, ಬಹುತೇಕ ದಿನಗಳು ಬೆಂಬಲವಿತ್ತಿತು. ಜೋ ಎಲಿಯಾಟ್ ಮತ್ತು ಫಿಲ್ ಕಾಲ್ಲೆನ್ ಅಸ್ವಸ್ಥರಾಗಿದ್ದುದರಿಂದ ರದ್ದಾಗಿದ್ದ USA/ಕೆನಡಾ ಭಾಗದ ತಮ್ಮ ವಿಶ್ವಪ್ರವಾಸದ ದಿನಗಳ ಆರು ಕಾರ್ಯಕ್ರಮಗಳನ್ನು ಮರುಯೋಜಿಸಿ ಆ ಆಗಸ್ಟ್ ನಲ್ಲಿ ನೀಡುವುದೆಂದಾಯಿತು. ಜೂನ್ 11ರಂದು, ಡೆಫ್ ಲೆಪ್ಪಾರ್ಡ್ ತಮ್ಮ 2008ರ ವಿಶ್ವಪ್ರವಾಸದ ಮುಂದಿನ ದಿನಾಂಕಗಳನ್ನು ಘೋಷಿಸಿದರು. ಈ ವಿಸ್ತರಣೆಯಿಂದ ಅವರು ಜಪಾನ್, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಗಳಿಗೆ ಭೇಟಿಯಿತ್ತಂತಾಯಿತು. ವೈಟ್ ಸ್ನೇಕ್ ಅವರ ಜಪಾನ್ ಮತ್ತು ಭಾರತದ ದಿನಾಂಕಗಳಿಗೆ ತಮ್ಮ ಬೆಂಬಲವನ್ನು ಮುಂದುವರಿಸಿದರು. ಡೆಫ್ ಲೆಪ್ಪಾರ್ಡ್ 41 ಯುಎಸ್ ರಾಜ್ಯಗಳು ಮತ್ತು ಟೋರೊಂಟೋ, ಕೆನಡಾಗಳಿಗೆ ತಮ್ಮ 2009ರ ಬೇಸಿಗೆಯ ಪ್ರವಾಸದಲ್ಲಿ ಭೇಟಿಯಿತ್ತರು ಹಾಗೂ ವೈಟ್ ಸ್ನೇಕ್ ಮತ್ತು ZZ ಟಾಪ್ ತಂಡಗಳೊಡನೆ ಡೌನ್ ಲೋಡ್ ಉತ್ಸವದಲ್ಲೂ ಪ್ರದರ್ಶನವಿತ್ತರು.

ಅಕ್ಟೋಬರ್ 2008ರಲ್ಲಿ ಡೆಫ್ ಲೆಪ್ಪಾರ್ಡ್ ಜನಪದ ಮೇರುತಾರೆ ಟೈಲರ್ ಸ್ವಿಫ್ಟ್ ರೊಡನೆ ರೆಕಾರ್ಡ್ ಮಾಡಲ್ಪಟ್ಟ ಪ್ರದರ್ಶನವೊಂದನ್ನು ನ್ಯಾಷ್ ವಿಲ್ಲ, ಟೆನೆಸ್ಸಿಯಲ್ಲಿ ನೀಡಿದರು; ಈ ಪ್ರದರ್ಶನದ ಹೆಸರು ಚಮತ್ ಕ್ರಾಸ್ ರೋಡ್ಸ್: ಡೆಫ್ ಲೆಪ್ಪಾರ್ಡ್ ಎಂಡ್ ಟೈಲರ್ ಸ್ವಿಫ್ಟ್ ಎಂದು. ಇದು DVDಯ ರೂಪದಲ್ಲಿ 16ನೆಯ ಜೂನ್ 1009ರಂದು ಕೇವಲ ವಾಲ್-ಮಾರ್ಟ್ ನಲ್ಲಿ ಮಾತ್ರ ಬಿಡುಗಡೆಗೊಂಡಿತು.[೭] ಈ ಬಿಡುಗಡೆಯು ಆ ವಾರದ ಅತಿ ಹೆಚ್ಚು ಮಾರಾಟವಾದ DVDಯಾಯಿತು, ಹಾಗೂ ವಾಲ್-ಮಾರ್ಟ್ ನ 10ನೆಯ ಅತ್ಯುತ್ತಮ ಮಾರಾಟ ಕಂಡ DVD ಆಯಿತು.[೮] ಟೈಲರ್ ಸ್ವಿಫ್ಟ್ ಮತ್ತು ಡೆಫ್ ಲೆಫ್ಫಾರ್ಡ್ ರ "ಫೋಟೋಗ್ರಾಫ್" ಗಾಯನವು 2009ರ ವರ್ಷದ ಶ್ರೇಷ್ಠ ಪ್ರದರ್ಶನ ವರ್ಷದ ವೈಡ್ ಓಪನ್ ಕಂಟ್ರಿ ವಿಡಿಯೋ CMT ಸಂಗೀತ ಪ್ರಶಸ್ತಿಗೆ ನಾಮನಿರ್ದೇಶನವನ್ನು ತಂದುಕೊಟ್ಟಿತು.[೯] ಟೈಲರ್ ಸ್ವಿಫ್ಟ್ ಆ ಕಾರ್ಯಕ್ರಮದ ಬಗ್ಗೆ ಇಂತೆಂದರು:"ಡೆಫ್ ಲೆಪ್ಪರ್ಡ್ ರೊಂದಿಗೆ ಕಾರ್ಯಕ್ರಮ ನೀಡುವುದು ಅದ್ಭುತವಾಗಿತ್ತು! ಅವರು ಈ ಗ್ರಹದ ಮೇಲಿನ ಬಲು ತಂಪಿನ ವ್ಯಕ್ತಿಗಳು! ನನ್ನ ತಂಡವನ್ನು ಅವರೊಂದಿಗೆ ವೇದಿಕೆಯಲ್ಲಿ ಹೊಂದುವಂತಹುದು ಬಹಳ ಶ್ರೇಷ್ಠವೆನಿಸಿತು...ಅದು ಜಗದಲ್ಲೇ ವಿಶಿಷ್ಟವಾದ ಅನುಭವವಾಗಿತ್ತು..."[೧೦] ಡೆಫ್ ಲೆಪ್ಪಾರ್ಡ್ ನ ಜೋ ಎಲಿಯಾಟ್ ಇಂತೆಂದರು:"ಶ್ರೇಷ್ಠ ಸಂಗೀತಗಾರರು ಜೊತೆಗೂಡಿರುವ ಟೈರಲ್ ಳ ತಂಡ ಮತ್ತು ಟೈಲರ್ ಳೊಡನೆ ಕಾರ್ಯಕ್ರಮ ನೀಡುವುದು ಬಹಳ ಸಂತೋಷದಾಯಕವಾಗಿತ್ತು. ನಾನು ಮತ್ತು ಟೈಲರ್ ಸೊಗಸಾಗಿ ಮೇಳೈಸಿದೆವು ಎಂದುಕೊಳ್ಳುತ್ತೇನೆ, ಹಾಗೂ ಎಲ್ಲರೂ, ತಂಡಗಳು ಮತ್ತು ಸಭಿಕರನ್ನೊಳಗೊಂಡಂತೆ, ಸುಸಮಯವನ್ನು ಕಳೆದೆವು. ಈ ಅವಕಾಶ ದೊರೆತದ್ದು ನನಗೆ ಬಹಳ ಸಂತಸವಾಗಿದೆ."[೧೧]

ಅಕ್ಟೋಬರ್ 2009ರಲ್ಲಿ ಈ ತಂಡವು 2009ರ ಉತ್ತರ ಅಮೆರಿಕ ಪ್ರವಾಸದ ಕೊನೆಯ ಘಟ್ಟದ ಒಟ್ಟು 23 ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿರುವುದಾಗಿ ಘೋಷಿಸಿತು. ತಂಡವು "ಕಲ್ಪಿಸಲಾಗದಿದ್ದ ವೈಯಕ್ತಿಕ ವಿಷಯಗಳು" ಈ ರದ್ದತಿಗೆ ಕಾರಣವೆಂದು ಹೇಳಿತು.[೧೨] ತಂಡವು ಭಿನ್ನವಾಗುತ್ತಿದೆ ಎಂಬ ಗಾಳಿಸುದ್ದಿಯನ್ನು ಅಲ್ಲಗಳೆಯುತ್ತಾ, "ನಾವು ಬೇರೆಯಾಗುತ್ತಿಲ್ಲ. ಖಂಡಿತ ಇಲ್ಲ. ನಾವು ಆಗಾಗ್ಗೆ ಹಾಸ್ಯ ಮಾಡುತ್ತೇವೆ, ನಾವು ಇನ್ನೇನು ತಾನೆ ಮಾಡಿಯೇವು? ಬೇರೆನನ್ನಾದರೂ ಮಾಡುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ." ಎಂದಿತು.[೧೩] ಈ ತಂಡವು ಪ್ರತಿ ಪ್ರದರ್ಶನಕ್ಕೆ $700,000 ಸಂಪಾದಿಸುತ್ತಿತ್ತು, ಹಾಗೂ ತಂಡವನ್ನು ಆ ಪ್ರವಾಸದಲ್ಲಿನ ಶ್ರೇಷ್ಠ 20 ಪ್ರದರ್ಶನಗಳ ಮಟ್ಟದಲ್ಲಿ ಇರಿಸಲಾಗಿತ್ತು.[೧೨] ಡೆಫ್ ಲೆಪ್ಪಾರ್ಡ್ ನ ಜಾಲತಾಣದ ಪ್ರಕಾರ, ತಂಡವು 2011ರವರೆಗೆ ಮತ್ತೆ ಪ್ರವಾಸ ಕೈಗೊಳ್ಳುವುದಿಲ್ಲ.[೧೪]

ಡೆಫ್ ಲೆಪ್ಪಾರ್ಡ್ ತನ್ನ ಹಿಂದಿನ ಆಲ್ಬಂಗಳನ್ನು ಮೊದಲ ಬಾರಿಗೆiಟ್ಯೂನ್ಸ್ ನಲ್ಲಿ 2010ರಲ್ಲಿ ಬಿಡುಗಡೆ ಮಾಡಲಿದೆ.[೧೩] ತಮ್ಮ ಸಂಗೀತವನ್ನು iಟ್ಯೂನ್ಸ್ ನಲ್ಲಿ ಬಿಡುಗಡೆ ಮಾಡಲು ಒಪ್ಪದ ತಂಡಗಳಾದ AC/DC, ದ ಬೀಟಲ್ಸ್, ಗಾರ್ಥ್ ಬ್ರೂಕ್ಸ್, ಮತ್ತು ಟೂಲ್ ಗಳು ಡೆಫ್ ಲೆಪ್ಪಾರ್ಡ್ ಜೊತೆಗೂಡಿವೆ.[೧೫]

ಸಂಗೀತ ಶೈಲಿ ಮತ್ತು legacy[ಬದಲಾಯಿಸಿ]

ಡೆಫ್ ಲೆಪ್ಪಾರ್ಡ್ ನ ಸಂಗೀತವು is a mixture of ಹಾರ್ಡ್ ರಾಕ್, ಆಲ್ಬಂ-ಓರಿಯೆಂಟೆಡ್ ರಾಕ್ (AOR), ಮತ್ತು ಹೆವಿ ಮೆಟಲ್ ವಸ್ತುಗಳ ಮಿಶ್ರಣವಾಗಿದ್ದು, ವಿವಿಧ-ಸ್ತರಗಳುಳ್ಳ, ಇಂಪಾದ ಗಾಯನಗಳು ಮತ್ತು ಮಧುರವಾದ ಗಿಟಾರ್ ಭಿನ್ನತೆಗಳನ್ನು ಹೊಂದಿದೆ.

ಆದರೆ, 1970ರ ದಶಕದ ಅಂತ್ಯಭಾಗದ ನ್ಯೂ ವೇವ್ ಆಫ್ ಬ್ರಿಟಿಷ್ ಹೆವಿ ಮೆಟಲ್ ಚಳುವಳಿಯಲ್ಲಿ ತೊಡಗಿಕೊಂಡ ಶ್ರೇಷ್ಠ ತಂಡಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದರೂ, 1980ರ ಮಧ್ಯಭಾಗದಲ್ಲಿ ಈ ತಂಡವನ್ನು ತಪ್ಪಾಗಿ ಗ್ಲ್ಯಾಮ್ ಮೆಟಲ್ ಚಿತ್ರಣದೊಂದಿಗೆ ಸೇರಿಸಲ್ಪಟ್ಟಿತ್ತು; ಇದಕ್ಕೆ ಮೂಲ ಕಾರಣ ಅವರ ಮುಖ್ಯವಾಹಿನಿಯ ಯಶ ಮತ್ತು ಥಳಗುಟ್ಟುವ ಉತ್ಪಾದನೆಗಳಾಗಿದ್ದವು. ಪ್ರತಿಹೇಳಿಕೆ ನೀಡುತ್ತಾ ಡೆಫ್ ಲೆಪ್ಪಾರ್ಡ್ "ಗ್ಲ್ಯಾಮ್ ಮೆಟಲ್" ಹಣೆಪಟ್ಟಿಯ ಬಗ್ಗೆ ತಮಗೆ ಇರುವ ಅಯಿಚ್ಛೆಯನ್ನು ವ್ಯಕ್ತಪಡಿಸುತ್ತಾ, ಅದು ತಮ್ಮ ಇರುವಿಕೆ ಅಥವಾ ಸಂಗೀತದ ಶೈಲಿಯನ್ನು ಸೂಕ್ತವಾಗಿ ವರ್ಣಿಸುವುದಿಲ್ಲ ಎಂದು ತಂಡವು ಹೇಳಿತು.[೧೬]

ಹಿಸ್ಟೀರಿಯಾ ಆಲ್ಬಂ ಬಿಡುಗಡೆ ಮಾಡುವುದರೊಂದಿಗೆ, ತಂಡವು ಎಲೆಕ್ಟ್ರಾನಿಕ್ ಡ್ರಂಗಳು ಮತ್ತು ವಿವಿಧ ಪ್ರಕಾರ-ಪ್ರಭಾವಗಳಿಂದ ತುಂಬಿದ ಗಿಟಾರ್ ಸದ್ದುಗಳು, ಇದರ ಮೇಲೆ ಬಹುಸ್ತರದ ಇಂಪಾದ, ಮೇಳೈಕೆಯುಳ್ಳ ಗಾಯನಗಳಿಂದ ಕೂಡಿದ ನವೀನ ಹಾಗೂ ವಿಶಿಷ್ಟ ಮಾಧುರ್ಯವನ್ನೇ ವೃದ್ಧಿಗೊಳಿಸಿತು. ಯುಎಸ್ ನಲ್ಲಿ ಎರಡು ಅಸಲಿ ಸ್ಟುಡಿಯೋ ಆಲ್ಬಂಗಳು ತಲಾ 10 ಮಿಲಿಯನ್ ಗಿಂತಲೂ ಹೆಚ್ಚು ಪ್ರತಿಗಳ ಮಾರಾಟವಾದ ಕೇವಲ ಐದು ರಾಕ್ ತಂಡಗಳಲ್ಲಿ ಡೆಫ್ ಲೆಪ್ಪಾರ್ಡ್ ಒಂದಾಗಿದೆ. ಇತರ ತಂಡಗಳೆಂದರೆ ದ ಬೀಟಲ್ಸ್, ಲೆಡ್ ಝೆಪ್ಪೆಲಿನ್, ಪಿಂಕ್ ಫ್ಲಾಯ್ಡ್ ಮತ್ತು ವ್ಯಾನ್ ಹ್ಯಾಲೆನ್.[೧೭]


ವಾದ್ಯ-ವೃಂದದ ಸದಸ್ಯರು[ಬದಲಾಯಿಸಿ]

ಈಗಿನ ಸದಸ್ಯರು[ಬದಲಾಯಿಸಿ]

ಹಿಂದಿನ ಸದಸ್ಯರು[ಬದಲಾಯಿಸಿ]

ಪ್ರವಾಸಿ ಸಂಗೀತಗಾರರು[ಬದಲಾಯಿಸಿ]

  • ಜೆಫ್ ರಿಚ್ – ಡ್ರಂಗಳು, ಕರ್ಕಶ (ಆಗಸ್ಟ್ 1986 – ರಿಕ್ ಆಲನ್ ಬದಲಿಗೆ)

ಜೊತೆಯ ಯೋಜನೆಗಳು[ಬದಲಾಯಿಸಿ]

ಸ್ಯಾಂ ಕಿನಿಸನ್ ರ "ವೈಲ್ಡ್ ಥಿಂಗ್" ಗೆ, ಹೆಸರನ್ನು ಉಲ್ಲೇಖಿಸದೆ, 1988ರಿಂದ ಫಿಲ್ ಕಾಲ್ಲೆನ್ ಗಿಟಾರ್ ಬಾರಿಸಿದರು ಆ ವಿಡಿಯೋದಲ್ಲಿ ಪಾಯ್ಸನ್ ಬಾನ್ ಜೋವಿ, ಮೋಟ್ಲೇ ಕ್ರೂ, ಗನ್ಸ್ N' ರೋಸಸ್, ರಾಟ್ಟ್, ಮತ್ತು ಏರೋಸ್ಮಿತ್ ತಂಡಗಳ ಸದಸ್ಯರಿದ್ದರು.

ಕಾಲ್ಲೆನ್ ಆಸ್ಟ್ರೇಲಿಯಾದ ತಂಡವಾದ BB ಸ್ಟೀಲ್ ನ 1991ರ ಆಲ್ಬಂ ಆದ ಆನ್ ದ ಎಡ್ಜ್ ನಲ್ಲಿ ನಿರ್ಮಾಪಕರಾಗಿ ಮತ್ತು ಹಾಡುಗಾರರಾಗಿ ಪಾಲ್ಗೊಂಡರು.

ಜೋ ಎಲಿಯಾಟ್ ರೋಲಿಂಗ್ ಸ್ಟೋನ್ಸ್ ನ ಗಿಟಾರ್ ವಾದಕ ರಾನೀ ವುಡ್ ನ 1992ರ ಏಕಗಾಯಕ ಆಲ್ಬಂ ಆದ ಸ್ಲೈಡ್ ಆನ್ ದಿಸ್ ನಲ್ಲಿ ಎರಡು ಟ್ರ್ಯಾಕ್ ಗಳಲ್ಲಿ ಮುಂಗಾಯನವನ್ನು ಹಾಡಿದರು. ಅವರ ಆಗಿನ ಹೆಂಡತಿಯಾದ ಕಾರ್ಲಾ "ಆಲ್ವೇಸ್ ವಾಂಟೆಡ್ ಮೋರ್" ಮತ್ತು "ಸಂಬಡಿ ಎಲ್ಸ್ ಟುನೈಟ್" ವಿಡಿಯೋಗಳಲ್ಲಿ ಕಾಣಿಸಿಕೊಂಡರು.

ಡೆಫ್ ಲೆಪ್ಪಾರ್ಡ್ ನ ಹಲವಾರು ಸದಸ್ಯರು ಜೆಫ್ ಬೆಕ್, AC/DC ಮತ್ತು ಆಲಿಸ್ ಕೂಪರ್ ರ ಶ್ರದ್ಧಾಂಜಲಿ ರೆಕಾರ್ಡ್ ಗಳಲ್ಲಿ ವಾದನ ನುಡಿಸಿದ್ದಾರೆ.


1996ರ ಷೆಫೀಲ್ಡ್-ಸೆಟ್ ಚಲನಚಿತ್ರ ವೆನ್ ಸ್ಯಾಟರ್ಡೇ ಕಮ್ಸ್ ನ ಧ್ವನಿಮುದ್ರಿಕೆಯಲ್ಲಿ ಎರಡು ಟ್ರ್ಯಾಕ್ ಗಳಲ್ಲಿ ಜೆಫ್ ಎಲಿಯಾಟ್ ಕಲಾಪ್ರದರ್ಶನವಿತ್ತರು; ಶೀರ್ಷಿಕಾ ಟ್ರ್ಯಾಕ್ ಮತ್ತು ಒಂದು ವಾದ್ಯಸಂಗೀತವಾದ "ಜಿಮ್ಮೀಸ್ ಥೀಮ್".

ಸೈಬರ್ನಾಟ್ಸ್ ಒಂದು ಪಾರ್ಶ್ವ ಯೋಜನೆಯಾಗಿದ್ದು, ಅದರಲ್ಲಿ ಜೋ ಎಲಿಯಾಟ್ ಮತ್ತು ಫಿಲ್ ಕಾಲ್ಲೆನ್ರೊಡನೆ ದಿವಂಗತ ಮಿಕ್ ರಾನ್ಸನ್ಹೊರತುಪಡಿಸಿದ ಸ್ಪೈಡರ್ಸ್ ಫ್ರಂ ಮಾರ್ಸ್ ತಂಡದ ಸದಸ್ಯರು(ಡೇವಿಡ್ ಬೋವೀಯವರ ಮಾಜಿ ಬ್ಯಾಂಡ್)ಇದ್ದರು. ಈ ತಂಡವು ಹಲವಾರು ಪ್ರದರ್ಶನಗಳನ್ನು ನೀಡಿತು; ಅದರಲ್ಲಿ ಬೋವೀಯ ಝಿಗ್ಗಿ ಸ್ಟಾರ್ಡಸ್ಟ್- ಯುಗದ ಹಾಡುಗಳೂ ಇದ್ದವು ಹಾಗೂ ಒನ್ ಇಂಟರ್ನೆಟ್ ಓನ್ಲೀ ಆಲ್ಬಂಅನ್ನು ಬಿಡುಗಡೆ ಮಾಡಿತು(ನಂತರ ಅಳಿಸಿಹಾಕಲಾಯಿತು).

ಫಿಲ್ ಕಾಲ್ಲೆನ್ ಮ್ಯಾನ್-ರೇಝ್ ಎಂಬ ಪಾರ್ಶ್ವ ತಂಡವನ್ನು ಹೊಂದಿದ್ದು, ಅದು ತನ್ನ ಚೊಚ್ಚಲ ಆಲ್ಬಂ ಅನ್ನು 2008ರ ಜೂನ್ ನಲ್ಲಿ ಬಿಡುಗಡೆಮಾಡಿತು.

ಇತ್ತೀಚಿನ ವರ್ಷಗಳಲ್ಲಿ ವಿವಿಯನ್ ಕ್ಯಾಂಪ್ ಬೆಲ್ ಎರಡು ಪಾರ್ಶ್ವತಂಡಗಳೊಡನೆ ಹಾಡಿದ್ದಾರೆ, ಕ್ಲಾಕ್ ಮತ್ತು ದ ರಿವರ್ ಡಾಗ್ಸ್, ಮತ್ತು ಒಂದು ಏಕವ್ಯಕ್ತಿಗಾಯನದ ಆಲ್ಬಂ, ಟೂ ಸೈಡ್ಸ್ ಆಫ್ ಇಫ್ , 2005ರಲ್ಲಿ ಬಿಡುಗಡೆಯಾಯಿತು.

ಜೋ ಎಲಿಯಾಟ್ ಡೌನ್ 'n' ಔಟ್ಝ್ಎಂಬ ಹೊಸ ತಂಡದೊಡನೆ ಒಂದು ಆಲ್ಬಂ ಹೊರತರುವಲ್ಲಿ ನಿರತರಾಗಿದ್ದಾರೆ;ಈ ತಂಡವು ದ ಕ್ವೈರ್ ಬಾಯ್ಸ್ ತಂಡದ ಸದಸ್ಯರನ್ನು ಒಳಗೊಂಡಿದೆ.[೧೩]

2010ರ ಮೊದಲ ಬಾಗದಲ್ಲಿ ವಿವಿಯನ್ ಕ್ಯಾಂಪ್ ಬೆಲ್ ಥಿನ್ ಲಿಝಿ ಯೊಂದಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.[೧೮]

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "Def Leppard: Biography : Rolling Stone". Archived from the original on 2009-05-04. Retrieved 2010-08-03.
  2. allmusic ((( Def Leppard > Biography )))
  3. (2009-02-26). ಡೆಫ್ ಲೆಪ್ಪಾರ್ಡ್ ಅನೌನ್ಸಸ್ ಯುಎಸ್ ಟೂರ್ Archived 2017-12-07 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯೂಸ್ ರೂಂ ಅಮೆರಿಕ . 2010-03-10ರಂದು ಮರುಸಂಪಾದಿಸಲಾಗಿದೆ
  4. ಪುಸ್ತಕದ ಪ್ರಕಾರ "ಬ್ಯಾಂಗ್ ಯುವರ್ ಹೆಡ್: ದ ರೈಸ್ ಎಂಡ್ ಫಾಲ್ ಆಫ್ ಹೆವಿ ಮೆಟಲ್" ಲೇಖಕ ಡೇವಿಡ್ ಕೋನೌ.
  5. ಬ್ಯಾಂಡ್ ಬಯಾಗ್ರಫಿ Archived 2006-02-23 ವೇಬ್ಯಾಕ್ ಮೆಷಿನ್ ನಲ್ಲಿ., DefLeppard.com.
  6. ಡೆಫ್ ಲೆಪ್ಪಾರ್ಡ್. Archived 2007-12-18 ವೇಬ್ಯಾಕ್ ಮೆಷಿನ್ ನಲ್ಲಿ.Com Archived 2007-12-18 ವೇಬ್ಯಾಕ್ ಮೆಷಿನ್ ನಲ್ಲಿ.
  7. "ಪತ್ರಿಕಾ ಪ್ರಕಟಣೆ -- CMT ಕ್ರಾಸ್ ರೋಡ್ಸ್: ಟೈಲರ್ ಸ್ವಿಫ್ಟ್ ಮತ್ತು ಡೆಫ್ ಲೆಪ್ಪಾರ್ಡ್ DVDಯಲ್ಲಿ ಜೂನ್ 16". Archived from the original on 2010-12-14. Retrieved 2010-08-03.
  8. "ಕ್ರಾಸ್ ರೋಡ್ಸ್ ವಾಲ್-ಮಾರ್ಟ್ನ ಈ ವಾರದ ಅತ್ಯುತ್ತಮ ಮಾರಾಟಗೊಂಡ DVD". Archived from the original on 2010-12-14. Retrieved 2010-08-03.
  9. "ಪತ್ರಿಕಾ ಪ್ರಕಟಣೆ -- CMT ಕ್ರಾಸ್ ರೋಡ್ಸ್: ಟೈಲರ್ ಸ್ವಿಫ್ಟ್ ಮತ್ತು ಡೆಫ್ ಲೆಪ್ಪಾರ್ಡ್ DVDಯಲ್ಲಿ ಜೂನ್ 16". Archived from the original on 2010-12-14. Retrieved 2010-08-03.
  10. "CMT ಕ್ರಾಸ್ ರೋಡ್ಸ್: ಡೆಫ್ ಲೆಪ್ಪಾರ್ಡ್ ಮತ್ತು ಟೈಲರ್ ಸ್ವಿಫ್ಟ್ ಸ್ನೀಕ್ ಪೀಕ್". Archived from the original on 2010-12-14. Retrieved 2010-08-03.
  11. "ಪತ್ರಿಕಾ ಪ್ರಕಟಣೆ -- CMT ಕ್ರಾಸ್ ರೋಡ್ಸ್: ಟೈಲರ್ ಸ್ವಿಫ್ಟ್ ಮತ್ತು ಡೆಫ್ ಲೆಪ್ಪಾರ್ಡ್ DVDಯಲ್ಲಿ ಜೂನ್ 16". Archived from the original on 2010-12-14. Retrieved 2010-08-03.
  12. ೧೨.೦ ೧೨.೧ "ಡೆಫ್ ಲೆಪ್ಪಾರ್ಡ್ ಕ್ಯಾನ್ಸಲ್ಸ್ ಥರ್ಡ್ ಲೆಗ್ ಆಫ್ ದ ಟೂರ್" ದ ಅಸೋಸಿಯೇಟೆಡ್ ಪ್ರೆಸ್ . 2010-03-10ರಂದು ಮರುಸಂಪಾದಿಸಲಾಗಿದೆ
  13. ೧೩.೦ ೧೩.೧ ೧೩.೨ (2010-04-30). ಡೆಫ್ ಲೆಪ್ಪಾರ್ಡ್ ಡಿಸ್ಮಿಸಸ್ ಸ್ಪ್ಲಿಟ್ ರೂಮರ್ಸ್ ಅಹೆಡ್ ಆಫ್ ಷೆಫೀಲ್ಡ್ ಷೀಲ್ಡ್ ಗಿಗ್ Archived 2010-07-06 ವೇಬ್ಯಾಕ್ ಮೆಷಿನ್ ನಲ್ಲಿ. ಷೆಫೀಲ್ಡ್ ಟೆಲಿಗ್ರಾಫ್ . 2010-03-10ರಂದು ಮರುಸಂಪಾದಿಸಲಾಗಿದೆ
  14. "ಡೆಫ್ ಲೆಪ್ಪಾರ್ಡ್ ಟೂರ್ ಇನ್ಫೋ" Archived 2010-11-21 ವೇಬ್ಯಾಕ್ ಮೆಷಿನ್ ನಲ್ಲಿ. Defleppard.com. ಪರಿಷ್ಕರಿಸಲಾಗಿದೆ. 2010-04-17.
  15. (2008-09-28). AC/DC ಇನ್ ನೋಟೆಬಲ್ ಕಂಪೆನಿ ಆಸ್ ದೆ ಷನ್ iಟ್ಯೂನ್ಸ್ Archived 2011-08-18 ವೇಬ್ಯಾಕ್ ಮೆಷಿನ್ ನಲ್ಲಿ. Canada.com. 2010-03-10ರಂದು ಮರುಸಂಪಾದಿಸಲಾಗಿದೆ
  16. ಡೆಫ್ ಲೆಪ್ಪಾರ್ಡ್ ಕ್ರೇವ್ಸ್ ರೆಸ್ಪೆಕ್ಟ್ ಇನ್ ಇಂಟರ್ವ್ಯೂ Archived 2009-03-09 ವೇಬ್ಯಾಕ್ ಮೆಷಿನ್ ನಲ್ಲಿ., heavymetalmusic.biz.
  17. ಕೊಹೆನ್, ಜೇನ್ ಮತ್ತು ಗ್ರಾಸ್ ವೇಯ್ನರ್, ಬಾಬ್. (2008-01-09). "ಡೆಫ್ ಲೆಪ್ಪಾರ್ಡ್ ಕಂಟಿನ್ಯೂಸ್ ನಾರ್ತ್ ಅಮೆರಿಕನ್ ಟೂರ್" Archived 2008-06-14 ವೇಬ್ಯಾಕ್ ಮೆಷಿನ್ ನಲ್ಲಿ. ಟಿಕೆಟ್ ನ್ಯೂಸ್. 2010-03-10ರಂದು ಮರುಸಂಪಾದಿಸಲಾಗಿದೆ
  18. (2010-05-12). "ಡೆಫ್ ಲೆಪ್ಪಾರ್ಡ್ ಜಾಲತಾಣ" Archived 2010-12-14 ವೇಬ್ಯಾಕ್ ಮೆಷಿನ್ ನಲ್ಲಿ. deflepparduk.com. 2010-03-10ರಂದು ಮರುಸಂಪಾದಿಸಲಾಗಿದೆ

ಹೊರಗಿನ ಕೊಂಡಿಗಳು[ಬದಲಾಯಿಸಿ]