ವಿಷಯಕ್ಕೆ ಹೋಗು

ಡೆನಿಸ್ ಡಿಡೆರೋಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೆನಿಸ್ ಡಿಡೆರೋಟ್
೧೭೬೭ ರ ಭಾವಚಿತ್ರ
ಜನನ(೧೭೧೩-೧೦-೦೫)೫ ಅಕ್ಟೋಬರ್ ೧೭೧೩
ಲ್ಯಾಂಗ್ರೆಸ್, ಷಾಂಪೇನ್, ಫ್ರಾನ್ಸ್
ಮರಣ31 July 1784(1784-07-31) (aged 70)
ಪ್ಯಾರಿಸ್, ಫ್ರಾನ್ಸ್
ಕಾಲಮಾನ೧೮ ನೇ ಶತಮಾನದ ತತ್ವಶಾಸ್ತ್ರ
ಪ್ರದೇಶಪಾಶ್ಚಾತ್ಯ ತತ್ವಶಾಸ್ತ್ರ
ಮುಖ್ಯ  ಹವ್ಯಾಸಗಳುವಿಜ್ಞಾನ, ಸಾಹಿತ್ಯ, ತತ್ವಶಾಸ್ತ್ರ, ಕಲೆ
ಅಧ್ಯಯನ ಮಾಡಿದ ಸಂಸ್ಥೆಪ್ಯಾರಿಸ್ ವಿಶ್ವವಿದ್ಯಾಲಯ
ಸಹಿ

ಡೆನಿಸ್ ಡಿಡೆರೋಟ್ (ಫ್ರೆಂಚ್: [dəni did(ə)ʁo]; ೫ ಅಕ್ಟೋಬರ್ ೧೭೧೩- ೩೧ ಜುಲೈ ೧೭೮೪) ಒಬ್ಬ ಫ್ರೆಂಚ್ ತತ್ವಜ್ಞಾನಿ, ಕಲಾ ವಿಮರ್ಶಕ ಮತ್ತು ಬರಹಗಾರ, ಸಹ-ಸಂಸ್ಥಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.[]

ಡೆನಿಸ್ ಡಿಡೆರೋಟ್ ಆರಂಭದಲ್ಲಿ ಜೆಸ್ಯೂಟ್ ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ಸಂಕ್ಷಿಪ್ತವಾಗಿ ಕಾನೂನನ್ನು ಅಧ್ಯಯನ ಮಾಡುವ ಮೊದಲು ಚರ್ಚ್ ಪಾದ್ರಿಗಳಾಗಿ ಕೆಲಸ ಮಾಡಿದರು. ೧೭೪೮ ರ ಕಾದಂಬರಿ ಲೆಸ್ ಬಿಜೌಕ್ಸ್ ಇಂಡಿಸ್ಕ್ರೀಟ್ಸ್ (ದಿ ಇಂಡಿಸ್ಕ್ರೀಟ್ ಜ್ಯುವೆಲ್ಸ್) ಸೇರಿ ಡೆನಿಸ್ ಡಿಡೆರೋಟ್ ಅವರು ಅನೇಕ ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ಕೃತಿಗಳನ್ನು ಬರೆದಿದ್ದಾರೆ. ಜಾಕ್ವೆಸ್ ದಿ ಫ್ಯಾಟಲಿಸ್ಟ್, ರಾಮೌಸ್ ನೆಫ್ಯೂ, ಪ್ಯಾರಡಾಕ್ಸ್ ಆಫ್ ದಿ ಆಕ್ಟರ್, ಮತ್ತು ಡಿ'ಅಲೆಂಬರ್ಟ್ಸ್ ಡ್ರೀಮ್ ಸೇರಿದಂತೆ ಅವರ ಹಲವು ಪ್ರಮುಖ ಕೃತಿಗಳು ಅವರ ಮರಣದ ನಂತರವೇ ಪ್ರಕಟಗೊಂಡವು.

೧೭೫೧ ರಲ್ಲಿ ಡಿಡೆರೋಟ್ ಅವರು ಜೀನ್ ಲೆ ರಾಂಡ್ ಡಿ'ಅಲೆಂಬರ್ಟ್ ಜೊತೆಗೂಡಿ ಎನ್ಸೈಕ್ಲೋಪೀಡಿಯ ಅನ್ನು ಸಹ-ಸಂಪಾದಿಸಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]
N° 9 de la place dans le centre ville de Langres: ಬಲಭಾಗದಲ್ಲಿ ಹಿನ್ನಲೆಯಲ್ಲಿ ಡಿಡೆರೋಟ್‌ನ ಜನ್ಮಸ್ಥಳವಿದೆ
ಡೆನಿಸ್ ಡಿಡೆರೊಟ್ ಅವರ ಜನ್ಮಸ್ಥಳವಾದ ಲ್ಯಾಂಗ್ರೆಸ್ ನಗರದಲ್ಲಿನ ಪ್ರತಿಮೆ

ಡೆನಿಸ್ ಡಿಡೆರೋಟ್ ಅವರು ಷಾಂಪೇನ್‌ನ ಲ್ಯಾಂಗ್ರೆಸ್‌ನಲ್ಲಿ ಜನಿಸಿದರು. ಡಿಡೆರೋಟ್ ಅವರ ತಂದೆ ಡಿಡಿಯರ್ ಡಿಡೆರೋಟ್ ಮತ್ತು ತಾಯಿ ಏಂಜೆಲಿಕ್ ವಿಗ್ನೆರಾನ್. ಡಿಡಿಯರ್ ಡಿಡೆರೋಟ್ ಅವರು ಚಾಕುಗಳು ಮತ್ತು ಇತರ ಕತ್ತರಿಸುವ ಉಪಕರಣಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದರು.

ಡಿಡೆರೋಟ್ ತನ್ನ ಶಿಕ್ಷಣವನ್ನು ಲ್ಯಾಂಗ್ರೆಸ್‌ನಲ್ಲಿರುವ ಜೆಸ್ಯೂಟ್ ಕಾಲೇಜಿನಲ್ಲಿ ಪ್ರಾರಂಭಿಸಿದರು. ೧೭೩೨ ರಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ನಂತರ ಅವರು ಪ್ಯಾರಿಸ್ ಲಾ ಫ್ಯಾಕಲ್ಟಿಯಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದರು. ೧೭೪೦ ರ ದಶಕದ ಆರಂಭದಲ್ಲಿ ಅವರು ಬರಹಗಾರ ಮತ್ತು ಅನುವಾದಕರಾಗಲು ನಿರ್ಧರಿಸಿದರು.

೧೭೪೩ ರಲ್ಲಿ ಡಿಡೆರೋಟ್ ಅವರು ಅನ್ನಿ-ಆಂಟೊನೆಟ್ ಚಾಂಪಿಯನ್ ಅವರನ್ನು ಮದುವೆಯಾದರು. ಡಿಡೆರೋಟ್ ಮತ್ತು ಅನ್ನಿ-ಆಂಟೊನೆಟ್ ಚಾಂಪಿಯನ್ ಅವರಿಗೆ ಮೇರಿ-ಏಂಜೆಲಿಕ್ ಡಿಡೆರೋಟ್ ಎಂಬ ಮಗಳಿದ್ದಳು.

ಆರಂಭಿಕ ಕೆಲಸಗಳು

[ಬದಲಾಯಿಸಿ]

೧೭೪೩ ರ ಟೆಂಪಲ್ ಸ್ಟಾನ್ಯನ್‌ನ ಹಿಸ್ಟರಿ ಆಫ್ ಗ್ರೀಸ್‌ನ ಅನುವಾದವು ಡಿಡೆರೋಟ್ ಆರಂಭಿಕ ಕೃತಿಗಳು. ಫ್ರಾಂಕೋಯಿಸ್-ವಿನ್ಸೆಂಟ್ ಟೌಸೇಂಟ್ ಮತ್ತು ಮಾರ್ಕ್-ಆಂಟೊಯಿನ್ ಈಡಸ್ ಎಂಬ ಇಬ್ಬರು ಸಹೋದ್ಯೋಗಿಗಳೊಂದಿಗೆ ಡಿಡೆರೋಟ್ ಅವರು ರಾಬರ್ಟ್ ಜೇಮ್ಸ್ ಅವರ ಔಷಧೀಯ ನಿಘಂಟಿನ (೧೭೪೬-೧೭೪೮) ಅನುವಾದವನ್ನು ತಯಾರಿಸಿದರು.

ತಾತ್ವಿಕ ಆಲೋಚನೆಗಳು(ಫಿಲಾಸಫಿಕಲ್ ಥಾಟ್ಸ್)

[ಬದಲಾಯಿಸಿ]

೧೭೪೬ ರಲ್ಲಿ ಡಿಡೆರೋಟ್ ಅವರು ಫಿಲಾಸಫಿಕಲ್ ಥಾಟ್ಸ್ ( ಪೆನ್ಸಿಸ್ ಫಿಲಾಸಫಿಕ್ಸ್ ) ಎಂಬ ತಮ್ಮ ಮೊದಲ ಮೂಲ ಕೃತಿಯನ್ನು ಬರೆದರು.[][][] ಈ ಪುಸ್ತಕದಲ್ಲಿ ಡಿಡೆರೋಟ್ ಅವರು ಸಾಮರಸ್ಯವನ್ನು ಸ್ಥಾಪಿಸಲು ಕಾರಣ ಮತ್ತು ಭಾವನೆ (ಭಾವನೆ) ಎರಡೂ ಅಗತ್ಯವಿದೆ ಎಂದು ಬರೆದಿದ್ದಾರೆ.

ದಿ ಸ್ಕೆಪ್ಟಿಕ್ಸ್ ವಾಕ್

[ಬದಲಾಯಿಸಿ]

೧೭೪೭ ರಲ್ಲಿ ಡಿಡೆರೋಟ್ ಅವರು ದಿ ಸ್ಕೆಪ್ಟಿಕ್ಸ್ ವಾಕ್ (ಫ್ರೆಂಚ್: La Promenade du sceptique)[][] ಎಂಬ ಪುಸ್ತಕವನ್ನು ಬರೆದರು. ಇದನ್ನು ಮೊದಲು ೧೮೩೦ ರಲ್ಲಿ ಪ್ರಕಟಿಸಲಾಯಿತು. ಈ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಮೊದಲನೆಯದು ಧರ್ಮದ ವಿಮರ್ಶೆ ಮತ್ತು ಎರಡನೆಯದು ತಾತ್ವಿಕ ಸಂಭಾಷಣೆ.

ದಿ ಇನ್‌ಸ್ಕ್ರೀಟ್ ಜ್ಯುವೆಲ್ಸ್

[ಬದಲಾಯಿಸಿ]

೧೭೪೮ ರಲ್ಲಿ ಡೆನಿಸ್ ಡಿಡೆರೋಟ್ ಅವರ ಮೊದಲ ಕಾದಂಬರಿ ದಿ ಇಂಡಿಸ್ಕ್ರೀಟ್ ಜುವೆಲ್ಸ್ (ಅಥವಾ ದಿ ಇಂಡಿಸ್ಕ್ರೀಟ್ ಟಾಯ್ಸ್, ಅಥವಾ ದಿ ಟಾಕಿಂಗ್ ಜ್ಯುವೆಲ್ಸ್; ಫ್ರೆಂಚ್: Les Bijoux indiscrets) ಪ್ರಕಟವಾಯಿತು.

ಲೆಟರ್ ಆನ್ ದಿ ಬ್ಲೈಂಡ್

[ಬದಲಾಯಿಸಿ]

೧೭೪೯ ರಲ್ಲಿ ಡಿಡೆರೋಟ್ ಅವರು ಲೆಟರ್ ಆನ್ ದಿ ಬ್ಲೈಂಡ್ ( ಲೆಟ್ರೆ ಸುರ್ ಲೆಸ್ ಅವೆಗ್ಲೆಸ್ ಎ ಎಲ್ ಯುಸೇಜ್ ಡಿ ಸಿಯುಕ್ಸ್ ಕ್ವಿ ವೊಯೆಂಟ್ ) ಎಂಬ ಪುಸ್ತಕವನ್ನು ಪರಿಚಯಿಸಿದನು. ಈ ಪುಸ್ತಕವು ತಾರ್ಕಿಕತೆ ಮತ್ತು ಗ್ರಹಿಕೆಯ ಮೂಲಕ ಪಡೆದ ಜ್ಞಾನದ ನಡುವಿನ ಸಂಬಂಧವನ್ನು( ಪಂಚೇಂದ್ರಿಯಗಳು ) ಒಳಗೊಂಡಿದೆ.

ವಿಶ್ವಕೋಶ

[ಬದಲಾಯಿಸಿ]
ಎನ್ಸೈಕ್ಲೋಪೀಡಿಯಾದ ಶೀರ್ಷಿಕೆ ಪುಟ

ಪುಸ್ತಕ ಮಾರಾಟಗಾರ ಮತ್ತು ಮುದ್ರಕರಾದ ಆಂಡ್ರೆ ಲೆ ಬ್ರೆಟನ್ ಅವರು ಎಫ್ರೈಮ್ ಚೇಂಬರ್ಸ್ ಎಂಬ ಸೈಕ್ಲೋಪೀಡಿಯಾ ಅಥವಾ ಯುನಿವರ್ಸಲ್ ಡಿಕ್ಷನರಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಅನ್ನು ಫ್ರೆಂಚ್‌ಗೆ ಭಾಷಾಂತರಿಸಲು ಡಿಡೆರೋಟ್ ಅವರನ್ನು ಸಂಪರ್ಕಿಸಿದರು. ಈ ಕೆಲಸವನ್ನು ಮೊದಲು ಇಂಗ್ಲಿಷ್‌ನ ಜಾನ್ ಮಿಲ್ಸ್ ಅವರು ಕೈಗೆತ್ತಿಕೊಂಡರು. ನಂತರ ಜರ್ಮನ್ ಗಾಟ್‌ಫ್ರೈಡ್ ಸೆಲ್ಲಿಯಸ್ ಅವರು ಇದನ್ನು ಮಾಡಿದರು.

೧೭೫೧ ಮತ್ತು ೧೭೭೨ ರ ನಡುವೆ ಪರಿಷ್ಕೃತ ಆವೃತ್ತಿಗಳು ಮತ್ತು ಅನುವಾದಗಳೊಂದಿಗೆ ಮೊದಲ ಸಂಪುಟವನ್ನು ಪ್ರಕಟಿಸಲಾಯಿತು. ೧೭೫೧ ರಲ್ಲಿ ಡಿಡೆರೋಟ್ ಅವರು ಜೀನ್ ಲೆ ರಾಂಡ್ ಡಿ'ಅಲೆಂಬರ್ಟ್ ಜೊತೆಗೂಡಿ ಎನ್ಸೈಕ್ಲೋಪೀಡಿಯನ್ನು ಸಹ-ಸಂಪಾದಿಸಿದ್ದಾರೆ.

ಡಿಡೆರೋಟ್‌ ಅವರ ಕೊಡುಗೆ

[ಬದಲಾಯಿಸಿ]

ಡೆನಿಸ್ ಡಿಡೆರೋಟ್ ಅವರು ಸರಿಸುಮಾರು ೭,೦೦೦ ಲೇಖನಗಳನ್ನು ಬರೆದಿದ್ದಾರೆ. ೧೭೪೫ ರಲ್ಲಿ ಮೊದಲ ಸಂಪುಟದ ಕೊನೆಯ ಪ್ರತಿಗಳನ್ನು ಬಿಡುಗಡೆ ಮಾಡಲಾಯಿತು.

ರಂಗಭೂಮಿ

[ಬದಲಾಯಿಸಿ]

ಡಿಡೆರೋಟ್ ಅವರು ಭಾವನಾತ್ಮಕ ನಾಟಕಗಳನ್ನು ಸಹ ಬರೆದರು. ೧೭೫೭ ರಲ್ಲಿ ಲೆ ಫಿಲ್ಸ್ ನ್ಯಾಚುರಲ್ ಮತ್ತು ೧೭೫೮ ರಲ್ಲಿ ಲೆ ಪೆರೆ ಡಿ ಫ್ಯಾಮಿಲ್ಲೆ ಎಂಬ ನಾಟಕಗಳನ್ನು ಬರೆದರು. ೧೭೫೮ ರಲ್ಲಿ ಡಿಡೆರೋಟ್ ಅವರು ನಾಲ್ಕನೇ ಗೋಡೆಯ ಪರಿಕಲ್ಪನೆಯನ್ನು ಪರಿಚಯಿಸಿದರು. ಅವರು ೧೭೭೦ ಮತ್ತು ೧೭೭೮ ರ ನಡುವೆ ಬರೆದ ವಿರೋಧಾಭಾಸ ಸುರ್ ಲೆ ಕಾಮೆಡಿಯನ್ ( ನಟನ ವಿರೋಧಾಭಾಸ ) ಅನ್ನು ಅವರ ಮರಣದ ನಂತರ ೧೮೩೦ ರಲ್ಲಿ ಮೊದಲು ಪ್ರಕಟಿಸಲಾಯಿತು.

ಸಾವು ಮತ್ತು ಸಮಾಧಿ

[ಬದಲಾಯಿಸಿ]
ಪ್ಯಾರಿಸ್‌ನ 6ನೇ ಅರೋಂಡಿಸ್‌ಮೆಂಟ್ ಜೀನ್ ಗೌಥೆರಿನ್ ಅವರು ಪ್ಯಾರಿಸ್‌ನಲ್ಲಿ ನಿರ್ಮಿಸಿದ ಡೆನಿಸ್ ಡಿಡೆರೋಟ್ ಅವರ ಸ್ಮಾರಕ.

ಡೆನಿಸ್ ಡಿಡೆರೋಟ್ ಅವರು ೩೧ ಜುಲೈ ೧೭೮೪ ರಂದು ಶ್ವಾಸಕೋಶದ ಥ್ರಂಬೋಸಿಸ್‌ನಿಂದ ಪ್ಯಾರಿಸ್‌ನಲ್ಲಿ ನಿಧನರಾದರು.ಡಿಡೆರೋಟ್ ಅವರನ್ನು ನಗರದ ಎಗ್ಲಿಸ್ ಸೇಂಟ್-ರೋಚ್‌ನಲ್ಲಿ ಸಮಾಧಿ ಮಾಡಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. https://www.britannica.com/biography/Denis-Diderot
  2. https://www.lindahall.org/about/news/scientist-of-the-day/denis-diderot/
  3. P.N. Furbank (1992). Diderot:A Critical Biography. Alfred A. Knopf. p. 27.
  4. Bryan Magee. The Story of Philosophy. DK Publishing, Inc., New York: 1998. p. 124
  5. https://www.britannica.com/topic/Philosophic-Thoughts
  6. Otis Fellows (1977). Diderot. Alfred A. Knopf. p. 41.
  7. https://books.google.co.in/books/about/The_Skeptic_s_Walk.html?id=DHA-twEACAAJ&redir_esc=y