ಡಿ. ಎಚ್. ಶಂಕರ ಮೂರ್ತಿ
ಗೋಚರ
ಡಿ.ಎಚ್. ಶಂಕರ ಮೂರ್ತಿ | |
---|---|
ರಾಜ ಕಾರಣಿ | |
ವೈಯಕ್ತಿಕ ಮಾಹಿತಿ | |
ಸಂಗಾತಿ(ಗಳು) | ಸತ್ಯವತಿ |
ಮಕ್ಕಳು | ೨ ಗಂಡು ಮಕ್ಕಳು: ಕಿರಣ್ ಹಾಗೂ ಅರುಣ್. |
ತಂದೆ/ತಾಯಿ | ಹನುಮಂತಪ್ಪ, ಕಾಮಾಕ್ಷಮ್ಮ. |
ವೃತ್ತಿ | ರಾಜಕಾರಣಿ |
ಡಿ ಎಚ್ ಶಂಕರ ಮೂರ್ತಿಯವರು, [೧] ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಮೊದಲು ಭಾರತೀಯ ಜನಸಂಘ ನಂತರ ಜನಸಂಘದ ಈಗಿನ ರೂಪಾಂತರವಾದ ಬಿಜೆಪಿ ಪಕ್ಷದ ಹಿರಿಯ ನಾಯಕರು. ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ನ 'ಸ್ಪೀಕರ್' ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜೀವನ ಚರಿತ್ರೆ
[ಬದಲಾಯಿಸಿ]ಶಂಕರರು, ಶಿವಮೊಗ್ಗದ ಪ್ರತಿಷ್ಟಿತ ವೈಶ್ಯ ಕುಟುಂಬವೊಂದರಲ್ಲಿ ೩೦ ಏಪ್ರಿಲ್ ೧೯೪೦ ರಂದು ಜನಿಸಿದರು. ಇವರ ತಂದೆ ಹನುಮಂತಪ್ಪ ಹಾಗೂ ತಾಯಿ ಕಾಮಾಕ್ಷಮ್ಮ. ಇವರ[೨] ಪತ್ನಿ, ಸತ್ಯವತಿ. ಈ ದಂಪತಿಗಳಿಗೆ ಕಿರಣ್ ಹಾಗೂ ಅರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಕಿರಿಯ ಮಗ ಅರುಣ್ ಬಿಜೆಪಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. .
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲಿಗರು
[ಬದಲಾಯಿಸಿ]ಇವರ ಕುಟುಂಬದವರು ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಬೆಂಬಲಿಗರು. ಅದರಂತೆ ಸಂಘದ ಜೊತೆಗೆ ಇವರ ಒಡೆನಾಟ ೧೯೬೬ ರಲ್ಲೆ ಪ್ರಾರಂಭವಾಯಿತು. ನಂತರ ಸಂಘದ ರಾಜಕೀಯ ಘಟಕವಾದ ಭಾರತೀಯ ಜನಸಂಘ ಸೇರಿದರು.
- ಜಿಲ್ಲೆಯ ಹಾಗು ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.
- ೧೯೭೧ ರ ಬಾಂಗ್ಲಾ ಚಳುವಳಿಯಲ್ಲಿ ಹೋರಾಡಿದರು. ಆಸಮಯದಲ್ಲಿ ಮೂರ್ತಿಯವರು ಕೆಲಕಾಲ 'ತಿಹಾರ್ ಜೈಲಿ'ನಲ್ಲಿ ಬಂಧಿಯಾಗಿದ್ದರು.
- ೧೯೭೫ ರ ಎಮರ್ಜೆನ್ಸಿ ಸಮಯದಲ್ಲಿ ಮೀಸಾ ಕಾಯಿದೆಯಡಿ ಇವರನ್ನು ಬಂಧಿಸಲಾಯಿತು. ೧೭ ತಿಂಗಳುಗಳ ಕಾಲ ಬೆಳಗಾವಿ ಜೈಲಿನಲ್ಲಿ ಬಂಧಿಯಾಗಿದ್ದರು.
- ೧೯೮೦ ರಲ್ಲಿ ಭಾರತೀಯ ಜನಸಂಘದ ಹೊಸ ರೂಪ ಬಿಜೆಪಿ ಯ ರಾಜ್ಯ ಘಟಕದ ಮೊದಲ ಪ್ರಧಾನ ಕಾರ್ಯದರ್ಶಿಯಾದರು.
- ೧೯೭೮ ಹಾಗು ೧೯೮೦ ರ ಮಹಾ ಚುನಾವಣೆಯಲ್ಲಿ ಶಿವಮೊಗ್ಗ ದಿಂದ ಸ್ಪರ್ಧಿಸಿ ವಿಫಲರಾದರು.
ನಿರ್ವಹಿಸಿದ ಜವಾಬ್ದಾರಿಗಳು
[ಬದಲಾಯಿಸಿ]- ೧೯೮೪ ರಲ್ಲಿ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಿ ನೇಮಿಸಲ್ಪಟ್ಟರು ಆ ಅವಧಿಯಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ.
- ೧೯೮೮ ರಲ್ಲಿ ರೂಪಗೊಂಡ ನೈಋತ್ಯ ಪದವೀಧರ ಕ್ಷೇತ್ರಕ್ಕೆ ೧೯೮೮ ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜಯಗಳಿಸಿದರು. ಆಗ ಅವರು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು. ಈ ಕ್ಷೇತ್ರದಿಂದ ಸತತವಾಗಿ ೧೯೯೪, ೨೦೦೦, ೨೦೦೬ ಹಾಗು ೨೦೧೨ ಹೀಗೆ ಒಟ್ಟು ೫ ಭಾರಿ ವಿಜಯಗಳಿಸಿದ್ದಾರೆ.
- ವಿಧಾನ ಪರಿಷತ್ ನಲ್ಲಿ ಇವರ ಸೇವೆ ಹಾಗು ಚಟುವಟಿಕೆ ಗುರುತರವಾದದ್ದು. ೨೦೦೨ ರಿಂದ ೨೦೦೬ ರ ವರೆಗೆ ವಿಧಾನ ಪರಿಷತ್ ನ ವಿರೋದ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು.
- ೨೦೦೬ ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್ ಹಾಗು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾದರು. ಈ ಅವಧಿಯಲ್ಲಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು. ಹಿಂದಿನ ೫೫ ವರ್ಷಗಳ ಅವಧಿಯಲ್ಲಿ ಪ್ರಾರಂಬವಾದ ಒಟ್ಟು ಸರ್ಕಾರಿ ಕಾಲೇಜುಗಳ ಸಂಖ್ಯೆ ೧೬೮. ಶಂಕರಮೂರ್ತಿಯವರು ಆಯ್ಕೆಯಾಗಿ ಬಂದ ವರ್ಷವೇ ೧೮೪ ಹೊಸ ಸರ್ಕಾರಿ ಕಾಲೇಜುಗಳನ್ನು ಪ್ರಾರಂಬಿಸಿದರು.
- ಮೊಟ್ಟಮೊದಲಿಗೆ, ಇಂಜಿನಿಯರಿಂಗ್ ಹಾಗು ಮೇಡಿಕಲ್ ಕಾಲೇಜುಗಳ ಪ್ರವೇಶ ಪರೀಕ್ಷೆಯಲ್ಲಿದ್ದ ತಪ್ಪುಗಳನ್ನು ಸರಿಪಡಿಸಿ, ಈ ಪರೀಕ್ಷೆ ನಡೆಸಲೆಂದೆ ಹೊಸ ಪ್ರಾಧಿಕಾರವನ್ನು ರಚಿಸಿದರು.
- ೨೦೦೮ ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡರು.
- ಇವರ ಅಧಿಕಾರದ ಅವಧಿಯಲ್ಲಿ "ಕರ್ನಾಟಕ ವಿಷನ್ ೨೦೨೦""ನ್ನು ಸಿಧ್ಧಪಡಿಸಲಾಯಿತು. ಸಂಪೂರ್ಣ ರಾಜ್ಯದ ಸರ್ವತೋಮುಖ ಅಭಿವೃಧ್ಧಿಗೆ ಬೇಕಾದ ರೂಪರೇಶೆಗಳನ್ನು ಒಳಗೊಂಡ ಈ ವರದಿ, ಅತ್ಯಂತ ಉತ್ಕೃಷ್ಟವಾದುದೆಂದು ಹೊಗಳಲ್ಪಟ್ಟಿದೆ. ರಾಜ್ಯ ಯೋಜನಾ ಆಯೋಗ, ಇವರ ಸಧೃಡ ನಾಯಕತ್ವದಲ್ಲಿ, ರಾಜ್ಯ ಸರ್ಕಾರದ ಯೋಜನೆಗಳನ್ನು ರೂಪಿಸಲು, ಬೇಕಾದ ಮಾರ್ಗದರ್ಶನ ನೀಡುವ ಪ್ರಮುಖ ಸಂಸ್ಥೆಯಾಗಿ ಬೆಳೆಯಿತು. ಭಾರತ ಯೋಜನಾ ಆಯೋಗದಷ್ಟೇ ಪ್ರಮುಖ ಸಂಸ್ಥೆಯಾಗಿ ಬೆಳೆಯಿತು.
- ೨೦೧೦ರಲ್ಲಿ ವಿಧಾನ ಪರಿಷತ್ ನ ಸಭಾಪತಿಯಾಗಿ ನೇಮಕಗೊಂಡು,ತಮ್ಮ ಕಾರ್ಯ ವೈಖರಿ, ನಿಷ್ಪಕ್ಷಪಾತ ದೋರಣೆ, ನೇರ ನಡುವಳಿಕೆಗಳು ಎಲ್ಲಾ ಪಕ್ಷದವರ ಮನಸ್ಸನ್ನು ಗೆದ್ದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "India school news, My ಕಿರschool days – Shri D. H. Shankaramurthy – Chairman of the Karnataka Legislative Council, November 16, 2015". Archived from the original on ಜುಲೈ 9, 2017. Retrieved ಮೇ 10, 2017.
- ↑ "Shri D. H. Shankaramurthy–Chairman of the Karnataka Legislative Council". Archived from the original on 2017-04-26. Retrieved 2017-05-10.