ವಿಷಯಕ್ಕೆ ಹೋಗು

ಡಿ.ಕೆ.ರವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೊಡ್ಡಕೊಪ್ಪಲು ಕರಿಯಪ್ಪ ರವಿ
ಡಿ.ಕೆ.ರವಿ

ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ, ಕರ್ನಾಟಕ ಸರ್ಕಾರ
ಅಧಿಕಾರ ಅವಧಿ
29 ಅಕ್ಟೋಬರ್ 2014 – 16 ಮಾರ್ಚ್ 2015

ಅಧಿಕಾರ ಅವಧಿ
10 ಆಗಸ್ಟ್ 2013 – 29 ಅಕ್ಟೋಬರ್ 2014
ಉತ್ತರಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ
ವೈಯಕ್ತಿಕ ಮಾಹಿತಿ
ಜನನ (1979-06-10) ೧೦ ಜೂನ್ ೧೯೭೯ (ವಯಸ್ಸು ೪೫)
ತುಮಕೂರು, ಕರ್ನಾಟಕ,
ಮರಣ 16 March 2015(2015-03-16) (aged 35)
ಬೆಂಗಳೂರು, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ಅಭ್ಯಸಿಸಿದ ವಿದ್ಯಾಪೀಠ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ದೆಹಲಿ
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು
ವೃತ್ತಿ ನಾಗರಿಕ ಸೇವಕ

ದೊಡ್ಡಕೊಪ್ಪಲು ಕರಿಯಪ್ಪ ರವಿ ಕರ್ನಾಟಕದ ಒಬ್ಬ ಐ.ಎ.ಎಸ್. ಅಧಿಕಾರಿಯಾಗಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಡಿ.ಕೆ.ರವಿ ಎಂದೇ ಖ್ಯಾತರಾಗಿದ್ದರು. ಆದರೆ ಅವರು ತಮ್ಮ ೩೬ನೆ ವಯಸ್ಸಿನಲ್ಲಿ ತೀರಿಕೊಂಡರು.[]

ಪರಿಚಯ

[ಬದಲಾಯಿಸಿ]

ಡಿ.ಕೆ.ರವಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ದೊಡ್ಡಕೊಪ್ಪಲಿನಲ್ಲಿ ೧೦.೦೬.೧೯೭೯ರಂದು ಜನಿಸಿದರು. ತಂದೆ ಕರಿಯಪ್ಪ, ತಾಯಿ ಗೌರಮ್ಮರ. ಹೆಂಡತಿ ಕುಸುಮ. ಹನುಮಂತರಾಯಪ್ಪ ರವಿ ಅವರ ಮಾವ ಅಂದರೆ ಅವರ ಪತ್ನಿಯ ತಂದೆ. ಹನುಮಂತರಾಯಪ್ಪ ಬೆಂಗಳೂರಿನ ನಾಗರಬಾವಿ ಸಮೀಪದ ಮಲ್ಲತ್ತಹಳ್ಳಿಯಲ್ಲಿರುವ ವಾಸವಾಗಿರುವ ಪಟ್ಟಣಗೆರೆ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರ.

ವಿದ್ಯಾಭ್ಯಾಸ

[ಬದಲಾಯಿಸಿ]

ಡಿ.ಕೆ.ರವಿ ಕೃಷಿಯಲ್ಲಿ ಬಿ.ಎಸ್ಸಿ. ಪದವಿ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕೃಷಿಯಲ್ಲಿ ಎಂ.ಎಸ್ಸಿ. ಪದವಿ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ದೆಹಲಿಯಲ್ಲಿ ಪಡೆದಿದ್ದರು. ೨೦೦೯ರಲ್ಲಿ ಐ.ಎ.ಎಸ್.(೩೪ನೆ ರಾಂಕ್ ) ಮತ್ತು ಐ.ಪಿ.ಎಸ್. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.

ಉದ್ಯೋಗ

[ಬದಲಾಯಿಸಿ]
  1. ಅಬಕಾರಿ ಪೋಲಿಸ್ ಅಧಿಕಾರಿಯಾಗಿ ಸೇವೆ.
  2. ಐಎಎಸ್ ಅಧಿಕಾರಿಯಾಗಿ ಸೇವೆ - ೧೦-೦೮-೨೦೧೩ರಿಂದ ೨೯-೧೦-೨೦೧೪ರ ವರೆಗೆ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ.
  3. ಕೋಲಾರದ ಡಿಸಿಯಾಗಿ ಸೇವೆ ಸಲ್ಲಿಸಿದ್ದ ಅವರು ಕೋಲಾರದಲ್ಲಿನ ಅಕ್ರಮ ಭೂ ಒತ್ತವರಿದಾರರ ವಿರುದ್ಧ ಸಮರವನ್ನೇ ಸಾರಿ ಸರ್ಕಾರಿ ಗೋಮಾಳ, ಸರ್ಕಾರಿ ಭೂಮಿ ಮತ್ತು ಕೆರೆಗಳ ಒತ್ತುವರಿಯನ್ನುತೆರವುಗೊಳಿಸಿದ್ದರು. ಹೀಗಾಗಿ ಕೋಲಾರ ಜಿಲ್ಲೆಯಾದ್ಯಂತ ರವಿ ಅವರು ಪ್ರಮಾಣಿಕ ಅಧಿಕಾರಿ ಎಂದೇ ಖ್ಯಾತಿ ಗಳಿಸಿದ್ದರು. ಇವಿಷ್ಟೇ ಅಲ್ಲದೇ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೋಲಾರ ಜನತೆಗೆ ರವಿ ಆಧುನಿಕ ಭಗೀರಥರಾಗಿದ್ದರು. ಕೋಲಾರದ ಸಾಕಷ್ಟು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೋಲಾರದ ಜನತೆಯ ನೀರಿನ ದಾಹವನ್ನು ತಮ್ಮ ಕೈಲಾದ ಮಟ್ಟಿಗೆ ನೀಗಿಸಿದ್ದರು. ಅಷ್ಟೇ ಅಲ್ಲ ಅಕ್ರಮವಾಗಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಲೇಔಟ್ ಗಳನ್ನು ಮಾಡಿಕೊಂಡಿದ್ದ ಭೂಗಳ್ಳರನ್ನು ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಿದ್ದರು. ಇವರು ಕೋಲಾರದ ಟೈಗರ್ ಎಂದೇ ಪ್ರಸಿದ್ದ.
  4. ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಸೇವೆ. ೨೯-೧೦-೨೦೧೪ರಿಂದ ೧೬-೦೩-೨೦೧೫ರ ವರೆಗೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಕೆ. ರವಿ, ಭಾನುವಾರವೂ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ತೆರಿಗೆ ಕಳ್ಳರನ್ನು ಕಾನೂನಿನ ಜಾಲದಲ್ಲಿ ಸಿಕ್ಕಿಸಬೇಕಾದರೆ, ಹೇಗೆ ನೋಟಿಸ್ ನೀಡಬೇಕೆಂಬ ಮಾರ್ಗಸೂಚಿ ಹಾಕಿಕೊಟ್ಟಿದ್ದರು. ಸೋಮವಾರ ಬೆಳಗ್ಗೆ 10.35ರ ಸುಮಾರಿಗೆ ಕಚೇರಿ ಆಗಮಿಸಿದ್ದ ಅವರು, 11 ಗಂಟೆಯಿಂದ ವಾಣಿಜ್ಯ ತೆರಿಗೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡಿದ್ದರು.[]
  • ಊಟ ಮಾಡಿ ಬರುತ್ತೇನೆ ಎಂದು ಫ್ಲಾಟ್‌ಗೆ ತೆರಳಿದ್ದ ರವಿ ಅವರು ಮಧ್ಯಾಹ್ನ 2 ಗಂಟೆಯಾದರೂ ಹಿಂತಿರುಗದಿದ್ದಾಗ ಅವರ ಮೊಬೈಲ್‌ಗೆ ಆಪ್ತಶಾಖೆ ಸಿಬ್ಬಂದಿ ಹತ್ತಾರು ಸಲ ಕರೆ ಮಾಡಿದ್ದಾರೆ. ಉತ್ತರ ಸಿಗದಿದ್ದಾಗ ಮಲಗಿರಬಹುದು ಎಂದು ಭಾವಿಸಿ ಒಂದು ತಾಸಿನ ಬಳಿಕ 3.30ರ ಸುಮಾರಿಗೆ ಕಚೇರಿಯಲ್ಲಿ ಅವರ ಭೇಟಿಗಾಗಿ ಹತ್ತಾರು ಮಂದಿ ಕಾದಿದ್ದ ಹಿನ್ನೆಲೆಯಲ್ಲಿ ಮತ್ತೆ ಮೊಬೈಲ್‌ಗೆ ಕರೆ ಮಾಡಿದಾಗಲೂ ಸ್ವೀಕರಿಸಲಿರಲಿಲ್ಲ.
  • ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ಚಾಲಕರನ್ನು ಫ್ಲಾಟ್‌ಗೆ ತೆರಳಿ, ಸಾಹೇಬರನ್ನು ಕರೆಯುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಹಲವಾರು ಬಾರಿ ಕಾಲಿಂಗ್ ಬೆಲ್ ಮಾಡಿದರೂ ತೆರೆಯದೆ ಇದ್ದಾಗ, ಆ ವಿಷಯವನ್ನು ಚಾಲಕ ಆಪ್ತ ಸಿಬ್ಬಂದಿಗೆ ತಿಳಿಸಿದ್ದಾನೆ. ಕೊನೆಗೆ ಕಚೇರಿಯಿಂದಲೇ ಅವರ ಪತ್ನಿ ಕುಸುಮಾ ಅವರಿಗೆ ಕರೆ ಮಾಡಿ, ಅಪಾರ್ಟ್‌ಮೆಂಟ್‌ಗೆ ಬರುವಂತೆ ತಿಳಿಸಿ, ಆಪ್ತ ಕಚೇರಿ ಸಿಬ್ಬಂದಿಯೂ ಅಲ್ಲಿಗೆ ತೆರಳಿದ್ದಾರೆ.
  • ಮತ್ತೆ ಬಾಗಿಲು ತೆರೆಯದಿದ್ದಾಗ, ಪತ್ನಿ ಬಳಿಯಿದ್ದ ಮತ್ತೊಂದು ಕೀ ಮೂಲಕ ಬಾಗಿಲು ತೆರೆದು ಸಂಜೆ ಐದು ಗಂಟೆ ಸುಮಾರಿಗೆ ಒಳಪ್ರವೇಶಿಸಲಾಯಿತು. ಬೆಡ್‌ರೂಮ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿತ್ತು. ೧೬.೦೩.೨೦೧೫. ಸೋಮವಾರ ಆಯುಕ್ತ ಸೇವೆಯಲ್ಲಿರುವಾಗಲೇ ನಿಗೂಢ ಸಾವು.[][]
  • ಡಿ.ಕೆ.ರವಿ ಅವರ ಅಂತ್ಯಕ್ರಿಯೆಯನ್ನು ೧೭.೦೩.೨೦೧೫ರಂದು ಅವರ ಹುಟ್ಟೂರಾದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ದೊಡ್ಡಕೊಪ್ಪಲಿನಲ್ಲಿ ಸಾವಿರಾರು ಜನರ ಸಮ್ಮಖದಲ್ಲಿ ನೆರವೇರಿಸಲಾಯಿತು. ಡಿ.ಕೆ.ರವಿ ಅವರು ಪತ್ನೀ, ತಂದೆ-ತಾಯಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಆ ನಂತರದ ಬೆಳವಣಿಗೆ

[ಬದಲಾಯಿಸಿ]
  • ಕರ್ನಾಟಕದ ಒಬ್ಬ ಐ.ಎ.ಎಸ್. ಅಧಿಕಾರಿಯಾಗಿದ್ದ ಇವರು ಆಂತರ್ಯದ ಗೋಜಲುಗಳಿಂದ, ಮಾನಸಿಕ ಕಾರಣದಿಂದ ಇಹಲೋಕ ತ್ಯಜಿಸಿದುದು ಮಾತ್ರ ವಿಪರ್ಯಾಸ. ಕರ್ನಾಟಕ ಸರ್ಕಾರ ಇವರ ಸಾವಿನ ಸತ್ಯಾಸತ್ಯತೆ ತಿಳಿಯಲು ಸಿಓಡಿ ತನಿಖೆಗೆ ವಹಿಸಿದಾಗ, ಪ್ರತಿಪಕ್ಷಗಳ ವಿರೋಧ ಮತ್ತು ರಾಜ್ಯಾದಾದ್ಯಂತ ಪ್ರತಿಭಟನೆಗಳಾದುವು. ಇದರಿಂದ ಈ ಕೇಸನ್ನು ಸಿಬಿಐ ತನಿಖೆಗೆ ವಹಿಸಿ ಮೂರು ತಿಂಗಳೊಳಗೆ ವರದಿ ಕೊಡುವಂತೆ ಸೂಚಿಸಲಾಗಿದೆ. ವರದಿಯ ನಂತರ ಅವರ ಸಾವಿಗೆ ಕಾರಣವೆನೆಂಬುದು ಸ್ಪಷ್ಟವಾಗುತ್ತದೆ.

ಉಲ್ಲೇಖ

[ಬದಲಾಯಿಸಿ]
  1. http://kannada.oneindia.com/news/karnataka/jds-leader-hd-kumaraswamy-questions-to-siddaramaiah-government-dk-ravi-death-092520.html
  2. https://www.facebook.com/publictv/posts/961303000554119:0
  3. "ಆರ್ಕೈವ್ ನಕಲು". Archived from the original on 2015-03-21. Retrieved 2015-03-21.
  4. "ಆರ್ಕೈವ್ ನಕಲು". Archived from the original on 2015-03-18. Retrieved 2015-03-21.