ವಿಷಯಕ್ಕೆ ಹೋಗು

ಎಸ್. ಎಂ. ಮುತ್ತಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಎಸ್. ಎಂ. ಮುತ್ತಯ್ಯ ಇಂದ ಪುನರ್ನಿರ್ದೇಶಿತ)

ಡಾ. ಎಸ್. ಎಂ. ಮುತ್ತಯ್ಯ (ಡಿಸೆಂಬರ್ ೧೨, ೧೯೭೫) ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು ಕನ್ನಡ ಸಾಹಿತ್ಯ

ಡಾ. ಎಸ್. ಎಂ. ಮುತ್ತಯ್ಯ
Born
ಎಸ್. ಎಂ. ಮುತ್ತಯ್ಯ

೧೨ ಡಿಸೆಂಬರ್ ೧೯೭೫
ನಲಗೇತನಹಟ್ಟಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.
Nationalityಭಾರತೀಯ
Occupation(s)ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು.

ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ವಿಮರ್ಶೆ, ಜಾನಪದ, ಸಂಸ್ಕೃತಿ ಮತ್ತು ಬುಡಕಟ್ಟು ಅಧ್ಯಯನ ಕುರಿತಾದ ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ .ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಜನನ, ಜೀವನ

[ಬದಲಾಯಿಸಿ]

ಎಸ್. ಎಂ. ಮುತ್ತಯ್ಯ ಇವರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು 'ನಲಗೇತನಹಟ್ಟಿ' ಗ್ರಾಮದಲ್ಲಿ ೧೯೭೫ ರಲ್ಲಿ ಜನಿಸಿದರು. ನಾಯಕ ಜನಾಂಗಕ್ಕೆ ಸೇರಿದ ಇವರು ನಲಗೇತನಹಟ್ಟಿಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಮುಗಿಸಿ, ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಪಿ.ಯು.ಸಿ. ಶಿಕ್ಷಣ, ಚಳ್ಳಕೆರೆಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ೯ನೇ ರಾಂಕಿನೊಂದಿಗೆ ಬಿ.ಎ. ಪದವಿ. ಕುವೆಂಪು ವಿಶ್ವವಿದ್ಯಾಲಯಲ್ಲಿ ೧೯೯೯ ರಲ್ಲಿ ಎರಡನೇ ರಾಂಕಿನೊಂದಿಗೆ ಕನ್ನಡ ಎಂ.ಎ. ಪದವಿ. ೧೯೯೯ ರಲ್ಲಿ ಯು.ಜಿ.ಸಿ ನೆಟ್ (ಜೆ.ಆರ್.ಎಫ಼್) ತೇರ್ಗಡೆ. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

ಕೃತಿಗಳು[ಬದಲಾಯಿಸಿ]

[ಬದಲಾಯಿಸಿ]

ಪಿ.ಎಚ್ ಡಿ ಸಂಶೋಧನಾ ಪ್ರಬಂಧ

[ಬದಲಾಯಿಸಿ]
  • ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಸಾಂಸೃತಿಕ ಮುಖಾಮುಖಿಯ ಸ್ವರೂಪಗಳು, ೨೦೦೪

ಕೃತಿಗಳು

[ಬದಲಾಯಿಸಿ]
  1. ಲಿಖಿತ-ಅಲಿಖಿತ, (೨೦೦೫)
  2. ಜಾನಪದ ಸಂಕಥನ, (೨೦೦೭)
  3. ಜನಪದ ಮಹಾಕಾವ್ಯಗಳು ಮತ್ತು ಪ್ರತಿಸಂಸ್ಕೃತಿ, (೨೦೦೮)
  4. ವಾಲ್ಮೀಕಿ ಜ್ಯೋತಿ (ಸಹ ಸಂಪಾದನೆ), ೨೦೦೩
  5. ಕಿಲಾರಿ (ಕಿಲಾರಿಯ ಆತ್ಮಕತೆ ನಿರೂಪಣೆ), ೨೦೦೮
  6. ಬಡಗಿಕಟ್ಟಿದ ಬೆಡಗಿನ ಮಾಳಿಗೆ (ಸಂ), ೨೦೧೧
  7. ಬುಡಕಟ್ಟು ಬೆರಗು, ೨೦೧೧
  8. ಕನ್ನಡ ಜನಪದ ಸಂಸ್ಕೃತಿ, ೨೦೧೨,
  9. ಶಿಕ್ಷಣ ಮತ್ತು ಸಮಾಜ (ಸಂ), ೨೦೧೨

ಸಂಶೋಧನಾ ಯೋಜನೆಗಳು

[ಬದಲಾಯಿಸಿ]
  1. ಮ್ಯಾಸಬೇಡರ ನ್ಯಾಯಪದ್ಧತಿ (ಯು.ಜಿ.ಸಿ)
  2. ಚಿತ್ರದುರ್ಗಜಿಲ್ಲೆಯ ಪಶುಪಾಲನಾ ಸಂಸ್ಕೃತಿ (ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ)

ಉಲ್ಲೇಖಗಳು

[ಬದಲಾಯಿಸಿ]