ವಿಷಯಕ್ಕೆ ಹೋಗು

ಡಾಲಿ ಗುಲೇರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ಡಾಲಿ ಗುಲೇರಿಯಾ (ಜನನ ೧೪ ಏಪ್ರಿಲ್ ೧೯೪೯) ಒಬ್ಬ ಭಾರತೀಯ ಗಾಯಕಿ, ಮುಖ್ಯತಃ ಪಂಜಾಬಿ ಜಾನಪದ ಗಾಯಕಿಯಾಗಿದ್ದು, ಪಂಜಾಬಿ ಜಾನಪದ, ಶಾಬಾದ್ ಗುರ್ಬಾನಿ, ಸೂಫಿ ಮತ್ತು ಗಝಲ್ ಸಂಗೀತ ಪ್ರಕಾರಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅವರು ಪ್ರೊಫೆಸರ್ ಜೋಗೀಂದ್ರ ಸಿಂಗ್ ಮತ್ತು ಪೌರಾಣಿಕ ಜಾನಪದ ಗಾಯಕಿ ಸುರಿಂದರ್ ಕೌರ್ ಅವರ ಮಗಳಾಗಿದ್ದು, ಇವರನ್ನುಪಂಜಾಬ್ ನೈಟಿಂಗೇಲ್ ಎಂದು ಕರೆಯುತ್ತಾರೆ.[೧]

ವೃತ್ತಿ[ಬದಲಾಯಿಸಿ]

ಡಾಲಿ ಅವರು ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ವೈದ್ಯೆಯಾಗಬೇಕು ಎಂಬ ಹಂಬಲವನ್ನು ಹೊಂದಿದ್ದರು. ೧೯೭೦ ರಲ್ಲಿ ಅವರು ಆರ್ಮಿ ಆಫೀಸರ್ ಕರ್ನಲ್ ಎಸ್.ಎಸ್.ಗುಲೇರಿಯ ಅವರನ್ನು ವಿವಾಹವಾದರು.[೨] ಈ ದಂಪತಿಗಳಿಗೆ ಸುನೈನಿ ಶರ್ಮಾ ಎಂಬ ಮಗಳು ಮತ್ತು ದಿಲ್‌ಪ್ರೀತ್ ಸಿಂಗ್ ಮತ್ತು ಅಮನ್‌ಪ್ರೀತ್ ಸಿಂಗ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳಾದ ಬಳಿಕ ಕೂಡಾ ಡಾಲಿಯವರಿಗೆ ಶಾಸ್ತ್ರೀಯ ಸಂಗೀತದ ತರಬೇತಿಯನ್ನು ಮುಂದುವರಿಸಲು ಅವರ ಪತಿಯು ಪ್ರೋತ್ಸಾಹಿಸಿದರು. ನಂತರ ಅವರು ಪಟಿಯಾಲ ಘರಾನಾದ 'ಖಾನ್ ಸಾಹಿಬ್' ಅಬ್ದುಲ್ ರೆಹಮಾನ್ ಖಾನ್‍ರವರ ಶಿಷ್ಯೆಯಾಗಿ ತರಬೇತಿಯನ್ನು ಪಡೆದರು. ಶಾಸ್ತ್ರೀಯ ಸಂಗೀತದ ಕ್ಷೇತ್ರ,[೩] ಲಘು ಶಾಸ್ತ್ರೀಯ ಮತ್ತು ಜಾನಪದ ಗಾಯನದಲ್ಲಿ ಪರಿಣತಿಯನ್ನು ಹೊಂದಿದರು. ಬಾಲ್ಯದಿಂದಲೂ ಭಕ್ತಿಯ ಒಲವನ್ನು ಹೊಂದಿದ್ದ ಡಾಲಿ ಗುಲೇರಿಯಾ ಅವರು, ಉಸ್ತಾದ್ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಗುಬ್ರಾನಿಯ ವಿವಿಧ ರಾಗಗಳಲ್ಲಿ ತನ್ನ ಏಕವ್ಯಕ್ತಿ ಗಾಯನದ ಆಲ್ಬಂ ಅನ್ನು ಬಿಡುಗಡೆಮಾಡಿದರು ಮತ್ತು ರೆಹ್ರಾಸ್ ಸಾಹಿಬ್ ಮತ್ತು ಪಾತ್ ಎಂಬ ಹಾಡುಗಳನ್ನು ಅವುಗಳ ಮೂಲ ರಾಗಗಳಲ್ಲಿ ಹಾಡಿದರು. ತರುವಾಯ, ಪಂಜಾಬಿ ಜಾನಪದ ಗೀತೆಗಳ ಆಲ್ಬಮ್‌ಗಳನ್ನು ಬಿಡುಗಡೆ ಮಾಡಿದ್ದು, ಕೆಲವು ಅವರ ತಾಯಿಯೊಂದಿಗೆ [೪] ಮತ್ತು ಕೆಲವು ಏಕವ್ಯಕ್ತಿ ಗಾಯನವೂ ಸೇರಿದಂತೆ ಶಾಬಾದ್ ಕೀರ್ತನ್, ಶಿವ ಕುಮಾರ್ ಬಟಾಲ್ವಿಯವರ ಕವನ, [೫] ಭಾಯಿ ವೀರ್ ಸಿಂಗ್ ಮತ್ತು ಇತರ ಪ್ರಸಿದ್ಧ ಬರಹಗಾರರ ರಚನೆಗಳನ್ನು ಹಾಡಿದರು. [೬]

ಪಂಜಾಬಿ ಚಲನಚಿತ್ರಗಳಾದ ರಬ್ ದಿಯಾನ್ ರಖಾನ್, ದೇಸನ್ ಪರ್ದೇಸ್ ಮತ್ತು ಮೈನ್ ಮಾ ಪಂಜಾಬ್ ದಿ ಗಳಲ್ಲಿ ಅವರು ಹಿನ್ನೆಲೆ ಗಾಯಕಿಯಾಗಿ ತಮ್ಮ ಧ್ವನಿಯನ್ನು ನೀಡಿದ್ದಾರೆ. [೬]

ಗುರುತಿಸುವಿಕೆ[ಬದಲಾಯಿಸಿ]

ನವೆಂಬರ್ ೧೯೯೭ರಲ್ಲಿ ಪಾಕಿಸ್ತಾನದಲ್ಲಿ ನಡೆದ ಸದ್ಭಾವನೆ ಮತ್ತು ಸಾಂಸ್ಕೃತಿಕ ವಿನಿಮಯದ ಭೇಟಿಯ ಸಮಯದಲ್ಲಿ ಡಾಲಿ ಮತ್ತು ಅವರ ಮಗಳು ಸುನೈನಿ ಶರ್ಮಾ ಲಾಹೋರ್‌ನ ಗಡಾಫಿ ಸ್ಟೇಡಿಯಂ ಮತ್ತು ಫೈಸಲಾಬಾದ್ (ಲ್ಯಾಲ್‌ಪುರ್) ಚೆನಾಬ್ ಕ್ಲಬ್‌ನಲ್ಲಿ ತಮ್ಮ ಸಂಗೀತದೊಂದಿಗೆ ಪಾಕಿಸ್ತಾನದ ಪ್ರೇಕ್ಷಕರನ್ನು ಆಕರ್ಷಿಸಿದರು. ಆಕೆಗೆ ಮಿನಾರ್-ಎ-ಪಾಕಿಸ್ತಾನದ ಚಿನ್ನದ ಫಲಕ [೬] ಮತ್ತು ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.

ವೈಯಕ್ತಿಕ ಜೀವನ[ಬದಲಾಯಿಸಿ]

ಅವರು ನೇರ ಸಂಗೀತ ಪ್ರದರ್ಶನಗಳನ್ನು ಕೊಡಲಿಚ್ಛಿಸುತ್ತಿದ್ದರು. ಪ್ರೇಕ್ಷಕರ ಪ್ರತಿಕ್ರಿಯೆಗಳು ಅವರ ಮೌಲ್ಯಗಳನ್ನು ವೃದ್ಧಿಸಲು ಸಹಾಯವಾಗುತ್ತಿತ್ತು. ಪಂಜಾಬಿ ಸಂಗೀತವನ್ನು ಅದರ ಶುದ್ಧ ರೂಪದಲ್ಲಿ ಜೀವಂತವಾಗಿರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಅವರು ಮಾಡಿದ್ದಾರೆ. [೭] ಪ್ರಸ್ತುತ, ಅವರು ತಮ್ಮ ನೈಟಿಂಗೇಲ್ ಮ್ಯೂಸಿಕ್ ಅಕಾಡೆಮಿಯಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುತ್ತಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://indianexpress.com/article/news-archive/ru-ba-ru-with-dolly-guleria/
  2. "Working Partners". Indian Express. 18 June 2010. Retrieved 1 April 2011.
  3. https://www.tribuneindia.com/1998/98jul31/art-trib.htm
  4. "Nightingale of Punjab: Surinder Kaur". positivenewsnetwork.in. 14 June 2020. Archived from the original on 29 ಜನವರಿ 2021. Retrieved 2 January 2021.
  5. "Ru-ba-ru with Dolly Guleria". Indian Express. 4 October 1999. Retrieved 1 April 2011."Ru-ba-ru with Dolly Guleria". Indian Express. 4 October 1999. Retrieved 1 April 2011.
  6. ೬.೦ ೬.೧ ೬.೨ "Her mother's daughter". The Tribune. 31 July 1998. Retrieved 1 April 2011."Her mother's daughter". The Tribune. 31 July 1998. Retrieved 1 April 2011.
  7. "Song Sung True". Indian Express. 23 April 2011. Retrieved 22 January 2021.
  8. Service, Tribune News. "Tributes paid to legendary music maestro Surinder Kaur". Tribuneindia News Service (in ಇಂಗ್ಲಿಷ್). Retrieved 2021-01-03.