ವಿಷಯಕ್ಕೆ ಹೋಗು

ಟೈಟನ್ ಕಂಪನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟೈಟಾನ್‌ ಇಂಡಸ್ಟ್ರೀಸ್‌ (Titan Industries) ಇಂದ ಪುನರ್ನಿರ್ದೇಶಿತ)
ಟೈಟಾನ್ ಇಂಡಸ್ಟ್ರೀಸ್
ಸಂಸ್ಥೆಯ ಪ್ರಕಾರಜಂಟಿ ಉದ್ಯಮ
ಸ್ಥಾಪನೆ೧೯೮೭
ಮುಖ್ಯ ಕಾರ್ಯಾಲಯಬೆಂಗಳೂರು, ಭಾರತ
ವ್ಯಾಪ್ತಿ ಪ್ರದೇಶ4 ಖಂಡಗಳು ಮತ್ತು 40 ದೇಶಗಳು. ಭಾರತ ಮತ್ತು ಪಶ್ಚಿಮ ಏಷ್ಯಾ, ಏಷ್ಯಾ ಪೆಸಿಫಿಕ್, ಆಫ್ರಿಕಾದ ರಾಷ್ಟ್ರಗಳು
ಪ್ರಮುಖ ವ್ಯಕ್ತಿ(ಗಳು)ಸರ್ಸೆಸ್ ದೇಸಾಯಿ (ಸಂಸ್ಥಾಪಕ)
ಉದ್ಯಮಕೈ ಗಡಿಯಾರಗಳು
ಉತ್ಪನ್ನಕೈ ಗಡಿಯಾರಗಳು, ಆಭರಣಗಳು, ಕನ್ನಡಕಗಳು & ಸೂಕ್ಷ್ಮ ಇಂಜಿನಿಯರಿಂಗ್ ಉತ್ಪನ್ನಗಳು
ಉದ್ಯೋಗಿಗಳು3,000
ಪೋಷಕ ಸಂಸ್ಥೆಟಾಟಾ ಸಮೂಹ
ಜಾಲತಾಣwww.titancompany.in

ಟೈಟಾನ್‌ ಇಂಡಸ್ಟ್ರೀಸ್ ‌ ಭಾರತದ ಒಂದು ಉದ್ದಿಮೆಯಾಗಿದ್ದು, ವಿಶ್ವದ ಐದನೆಯ ಅತಿದೊಡ್ಡ ಕೈಗಡಿಯಾರ ಉತ್ಪಾದಕ ಮತ್ತು ಭಾರತದಲ್ಲಿ ಅಗ್ರಸ್ಥಾನದಲ್ಲಿರುವ ಕೈಗಡಿಯಾರ ತಯಾರಿಕಾ ಸಂಸ್ಥೆಯಾಗಿದೆ. ಸಂಸ್ಥೆಯು ಟೈಟಾನ್‌, ಫಾಸ್ಟ್ರ್ಯಾಕ್‌, ಸೊನಾಟಾ, ನೆಬ್ಯೂಲಾ, ರಾಗಾ, ರೆಗಾಲಿಯಾ, ಝೂಪ್, ಹೀಲಿಯೋಸ್, ಆಕ್ಟೇನ್‌ ಮತ್ತು ಕ್ಸೈಲಿಸ್‌ ಮುದ್ರೆಯಡಿ ಕೈಗಡಿಯಾರಗಳನ್ನು ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಅತಿ ಪ್ರತಿಷ್ಠಿತ ಉದ್ದಿಮೆಗಳಲ್ಲೊಂದಾದ ಟಾಟಾ ಸಮೂಹ ಹಾಗೂ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ (ಟಿಡ್ಕೊ) ನಡುವಿನ ಒಂದು ಜಂಟಿ ವ್ಯಾಪಾರೀ ಸಾಹಸವಾಗಿದೆ. ಇದರ ಉತ್ಪಾದನಾ ಸಂಪುಟದಲ್ಲಿ, ಸಮಕಾಲೀನ ಹಾಗೂ ಸಾಂಪ್ರದಾಯಿಕ ವಿನ್ಯಾಸಗಳ ಕೈಗಡಿಯಾರಗಳು, ಬಿಡಿಭಾಗಗಳು ಹಾಗೂ ಆಭರಣಗಳು ಸೇರಿವೆ. ಟೈಟಾನ್ ವಿಶ್ವದ ಸುಮಾರು ೩೨ ದೇಶಗಳಿಗೆ ತನ್ನ ತಾಯಾರಿಕೆಯ ಕೈಗಡಿಯಾರಗಳನ್ನು ರಫ್ತು ಮಾಡುತ್ತದೆ. ಹೊಸೂರು, ಡೆಹರಾಡೂನ್‌ ಹಾಗೂ ಗೋವಾದಲ್ಲಿ ಉತ್ಪಾದನಾ ಘಟಕಗಳಿವೆ. ತಾನಿಷ್ಕ್‌ ಬ್ರ್ಯಾಂಡ್‌ ಹೆಸರಿನಡಿ ಚಿನ್ನ ಬೆಳ್ಳಿ ಮತ್ತು ವಜ್ರದ ಅಭರಣಗಳನ್ನು ತಯಾರಿಸುತ್ತದೆ. ಇದು ಭಾರತದ ಏಕೈಕ ರಾಷ್ಟ್ರೀಯ ಆಭರಣ ಬ್ರ್ಯಾಂಡ್‌ ಆಗಿದೆ.

ಕೈಗಡಿಯಾರ ಘಟಕ

[ಬದಲಾಯಿಸಿ]
A Sonata wrist watch
A wrist watch from TITAN

ಟೈಟಾನ್‌ ಕೈಗಡಿಯಾರ ಘಟಕವು 1987ರಲ್ಲಿ ಆರಂಭವಾಯಿತು. ಆರಂಭದಲ್ಲಿ, ಎಚ್‌ಎಂಟಿ ಮತ್ತು ಆಲ್ವಿನ್‌ ನಂತರ ಇದು ಭಾರತದಲ್ಲಿ ಸ್ಥಾಪಿಸಲಾದ ಮೂರನೆಯ ಕೈಗಡಿಯಾರ ಉದ್ದಿಮೆಯಾಗಿತ್ತು. ಟೈಟನ್ ಟೈಮೆಕ್ಸ್‌ನೊಂದಿಗೆ ಜಂಟಿ ವ್ಯಾಪಾರದ ಸಾಹಸ ನಡೆಸಿತು. ಆಗ 1998ರ ತನಕ ಮುಂದುವರೆದ ಈ ಒಪ್ಪಂದದಡಿ, ಭಾರತದೆಲ್ಲೆಡೆ ದೃಢ ಹಾಗೂ ವ್ಯಾಪಕ ವಿತರಣಾ ಜಾಲ ಸ್ಥಾಪಿಸಿತು. ಟೈಟಾನ್‌ ಕೈಗಡಿಯಾರಗಳು ಭಾರತೀಯ ಮಾರುಕಟ್ಟೆಯಲ್ಲಿ ನಡೆದ ಸಮೀಕ್ಷೆಯಂತೆ 2010ರ ಸುಮಾರಿಗೆ 60%ರಷ್ಟು ಪಾಲು ಹೊಂದಿದ್ದವು. ಲಂಡನ್‌, ಅಡೆನ್‌, ದುಬೈ ಹಾಗೂ ಸಿಂಗಪುರ ನಗರಗಳಲ್ಲಿ ಅಂಗಸಂಸ್ಥೆಗಳ ಮೂಲಕ, ಸುಮಾರು 40 ದೇಶಗಳಲ್ಲಿ ಟೈಟಾನ್‌ ಕೈಗಡಿಯಾರಗಳು ಮಾರಾಟವಾಗುತ್ತಿವೆ. ಭಾರತದಲ್ಲಿ, ಟೈಟಾನ್‌ ಇಂಡಸ್ಟ್ರೀಸ್‌ ಸ್ವಾಮ್ಯದಲ್ಲಿರುವ ಮಾರಾಟ ಮಳಿಗೆಗಳಲ್ಲಿಯೂ ಟೈಟಾನ್‌ ಕೈಗಡಿಯಾರಗಳು ಮಾರಾಟವಾಗುತ್ತವೆ.

ಟೈಟನ್ ಇಂಡಸ್ಟ್ರೀಸ್‌, ತಾನು ತಯಾರಿಸಿದ ಟೈಟಾನ್‌ ಎಡ್ಜ್‌ ಕೈಗಡಿಯಾರವು ವಿಶ್ವದಲ್ಲಿ ಅತಿ-ತೆಳ್ಳನೆಯ ಕೈಗಡಿಯಾರ ಎಂದು ಹೇಳಿಕೊಂಡಿದೆ.[] ನಾಲ್ಕು ವರ್ಷಗಳು ನಡೆಸಿದ ಸಂಶೋಧನೆ ಮತ್ತು ಅಭಿವೃದ್ಧಿಯ ಫಲವಾಗಿ, ಸಂಪೂರ್ಣ ದೇಶೀಯ ಉತ್ಪನ್ನವಾಗಿರುವ 'ಟೈಟಾನ್‌ ಎಡ್ಜ್'‌ ಕೇವಲ 3.5 ಮಿಮೀಗಳಷ್ಟು ತೆಳ್ಳಗಿನ ಗಾತ್ರ ಹೊಂದಿದೆ. ಅಲ್ಲದೇ ವಿಷೇಷವೆಂದರೆ ಬಹಳಷ್ಟು ತೆಳ್ಳಗಿನ - ಅಂದರೆ 1.15 ಮಿಮೀಗಳಷ್ಟು ಸಾಂದ್ರತೆಯಲ್ಲಿ ಗಡಿಯಾರ ಚಲನೆಯ ಭಾಗಗಳಿವೆ. ಟೈಟಾನ್‌ ಎಡ್ಜ್‌ ಅಲ್ಲದೆ, ಸ್ಟೀಲ್‌, ರೆಗಾಲಿಯಾ, ರಾಗಾ, ಫಾಸ್ಟ್ರ್ಯಾಕ್‌, ಟೆಕ್ನಾಲಜಿ, ನೆಬ್ಯೂಲಾ, ಬಂಧನ್‌, ಸೊನಾಟಾ, ಆಕ್ಟೇನ್‌ ಮತ್ತು ಆರ್ ಹೊಸುರ್ ನ ತಮಿಳುನಾಡು ಕೈಗಡಿಯಾರಗಳನ್ನು ಟೈಟಾನ್‌ ಪ್ರಸ್ತುತಪಡಿಸುತ್ತದೆ.

ಫಾಸ್ಟ್ರ್ಯಾಕ್‌ ಭಾರತದ ಯುವಕರಲ್ಲಿ ಅತಿ ಜನಪ್ರಿಯ ಕೈಗಡಿಯಾರವಾಗಿದೆ. ಫಾಸ್ಟ್ರ್ಯಾಕ್‌ ಕೈಗಡಿಯಾರಗಳು ವಿವಿಧ ಶೈಲಿ, ಆಕಾರ ಮತ್ತು ವರ್ಣಗಳಲ್ಲಿ ಲಭ್ಯ.

ಟೈಟಾನ್‌ ಇಂಡಸ್ಟ್ರೀಸ್‌ ತಮ್ಮ ಮೊಟ್ಟಮೊದಲ ಟೈಟಾನ್‌ ಪ್ರಮುಖ ಮಳಿಗೆಯ ಉದ್ಘಾಟನೆಯನ್ನು 2010ರ ಮಾರ್ಚ್‌ ನಲ್ಲಿ ಘೋಷಿಸಿತು. ಇದು ಭಾರತ ದೇಶದ ಮುಂಬಯಿ ನಗರದ ಬಾಂದ್ರಾ ಲಿಂಕಿಂಗ್‌ ರೋಡ್‌ನಲ್ಲಿ ಷಾಪರ್ಸ್‌ ಸ್ಟಾಪ್‌ ನ ಎದುರಿಗಿದೆ. ಈ ಮಳಿಗೆಯು ಬಹಳಷ್ಟು ವಿಶಾಲ ಹಾಗೂ ಸಾಕಷ್ಟು ಸ್ಥಳಾವಕಾಶವುಳ್ಳ 2,500 sq ft (230 m2)ಲ್ಲಿದೆ. ಇದರಲ್ಲಿ, ಪರ್ಪಲ್‌, ಆಟೊಮ್ಯಾಟಿಕ್ಸ್‌, ಒರಿಯಾನ್‌, ರಾಗಾ, ಎಡ್ಜ್‌, ನೆಬ್ಯೂಲಾ ಸೇರಿದಂತೆ, ಟೈಟಾನ್‌ನ ಸುಮಾರು 1500ಕ್ಕಿಂತಲೂ ಹೆಚ್ಚು ವಿಭಿನ್ನ ಕೈಗಡಿಯಾರಗಳನ್ನು ಪ್ರದರ್ಶನಕ್ಕಿಡಲಾಗಿದೆ.[]

ಖಚಿತ,ಕರಾರುವಕ್ಕಾದ ತಂತ್ರಜ್ಞಾನ ಘಟಕ (Precision Engineering Division)

[ಬದಲಾಯಿಸಿ]

ಟೈಟಾನ್‌ನ ನಿಷ್ಕೃಷ್ಟತಾ ತಂತ್ರಜ್ಞಾನ ಘಟಕ Archived 2012-02-11 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು 2002ರಲ್ಲಿ ಆರಂಭಿಸಲಾಯಿತು. ಮೋಟಾರು ಮತ್ತು ಅಂತರಿಕ್ಷಯಾನ ವೈಜ್ಞಾನಿಕ ಕ್ಷೇತ್ರಗಳಿಗಾಗಿ ನಿಷ್ಕೃಷ್ಟ ಬಿಡಿಭಾಗಗಳನ್ನು ತಯಾರಿಸುವ ಪ್ರಮುಖ ತಯಾರಕರಲ್ಲಿ ಟೈಟಾನ್‌ ಸಹ ಒಂದು.

ವಿವಿಧ ಬಗೆಯ ಉತ್ಪನ್ನಗಳ ಶ್ರೇಣಿಯಲ್ಲಿ ಪಾಯಿಂಟರ್‌ಗಳು, ಇಂಧನ ಮಾಪಕಗಳು (Fuel Gauge), ಉಷ್ಣಾಂಶ ಮಾಪಕ, ಗಿಯರ್‌ ಬದಲಾವಣಾ ಸೂಚಕ ಸೇರಿದಂತೆ ಡ್ಯಾಷ್ಬೋರ್ಡ್‌ ನಿಯಂತ್ರಕ ಸಂಪುಟ, ವಾಹನಗಳಿಗಾಗಿ ಗಡಿಯಾರಗಳು ಇನ್ಜೆಕ್ಷನ್‌-ಮೌಲ್ಡೆಡ್‌ ಪ್ಲ್ಯಾಸ್ಟಿಕ್‌ ಭಾಗಗಳು ಹಾಗೂ ವಾಹನಗಳಿಗಾಗಿ ವಿದ್ಯುತ್‌-ಯಾಂತ್ರಿಕ ಜೋಡಣೆಗಳು, ಎಲ್ಲಾ ರೀತಿಯ ಹೊಂದಿಸುವಿಕೆಯ ಬಿಡಿಭಾಗಗಳು ಸಹ ಉತ್ಪಾದನೆ ಮಾಡಲಾಗುತ್ತದೆ. ನಿಷ್ಕೃಷ್ಟತಾ ತಂತ್ರಜ್ಞಾನ ಘಟಕದ ಸಲಕರಣೆ ವಿಭಾಗದಲ್ಲಿ (Tooling Sector) ವಿವಿಧ ಕೈಗಾರಿಕೆಗಳಿಗಾಗಿ ಎಲ್ಲಾ ರೀತಿಯ ಪ್ರೆಸ್‌ ಟೂಲ್ಸ್‌ಗಳು, ಮೌಲ್ಡ್‌ಗಳು,ಬಿಗಿತಗೊಳಿಸುವ ಸಾಧನಗಳು, ನೆಲೆವಸ್ತುಗಳನ್ನು ತಯಾರಿಸಲಾಗುತ್ತದೆ.

ನಿಷ್ಕೃಷ್ಟ ತಂತ್ರಜ್ಞಾನ ವಿಭಾಗದ ಅಂಗಸಂಸ್ಥೆಯಾದ ಟೈಟಾನ್‌ ಆಟೋಮೇಷನ್‌ ಸೊಲ್ಯೂಷನ್ Archived 2018-05-04 ವೇಬ್ಯಾಕ್ ಮೆಷಿನ್ ನಲ್ಲಿ.‌, ಎಲ್ಲಾ ಬಗೆಯ ಕೈಗಾರಿಕೆಗಳಿಗಾಗಿ ಸ್ವಯಂಚಾಲನಾ ತಂತ್ರ ವ್ಯವಸ್ಥೆ ಸೇವೆ ಒದಗಿಸುತ್ತದೆ. ಟಾಟಾ ಕೆಮಿಕಲ್ಸ್‌ ಅಭಿವೃದ್ಧಿಪಡಿಸಿದ ಟಾಟಾ ಸ್ವಾಚ್‌ ಎಂಬ ಅಗ್ಗ-ಬೆಲೆಯ ನೀರು ಶುದ್ಧಿಕಾರಿ ತಯಾರಿಕೆಯ ವಿವಿಧ ಹಂತಗಳಲ್ಲಿ ಹೆಚ್ಚು ಮೌಲ್ಯ ಸೇರಿಸಲು ಈ ಸಂಸ್ಥೆ ಗಮನಾರ್ಹ ಕೊಡುಗೆ ನೀಡಿದೆ. ಭಾರೀ ಪ್ರಮಾಣದಲ್ಲಿ ಟಾಟಾ ಸ್ವಾಚ್‌ ತಯಾರಿಸಲು ಬೇಕಾದ ವಿಶೇಷ ಜೋಡಣಾ ಯಂತ್ರಗಳ ಅಭಿವೃದ್ಧಿಗಾಗಿ ಸ್ವಯಂಚಾಲನಾ ತಂತ್ರಗಳನ್ನು ಪೂರೈಸಲು ಆಟೊಮೇಷನ್‌ ಸೊಲ್ಯೂಷನ್‌ ತನ್ನ ನಿಷ್ಕೃಷ್ಟತಾ ತಂತ್ರಜ್ಞಾನವನ್ನು ಅಳವಡಿಸಿದೆ.[]

ಆಭರಣ ವಿಭಾಗ

[ಬದಲಾಯಿಸಿ]

ತಾನಿಷ್ಕ್‌ ಭಾರತದಲ್ಲಿ ಅತಿ ಪ್ರಮುಖ ಆಭರಣ ಬ್ರ್ಯಾಂಡ್‌ ಆಗಿದೆ. ಇದು ಭಾರತದಲ್ಲಿ ಪ್ರತಿಷ್ಠಿತ ಹೆಸರುಳ್ಳ (ಬ್ರ್ಯಾಂಡೆಡ್‌) ಆಭರಣಗಳ ಪರಿಕಲ್ಪನೆಗೆ ಹರಿಕಾರವಾಯಿತು. ತಾನಿಷ್ಕ್‌ ಎಂಬ ಹೆಸರು, Ta (Tata ಹೆಸರಿನ ಮೊದಲೆರಡು ಹೆಸರುಗಳು) ಮತ್ತು Nishk ಅಥವಾ Nishkh (ಸಂಸ್ಕೃತ ಭಾಷೆಯಲ್ಲಿ ಚಿನ್ನದ ನಾಣ್ಯ ಅಥವಾ ಸರ) ಎಂಬ ಹೆಸರಿನ ಜೋಡಣೆಯಿಂದ ಮೂಡಿಬಂದಿದೆ.[]

ತಾನಿಷ್ಕ್‌ ಭಾರತದಲ್ಲೇ ಅತಿದೊಡ್ಡ ಆಭರಣ ಬ್ರ್ಯಾಂಡ್‌ ಆಗಿದೆ. ಇದರಲ್ಲಿ, ವಜ್ರ ಅಥವಾ ಬಣ್ಣದ ಹರಳುಗಳುಳ್ಳ 22 ಕ್ಯಾರಟ್‌ ಶುದ್ಧ ಚಿನ್ನದ ಆಭರಣಗಳ ವಿಶಾಲ ಶ್ರೇಣಿಯಿದೆ. ಇದು ಇಂದು ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಆಭರಣ ಮಾರುಕಟ್ಟೆಯ ಬ್ರ್ಯಾಂಡ್‌ ಆಗಿದೆ. [ಸಾಕ್ಷ್ಯಾಧಾರ ಬೇಕಾಗಿದೆ] ಇತ್ತೀಚಿಗೆ 1995ರಲ್ಲಿ ಸ್ಥಾಪಿತ ತಾನಿಷ್ಕ್‌ ಆಗಲೇ ದೃಢ ನೆಲೆ ಹೊಂದಿದ್ದ ವಂಶಪಾರಂಪರಿಕ ಕೌಟುಂಬಿಕ ಆಭರಣಗಾರರಿಗೆ ಸವಾಲೊಡ್ಡಿ, ಅತ್ಯಮೂಲ್ಯ ಆಭರಣಗಳಲ್ಲಿ ಹೊಸ ರೀತಿಗಳನ್ನು ಪರಿಚಯಿಸಿತು. ಈ ಪರಂಪಾರಗತ ಕುಸರಿ ಕಲೆಯ ವರ್ಗವು ನಾಗರಿಕತೆಯಷ್ಟು ಹಳೆಯದಾಗಿತ್ತು. ಬಹಳ ವರ್ಷಗಳಿಂದ ನೆಲೆಯೂರಿದ್ದ ಆಭರಣಗಾರರ ಕ್ಷೇತ್ರದಲ್ಲಿ ಪ್ರವೇಶಿಸಿ, ಸವಾಲೊಡ್ಡಿದ ತಾನಿಷ್ಕ್, ಟಾಟಾ ಛಾಪು ಹೊತ್ತಿದೆ.ಅಲ್ಲದೇ ಪರಿಶುದ್ಧತೆಯ ಭರವಸೆ ಎಂದರೆ ಟಾಟಾ ಗ್ಯಾರಂಟಿಯ ಶುದ್ದತೆ ಎಂಬ ಘೋಷಣೆ ಮೊಳಗಿಸಿತು. ‌ ಆದರೆ, ಈ ಆಭರಣ ವ್ಯವಹಾರದಲ್ಲಿ ಪ್ರವೇಶಿಸಿದ ತಾನಿಷ್ಕ್‌ನ ಆರಂಭಿಕ ವಹಿವಾಟಿನಲ್ಲಿ ಸೂರೆ ಮಾಡುವ ಯತ್ನ ವಿಫಲವಾಗಿತ್ತು. ಮೊದಲಿಗೆ, ತಾನಿಷ್ಕ್‌ 18 ಕ್ಯಾರಟ್‌ ಚಿನ್ನದ ಆಭರಣವನ್ನು ಪರಿಚಯಿಸಿ, 18 ಕ್ಯಾರಟ್‌ 'ಅಂತರರಾಷ್ಟ್ರೀಯ ಪ್ರಮಾಣಿತ ಮಟ್ಟ' ಎಂಬ ಜಾಹೀರಾತು ಹೊರಡಿಸಿತು. ಆದರೆ 22 ಕ್ಯಾರಟ್‌ ಚಿನ್ನಾಭರಣಗಳು ಪ್ರಾಬಲ್ಯ ಮೆರೆಯುತ್ತಿದ್ದ ಮಾರುಕಟ್ಟೆಯಲ್ಲಿ ಕಡಿಮೆ ಶುದ್ಧತೆಯ 18 ಕ್ಯಾರಟ್‌ ಚಿನ್ನವನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು. ಆನಂತರ, ಚಿನ್ನದ ಶುದ್ಧತೆಯಲ್ಲಿ ನಡೆಯುವ ಮೋಸದ ಜಾಲದ ಕುರಿತು ಮಾಹಿತಿ-ಜಾಹೀರಾತುಗಳನ್ನು ಪ್ರಕಟಿಸಿ ಅದು ಭಾರತದೆಲ್ಲೆಡೆ ಮಾರುಕಟ್ಟೆಯಲ್ಲಿ ಕೋಲಾಹಲವೆಬ್ಬಿಸಿತು. ವ್ಯಕ್ತಿಗತ ಅಂಧ ವಿಶ್ವಾಸದ ಮೇಲೆ ನಡೆಯುತ್ತಿದ್ದ ಇಂತಹ ಕ್ಷೇತ್ರದಲ್ಲಿ ದಿಢೀರನೆ ಪ್ರವೇಶಿಸಿದ ತಾನಿಷ್ಕ್‌ ತಂತ್ರಜ್ಞಾನ-ಬೆಂಬಲದೊಂದಿಗೆ ಸವಾಲೊಡ್ಡಿತು. ಚಿನ್ನದ ಶುದ್ಧತೆ ಅಳೆಯುವ,ಅದರ ಕ್ಷಯವನ್ನು ನಿಯಂತ್ರಿಸುವ ಏಕೈಕ ರೀತಿ ಎನ್ನಲಾದ ಕ್ಯಾರಟ್‌ಮೀಟರ್‌ ಎಂಬ ನವೀನ ಯಂತ್ರವನ್ನು ತಾನಿಷ್ಕ್‌ ಪರಿಚಯಿಸಿತು. ಅಲ್ಲದೆ, ಗ್ರಾಹಕರಿಗೆ ಇನ್ನೂ ಉತ್ತಮ ಹೊಳಪು ಮತ್ತು ಮೌಲ್ಯ ನೀಡುವಂತಹ ಯಂತ್ರ-ನಿರ್ಮಿತ ಆಭರಣ, ಹಾಗೂ, ಭಾರತದಲ್ಲಿ ವಿವಿಧ ಆಭರಣ ಸಂಪ್ರದಾಯಗಳಿಂದ ಪ್ರಭಾವಿತವಾಗಿರುವ, ಕೈಯಿಂದಲೇ ಸಿದ್ಧಪಡಿಸಿದ ಆಭರಣಗಳನ್ನೂ ತಾನಿಷ್ಕ್‌ ಪರಿಚಯಿಸಿತು.

ತಾನಿಷ್ಕ್‌ ಭಾರತದಲ್ಲಿ ಆಭರಣ ಕೈಕುಸರಿ ಕಲೆಗಳ ಬಗ್ಗೆ ಕೂಲಂಕಷ ಸಂಶೋಧನೆ ನಡೆಸಿ, ನಿರ್ಮಾಣ ಮತ್ತು ಆರಂಭಿಕ ವಸ್ತುಗಳನ್ನು ಪಡೆಯುವ ಮೂಲಗಳನ್ನು ಖಚಿತಪಡಿಸಿಕೊಂಡಿದೆ. 135,000 sq ft (12,500 m2) ತಯಾರಿಕಾ ಘಟಕದಲ್ಲಿ ಬಹಳಷ್ಟು ಇತ್ತೀಚೆಗಿನ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳಿವೆ. ತಮಿಳುನಾಡಿನ ಹೊಸೂರಿನಲ್ಲಿರುವ ಈ ತಯಾರಿಕಾ ಘಟಕವು ಎಲ್ಲಾ ಶ್ರಮಿಕ ಮತ್ತು ಪರಿಸರೀಯ ಪ್ರಮಾಣಿತ ನಿಯಮಾವಳಿಗಳನ್ನು ಪಾಲಿಸುತ್ತದೆ. ವಿವಿಧ ಶೈಲಿಗಳಲ್ಲಿ ಆಭರಣಗಳನ್ನು ತಯಾರಿಸುವ ಕಾರಿಗಾರರ (ಕುಶಲ ಕರ್ಮಿಗಳ)ಕಾರ್ಯಗಳನ್ನು ಈ ಬ್ರ್ಯಾಂಡ್‌ ಒಟ್ಟಿಗೆ ತರುತ್ತದೆ. ಇತರೆ ಆಭರಣಕಾರರೊಂದಿಗೆ ಕೆಲಸ ಮಾಡಿ, ಶೋಷಣೆಗೊಳಗಾಗುವ ಕಾರಿಗಾರರು, ತಾನಿಷ್ಕ್‌ ಉದ್ದಿಮೆಯಲ್ಲಿ ಸೂಕ್ತ ಮಟ್ಟದ ವೇತನ ಹಾಗೂ ಅನುಕೂಲಕರ ವಾತಾವರಣಗಳಲ್ಲಿ ಕೆಲಸ ಮಾಡುವರು.

ಪ್ರಿಸ್ಕ್ರಿಪ್ಷನ್‌ ಐವೇರ್‌ ಡಿವಿಷನ್‌ (ಪಿಇಡಬ್ಲ್ಯೂ)

ಪಿಇಡಬ್ಲ್ಯೂ ಕ್ಷೇತ್ರವು ಟೈಟಾನ್‌ನ ಇತ್ತೀಚೆಗಿನ ಮಾರಾಟ ವಲಯದ ಸಾಹಸದ ಯತ್ನವಾಗಿದೆ. ದೇಶಾದ್ಯಂತ ಈ ಉದ್ದಿಮೆಯಲ್ಲಿ "ಟೈಟಾನ್‌ ಐ+" ಬ್ರ್ಯಾಂಡ್‌ನಡಿ 48 ಮಳಿಗೆಗಳಿವೆ. ಮುಂದಿನ ಕೆಲವು ವರ್ಷಗಳಲ್ಲಿ ಉದ್ದಿಮೆಯು 250 ಮಳಿಗೆಗಳನ್ನು ಸ್ಥಾಪಿಸುವ ವಿಸ್ತೃತ ಯೋಜನೆ ಹೊಂದಿದೆ.

ಫೇಸ್‌ ಆಫ್‌ ಟೈಟಾನ್‌ (ಟೈಟಾನ್‌ ನ ವ್ಯಕ್ತಿತ್ವ)

[ಬದಲಾಯಿಸಿ]

ಇಂತಹ ಮಾರುಕಟ್ಟೆಯಲ್ಲಿ ಅತಿ ಪ್ರತಿಭಾವಂತರಾದ ಮಾರಾಟಗಾರರು, ವ್ಯವಸ್ಥಾಪಕ, ಸೇವಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಮತ್ತು ಕ್ಯಾಷಿಯರ್‌ರನ್ನು ಗುರುತಿಸಲು, ಟೈಟಾನ್‌ ಉದ್ದಿಮೆಯು ಅಪೂರ್ವ ಸ್ಪರ್ಧೆಯನ್ನು ಆಯೋಜಿಸುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] ಕೇವಲ ಮಾರಾಟ ಮಾತ್ರ ಗಣನೆಗೆ ತೆಗೆದು ಕೊಳ್ಳದೇ, ಇಲ್ಲಿ ತಿಳಿಸಲಾದ ಪ್ರತಿಯೊಂದು ವರ್ಗಗಳಲ್ಲಿ ವ್ಯಕ್ತಿಯ ಒಟ್ಟಾರೆ ವಿಕಸನದ ಮಾಪನಗಳನ್ನು ಸ್ಪರ್ಧೆಯು ಲೆಕ್ಕಿಸಿ ಅತ್ಯುತ್ತಮ ವ್ಯಕ್ತಿಗಳನ್ನು ಗುರುತಿಸುತ್ತದೆ.

ಗ್ರಾಹಕರೊಂದಿಗೆ ಆಗಾಗ್ಗೆ,ನಿರಂತರವಾಗಿ ಸಂಪರ್ಕ ಹೊಂದಿರುವ ಮುಂಚೂಣಿ ಸಿಬ್ಬಂದಿಯ ಮೌಲ್ಯಮಾಪನ ನಡೆಸಲೆಂದು, ಅಪರ್ಣಾ ಪೊನ್ನಪ್ಪ ಅವರು ಈ ರೀತಿಯ ನವೀನ ಸ್ಪರ್ಧೆಯನ್ನು ಆಯೋಜಿಸಿದ್ದರು. ಆ ಸಮಯದಲ್ಲಿ ಸಿಬ್ಬಂದಿವರ್ಗವು ತಾವು ಅತ್ಯುತ್ತಮ ಕೆಲಸ ಮಾಡುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಕಾರ್ಯಕ್ರಮದ ಮೂಲಕ, ಟೈಟಾನ್‌ ಉದ್ದಿಮೆಯ ಕಿರುಕಳ ಮಾರಾಟದ ವಲಯದಲ್ಲಿ ಹೆಚ್ಚಿನ ಒತ್ತು ನೀಡಿತು.ಕುಶಲಮತಿ ಸಿಬ್ಬಂದಿಗೆ ತಮ್ಮ ನೈಪುಣ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು, ಆರೋಗ್ಯಕರ ಮತ್ತು ವಿನೋದಮಯ ವಾತಾವರಣದಲ್ಲಿ ಸ್ಪರ್ಧಿಸಿ ತಮ್ಮ ಕೆಲಸಗಳಲ್ಲಿ ಪ್ರತಿಭೆ ಸಾಧಿಸಿ ತೋರಿಸಲು ಅವಕಾಶ ದೊರಕಿತು.

ಮಾಹಿತಿ ತಂತ್ರಜ್ಞಾನದ ಪರಿಚಯವಾಗಿ, ತನ್ನ 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಮೀಕ್ಷಾ ಮಾಹಿತಿಯನ್ನು ಪಡೆಯುವುದರೊಂದಿಗೆ, 2006-07ರ ಅವಧಿಯಲ್ಲಿ ಈ ಸ್ಪರ್ಧೆಯು ಡಿಜಿಟಲ್‌ ಯುಗಕ್ಕೆ ಜಿಗಿಯಿತು. ಅದೇ ವರ್ಷ, ಐ.ಜೆನ್‌ ಲ್ಯಾಬ್ಸ್‌ ಅಭಿವೃದ್ಧಿಗೊಳಿಸಿದ, ಅಂತರಜಾಲದ ಮೇಲೆ ಚಾಲಿತ ತಂತ್ರಾಂಶದ ಮೂಲಕ, ಅಂಗಡಿ ಮಟ್ಟದಲ್ಲಿ ಸಂಗ್ರಹಿಸಲಾದ ಮಾಹಿತಿಯ ಮೂಲಕ ಹಲವು ವಿವಿಧ ಮಟ್ಟಗಳಲ್ಲಿ ಸಿಬ್ಬಂದಿಯ ಮಾಹಿತಿಯನ್ನು ಕಲೆಹಾಕಲಾಯಿತು.

ಭಾರತೀಯ(ಶೇರು ಪೇಟೆ) ಸ್ಟಾಕ್‌ ಮಾರುಕಟ್ಟೆ (ಎನ್‌ಎಸ್‌ಇ)ಯಲ್ಲಿ ಟೈಟಾನ್‌ ಉದ್ದಿಮೆಯು ಒಳ್ಳೆಯ ಸ್ಥಾನಮಾನ ಗಳಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Titan launches Edge, the slimmest watch in the universe" (Press release). 2002-05-21. Archived from the original on 2006-05-12. Retrieved 2006-08-04. {{cite press release}}: Unknown parameter |Ápublisher= ignored (help)
  2. "Titan presents a luxurious shopping experience at India's most beautiful watch store". 4 March 2010. Archived from the original on 27 ಮಾರ್ಚ್ 2012. Retrieved 9 March 2010.
  3. "ಟಾಟಾ ಸ್ವಾಚ್‌". Archived from the original on 2011-03-16. Retrieved 2011-01-31.
  4. WIPO, Arbitration and Mediation Center. "Titan Industries Limited v. Tanishq Corporation". Case No. D2000-1793. Retrieved 2006-09-26.


ಬಾಹ್ಯ ಕೊಂಡಿಗಳು

[ಬದಲಾಯಿಸಿ]