ಟೆಟ್ರಾಖ್ರೋಮ್ಯಾಟಿಕ್ ನೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಟ್ರಾಖ್ರೋಮ್ಯಾಟಿಕ್ (Tetrachromacy) ನೋಟ ಬಣ್ಣ ಮಾಹಿತಿಯನ್ನು ಒದಗಿಸಲು, ನಾಲ್ಕು ರೀತಿಯ ಕಣ್ಣಿನ ಕೋನ್ ಕೋಶಗಳು ಅಥವಾ ನಾಲ್ಕು ಸ್ವತಂತ್ರ ಚಾನಲ್ ಹೊಂದಿರುವ ಸ್ಥಿತಿಯಾಗಿದೆ. tetrachromacy ಹೊಂದಿರುವ ಜೀವಿಗಳಿಗೆ tetrachromats ಕರೆಯಲಾಗುತ್ತದೆ. ಪಕ್ಷಿಗಳು, ಮೀನು, ಉಭಯಚರಗಳು, ಸರೀಸೃಪಗಳು, ಕೀಟಗಳು ಮತ್ತು ಕೆಲವು ಸಸ್ತನಿಗಳಲ್ಲಿ ನಿರೂಪಿಸಲಾಗುತ್ತದೆ. ಇದು ಹಿಂದೆ ಹೆಚ್ಚಿನ ಸಸ್ತನಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸ್ತಿಥಿಯಾಗಿದ್ದು; ಒಂದು ಆನುವಂಶಿಕ ಬದಲಾವಣೆಯು ಅಂತಿಮವಾಗಿ ತಮ್ಮ ನಾಲ್ಕು ಕೋನ್ಗಳಲ್ಲಿ ಎರಡು ಕಳೆದುಕೊಳ್ಳಬೇಕಾಯಿತು. ಇಂತಹ ಜೀವಿಯ ರೆಟಿನಾದ ಬೆಳಕಿನ ಗ್ರಾಹಕಗಳ ನಾಲ್ಕು ರೀತಿಯ ಕೋನ್ ಕೋಶಗಳು ಇರುತ್ತವೆ . ಈ ಜೀವಿಗಳಿಗೆ ಸಾಮಾನ್ಯ ಮಾನವನ ದೃಷ್ಟಿಯಿಂದ ಮೀರಿ ಇತರ ತರಂಗಾಂತರಗಳನ್ನು ನೋಡಬಹುದು. ಒಂದು ಸಾಮಾನ್ಯ ಮಾನವನಿಗೆ 300-400 nmನಲ್ಲಿರುವ ನೇರಳಾತೀತ ಬೆಳಕನ್ನು ನೋಡಲಾಗುವುದಿಲ್ಲ, ಆದರೆ ಟೆಟ್ರಾಖ್ರೋಮ್ಯಾಟಿಕ್ ನೋಟದಿಂದ ಒಂದೇ ಕಾಣುವ ಬಣ್ಣಗಳ ನಡುವೆ ವ್ಯತ್ಯಾಸ ಹೇಳಲು ಸಾಧ್ಯವಾಗುತ್ತದೆ.ಸಾಮಾನ್ಯ ಮಾನವನಿಗೆ ಹತ್ತುಲಕ್ಷ ಬಣ್ಣ್ಣ ನೋಡಲು ಹಾಗು ಗುರುತಿಸಲು ಸಾಧ್ಯವಾಗುತ್ತದೆ ಆದರೆ ಇವರಿಗೆ ೧೦೦ ಹತ್ತುಲಕ್ಷ ಬಣ್ಣಗಳನ್ನು ಗ್ರಹಿಸಲು ಆಗುತ್ತದೆ[೧]. ಕೋನ್ ಕೋಶಗಳು ಕೆಂಪು, ಹಸಿರು, ನೀಲಿ ಮತ್ತು ನೇರಳಾತೀತ ಬೆಳಕನ್ನು ನೋಡುವ ಸೂಕ್ಷ್ಮ ದೃಷ್ಟಿ ಹೊಂದಿರುವ tetrachromatsಗಳಿಗೆ ಜೀಬ್ರಾಫಿಶ್,ಗೋಲ್ಡ್ ಫಿಷ್ ಉದಾಹರಣೆ.ಸಾಮಾನ್ಯವಾಗಿ ಮಾನವರು trichromats. ಆದರೆ ಕೆಲವು ಆನುವಂಶಿಕ ಪರಿವರ್ತನೆಯಿಂದ ಮನುಶ್ಯರಲ್ಲಿ ಟೆಟ್ರಾಖ್ರೋಮ್ಯಾಟಿಕ್ ನೋಟ ಕಾಣಿಸಿಕೊಳ್ಳಬಹುದು.

ಉಲ್ಲೇಖಗಳು[ಬದಲಾಯಿಸಿ]