ವಿಷಯಕ್ಕೆ ಹೋಗು

ಟೂಟಿ ಫ಼್ರೂಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟೂಟಿ ಫ್ರೂಟಿ ಇಂದ ಪುನರ್ನಿರ್ದೇಶಿತ)
ಟೂಟಿ ಫ಼್ರೂಟಿ ಐಸ್ ಕ್ರೀಂ

ಟೂಟಿ ಫ಼್ರೂಟಿ ವಿವಿಧ ಸಣ್ಣಗೆ ಹೆಚ್ಚಿದ ಮತ್ತು ಸಾಮಾನ್ಯವಾಗಿ ಸಕ್ಕರೆ ಸೇರಿಸಿದ ಹಣ್ಣುಗಳು, ಅಥವಾ ಅನೇಕ ವಿಭಿನ್ನ ಹಣ್ಣುಗಳ ಸಂಯೋಜಿತ ಪರಿಮಳವನ್ನು ಅನುಕರಿಸುವ ಕೃತಕವಾಗಿ ಸೃಷ್ಟಿಸಿದ ಪರಿಮಳಕಾರಕವನ್ನು ಹೊಂದಿರುವ ಒಂದು ವರ್ಣರಂಜಿತ ಸಿಹಿತಿಂಡಿ. ಅದನ್ನು ಹಲವುವೇಳೆ ಟೂಟಿ ಫ಼್ರೂಟಿ ಐಸ್ ಕ್ರೀಂ ಪರಿಮಳವನ್ನು ತಯಾರಿಸಲು ಬಳಸಲಾಗುತ್ತದೆ. ಟೂಟಿ ಫ಼್ರೂಟಿ ಐಸ್ ಕ್ರೀಂನಲ್ಲಿ ಬಳಸಲಾದ ಹಣ್ಣುಗಳು ಚೆರಿಗಳು, ಒಣದ್ರಾಕ್ಷಿಗಳು, ಮತ್ತು ಅನಾನಸ್ಅನ್ನು ಒಳಗೊಂಡಿವೆ, ಜೊತೆಗೆ ಹಲವುವೇಳೆ ನಟ್‍ಗಳನ್ನು ಸೇರಿಸಿ ಹೆಚ್ಚಿಸಲಾಗುತ್ತದೆ. ಕೆಲವು ಐರೋಪ್ಯ ದೇಶಗಳಲ್ಲಿ, ಅದು ಒಣದ್ರಾಕ್ಷಿ, ಕರಂಟ್, ಏಪ್ರಿಕಾಟ್, ಪ್ರೂನ್, ಖರ್ಜೂರ ಮತ್ತು ಅಂಜೂರದಂತಹ ಒಣಹಣ್ಣುಗಳ ಸಂಯೋಜನವನ್ನು ಹೊಂದಿರುತ್ತದೆ. ಭಾರತದಲ್ಲಿ, ಟೂಟಿ ಫ಼್ರೂಟಿ ಸಕ್ಕರೆ ಸೇರಿಸಿದ ಎಳೆ ಪಪಾಯಾವನ್ನು ನಿರ್ದೇಶಿಸುತ್ತದೆ. ಇವು ಯಾವಾಗಲೂ ಚಿಕ್ಕ ಘನಾಕೃತಿಯ ಹಲವುವೇಳೆ ಉಜ್ಜ್ವಲ ಬಣ್ಣಗಳ ತುಂಡುಗಳಾಗಿರುತ್ತವೆ. ಟೂಟಿ ಫ಼್ರೂಟಿಯ ಅತ್ಯಂತ ಸಾಮಾನ್ಯ ಬಣ್ಣ ಕೆಂಪಾಗಿರುತ್ತದೆ, ಜೊತೆಗೆ ದಟ್ಟ ಹಸಿರು ಮತ್ತು ಹಳದಿ ಬಣ್ಣಗಳಲ್ಲೂ ಲಭ್ಯವಿದೆ. ಇವನ್ನು ಕೇಕ್‍ಗಳು, ಮಿಲ್ಕ್ ಬ್ರೆಡ್, ಕುಕಿಗಳು, ದಿಲ್‍ಖುಶ್ ಮತ್ತು ಬನ್‍ಗಳನ್ನು ಒಳಗೊಂಡಂತೆ ವಿವಿಧ ಬೇಕರಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಟೂಟಿ ಫ಼್ರೂಟಿಯನ್ನು ತಂಪು ಡೆಜ಼ರ್ಟ್‍ಗಳಲ್ಲಿ ಐಸ್ ಕ್ರೀಂ ಮತ್ತು ಸಂಡೇಗಳ ಅಲಂಕಾರದ ಪದಾರ್ಥವಾಗಿ ಬಳಸಲಾಗುತ್ತದೆ. ಅದನ್ನು ಪಾನ್‍ಗಳಲ್ಲೂ ಬಳಸಲಾಗುತ್ತದೆ.