ಝೈನ್ ಇಮಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಝೈನ್ ಇಮಾಮ್
ಜನನ
ಝೈನ್ ಇಮಾಮ್

೧೮ ಮೇ
ರಾಷ್ಟ್ರೀಯತೆಭಾರತೀಯ
ಉದ್ಯೋಗನಟ
ಸಕ್ರಿಯ ವರ್ಷಗಳು೨೦೧೪– ಪ್ರಸ್ತುತ
ಇದಕ್ಕೆ ಖ್ಯಾತರುಠಶ್ನ್ ಎ ಇಶ್ಕ್
ನಾಮ್ಕರಣ್

ಝೈನ್ ಇಮಾಮ್ ರವರು ಒಬ್ಬ ಭಾರತೀಯ ದೂರದರ್ಶನ ನಟರಾಗಿದ್ದು, ಪ್ರಮುಖವಾಗಿ 'ಠಶ್ನ್ ಎ ಇಶ್ಕ್' ನಲ್ಲಿ ಯುವರಾಜ್ ಲೂಥ್ರಾ ಎಂಬ ಪಾತ್ರದಲ್ಲಿ,'ನಾಮ್ಕರಣ್' ನಲ್ಲಿ ನೀಲ್ ಖನ್ನಾ ಎಂಬ ಪಾತ್ರದಲ್ಲಿ, ಹಾಗೆಯೇ 'ಏಕ್ ಭ್ರಮ್ ಸರ್ವಗುಣ್ ಸಂಪನ್ನ' ದಲ್ಲಿ ಕಬೀರ್ ಮಿಟ್ಟಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಝೈನ್ ಇಮಾಮ್ ರವರು ಅಮಿಟಿ ಇಂಟರ್ನ್ಯಾಷನಲ್ ಬಿಸಿನೆಸ್ ಸ್ಕೂಲ್ ನಿಂದ ಎಂ.ಬಿ.ಎ ಶಿಕ್ಷಣ ಪಡೆದರು[೨].ಪದವಿ ಪಡೆದ ನಂತರ ಅವರು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರು.ಆದರೆ ನಂತರ ಅವರು ತಮ್ಮ ಕೆಲಸವನ್ನು ತೊರೆದು ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡರು.

ವೃತ್ತಿ ಜೀವನ[ಬದಲಾಯಿಸಿ]

ಝೈನ್ ಇಮಾಮ್ ರವರು ಎಂಟಿವಿ ಇಂಡಿಯಾದ 'ಕೈಸಿ ಯೇ ಯಾರಿಯಾ'ದೊಂದಿಗೆ ತಮ್ಮ ದೂರದರ್ಶನ ವೃತ್ತಿಯನ್ನು ೨೦೧೪ ರಲ್ಲಿ ಪ್ರಾರಂಭಿಸಿದರು.ಅದರಲ್ಲಿ ಅವರು ಅಭಿಮನ್ಯು ಥಕ್ಕರ್ ಪಾತ್ರದಲ್ಲಿ ಅಭಿನಯಿಸಿದರು.೨೦೧೫ ರಿಂದ ೨೦೧೬ ರವರೆಗೆ ಅವರು ಝೀ ಟಿವಿಯ 'ಠಶ್ನ್ ಎ ಇಶ್ಕ್' ನಲ್ಲಿ ಯುವರಾಜ್ ಲೂಥ್ರಾ ಪಾತ್ರದಲ್ಲಿ ಕಾಣಿಸಿಕೊಂಡರು.ನಕಾರಾತ್ಮಕ ಪಾತ್ರದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಗೋಲ್ಡ್ ಅವಾರ್ಡ್ಸ್ ನಲ್ಲಿ ಪಡೆದುಕೊಂಡರು.೨೦೧೬ ರಿಂದ ೨೦೧೭ ರವರೆಗೆ ಇಮಾಮ್ ರವರು ಝೀ ಟಿವಿಯ 'ಯೆ ವಾದಾ ರಹಾ' ದಲ್ಲಿ ಅಭೀರ್ ಧರ್ಮಾಧಿಕಾರಿ ಎಂಬ ಪಾತ್ರವನ್ನು ವಹಿಸಿದರು.೨೦೧೭ ರಿಂದ ೨೦೧೮ ರವರೆಗೆ ಸ್ಟಾರ್ ಪ್ಲಸ್ ನ 'ನಾಮ್ಕರಣ್' ನಲ್ಲಿ ನೀಲ್ ಖನ್ನಾ ಪಾತ್ರದಲ್ಲಿ ಅಭಿನಯಿಸಿದ್ದಾರೆ[೩].ಜೂನ್ ೨೦೧೮ ರಲ್ಲಿ,'ಲಾಲ್ ಇಶ್ಕ್' ನಲ್ಲಿ ಅರ್ಜುನ್ ಪಾತ್ರ ಹಾಗೂ ಸೆಪ್ಟೆಂಬರ್ ೨೦೧೮ ರಲ್ಲಿ ಸ್ಟಾರ್ ಪ್ಲಸ್ ನ 'ಇಶ್ಕ್ ಬಾಝ್' ನಲ್ಲಿ ಮೋಹಿತ್ ಪಾತ್ರದಲ್ಲಿ ಅಭಿನಯಿಸಿದರು.೨೦೧೯ ರಲ್ಲಿ ಅವರು ಕಲರ್ಸ್ ಟಿವಿಯ 'ಖತ್ರೋನ್ ಕೆ ಕಿಲಾಡಿ ೯' ರಲ್ಲಿ ಭಾಗವಹಿಸಿದರು[೪].ಏಪ್ರಿಲ್ ೨೦೧೯ ರಿಂದ ಝೈನ್ ಇಮಾಮ್ ರವರು ಸ್ಟಾರ್ ಪ್ಲಸ್ ನ 'ಏಕ್ ಭ್ರಮ್ ಸರ್ವಗುಣ್ ಸಂಪನ್ನ' ದಲ್ಲಿ ಶ್ರೇನು ಪಾರೀಖ್ ಎದುರು ಕಬೀರ್ ಮಿಟ್ಟಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ[೫].

ಮಾಧ್ಯಮ[ಬದಲಾಯಿಸಿ]

ಝೈನ್ ಇಮಾಮ್ ರವರು ಈಸ್ಟರ್ನ್ ಐ ನ ಸೆಕ್ಸಿಯೆಸ್ಟ್ ಏಷಿಯನ್ ಮೆನ್ ಲಿಸ್ಟ್ ೨೦೧೮ ರಲ್ಲಿ ೨೬ ನೇ ಸ್ಥಾನವನ್ನು ಪಡೆದುಕೊಂಡರು.ಇಂಡಿಯನ್ ಟೆಲಿವಿಷನ್ ೨೦೧೮ ರಲ್ಲಿ ಟೈಮ್ಸ್ ಆಫ್ ಇಂಡಿಯಾ ಟಾಪ್ ೨೦ ಅತ್ಯಂತ ಅಪೇಕ್ಷಣೀಯ ಪುರುಷರ ಪಟ್ಟಿಯಲ್ಲಿ ೫ ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ದೂರದರ್ಶನ[ಬದಲಾಯಿಸಿ]

ವರ್ಷ ಪ್ರದರ್ಶನ ಪಾತ್ರ ಟಿಪ್ಪಣಿ ಚಾನೆಲ್
೨೦೧೪–೨೦೧೫ ಕೈಸಿ ಯೇ ಯಾರಿಯಾ ಅಭಿಮನ್ಯು ಥಕ್ಕರ್ ಎಂಟಿವಿ ಇಂಡಿಯಾ
೨೦೧೫–೨೦೧೬ ಠಶ್ನ್ ಎ ಇಶ್ಕ್[೬] ಯುವರಾಜ್ "ಯುವಿ" ಲೂಥ್ರಾ ಝೀ ಟಿವಿ
೨೦೧೬-೨೦೧೭ ಯೆ ವಾದಾ ರಹಾ[೭] ಅಭೀರ್ ಧರ್ಮಾಧಿಕಾರಿ
೨೦೧೭-೨೦೧೮ ನಾಮ್ಕರಣ್ ನೀಲ್ ಖನ್ನಾ ಸ್ಟಾರ್ ಪ್ಲಸ್
೨೦೧೮ ಲಾಲ್ ಇಶ್ಕ್ ಅರ್ಜುನ್ ಪ್ರಾಸಂಗಿಕ ಪಾತ್ರ ಆಂಡ್ ಟಿವಿ
ಇಶ್ಕ್ ಬಾಝ್ ಮೋಹಿತ್ ಮಲ್ಹೋತ್ರಾ ಕಿರು ಪಾತ್ರ ಸ್ಟಾರ್ ಪ್ಲಸ್
೨೦೧೯ ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಕಿಲಾಡಿ ೯ ಸ್ಪರ್ಧಿ ಕಲರ್ಸ್ ಟಿವಿ
೨೦೧೯–ಪ್ರಸ್ತುತ ಏಕ್ ಭ್ರಮ್ ಸರ್ವಗುಣ್ ಸಂಪನ್ನ ಕಬೀರ್ ಮಿಟ್ಟಲ್ ಸ್ಟಾರ್ ಪ್ಲಸ್

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

ವರ್ಷ ಪ್ರಶಸ್ತಿ ವರ್ಗ ಪ್ರದರ್ಶನ ಫಲಿತಾಂಶ
೨೦೧೬ ಗೋಲ್ಡ್ ಪ್ರಶಸ್ತಿ[೮] ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ (ವಿಮರ್ಶಕರು) ಠಶ್ನ್ ಎ ಇಶ್ಕ್ ಗೆಲುವು
೨೦೧೭ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ ಅತ್ಯುತ್ತಮ ನಟ (ಖ್ಯಾತ) ನಾಮ್ಕರಣ್ ನಾಮನಿರ್ದೇಶನ
೨೦೧೮ ನಾಮನಿರ್ದೇಶನ
೨೦೧೯ ಇಂಡಿಯನ್ ಟೆಲ್ಲಿ ಪ್ರಶಸ್ತಿ ಅತ್ಯುತ್ತಮ ಜೋಡಿ (ಖ್ಯಾತ)

(ಅಧಿತಿ ರಾಥೋರ್ ಜೊತೆ)

ನಾಮನಿರ್ದೇಶನ

ಉಲ್ಲೇಖ[ಬದಲಾಯಿಸಿ]

  1. https://www.nettv4u.com/celebrity/hindi/tv-actor/zain-imam
  2. "ಆರ್ಕೈವ್ ನಕಲು". Archived from the original on 2020-10-01. Retrieved 2019-05-22.
  3. "ಆರ್ಕೈವ್ ನಕಲು". Archived from the original on 2019-06-08. Retrieved 2019-05-22.
  4. https://www.tellybest.com/news/khatron-ke-khiladi-season-9-acrophobia-won-by-zain-imam
  5. https://www.pinkvilla.com/tv/news-gossip/exclusive-zain-imam-his-character-ek-bhram-sarvagun-sampanna-being-secure-actor-web-series-447405
  6. "Five shades of grey for Zain in Tashan-E-Ishq". Times of India. Retrieved 17 December 2016.
  7. "Zain Imam finalized to play lead in Zee TV's Yeh Vaada Raha". Tellychakkar. Retrieved 17 December 2016.
  8. "Gold Awards 2016: List of Winners". India Today. Retrieved 17 December 2016.

9. Khatron Ke Khiladi season 9: Acrophobia won by Zain Imam Archived 2022-06-08 ವೇಬ್ಯಾಕ್ ಮೆಷಿನ್ ನಲ್ಲಿ.