ಜ್ಯಾಮಿತೀಯ ದ್ಯುತಿಶಾಸ್ರ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುರಿತು[ಬದಲಾಯಿಸಿ]

ಭೌತಶಾಸ್ತ್ರದ ಭಾಗವಾಗಿರುವ ದ್ಯುತಿಶಾಸ್ತ್ರವು ಬೆಳಕಿನ ಗುಣ ಮತ್ತು ಅದರ ವರ್ತನೆ ಕುರಿತಾದ ಅಧ್ಯಯನವಾಗಿದೆ. ಈ ದ್ಯುತಿಶಾಸ್ತ್ರವನ್ನು ಬೆಳಕಿನ ವರ್ತನೆಗನುಗುಣವಾಗಿ ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ಬೆಳಕು ಕಣವಾಗಿ ವರ್ತಿಸುವ ಪ್ರಕ್ರಿಯೆಗಳನ್ನು ಅಭ್ಯಸಿಸುವುದನ್ನು ಜ್ಯಾಮಿತೀಯ ದ್ಯುತಿಶಾಸ್ತ್ರ ಎಂದು ಕರೆಯುತ್ತಾರೆ ಅಥವಾ ಇದನ್ನು ದ್ಯುತಿ ಕಿರಣ ಶಾಸ್ತ್ರ ಎಂದೂ ಕರೆಯಬಹುದು. ಎರಡನೆಯದಾಗಿ ಬೆಳಕು ತರಂಗ/ಅಲೆಯಂತೆ ವರ್ತಿಸುವ ಪ್ರಕ್ರಿಯೆಗಳನ್ನು ಅಭ್ಯಸಿಸುವುದನ್ನು ಭೌತೀಯ/ಭೌತಿಕ ದ್ಯುತಿಶಾಸ್ತ್ರ ಎಂದು ಕರೆಯುತ್ತಾರೆ ಅಥವಾ ಇದನ್ನು ದ್ಯುತಿ ತರಂಗ ಶಾಸ್ತ್ರ ಎಂದೂ ಕರೆಯುತ್ತಾರೆ.

ವಿವರಣೆ[ಬದಲಾಯಿಸಿ]

ಬೆಳಕು ಕೆಲವೊಮ್ಮೆ ಕಣದಂತೆಯೂ ಇನ್ನೂ ಕೆಲವೊಮ್ಮೆ ಅಲೆಯಂತೆಯೂ ವರ್ತಿಸುತ್ತದೆ. ಸರಳರೇಖಾ ಚಲನೆ, ಪ್ರತಿಫಲನ, ವಕ್ರೀಭವನ ಮುಂತಾದ ಪ್ರಕ್ರಿಯೆಗಳಲ್ಲಿ ಬೆಳಕು ಕಣದಂತೆ ವರ್ತಿಸುತ್ತದೆ. ಆದ್ದರಿಂದ ಈ ಪ್ರಕ್ರಿಯೆಗಳನ್ನು ಜ್ಯಾಮಿತೀಯ ದ್ಯುತಿಶಾಸ್ತ್ರದಲ್ಲಿ ಅಭ್ಯಸಿಸಲಾಗುತ್ತದೆ. ಜ್ಯಾಮಿತೀಯ ದ್ಯುತಿಶಾಸ್ತ್ರದಲ್ಲಿ ಬೆಳಕನ್ನು ರೇಖೆಗಳ ಸಹಾಯದಿಂದ ಗುರುತಿಸಿ, ಜ್ಯಾಮಿತೀಯ ನಿಯಮಗಳನ್ನು ಅನ್ವಯಿಸಿ ಅಭ್ಯಸಿಸಲಾಗುತ್ತದೆ.

ತಿಳಿದುಕೊಳ್ಳಿ[ಬದಲಾಯಿಸಿ]

  1. ಸರಳರೇಖಾ ಚಲನೆ
  2. ಪ್ರತಿಫಲನ
  3. ವಕ್ರೀಭವನ
ಜ್ಯಾಮಿತೀಯ ದ್ಯುತಿಶ್ಯಾಸ್ತ್ರ