ವಿಷಯಕ್ಕೆ ಹೋಗು

ಜೋನ್ಸ್ ಬೆರ್ಜೆಲಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋನ್ಸ್ ಜಾಕೋಬ್ ಬೆರ್ಝೆಲಿಯಸ್
ಜನನ20 August 1779
ಒಸ್ಟೆರ್‌ಗೋಟ್‍ಲ್ಯಾಂಡ್, ಸ್ವೀಡನ್
ಮರಣ೭ ಅಗಸ್ಟ್ ೧೮೪೮
ಸ್ಟಾಕ್‌ಹೋಮ್
ವಾಸಸ್ವೀಡನ್
ರಾಷ್ಟ್ರೀಯತೆಸ್ವೀಡನ್
ಕಾರ್ಯಕ್ಷೇತ್ರಗಳುರಸಾಯನಶಾಸ್ತ್ರ
ಸಂಸ್ಥೆಗಳುಕರೋಲಿನ್‌ಸ್ಕ ಇನ್ಸ್‌ಟಿಟ್ಯೂಟ್
ಅಭ್ಯಸಿಸಿದ ಸಂಸ್ಥೆಉಪ್ಸಲ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಜೊಹಾನ್ ಅಫ್ಜೇಲಿಯಸ್ (Johann Afzelius)
ಪ್ರಸಿದ್ಧಿಗೆ ಕಾರಣರಾಸಾಯನಿಕ ಸಮೀಕರಣ,ಥೋರಿಯಮ್,ಸಿಲಿಕಾನ್,ಸೆಲೇನಿಯಮ್

ಜೋನ್ಸ್ ಬೆರ್ಜೆಲಿಯಸ್(20 August 1779– 7 August 1848)ಸ್ವೀಡನ್ ದೇಶದ ವಿಜ್ಞಾನಿ.ಆಧುನಿಕ ರಸಾಯನಶಾಸ್ತ್ರದ ಪಿತಾಮಹರಲ್ಲಿ ಒಬ್ಬರು.೨೦ ಅಗಸ್ಟ್ ೧೭೭೯ ರಲ್ಲಿ ಜನಿಸಿದ ಇವರು,'ಉಪ್ಸಲ'ವಿಶ್ವವಿದ್ಯಾಲಯದಲ್ಲಿ ಕಲಿತರು.ಕರೋಲಿನ್‌ಸ್ಕ ಇನ್ಸ್‌ಟಿಟ್ಯೂಟ್ ನಲ್ಲಿ ಬೋಧಕರಾಗಿ ಕೆಲಸಮಾಡಿ ೭ ಅಗಸ್ಟ್ ೧೮೪೮ ರಲ್ಲಿ ಸ್ಟಾಕ್‌ಹೋಮ್ ನಲ್ಲಿ ನಿಧನರಾದರು. []

ಸಂಶೋಧನೆಗಳು

[ಬದಲಾಯಿಸಿ]

ಇವರು ಪರಮಾಣು ಸಿದ್ಧಾಂತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಹಲವಾರು ಮೂಲಧಾತುಗಳನ್ನು ಮುಖ್ಯವಾಗಿ ಸಿರಿಯಮ್,ಸೆಲೆನಿಯಮ್,ಥೊರಿಯಮ್ಗಳನ್ನು ಒಬ್ಬಂಟಿಯಾಗಿ ಹಾಗೂ ಸಹ ಸಂಶೋಧಕರ ಜತೆಯಾಗಿ ಕಂಡುಹಿಡಿದರು.ಸಿಲಿಕಾನ್,ಕ್ಯಾಲ್ಶಿಯಮ್,ಟಾನ್ಟಾಲಮ್ ಮೂಲಧಾತುಗಳನ್ನು ಪ್ರಪ್ರಥಮವಾಗಿ ಬೇರ್ಪಡಿಸಿದರು.ರಸಾಯನಶಾಸ್ತ್ರದಲ್ಲಿ ಐಸೋಮೋರ್ಫಿಸಮ್,ಪಾಲಿಮೋರ್ಫಿಸಮ್ ಮುಂತಾದ ಶಬ್ಧಗಳಿಗೆ ವ್ಯಾಖ್ಯಾನ ನೀಡಿದರು.ರಾಸಾಯನಿಕ ವಸ್ತುಗಳನ್ನುಹಾಗೂ ರಾಸಾಯನಿಕ ಬದಲಾವಣೆಗಳನ್ನು ಅದರ ಸಂಕೇತ ಅಕ್ಷರಗಳಿಂದ ಬರೆಯುವ ಪದ್ಧತಿಯನ್ನು ಪರಿಚಯಿಸಿದರು.[]

ಸಾಧನೆ

[ಬದಲಾಯಿಸಿ]

ಬರ್ಜೀಲಿಯಸ್ ಪರಮಾಣು ವಾದವನ್ನ ಅರಿತು ಧಾತುಗಳ ಪರಸ್ಪರ ಸಂಯೋಜನೆಯಲ್ಲಿ ನಿರ್ದಿಷ್ಟವಾದ ತೂಕ ಪರಿಮಾಣ ಗಳಿರುವುದನ್ನು ತಿಳಿಸಿದರು. ಇವರು ಸಾವಯವ ರಸಾಯನ ರಂಗಕ್ಕೆ ಅಡಿಪಾಯ ಹಾಕಿ ಪ್ರೋಟೀನ್ ಎಂಬ ಹೆಸರನ್ನು ಮೊಟ್ಟ ಮೊದಲ ಬಾರಿಗೆ ನೀಡಿದರು. ಇವರು ಸಮಾಂಗತೆ ಹಾಗು ಕ್ರಿಯಾ ವರ್ಧಕತ್ವದ ಪರಿಕಲ್ಪನೆಯನ್ನಮಂಡಿಸಿದರು .

ಉಲ್ಲೇಖಗಳು

[ಬದಲಾಯಿಸಿ]
  1. http://scienceworld.wolfram.com/biography/Berzelius.html
  2. http://www.chemheritage.org/discover/online-resources/chemistry-in-history/themes/electrochemistry/berzelius.aspx