ಜೈ ರಾಮ್ ಠಾಕೂರ್
ಜೈ ರಾಮ್ ಠಾಕೂರ್ | |
ಜೈ ರಾಮ್ ಠಾಕೂರ್
| |
ಪ್ರಸಕ್ತ | |
ಅಧಿಕಾರ ಪ್ರಾರಂಭ 27 ಡಿಸೆಂಬರ್ 2017 | |
ಪೂರ್ವಾಧಿಕಾರಿ | ವಿಭದ್ರ ಸಿಂಗ್ |
---|---|
ಜನನ | ಜನನ 6 ಜನವರಿ 1965 ಮಂಡಿ, ಹಿಮಾಚಲ ಪ್ರದೇಶ, ಭಾರತ |
ಪ್ರತಿನಿಧಿತ ಕ್ಷೇತ್ರ | ಸೆರಾಜ್ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಜೀವನಸಂಗಾತಿ | ಡಾ. ಸಾಧನಾ ಠಾಕೂರ್ |
ಜೈ ರಾಮ್ ಠಾಕೂರ್ (ಜನನ 6 ಜನವರಿ 1965)[೧] ಒರ್ವ ರಾಜಕಾರಣಿ , ಹಿಮಾಚಲ ಪ್ರದೇಶದ 13 ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿ. ಅವರು 1998 ರಿಂದ ಹಿಮಾಚಲ ಪ್ರದೇಶ ಶಾಸನ ಸಭೆ ಶಾಸಕರಾಗಿದ್ದಾರೆ ಮತ್ತು ಹಿಂದೆ ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 2009-2012ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಅವರು ಮಂಡಿಯ ಸೆರಾಜ್ನಿಂದ ಹಿಮಾಚಲ ಪ್ರದೇಶ ಅಸೆಂಬ್ಲಿಗೆ ಚುನಾಯಿತರಾಗುತ್ತಾರೆ. [೨]
ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]
ಮಂಡಿಯ ಥುನಾಗ್ ಪ್ರದೇಶದ ತಂಡಿ ಗ್ರಾಮದಲ್ಲಿ ಬಡ ರಜಪೂತ ಕೃಷಿ ಕುಟುಂಬದಲ್ಲಿ ಠಾಕೂರ್ ಜನಿಸಿದರು. [೩] [೪] ಠಾಕೂರ್ ತಮ್ಮ ಶಾಲಾ ಶಿಕ್ಷಣವನ್ನು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ ಬಾಗ್ಸಾಡ್ನಿಂದ ಮಾಡಿ ನಂತರ ಬಿ.ಎ. ಅನ್ನು ಮಂಡಿಯ ವಲ್ಲಭ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದರು. ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ಎಂ.ಎ. ಪದವಿ ಪಡೆದರು.
ಕುಟುಂಬ[ಬದಲಾಯಿಸಿ]
ಠಾಕೂರ್ ಎಬಿವಿಪಿ ಸಹೋದ್ಯೋಗಿ ಸಾಧನಾ ಅವರನ್ನು ವಿವಾಹವಾದರು. [೫] ಸಾಧನ ಒರ್ವ ಕನ್ನಡತಿ.ಇವರ ಚಿಕ್ಕವಯಸ್ಸಿನಲ್ಲಿಯೆ ಅವರ ಕುಟುಂಬ ಶಿವಮೊಗ್ಗದಿಂದ ಜೈಪುರಕ್ಕೆ ಬಂದು ನೆಲೆಸಿದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.ಇಬ್ಬರು ಪುತ್ರಿಯರು ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಉಲ್ಲೇಖಗಳು[ಬದಲಾಯಿಸಿ]
- ↑ "Personal Information-Himachal Pradesh Vidhan Sabha". Retrieved 24 December 2017.
- ↑ "Who is Jairam Thakur – front runner for Himachal Pradesh CM post after Prem Kumar Dhumal's shock defeat". The Financial Express (in ಇಂಗ್ಲಿಷ್). 2017-12-19. Retrieved 2017-12-23.
- ↑ "Jai Ram Thakur, the Next Chief Minister of Himachal Pradesh". Retrieved 24 December 2017.
- ↑ "Jai Ram Thakur: The rise and rise of Himachal Pradesh's new CM-elect in BJP". The Financial Express (in ಇಂಗ್ಲಿಷ್). 2017-12-19. Retrieved 2017-12-24.
- ↑ "Himachal Pradesh CM Jai Ram Thakur married Karnataka girl".