ವಿಷಯಕ್ಕೆ ಹೋಗು

ಜೈಷ್–ಎ–ಮೊಹಮದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೈಷ್–ಎ–ಮೊಹಮದ್
Jaishi-e-Mohammed
  • ಜೈಶ್-ಎ-ಮೊಹಮ್ಮದ್
  • جيش محمد
  • ಜೈಶಿ-ಎ-ಮೊಹಮ್ಮದ್
  • ಜೈಶ್-ಎ-ಮೊಹಮ್ಮದ್ನ ಧ್ವಜ
  • ನಾಯಕರು ಮಸೂದ್ ಅಝರ್
  • ಕಾರ್ಯಾಚರಣೆಯ ದಿನಾಂಕ 2000-ಇಂದಿನವರೆಗೆ
  • ಐಡಿಯಾಲಜಿ ಇಸ್ಲಾಮಿಕ್ ಮೂಲಭೂತವಾದ
  • ಪ್ರಧಾನ ಕಚೇರಿ ಪಾಕಿಸ್ತಾನ, ಪಂಜಾಬ್, ಬಹಾವಾಲ್ಪುರ್
  • ಭಯೋತ್ಪಾದಕ ಗುಂಪು ಎಂದು ಗೊತ್ತುಪಡಿಸಿದವರು
ಆಸ್ಟ್ರೇಲಿಯಾ, ಕೆನಡಾ, ಭಾರತ, ರಷ್ಯಾ, ಯುಎಇ,
ಯುಕೆ, ಯುಎಸ್, ಯುಎನ್ ಮತ್ತು ಬ್ರಿಕ್ಸ್
.
  • ಜೈಷ್–ಎ–ಮೊಹಮದ್ (ಜಶ್-ಇ-ಮೊಹಮ್ಮದ್ - ಉರ್ದು: جيش محمد, ಅಕ್ಷರಶಃ "ಮುಹಮ್ಮದ್‍ನ ಸೈನ್ಯ", ಸಂಕ್ಷಿಪ್ತವಾಗಿ ಜೆಇಮ್ (JeM)ಎಂದು ಸಂಕ್ಷಿಪ್ತಗೊಳಿಸಲ್ಪಟ್ಟಿದೆ) ಕಾಶ್ಮೀರದಲ್ಲಿ ಸಕ್ರಿಯವಾದ ಪಾಕಿಸ್ತಾನ್ ಮೂಲದ ಡಿಯೋಬಂಡಿ (Deoband), ಜಿಹಾದಿಸ್ಟ್. ಸುನ್ನಿ ಭಯೋತ್ಪಾದಕ ಗುಂಪು.[][]

ಉಗ್ರಗಾಮಿ ಜೈಶ್-ಎ-ಮೊಹಮ್ಮದ್ ಸಂಘಟನೆ

[ಬದಲಾಯಿಸಿ]
  • ಜೈಶ್-ಎ-ಮೊಹಮ್ಮದ್ ಅಥವಾ ಜೆಎಂ ಎಂಬುದು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಯಾಗಿದ್ದು, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಮತ್ತು ಅದನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವುದಾಗಿದೆ. ಇದು ಆರಂಭವಾದಾಗಿನಿಂದ 2000, ಭಯೋತ್ಪಾದಕ ಸಜ್ಜು ಜಮ್ಮು ಮತ್ತು ಕಾಶ್ಮೀರದ ರಾಜ್ಯದಲ್ಲಿ ಹಲವಾರು ದಾಳಿ ನಡೆಸಿತು. ಇದು ಕಾಶ್ಮೀರವನ್ನು ಇಡೀ ಭಾರತಕ್ಕೆ "ಗೇಟ್ವೇ" (a "gateway" ) ಎಂದು ಭಾವಿಸುತ್ತದೆ, ಅವರ ಮುಸ್ಲಿಮರು ವಿಮೋಚನೆಯ ಅವಶ್ಯಕತೆಯಿದೆಯೆಂದು ಈ ಸಂಘಟನೆ ಭಾವಿಸುತ್ತದೆ. ಕಾಶ್ಮೀರವನ್ನು ಬಿಡುಗಡೆ ಮಾಡಿದ ನಂತರ, ಹಿಂದೂಗಳನ್ನು ಮತ್ತು ಮುಸ್ಲಿಮೇತರರನ್ನು ಭಾರತೀಯ ಉಪಖಂಡದಿಂದ ಓಡಿಸುವ ಉದ್ದೇಶದಿಂದ ಅದರ 'ಜಿಹಾದ್' ಅನ್ನು ಭಾರತದ ಇತರ ಭಾಗಗಳಿಗೆ ಸಾಗಿಸಿ ಹರಡುವ ಗುರಿಯನ್ನು ಹೊಂದಿದೆ.[]

ಧಾಳಿಗಳು

[ಬದಲಾಯಿಸಿ]
  • 2016 ರ ಜನವರಿಯಲ್ಲಿ ಪಠಾನ್ಕೋಟ್ ಏರ್ಬೇಸ್ನಲ್ಲಿ ಮತ್ತು 2016 ರ ಸೆಪ್ಟಂಬರ್ನಲ್ಲಿ ಯುರಿನಲ್ಲಿ ಸೈನಿಕ ಕ್ಯಾಂಪ್ನಲ್ಲಿ ಮಾರಣಾಂತಿಕ ದಾಳಿಯನ್ನು ನಡೆಸಲು ಈ ಗುಂಪು ಕಾರಣವಾಯಿತು. ಈ ದಾಳಿಗಳು 23 ಭದ್ರತಾ ಸಿಬ್ಬಂದಿಗಳ ಜೀವವನ್ನು ತೆಗೆದುಕೊಂಡವು.
  • ಈ ಗುಂಪು 2001 ರ ಭಾರತೀಯ ಸಂಸತ್ತಿನ ದಾಳಿಗಳಲ್ಲಿ ಲಷ್ಕರ್-ಇ-ತೊಯ್ಬಾ ಸಹ ನೆರವಾಯಿತು. ಇದು ತಾಲಿಬಾನ್ ಮತ್ತು ಅಲ್-ಖೈದಾ ಮುಂತಾದ ಅನೇಕ ಭಯೋತ್ಪಾದಕ ಕೂಟಗಳೊಂದಿಗೆ ಸಂಪರ್ಕ ಹೊಂದಿದೆ. ಅವರ ಪ್ರಸ್ತುತ ನಾಯಕ ಮಸೂದ್ ಅಝರ್. 2002 ರಿಂದಲೂ ಪಾಕಿಸ್ತಾನದಲ್ಲಿ ನಿಷೇಧ ಹೇರಲ್ಪಟ್ಟ ಈ ಗುಂಪು ಹಲವು ಇತರ ಹೆಸರುಗಳ ಅಡಿಯಲ್ಲಿ ಹೊರಹೊಮ್ಮಿದೆ ಮತ್ತು ಆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭಾರತದ ಒತ್ತಡ

[ಬದಲಾಯಿಸಿ]
  • ಭಾರತವು ಲಷ್ಕರಿ-ಇ-ತೊಯಿಬ (ಎಲ್.ಇ.ಟಿ) ಮತ್ತು ಜೆಇಎಂ ಮತ್ತು "ಅವರ ನೆರಳಿನ ಬೆಂಬಲಿಗರ" ವಿರುದ್ಧ ವಿಶ್ವಸಂಸ್ಥೆ ಕ್ರಮಕ್ಕಾಗಿ ಕರೆ ನೀಡಿದೆ.

ಪುಲ್ವಾಮಾ ಧಾಳಿ

[ಬದಲಾಯಿಸಿ]
  • ಫೆಬ್ರವರಿ 14, 2019 ರಂದು, ಜೆಎಂನ ಪುರುಷರು ಪುಲ್ವಾಮಾದಲ್ಲಿ ಮಾರಣಾಂತಿಕ ದಾಳಿ ನಡೆಸಿದರು, ಅದರಲ್ಲಿ 40 ಕೇಂದ್ರ ಮೀಸಲು ರಕ್ಷಕದಳದ (ಸಿಆರ್‍ಪಿಎಫ್) ಯೋಧರು ಹತರಾದರು. ಫೆಬ್ರವರಿ 26, 2019 ರಂದು, 03.30 ಗಂಟೆಯ ವೇಳೆಗೆ ಮಿರಾಜ್ 2000 ಭಾರತೀಯ ಫೈಟರ್ ಜೆಟ್‍ಗಳ ಪಡೆ ನಿಯಂತ್ರಣ ರೇಖೆ (LoC)ಬಳಿಯಲ್ಲಿದ್ದ ಪ್ರಮುಖ ಭಯೋತ್ಪಾದನಾ ಶಿಬಿರಗಳನ್ನು ನಾಶಪಡಿಸಿತು.[] []

ಮಸೂದ್ ಅಜರ್ ಪಾಕಿಸ್ತಾನದಲ್ಲಿ

[ಬದಲಾಯಿಸಿ]
  • ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ದಿ.೧- ೩ -೨೦೧೯ ರಂದು ಹೇಳಿದರು.[]
  • ಮಸೂದ್ ಅಜರ್

ಹೆಚ್ಚಿನ ಮಾಹಿತಿ

[ಬದಲಾಯಿಸಿ]

+ಬಾಲಾಕೋಟ್‌ನಿಂದ ಬಂದ ಉಗ್ರರು ಹೇಳಿದ ಕಥೆ, ಮಾಡಿದ ಅನಾಹುತ;ಪ್ರಜಾವಾಣಿ;d: 04 ಮಾರ್ಚ್ 2019

ಉಲ್ಲೇಖ

[ಬದಲಾಯಿಸಿ]