ಜೂಲನ್ ಗೋಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೂಲನ್ ಗೋಸ್ವಾಮಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಜೂಲನ್ ನಿಷಿತ್ ಗೋಸ್ವಾಮಿ
ಹುಟ್ಟು (1982-11-25) ೨೫ ನವೆಂಬರ್ ೧೯೮೨ (ವಯಸ್ಸು ೪೧)
ಚಕ್ದ, ಪಶ್ಚಿಮ ಬಂಗಾಳ, ಭಾರತ
ಅಡ್ಡಹೆಸರುಬಾಬುಲ್
ಎತ್ತರ[convert: invalid number]
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ
ಪಾತ್ರಆಲ್ ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೫೧)೧೪ ಜನವರಿ ೨೦೦೨ v ಇಂಗ್ಲೆಂಡ್
ಕೊನೆಯ ಟೆಸ್ಟ್೧೬ ನವೆಂಬರ್ ೨೦೧೫ v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೬೧)೬ ಜನವರಿ ೨೦೦೨ v ಇಂಗ್ಲೆಂಡ್
ಕೊನೆಯ ಅಂ. ಏಕದಿನ​೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಅಂ. ಏಕದಿನ​ ಅಂಗಿ ನಂ.೨೫
ಟಿ೨೦ಐ ಚೊಚ್ಚಲ (ಕ್ಯಾಪ್ )೫ ಆಗಸ್ಟ್ ೨೦೦೬ v ಇಂಗ್ಲೆಂಡ್
ಕೊನೆಯ ಟಿ೨೦ಐ೧೦ ಜೂನ್ ೨೦೧೮ v ಬಾಂಗ್ಲಾದೇಶ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WTest WODI WT20I
ಪಂದ್ಯಗಳು ೧೦ ೧೮೨ ೬೮
ಗಳಿಸಿದ ರನ್ಗಳು ೨೮೩ ೧೦೭೬ ೪೦೫
ಬ್ಯಾಟಿಂಗ್ ಸರಾಸರಿ ೨೫.೭೨ ೧೪.೧೫ ೧೦.೯೪
೧೦೦/೫೦ ೦/೨ ೦/೧ ೦/೦
ಉನ್ನತ ಸ್ಕೋರ್ ೬೯ ೫೭ ೩೭*
ಎಸೆತಗಳು ೧,೯೭೨ ೮,೮೩೫ ೧,೩೫೧
ವಿಕೆಟ್‌ಗಳು ೪೦ ೨೨೫ ೫೬
ಬೌಲಿಂಗ್ ಸರಾಸರಿ ೧೬.೬೨ ೨೧.೪೮ ೨೧.೯೪
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೫/೨೫ ೬/೩೧ ೫/೧೧
ಹಿಡಿತಗಳು/ ಸ್ಟಂಪಿಂಗ್‌ ೫/– ೬೪/– ೨೩/–
ಮೂಲ: ESPNcricinfo, ೧೭ ಜನವರಿ ೨೦೨೦

ಜುಲನ್ ಗೋಸ್ವಾಮಿಯವರು [೧] ಭಾರತ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡ, ಬಂಗಾಳ ಮಹಿಳಾ ತಂಡ, ಪೂರ್ವ ವಲಯ ಮಹಿಳಾ ತಂಡ ಮತ್ತು ಏಷ್ಯಾ ಮಹಿಳಾ XI ತಂಡಕ್ಕೆ ಆಡುವ ಎಲ್ಲಾ ರೌಂಡ್ ಕ್ರಿಕೆಟರ್ ಆಗಿದ್ದಾರೆ. ಫೆಬ್ರವರಿ ೧, ೨೦೦೯ರಂದು, ವಿಶ್ವ ಕಪ್ ಗಾಗಿ ತಂಡವನ್ನು ಮುನ್ನಡೆಸಲು ಅವರನ್ನು ನೇಮಿಸಲಾಯಿತು.

ತಂಡದ ಅವಿಭಾಜ್ಯ ಅಂಗವಾದ, ಜುಲಾನ್ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು, ಟೆಸ್ಟ್ ಕ್ರಿಕೆಟಿನಲ್ಲಿ ೨೦ ಕ್ಕಿಂತ ಕಡಿಮೆ ಬೌಲಿಂಗ್ ಸರಾಸರಿಯನ್ನು ಹೊಂದಿದ್ದಾರೆ. ೨೦೦೬-೦೭ರ ಸರಣಿಯಲ್ಲಿ ಅವರು ಇಂಗ್ಲೆಂಡ್ನಲ್ಲಿ ಪ್ರಥಮ ಟೆಸ್ಟ್ ಸರಣಿಯ ಗೆಲುವಿಗೆ ಭಾರತೀಯ ತಂಡದ ನಾಯಕತ್ವದ ಹೊಣೆ ಹೊತ್ತರು.

ಜುಲನ್ ರವರು, ೨೦೦೭ರ ಐಸಿಸಿ ಮಹಿಳಾ ಆಟಗಾರ ಪ್ರಶಸ್ತಿಯನ್ನು ಗೆದ್ದುಕೊಂಡರು. ಅವರು, ೨೦೧೧ರಲ್ಲಿ ಅತ್ಯುತ್ತಮ ಮಹಿಳಾ ಕ್ರಿಕೆಟಿಗರಿಗಾಗಿ ಎಮ್.ಎ. ಚಿದಂಬರಂ ಟ್ರೋಫಿಯನ್ನು ಪಡೆದರು. ಅವರು, ಇತ್ತೀಚೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕರಾಗಿಲ್ಲ. ಅವರ ಜವಬ್ದಾರಿಯನ್ನು ಮಿತಾಲಿ ರಾಜ್ ಅವರು ಹೊತ್ತುಕೊಂಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟಿನ ಇತಿಹಾಸದಲ್ಲಿ ಜುಲನ್ ಅವರು ಅತ್ಯದಿಕ ವಿಕೆಟ್ ಪಡೆದವರಾಗಿದ್ದಾರೆ (೨೦೦).[೨] [೩] [೪]

ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್ ಅವರು ನಿವೃತ್ತಿಯಾದ ನಂತರ ವಿಶ್ವ ಮಹಿಳಾ ಕ್ರಿಕೆಟ್ನಲ್ಲಿ ಅತಿ ವೇಗದ ಬೌಲರ್ ಆಗಿದ್ದಾರೆ.[೫]

ಫೆಬ್ರವರಿ ೨೦೧೮ರಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ೨೦೦ ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾದ ಆರಂಭಿಕ ಲಾರಾ ವೊಲ್ವಾರ್ಡ್ಟ್ ವಿಕೆಟ್ ಪಡೆದಾಗ, ಈ ಸಾಧನೆ ಮಾಡಿದರು.

ಬಾಲ್ಯ[ಬದಲಾಯಿಸಿ]

ಜುಲಾನ್ ಗೋಸ್ವಾಮಿಯವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ೨೫ ನವೆಂಬರ್ ೧೯೮೨ ರಂದು ಜನಿಸಿದರು. ಅವರು ಪಶ್ಚಿಮ ಬಂಗಾಳದ, ನಾಡಿಯಾದಲ್ಲಿನ ಚಿಕ್ಕ ಪಟ್ಟಣವಾದ ಚಕ್ಧಾಹದಲ್ಲಿ, ಮಧ್ಯಮವರ್ಗದ ಕುಟುಂಬಕ್ಕೆ ಸೇರಿದವರು. ಅವರು ೧೫ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡುವುದನ್ನು ಪ್ರಾರಂಬಿಸಿದರು. ಕ್ರಿಕೆಟ್ ಪ್ರಾರಂಬಿಸುವ ಮೊದಲು, ಅವರು ಫುಟ್ಬಾಲಿನ ಅಭಿಮಾನಿಯಾಗಿದ್ದರು. ಅವರಿಗೆ, ಕ್ರಿಕೆಟ್ ಆಟದ ಅರಿವಾಗಿದ್ದು, ೧೯೯೨ರ ಕ್ರಿಕೆಟ್ ವಿಶ್ವಕಪ್ ಟಿವಿ ಯಲ್ಲಿ ವೀಕ್ಷಿಸಿದಾಗ. ಹೀಗೆ ಮುಂದೆ ಅವರ ಕ್ರಿಕೆಟ್ ಪ್ರೇಮ ಬೆಳೆಯಿತು. ಆದರೆ ಇತರ ಭಾರತೀಯ ಪೋಷಕರಂತೆ, ಜುಲಾನವರ ತಂದೆತಾಯಿಗಳು ಕ್ರಿಕೆಟ್ ಬದಲಾಗಿ ಅಧ್ಯಯನದ ಬಗ್ಗೆ ಗಮನ ಕೇಂದ್ರೀಕರಿಸಲು ಸೂಚಿಸಿದರು. ಜುಲಾನ್ ನಿಲ್ಲಿಸಲಿಲ್ಲ. ಕ್ರಿಕೆಟಿಗೆ, ಆಕೆಯ ಪ್ರೀತಿ ಹೆಚ್ಚಾಯಿತು ಎಂದು ಅವರು ಅರಿತುಕೊಂಡಾಗ, ಅವರು ಕ್ರಿಕೆಟ್ ತರಬೇತಿಗಾಗಿ ಮತ್ತಷ್ಟು ಕ್ರಮಗಳನ್ನು ಕೈಗೊಂಡರು. ಆ ಸಮಯದಲ್ಲಿ ತನ್ನ ತವರೂರಿನಲ್ಲಿ ಯಾವುದೇ ಕ್ರಿಕೆಟ್ ಸೌಲಭ್ಯಗಳನ್ನು ಹೊಂದಿರಲಿಲ್ಲವಾದ್ದರಿಂದ, ಅವರು ಕೊಲ್ಕತ್ತಾಗೆ ಪ್ರಯಾಣ ಬೆಳೆಸಿದರು. ಅವರ ಶಿಕ್ಷಣ ಮತ್ತು ಕ್ರಿಕೆಟ್ ತನ್ನ ವೇಳಾಪಟ್ಟಿ ಬಿಗಿಯಾದರು, ಆಕೆ ತನ್ನ ಕಠಿಣ ಕೆಲಸವನ್ನು ಮುಂದುವರೆಸಿದರು. [೬]

ವೃತ್ತಿ ಜೀವನ[ಬದಲಾಯಿಸಿ]

ತನ್ನ ಹದಿಹರೆಯದಂದಿನಿಂದ, ಅವರು ಕ್ರಿಕೆಟಿಗಾಗಿ ಕಷ್ಟಪಟ್ಟು ಕೆಲಸ ಮಾಡಿದರು. ಕೋಲ್ಕತಾದಲ್ಲಿ ಅವರು ತಮ್ಮ ಕ್ರಿಕೆಟ್ ತರಬೇತಿ ಪಡೆದರು. ಶೀಘ್ರದಲ್ಲೇ ಅವರು ಬಂಗಾಳ ಕ್ರಿಕೆಟ್ ತಂಡದಲ್ಲಿ ತಮ್ಮ ಪ್ರವೇಶವನ್ನು ಮಾಡಿದರು. ೧೯ನೇ ವಯಸ್ಸಿನಲ್ಲಿ, ಚೆನ್ನೈನಲ್ಲಿ ಇಂಗ್ಲೆಂಡಿನ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅವರು ಭಾರತವನ್ನು ಪ್ರತಿನಿದಿಸಿದರು. ಅವರ ಅಂತರರಾಷ್ಟ್ರೀಯ ಟೆಸ್ಟ್ ಪಾದರ್ಪಣ ಪಂದ್ಯವು ೨೦೦೨ರ ಜನವರಿ ೧೪ ರಂದು ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ನಡೆಯಿತು ಮತ್ತು ಅವರ ಟ್ವೆಂಟಿ -೨೦ ಪಾದರ್ಪಣ ಪಂದ್ಯವು ೨೦೦೬ರಲ್ಲಿ ಡರ್ಬಿಯಲ್ಲಿ ನಡೆಯಿತು.

೨೦೦೬-೦೭ರ ಕ್ರೀಡಾಋತುವಿನಲ್ಲಿ, ಗೋಸ್ವಾಮಿಯವರು ಮಿಥಾಲಿ ರಾಜ್ ಜೊತೆಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಿ ಇಂಗ್ಲೆಂಡಿನ ವಿರುದ್ದ ಪ್ರಥಮ ಟೆಸ್ಟ್ ಸರಣಿ ಗೆದ್ದರು. ೨೦೦೭ರಲ್ಲಿ ಭಾರತದಲ್ಲಿ ನಡೆದ, ಆಫ್ರೋ ಏಷ್ಯಾನ್ ಪಂದ್ಯಾವಳಿಯಲ್ಲಿ ಏಷ್ಯಾ ತಂಡದಲ್ಲಿ ಜುಲಾನ್ ಒಬ್ಬರಾಗಿದ್ದರು ಮತ್ತು "ಐಸಿಸಿ ಮಹಿಳಾ ಕ್ರಿಕೆಟರ್ ಆಫ್ ದಿ ಇಯರ್" ಪ್ರಶಸ್ತಿ ಪಡೆದರು.

ನಂತರ ೨೦೦೮ರಲ್ಲಿ ಅವರು, ಮಿಥಾಲಿ ರಾಜ್ ಅವರಿಂದ ನಾಯಕತ್ವವನ್ನು ವಹಿಸಿಕೊಂಡರು ಮತ್ತು ೨೦೧೧ರವರೆಗೂ ನಾಯಕತ್ವವನ್ನು ಮುಂದುಸಿದರು. ೨೦೦೮ರಲ್ಲಿ, ಅವರು ಏಷ್ಯಾ ಕಪ್ನಲ್ಲಿ, ಏಕದಿನ ಪಂದ್ಯಗಳಲ್ಲಿ ೧೦೦ ವಿಕೆಟ್ಗಳನ್ನು ಪಡೆದ ನಾಲ್ಕನೇ ಮಹಿಳೆ ಎಂಬ ಪ್ರಶಂಸೆಗೆ ಪಾತ್ರರಾದರು. ಅವರು ೨೫ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು. ೨೦೧೦ರಲ್ಲಿ ಅವರು "ಅರ್ಜುನ ಪ್ರಶಸ್ತಿಯನ್ನು" ಪಡೆದರು ಮತ್ತು ೨೦೧೨ರಲ್ಲಿ ಡಯಾನಾ ಎಡ್ಲ್ಜಿಯವರ ನಂತರ "ಪದ್ಮಶ್ರೀ ಪ್ರಶಸ್ತಿ" ಸ್ವೀಕರಿಸಿದ ಎರಡನೇ ಭಾರತೀಯ ಮಹಿಳಾ ಕ್ರಿಕೆಟಿಗರಾದರು.

ಅವರು ೧೦ ಟೆಸ್ಟ್ ಪಂದ್ಯಗಳಲ್ಲಿ ೪೦ ವಿಕೆಟ್ಗಳನ್ನು ಪಡೆದಿದ್ದಾರೆ. ಒಟ್ಟು ೨೨೩ ಪಂದ್ಯಗಳಲ್ಲಿ ಅವರು ೨೭೧ ಅಂತಾರಾಷ್ಟ್ರೀಯ ವಿಕೆಟ್ಗಳನ್ನು ಹೊಂದಿದ್ದಾರೆ ಮತ್ತು ಮೂರು ಅರ್ದ-ಶತಕದೊಂದಿಗೆ ೧೫೯೩ ರನ್ಗಳನ್ನು ಗಳಿಸಿದ್ದಾರೆ. ಆಸ್ಟ್ರೇಲಿಯದ, ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್ನ ೧೮೦ ಏಕದಿನ ವಿಕೆಟ್ಗಳ ದಾಖಲೆಯನ್ನು ದಾಟಿ, ಅವರು ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. ಅವರು ೬೦, ಟಿ-೨೦ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೫೦ ವಿಕೆಟ್ಗಳನ್ನು ಹೊಂದಿದ್ದಾರೆ.

೨೦೧೭ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ತಲುಪಿದ ಭಾರತೀಯ ತಂಡದಲ್ಲಿ ಗೋಸ್ವಾಮಿ ಭಾಗಿಯಾಗಿದ್ದರು. [೭][೮]

ಅವರು ಭಾರತದ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಬೌಲಿಂಗ್ ಸಲಹೆಗಾರರಾಗಿ ನೇಮಕಗೊಂಡರು. ಅವರು ಆಟಗಾರ-ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಪ್ರಶಸ್ತಿಗಳು, ಗೌರವಗಳು[ಬದಲಾಯಿಸಿ]

 • ೨೦೦೭ - ವರ್ಷದ ಐಸಿಸಿ ಮಹಿಳಾ ಕ್ರಿಕೆಟರ್
 • ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ (೨೦೦೮-೨೦೧೧)
 • ವೇಗದ ಬೌಲರ್
 • ೨೦೧೦ - ಅರ್ಜುನ ಪ್ರಶಸ್ತಿ
 • ೨೦೧೨ - ಪದ್ಮ ಶ್ರೀ ಪ್ರಶಸ್ತಿ
 • ಅತೀ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದ ಭಾರತೀಯ ಆಟಗಾರ್ತಿ

ಉಲ್ಲೇಖ[ಬದಲಾಯಿಸಿ]

 1. http://www.espncricinfo.com/india/content/player/53932.html
 2. https://timesofindia.indiatimes.com/sports/cricket/news/jhulan-goswami-becomes-the-leading-wicket-taker-in-womens-odis/articleshow/58594182.cms
 3. https://timesofindia.indiatimes.com/sports/cricket/news/goswami-breaks-record-as-indian-women-beat-sa-women-by-7-wkts/articleshow/58597945.cms
 4. http://www.thehindu.com/sport/cricket/jhulan-goswami-is-the-highest-wicket-taker-in-womens-one-day-internationals/article18414380.ece
 5. http://www.rediff.com/cricket/2006/sep/30jhulan.htm
 6. http://www.espncricinfo.com/india/content/player/53932.html
 7. https://www.hindustantimes.com/cricket/why-women-s-cricket-world-cup-final-is-extra-special-for-mithali-raj-jhulan-goswami/story-RZvrp01lhhm3uN634vZ65N.html
 8. "How England won Women's World Cup - clips & reaction". BBC Sport. Retrieved 19 March 2020.