ಜಾರ್ಜ್ ವಾಲ್ಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಾರ್ಜ್ ವಾಲ್ಡ್
George Wald 1987.jpg
ಜಾರ್ಜ್ ವಾಲ್ಡ್
ಜನನ ಜಾರ್ಜ್ ವಾಲ್ಡ್
೧೮ ನವೆಂಬರ್ ೧೯೦೬
ನ್ಯೂಯಾರ್ಕ್
ರಾಷ್ಟ್ರೀಯತೆ American

ಅಮೇರಿಕದ ಜೀವರಸಾಯನವಿಜ್ಞಾನಿಯಾಗಿದ್ದ ಜಾರ್ಜ್ ವಾಲ್ಡ್ರವರು 1906ರ ನವೆಂಬರ್ 18ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ವಾಲ್ಡ್ರವರು 1930ರಲ್ಲಿ ದೃಷ್ಟಿಯ ರಾಸಾಯನಿಕ ಪ್ರಕ್ರಿಯೆಗಳ ಬಗ್ಗೆ ಸಂಶೋಧನೆ ನಡೆಸಿದರು. ಇಂತಹ ರಾಸಾಯನಿಕ ಪ್ರಕ್ರಿಯೆಗಳಿಗೆ ರ್ಹೋಡೋಪ್ಸಿನ್ (rhodopsin) ಎಂಬ ವರ್ಣದ್ರವ್ಯ (pigment) ಪದಾರ್ಥ ಮುಖ್ಯ ಕಾರಣವಾಗಿದೆ. ಅದು ನಮ್ಮ ಕಣ್ಣಿನಲ್ಲಿರುವ ಅಕ್ಷಿಪಟದಲ್ಲಿ (ರೆಟಿನಾ) ಇರುತ್ತದೆ. ಆ ಪದಾರ್ಥ ಎ-ಜೀವಸತ್ವದ (vitamin A) ಆಲ್ಡಿಹೈಡ್ ಆಗಿರುವ ಅಕ್ಷಿಪಟದ ಸರಳುಗಳಲ್ಲಿರುವ (retinal rods) ಹಳದಿ ಬಣ್ಣದ ಕರೋಟೆನಾಯಿಡ್ ಸಂಯುಕ್ತದ (carotenoid) ಜೊತೆ ಸಂಯೋಜಿತವಾಗಿರುವ ವರ್ಣರಹಿತ ಪ್ರೋಟೀನ್ ಒಪ್ಸಿನ್ನನ್ನು (opsin) ಹೊಂದಿದೆ ಎಂಬುದಾಗಿ ವಾಲ್ಡ್ರವರು 1933ರಲ್ಲಿ ಕಂಡುಹಿಡಿದರು. (ಅಕ್ಷಿಪಟದ ಸರಳು ಎಂದರೆ ಮಂದಬೆಳಕನ್ನು ಗ್ರಹಿಸಲು ಅಕ್ಷಿಪಟಕ್ಕೆ ಸಹಾಯಕವಾಗುವ ಸರಳಿನಾಕಾರದ ನರಕೋಶವಾಗಿದೆ.) ನಮ್ಮ ಕಣ್ಣಿನ ಮೇಲೆ ಬೆಳಕು ಬಿದ್ದಾಗ, ರ್ಹೋಡೋಪ್ಸಿನ್ ಅಣುಗಳು ಕರೋಟೆನಾಯಿಡ್ ಮತ್ತು ಒಪ್ಸಿನ್ ಸಂಯುಕ್ತಗಳಾಗಿ ಒಡೆಯುತ್ತವೆ. ಕತ್ತಲಿದ್ದಾಗ ಆ ಸಂಯುಕ್ತಗಳು ಸಂಯೋಜನೆಗೆ ಒಳಗಾಗಿ ಮತ್ತೆ ರ್ಹೋಡೋಪ್ಸಿನ್ಗಳಾಗಿ ಪರಿವರ್ತನೆಯಾಗಿ ರೆಟಿನಾ ಸರಳುಗಳಲ್ಲಿ ಶೇಖರವಾಗುತ್ತದೆ ಎಂಬುದಾಗಿ ಅವರು ಕಂಡುಹಿಡಿದರು.[೧] ನಂತರ ವಾಲ್ಡ್ರವರು ರೆಟಿನಾದ ನರಗಳು ಮತ್ತು ದ್ಯುತಿನರಗಳಲ್ಲಿನ ವಿದ್ಯುತ್-ಚಟುವಟಿಕೆಯ ಮೇಲೆ ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳು ಹೇಗೆ ಪ್ರಭಾವ ಬೀರುತ್ತವೆ ಎಂಬ ವಿಷಯದ ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಸುಮಾರು 1950ರಲ್ಲಿ ಅವರು ಕೆಂಪು ಮತ್ತು ಹಳದಿ-ಹಸಿರು ಬಣ್ಣಗಳನ್ನು ಪತ್ತೆಹಚ್ಚುವ ಅಕ್ಷಿಪಟದಲ್ಲಿರುವ ವರ್ಣದ್ರವ್ಯವನ್ನು ಕಂಡುಹಿಡಿದರು. ಕೆಲವು ವರುಷಗಳ ನಂತರ ನೀಲಿ ಬಣ್ಣವನ್ನು ಪತ್ತೆಹಚ್ಚುವ ಅಕ್ಷಿಪಟದಲ್ಲಿರುವ ವರ್ಣದ್ರವ್ಯವನ್ನೂ ಸಹ ಅವರು ಕಂಡುಹಿಡಿದರು. ಆ ಎಲ್ಲ ಮೂರು ಮೂಲಭೂತ ವರ್ಣದ್ರವ್ಯಗಳೂ ಎ-ಜೀವಸತ್ವಕ್ಕೆ ಸಂಬಂಧಪಟ್ಟಿದ್ದಾಗಿದೆ, ಆ ಮೂರರಲ್ಲಿ ಯಾವ ಒಂದು ಅಥವಾ ಇನ್ನೂ ಹೆಚ್ಚಿನ ವರ್ಣದ್ರವ್ಯದ ಕೊರತೆಯಿದ್ದರೂ ಅದರ ಪರಿಣಾಮ ವರ್ಣ-ಕುರುಡಿಗೆ (colour blindness) ದಾರಿಯಾಗುತ್ತದೆ ಎಂಬುದಾಗಿ ಅವರು 1960ರಲ್ಲಿ ಕಂಡುಹಿಡಿದರು. ವಾಲ್ಡ್ರವರಿಗೆ 1967ರ ಶರೀರವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಸ್ವೀಡನ್ನಿನ ಶರೀರವಿಜ್ಞಾನಿ ರಾಗ್ನರ್ ಗ್ರಾನಿಟ್ (1900-1991) ಮತ್ತು ಹಾಲ್ಡನ್ ಹಾರ್ಟ್ಲೈನ್ರವರ (1903-1983) ಜೊತೆ ನೀಡಲಾಯಿತು. ಜಾರ್ಜ್ ವಾಲ್ಡ್ರವರು 1997ರ ಏಪ್ರಿಲ್ 12ರಂದು ನಿಧನರಾದರು.[೨]

ಉಲೇಖಗಳು[ಬದಲಾಯಿಸಿ]