ವಿಷಯಕ್ಕೆ ಹೋಗು

ಜಾಮಾ ಮಸೀದಿ, ಫತೇಪುರ್ ಸಿಕ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾಮಾ ಮಸೀದಿ, ಫ಼ತೇಪುರ್ ಸಿಕ್ರಿ, ಆಗ್ರಾ

ಜಾಮಾ ಮಸೀದಿಯು (ಶುಕ್ರವಾರದ ಮಸೀದಿ) ಭಾರತದ ಉತ್ತರ ಪ್ರದೇಶ ರಾಜ್ಯದ ಒಂದು ವಿಶ್ವ ಪರಂಪರೆಯ ತಾಣವಾದ ಫತೇಪುರ್ ಸಿಕ್ರಿಯಲ್ಲಿರುವ ೧೭ನೇ ಶತಮಾನದ ಒಂದು ಮಸೀದಿಯಾಗಿದೆ. ಮುಘಲ್ ಸಾಮ್ರಾಟ ಅಕ್ಬರ್‌ನು ಖುದ್ದಾಗಿ ಜಾಮಿ ಮಸೀದಿಯ ನಿರ್ಮಾಣವನ್ನು ನಿರ್ದೇಶಿಸಿದನು. ಇದು ಸುಮಾರು ೫೪೦ ಅಡಿ ಉದ್ದದಷ್ಟು ವ್ಯಾಪಿಸಿದೆ.[] "ಶುಕ್ರವಾರದ ಮಸೀದಿ" ಎಂದೂ ಪರಿಚಿತವಾಗಿರುವ ಈ ಮಸೀದಿಯು ಭಾರತದ ಅತಿ ದೊಡ್ಡ ಮಸೀದಿಗಳಲ್ಲಿ ಒಂದು ಮತ್ತು ಭಕ್ತರು ತೀರ ಸಾಮಾನ್ಯವಾಗಿ ಹೋಗಲು ಬಯಸುವ ತೀರ್ಥಯಾತ್ರಾ ಸ್ಥಳವಾಗಿದೆ. ಇದು ಆಗ್ರಾ ಜಿಲ್ಲೆಯಲ್ಲಿ ಅತಿ ಹೆಚ್ಚು ಭೇಟಿ ನೀಡಲ್ಪಡುವ ಪ್ರವಾಸಿ ಸ್ಥಳಗಳಲ್ಲಿ ಕೂಡ ಒಂದಾಗಿದೆ. ಮಸೀದಿಯ ಕೆಲವು ವಿನ್ಯಾಸಗಳು ಸುಂದರ ಇರಾನೀ ವಾಸ್ತುಕಲೆಯನ್ನು ಪ್ರತಿಬಿಂಬಿಸುತ್ತವೆ.

ಬುಲಂದ್ ದರ್ವಾಜ಼ಾ, ಜಾಮಾ ಮಸೀದಿ

ಈ ಮಸೀದಿಯು ಇಸ್ಲಾಮೀ ಕಲೆಯ ಬದಲಾವಣೆಯ ಹಂತವನ್ನು ಗುರುತಿಸುತ್ತದೆ, ಏಕೆಂದರೆ ಪರ್ಷಿಯನ್ ಅಂಶಗಳೊಂದಿಗೆ ಸ್ಥಳೀಯ ವಾಸ್ತುಕಲಾ ಅಂಶಗಳನ್ನು ಬೆರೆಸಲಾಗಿದೆ.

ಬುಲಂದ್ ದರ್ವಾಜ಼ಾ ಮತ್ತು ಸಲೀಮ್ ಚಿಶ್ತಿಯ ಗೋರಿಗಳು ಕೂಡ ಮಸೀದಿ ಸಂಕೀರ್ಣದ ಭಾಗವಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. The Editors of Encyclopædia Britannica. "Fatehpur Sikri". Encyclopædia Britannica. Retrieved 17 December 2017. {{cite web}}: |last= has generic name (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]