ಜಾಮಾ ಮಸೀದಿ, ದೆಹಲಿ
28°39′04″N 77°14′02″E / 28.651°N 77.234°E
Jama Masjid | |
---|---|
Location | Delhi, India |
Branch/tradition | Barelvi Hanafi |
Architectural information | |
Style | Islamic |
Capacity | 85,000 |
Length | 80 m |
Width | 27 m |
Dome(s) | 3 |
Minaret(s) | 2 |
Minaret height | 41 m |
ಮಸ್ಜಿದ್-ಐ ಜಹಾನ್-ನುಮಾ (ಪರ್ಸಿಯನ್: مسجد جھان نما, ವಿಶ್ವದ ಪ್ರತಿಧ್ವನಿಸುವ ಮಸೀದಿ), ಇದನ್ನು ಸಾಮಾನ್ಯವಾಗಿ ದಿಲ್ಲಿಯ ಜಾಮಾ ಮಸೀದಿ ಎಂದು ಹೇಳಲಾಗುತ್ತದೆ. ಇದು ಭಾರತದ ಹಳೆ ದೆಹಲಿಯ ದೊಡ್ಡ ಮಸೀದಿ ಎಂದು ಕರೆಯಲ್ಪಡುತ್ತದೆ. ಇದು ತಾಜ್ ಮಹಲ್ ನಿರ್ಮಾತೃ ಮೊಘಲ್ ಸಾಮ್ರಾಟ ಶಹ ಜಹಾನ್ ಒಡೆತನದಲ್ಲಿತ್ತು. ಮತ್ತು ಇದನ್ನು ಕ್ರಿ.ಪೂ. 1656ರಲ್ಲಿ ಮಸೀದಿ ಕಟ್ಟಡ ಕಾಮಗಾರಿಯನ್ನು ಪೂರೈಸಲಾಯಿತು. ಇದು ಭಾರತದಲ್ಲಿಯೇ ಅತಿದೊಡ್ಡ ಮತ್ತು ಉತ್ತಮವಾಗಿ ಮೂಡಿಬಂದ ಮಸೀದಿಯಾಗಿದೆ. ಇದು ಹಳೆ ದೆಹಲಿಯ ಅತಿ ಜನಸಂದಣಿ ಇರುವ ಹಾಗೂ ಮಧ್ಯಭಾಗದಲ್ಲಿರುವ ಚವಾರಿ ಬಜಾರ್ ರಸ್ತೆಯ ಮಾರ್ಗದಲ್ಲಿ ಬರುತ್ತದೆ.
ಜಾಮಾ ಮಸೀದಿ ಎಂಬುದು ನಂತರದ ಹೆಸರಾಗಿದ್ದು, ಇಲ್ಲಿ ವಾರದ ಪ್ರತಿ ಶುಕ್ರವಾರ ಮಧ್ಯಾಹ್ನ ಮುಸ್ಲಿಂರು ಪ್ರಾರ್ಥನೆಗಾಗಿ ಜುಮ್ಮಾದಲ್ಲಿ ಸೇರುತ್ತಾರೆ. ಮಸೀದಿಗಳಲ್ಲಿ ಸಾಮಾನ್ಯವಾಗಿ ಪ್ರಾರ್ಥನೆ ನಡೆಯುತ್ತದೆ. ಇದನ್ನು ಪ್ರಾರ್ಥನಾ ಮಸೀದಿ ಅಥವಾ ಜಾಮಿ ಮಸೀದಿ ಎಂದು ಕರೆಯುತ್ತಾರೆ. ಮಸೀದಿಯ ಆವರಣದೊಳಗೆ ಸುಮಾರು 25 ಸಾವಿರ ಮಂದಿ ಭಕ್ತರು ಒಟ್ಟಿಗೆ ಸೇರುವ ಸ್ಥಳಾವಕಾಶವಿದೆ. ಈ ಮಸೀದಿಯ ಉತ್ತರ ಗೇಟ್ ಬಳಿ ಕೆಲ ಮಹಾತ್ಮರ ಅವೇಶಷಗಳು ಪತ್ತೆಯಾಗಿವೆ. ಇದರಲ್ಲಿ ಕುರಾನ್ (Qur'an) ಜಿಂಕೆ ಚರ್ಮದ ಮೇಲೆ ಬರೆದ ಪುರತಾನ ಪ್ರತಿ ಲಭ್ಯವಾಗಿದೆ.
ನಿರ್ಮಾಣ
[ಬದಲಾಯಿಸಿ]ಐತಿಹಾಸಿಕ ಜಾಮಾ ಮಸೀದಿಯನ್ನು (ಶುಕ್ರವಾರದ ಮಸೀದಿ) ಶಹಜಹಾನಾಬಾದ್ ದಿಬ್ಬ (ಸಣ್ಣ ಗುಡ್ಡ)ದಲ್ಲಿ ನಿರ್ಮಿಸಲಾಯಿತು. ಇದನ್ನು ಭಾರತದ ಮೊಘಲ್ ಸಾಮ್ರಾಜ್ಯದ 5ನೇ ರಾಜ ಷಹಜಹಾನ್ ಕ್ರಿ.ಪೂ. ೧೬೫೦ ಅಕ್ಟೋಬರ್ ೬ ರಂದು ಕಟ್ಟಿಸಿದನು. (೧೦ Shawwal ೧೦೬೦ AH). ಈ ಮಸೀದಿಯನ್ನು ನಿರ್ಮಾಣ ಮಾಡಲು ಸುಮಾರು ೬ ವರ್ಷಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಇದಕ್ಕಾಗಿ ಸುಮಾರು ೫,೦೦೦ ಕ್ಕೂ ಹೆಚ್ಚು ಕಾರ್ಮಿಕರು ದುಡಿದಿದ್ದಾರೆ.[೧] ಇದಕ್ಕೆ ತಗುಲಿದ ಒಟ್ಟು ವೆಚ್ಚ ಆಗಿನ ಕಾಲದಲ್ಲಿ ೧೦ ಲಕ್ಷ (ಒಂದು ಮಿಲಿಯನ್) ರುಪಾಯಿ ಆಗಿದ್ದು. ಇದೇ ರಾಜ ಆಗ್ರಾದಲ್ಲಿ ತಾಜ್ ಮಹಲ್ ಅನ್ನು ನಿರ್ಮಿಸಿದ್ದಾನೆ. ಮತ್ತು ಜಾಮಾ ಮಸೀದಿ ಎದುರಿಕೆ ಕೆಂಪುಕೋಟೆಯನ್ನು ಸಹ ಈತ ನಿರ್ಮಿಸಿದ್ದಾನೆ. ಇದನ್ನು ಕ್ರಿ.ಪೂ. ೧೬೫೬ ರಲ್ಲಿ ಅಂತಿಮವಾಗಿ ನಿರ್ಮಾಣ ಮಾಡಲಾಯಿತು. ಇದು ೩ ದೊಡ್ಡ ಗೇಟ್ (ಬಾಗಿಲು) ಅನ್ನು ಹೊಂದಿದ್ದು, ನಾಲ್ಕು ಗೋಪುರಗಳಿವೆ. ಮತ್ತು ಎರಡು ೪೦ ಮೀಟರ್ ಉದ್ದದ ಮಸೀದಿಯ ಸ್ತಂಭಗೋಪುರವನ್ನು ಕೆಂಪು ಕಲ್ಲು ಮತ್ತು ಬಿಳಿ ಬಣ್ಣದ ಮಾರ್ಬಲ್ಸ್ ನಿಂದ ನಿರ್ಮಿಸಲಾಗಿದೆ.[೨]
ದೆಹಲಿ, ಆಗ್ರಾ, ಅಜ್ಮೀರ್ ಮತ್ತು ಲಾಹೋರ್‌ಗಳಲ್ಲಿ ಶಹಜಹಾನ್ ಹಲವಾರು ಮುಖ್ಯವಾದ ಮಸೀದಿಗಳನ್ನು ನಿರ್ಮಿಸಿದ್ದಾನೆ. ಜಾಮಾ ಮಸೀದಿಯ ಮಹಡಿ ಯೋಜನೆಯು ಆಗ್ರಾ ಸಮೀಪದ ಫಾತೇಪುರ್ ಸಿಕ್ರಿ, ಜಾಮಾ ಮಸೀದಿಯನ್ನು ಹೋಲುತ್ತದೆ. ಆದರೆ ದೆಹಲಿಯಲ್ಲಿರುವ ಜಾಮಾ ಮಸೀದಿಯು ಈ ಎರಡಕ್ಕಿಂತಲೂ ಎರಡುಪಟ್ಟು ದೊಡ್ಡದಾಗಿ ನಿರ್ಮಾಣವಾಗಿದೆ. ನಂತರದಲ್ಲಿ ಇದರ ಮಹತ್ವವೂ ಕೂಡ ಹೆಚ್ಚುತ್ತಾ ಹೋಯಿತು. ಏಕೆಂದರೆ ಈತ ಈ ಮಸೀದಿಯನ್ನು ನಿರ್ಮಾಣ ಮಾಡಲು ವಿಸ್ತಾರವಾದ ಪ್ರದೇಶವನ್ನು ಆಯ್ಕೆಮಾಡಿದ್ದ. ಸ್ವಲ್ಪಮಟ್ಟಿಗೆ ದೊಡ್ಡದಾಗಿ ಕಾಣುವ ಲಾಹೋರ್ ನ ಬಾದಶಾಹಿ ಮಸೀದಿಯನ್ನು ಶಹಜಹಾನ್ ಮಗನಾದ ಔರಂಗಾಜೇಬ್ ೧೬೭೩ರಲ್ಲಿ ಕಟ್ಟಿಸಿದ. ಇದು ನೋಡಲು ದೆಹಲಿಯಲ್ಲಿರುವ ಜಾಮಾ ಸಮೀದಿಯನ್ನು ಹೋಲುತ್ತದೆ.
ವಾಸ್ತುಶಿಲ್ಪ
[ಬದಲಾಯಿಸಿ]ಮಸೀದಿಯ ಆವರಣವು ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಮೂರು ಹಂತವಾಗಿ ನಿರ್ಮಾಣವಾಗಿದೆ. ಎಲ್ಲವನ್ನೂ ಕೆಂಪು ಮರಳುಶಿಲೆಯಿಂದ ನಿರ್ಮಿಸಲಾಗಿದೆ. ಉತ್ತರ ಭಾಗದ ಬಾಗಿಲು (ಗೇಟ್) ಮೂವತ್ತೊಂಬತ್ತು ಹಂತಗಳನ್ನು (ಸ್ಟೆಪ್ಸ್) ಹೊಂದಿದೆ. ಮಸೀದಿಯ ದಕ್ಷಿಣ ಭಾಗವು ಮೂವತ್ತಮೂರು ಹಂತಗಳನ್ನು ಹೊಂದಿದೆ. ಪೂರ್ವ ಭಾಗದ ಬಾಗಿಲು ಪ್ರಧಾನ ಬಾಗಿಲಾಗಿದ್ದು ಇದು ೩೫ ಹಂತಗಳನ್ನು ಹೊಂದಿದೆ. ಈ ಹಂತಗಳನ್ನು ಮನೆಗಳ ಆಹಾರ ಮಳಿಗೆಗಳು, ಅಂಗಡಿಗಳು ಮತ್ತು ಬೀದಿ ಕಲಾವಿದರಿಗೆ ಬಳಸಲಾಗುತ್ತಿತ್ತು. ಮಸೀದಿಯ ಪೂರ್ವ ಭಾಗವು ಸಂಜೆ ವೇಳೆಗೆ ವ್ಯಾಪಾರ ಮಳಿಗೆಗಳಾಗಿ ಬದಲಾವಣೆಯಾಗುತ್ತಿದ್ದವು. ಇಲ್ಲಿ ಕೋಳಿ ಹಾಗೂ ಹಕ್ಕಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ೧೮೫೭ ರ ಭಾರತ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಂಚಿತವಾಗಿ ಉತ್ತರ ಭಾಗದ ಸಮೀಪ ಮದರಸಾವನ್ನು ಸ್ಥಾಪಿಸಲಾಗಿತ್ತು. ಈ ದಂಗೆಯ ನಂತರ ಇದನ್ನು ಕೆಡವಲಾಯಿತು.
ಮಸೀದಿಯು ಪಶ್ಚಿಮ ದಿಕ್ಕಿಗೆ ಮುಖವನ್ನು ಮಾಡಿದೆ. ಇದರ ಮೂರು ಭಾಗಗಳು ಕಮಾನಿನಾಕಾರದ ಸಾಲುಮರಗಳಿಂದ ಆವೃತವಾಗಿವೆ. ಈ ಎಲ್ಲವೂ ಉತ್ತುಂಗ ಶಿಖರದ ಗೋಪುರಗಳಂತೆ ಬಾಗಿಲಿನ ದಾರಿಯ ಮಧ್ಯಭಾಗದಲ್ಲಿ ಕಾಣಸಿಗುತ್ತದೆ. ಈ ಮಸೀದಿಯು ೨೬೧ ಅಡಿ (೮೦ ಮೀ) ಉದ್ದ ಹಾಗೂ ೯೦ ಅಡಿ (೨೭ ಮೀ) ಅಗಲವನ್ನು ಹೊಂದಿದೆ. ಮತ್ತು ಇದರ ಮೇಲ್ಚಾವಣಿಯು ಮಹಲುಗಳನ್ನು ಹೊಂದಿದ್ದು, ಜತೆಗೆ ಇದಕ್ಕೆ ಬದಲೀ ವ್ಯವಸ್ಥೆಯಾಗಿ ಬಿಳಿ ಮತ್ತು ಕಪ್ಪು ಬಣ್ಣದ ಮಾರ್ಬಲ್ಸ್ ಪಟ್ಟೆಯನ್ನು ನೀಡಲಾಗಿತ್ತು. ಇದರ ತುತ್ತತುದಿಗಿರುವ ಭಾಗವು ಬಂಗಾರದಿಂದ ಆವೃತವಾಗಿತ್ತು. ಎರಡು ಉತ್ತುಂಗದ ಮಸೀದಿಯ ಸ್ತಂಭಗೋಪುರವು ೧೩೦ ಅಡಿ (೪೧ಮೀ) ಉದ್ದ, ಮತ್ತು ೧೩೦ ಹಂತಗಳನ್ನು ಹೊಂದಿದ್ದು, ಇದರುದ್ದಕ್ಕೂ ಬಿಳಿ ಮಾರ್ಬಲ್ ಮತ್ತು ಕೆಂಪು ಉಸುಕುಶಿಲೆಯ ಪಟ್ಟಿಯನ್ನು ಬಳಸಲಾಗಿದೆ. ಇದನ್ನು ಮಹಲಿನ ಪಾರ್ಶ್ವ ಭಾಗದಲ್ಲಿ ಕಾಣಬಹುದಾಗಿದೆ. ಮಸೀದಿಯ ಸ್ತಂಭಗೋಪುರ ಮೂರು ಗ್ಯಾಲರಿಗಳಿಂದ ವಿಭಾಗಿಸಲ್ಪಟ್ಟಿದೆ. ಮತ್ತು ಮೇಲೆ ೧೨ ಬದಿಗಳಲ್ಲಿ ತೆರೆದ ಮಹಲುಗಳ ಪ್ರದೇಶಗಳನ್ನು ಕಾಣಬಹುದಾಗಿದೆ. ಮಸೀದಿಯ ಹಿಂಭಾಗದಲ್ಲಿ ಪೂರ್ಣಗೊಂಡಿರುವ ನಾಲ್ಕು ಸಣ್ಣ ಮಸೀದಿಯ ಸ್ತಂಭಗೋಪುರವು ಮುಂಭಾಗದಲ್ಲಿರುವ ಸ್ತಂಭಗೋಪುರದಂತೆ ಕಾಣುತ್ತವೆ.
ಮಸೀದಿಯ ಒಳಗಿರುವ ಮಹಲುಗಳ ಕೆಳಗೆ ಇರುವ ಸಭಾಂಗಣದಲ್ಲಿ ಏಳು ಕಮಾನುಗಳುಳ್ಳ ಬಾಗಿಲುಗಳು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ನಿಂತಿವೆ. ಮತ್ತು ಮಸೀದಿಯ ಗೋಡೆಗಳು ಅದರ ಉದ್ದದ ನಡುವಿನ ಭಾಗವು ಮಾರ್ಬಲ್ ಗಳಿಂದ ಆವೃತವಾಗಿವೆ. ಇದರ ಆಚೆ ಪ್ರಾರ್ಥನಾ ಸಭಾಂಗಣವಿದ್ದು, ಇದು ೬೧ ಮೀಟರ್ X ೨೭,೫ ಮೀಟರ್ ಸುತ್ತಳತೆಯನ್ನು ಹೊಂದಿದೆ. ಜತೆಗೆ ಹನ್ನೊಂದು ಕಮಾನುಗುಳುಳ್ಳ ದ್ವಾರಬಾಗಿಲನ್ನು ಹೊಂದಿದ್ದು, ಇದರ ಮಧ್ಯವಿರುವ ಕಮಾನು ಬಾಗಿಲು ಅಗಲವಾಗಿ ಮತ್ತು ಎತ್ತರವಾಗಿ ನಿರ್ಮಾಣ ಹೊಂದಿದೆ. ಮತ್ತು ದಪ್ಪವೂ ಸ್ಥೂಲವೂ ಆದ (ಘನವಾದ) ಮುಂಬಾಗಿಲನ್ನು ಹೊಂದಿದೆ. ಎಲ್ಲ ಬದಿಗಳಲ್ಲೂ ತೆಳ್ಳಗಿನ ಸ್ತಂಭಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಜತೆಗೆ ಅಷ್ಟಭುಜಾಕೃತಿಯಲ್ಲಿ ಮೇಲ್ಭಾಗದ ಪ್ರದೇಶವನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಮಾನು ಪ್ರವೇಶ ದ್ವಾರಗಳು ಬಿಳಿ ಮಾರ್ಬಲ್ ನ ಫಲಕವನ್ನು ಹೊಂದಿದ್ದು, ೪ ಅಡಿ (೧.೨ ಮೀ) ಉದ್ದ ೨.೫ ಅಡಿ (೭೬೦ ಮಿ.ಮೀ) ಅಗಲವನ್ನು ಹೊಂದಿದ್ದು, ಕಪ್ಪು ಮಾರ್ಬಲ್ ಅಕ್ಷರಗಳಿಂದ ಕೆತ್ತಲಾಗಿದೆ. ಇದರಲ್ಲಿ ಮಸೀದಿ ನಿರ್ಮಾಣದ ಇತಿಹಾಸವನ್ನು ಬರೆಯಲಾಗಿದೆ. ಮತ್ತು ಶಹಜಹಾನ್ ನ ಆಳ್ವಿಕೆ ಮತ್ತು ಸಾಮರ್ಥ್ಯವನ್ನು ಇದರಲ್ಲಿ ವೈಭವೀಕರಿಸಲಾಗಿದೆ. ಮಧ್ಯಭಾಗದ ಕಮಾನಿನ ಮೇಲೆ ‘ದಿ ಗೈಡ್’ (ದಾರಿತೋರಿಸುವಾತ) ಎಂದು ಬರೆಯಲಾಗಿದೆ.
ಮಸೀದಿಯ ಜಗಲಿಯನ್ನು ೫ ಅಡಿ (೧.೫ ಮೀ) ಹಾಸುಗಲ್ಲಿನಿಂದ ಟೆರಾಸ್ ವರೆಗೆ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮೂರು ಹಂತಗಳನ್ನು ಮುಖ್ಯವಾಗಿ ನಿರ್ಮಿಸಲಾಗಿದೆ. ಇದನ್ನು ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ರಚಿಸಲಾಗಿದೆ. ಮಸೀದಿಯ ಮಹಡಿಯು ಬಿಳಿ ಮತ್ತು ಕಪ್ಪು ಮಾರ್ಬಲ್ ಗಳಿಂದ ಆವೃತವಾಗಿದ್ದು, ಇದರ ಅಲಂಕಾರಿಕಾ ವಸ್ತುಗಳು ಮುಸ್ಲಿಂ ರ ಪ್ರಾರ್ಥನಾ ಮ್ಯಾಟ್ ಅನ್ನು ಹೋಲುವಂತಿದೆ. ತೆಳುವಾದ ಕಪ್ಪು ಮಾರ್ಬಲ್ ಪಟ್ಟಿಯನ್ನು ಭಕ್ತರ ಅನುಕೂಲಕ್ಕಾಗಿ ಗುರುತಿಸಲಾಗಿದೆ. ಇದು ೩ ಅಡಿ ಉದ್ದ ಹಾಗೂ ಒಂದೂವರೆ ಅಡಿ ಅಗಲವನ್ನು ಹೊಂದಿದೆ. ಒಟ್ಟಾರೆಯಾಗಿ ೮೯೯ ಕಡೆಗಳಲ್ಲಿ ಗುರುತುಗಳನ್ನು ಮಸೀದಿಯ ಮಹಡಿಯಲ್ಲಿ ಮಾಡಲಾಗಿದೆ. ಮಸೀದಿಯ ಹಿಂಭಾಗದಲ್ಲಿ ಉದ್ದನೆಯ ಶಿಲೆ ಇದ್ದು, ಮಸೀದಿಯು ಈ ಶಿಲೆಗಲ್ಲುಗಳ ಜತೆ ನಿರ್ಮಿತವಾಗಿದೆ.
ಭಯೋತ್ಪಾದನಾ ಘಟನೆಗಳು
[ಬದಲಾಯಿಸಿ]೨೦೦೬ ಬಾಂಬ್ ಸ್ಫೋಟ
[ಬದಲಾಯಿಸಿ]೨೦೦೬ ಏಪ್ರಿಲ್ ೧೪ರಂದು, ಜಾಮಾ ಮಸೀದಿಯಲ್ಲಿ ಎರಡು ಬಾರಿ ಬಾಂಬ್ ಸ್ಫೋಟ ಸಂಭವಿಸಿತು. ಮೊದಲ ಬಾಂಬ್ ಸ್ಫೋಟವು ಸುಮಾರು ೫.೨೬ ನಿಮಿಷಕ್ಕೆ ಸಂಭವಿಸಿದರೆ, ಎರಡನೇ ಸ್ಫೋಟ ಸುಮಾರು ೫,೩೩ ಕ್ಕೆ (ಐಎಸ್ ಟಿ) ಸಂಭವಿಸಿತು. ಇದರಲ್ಲಿ ಕೊನೆಪಕ್ಷ ೧೩ ಮಂದಿ ಗಾಯಗೊಂಡಿದ್ದರು. ಈ ಸ್ಫೋಟವನ್ನು ಶುಕ್ರವಾರದಂದು ಮಾಡಲಾಗಿದ್ದು, ಈ ಸ್ಫೋಟ ಸಂದರ್ಭದಲ್ಲಿ ಮಸೀದಿಯಲ್ಲಿ ಸುಮಾರು ೧೦೦೦ ಜನರು ಪ್ರಾರ್ಥನೆಗಾಗಿ ಜಮಾವಣೆಗೊಂಡಿದ್ದರು. ಇದು ಮುಸ್ಲಿಂರ ಪುಣ್ಯ ದಿನವಾಗಿತ್ತು. ಏಕೆಂದರೆ ಇದು ಮಲಿದ್ ಅನ್ ನಬಿ, ಇಸ್ಲಾಮಿಕ್ ಪ್ರವಾದಿ ಮೊಹಮ್ಮದ್ ಜನ್ಮದಿನವಾಗಿತ್ತು. ಈ ಮಸೀದಿಯ ವಕ್ತಾರ ಹೇಳುವಂತೆ, ಈ ಘಟನೆಯಿಂದ ಮಸೀದಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.
೨೦೧೦ ಗುಂಡಿನ ದಾಳಿ
[ಬದಲಾಯಿಸಿ]೨೦೧೦ ಸೆಪ್ಟೆಂಬರ್ ೧೫ ರಂದು ಮಸೀದಿಯ ೩ನೇ ಬಾಗಿಲಿನ ಸಮೀಪವಿರುವ ಬೈಕ್‌ನಿಂದ ಬಂದವರು ಬಸ್ ಮೇಲೆ ಬಹಿರಂಗವಾಗಿ ಗುಂಡು ಹಾರಿಸಿದ್ದರಿಂದ ಇಬ್ಬರು ಥೈವಾನಿ ಪ್ರವಾಸಿಗರು ಗಾಯಗೊಂಡಿದ್ದರು.[೩]
ಚಿತ್ರಸಂಪುಟ
[ಬದಲಾಯಿಸಿ]-
ಮುಖ್ಯ ಪ್ರವೇಶ
-
ಮುಖ್ಯ ಪ್ರವೇಶದ ಕಬ್ಬಿಣದ ಬಾಗಿಲು
-
ಮಧ್ಯದ ಗುಮ್ಮಟ
-
ಮಿನರೆಟ್ಟಿನ ಸೂಕ್ಷ್ಮ ವಿವರಣೆ
-
ಶೃಂಗವಿರುವ ಕಮಾನುಗಳು, ಒಳಾಂಗಣ
-
ಪ್ರವೇಶದ ಸೂಕ್ಷ್ಮ ವಿವರಣೆ
-
ಮಸೀದಿಯ ಒಳಗಿನಿಂದ ಮುಖ್ಯ ಪ್ರವೇಶ
-
ಹುದುಗಿಸಿದ ಸೂಕ್ಷ್ಮ ವಿವರಣೆ, ಕಮಾನುಗಳು
-
ಒಳಾಂಗಣದ ಕಮಾನುಗಳ ಹುದುಗಿಸಿದ ಸೂಕ್ಷ್ಮ ವಿವರಣೆಗಳು
-
ಮುಖ್ಯ ಕಮಾನು
-
ಮಸೀದಿಯ ಒಳ ಭಾಗದ ಪ್ರಾರ್ಥನಾ ಕ್ಷೇತ್ರ
-
ಮಸೀದಿಯಿಂದ ಕಾಣುವ ರೆಡ್ ಫೋರ್ಟ್
-
ದಕ್ಷಿಣ ಪ್ರವೇಶದಿಂದ ಕಾಣುವ ದೃಶ್ಯ
-
ಹಳೆಯ ದೆಹಲಿಯ ರಸ್ತೆಗಳಿಂದ ಕಾಣುವಂತಹ ಜಾಮಿಯ ಮಸೀದಿ
ಜಾಮಾ ಮಸೀದಿಯ ಇಮಾಮರುಗಳು
[ಬದಲಾಯಿಸಿ]- ೧) ಸೈಯದ್ ಅಬ್ದುಲ್ ಗಫೂರ್ ಶಾಹ್ ಬುಕಾರಿ ಶಾಹಿ ಇಮಾಮ್
- ೧)ಸೈಯದ್ ಅಬ್ದುಲ್ ಶಕೂರ್ ಶಾಹ್ ಬುಕಾರಿ ಶಾಹಿ ಇಮಾಮ್
- ೩) ಸೈಯದ್ ಅಬ್ದುಲ್ ರಹೀಮ್ ಶಾಹ್ ಬುಕಾರಿ ಶಾಹಿ ಇಮಾಮ್
- ೪)ಸೈಯದ್ ಅಬ್ದುಲ್ ಗಫೂರ್ ಶಾಹ್ ಬುಕಾರಿ ಥಾನಿ ಶಾಹಿ ಇಮಾಮ್
- ೫) ಸೈಯದ್ ಅಬ್ದುಲ್ ರೆಹಮಾನ್ ಶಾಹ್ ಬುಕಾರಿ ಶಾಹಿ ಇಮಾಮ್
- ೬)ಸೈಯದ್ ಅಬ್ದುಲ್ ಕರೀಮ್ ಶಾಹ್ ಬುಕಾರಿ ಶಾಹಿ ಇಮಾಮ್
- ೭)ಸೈಯದ್ ಮೀರ್ ಜೀವನ್ ಶಾಹ್ ಬುಕಾರಿ ಶಾಹಿ ಇಮಾಮ್
- ೮)ಸೈಯದ್ ಮೀರ್ ಅಹಮದ್ ಅಲಿ ಶಾಹ್ ಬುಕಾರಿ ಶಾಹಿ ಇಮಾಮ್
- ೯)ಸೈಯದ್ ಮೊಹಮದ್ ಶಾಹ್ ಬುಕಾರಿ ಶಾಹಿ ಇಮಾಮ್
- ೧೦)ಮೌಲಾನಾ ಸೈಯದ್ ಅಹಮದ್ ಬುಕಾರಿ ಶಾಹಿ ಇಮಾಮ್
- ೧೧)ಮೌಲಾನಾ ಸೈಯದ್ ಹಮೀದ್ ಬುಕಾರಿ ಶಾಹಿ ಇಮಾಮ್
- ೧೨) ಸೈಯದ್ ಅಬ್ದುಲ್ಲಾ ಬುಕಾರಿ [೧] Archived 2011-11-17 ವೇಬ್ಯಾಕ್ ಮೆಷಿನ್ ನಲ್ಲಿ.
- ೧೩) ಸೈಯದ್ ಅಹಮ್ಮದ್ ಬುಕಾರಿ [೨] Archived 2011-11-17 ವೇಬ್ಯಾಕ್ ಮೆಷಿನ್ ನಲ್ಲಿ.
ಜಾಮಿಯಾ ಮಸಿದಿಯ ಇಮಾಮ್‌ರ ಇತಿಹಾಸ, ದೆಹಲಿ, ಭಾರತ [೩] Archived 2011-11-17 ವೇಬ್ಯಾಕ್ ಮೆಷಿನ್ ನಲ್ಲಿ.
ಇವನ್ನೂ ನೋಡಿ
[ಬದಲಾಯಿಸಿ]- ಇಸ್ಲಾಮಿಕ್ ವಾಸ್ತುಶೈಲಿ
- ಮುಸ್ಲಿಂ ಕಲೆ
- ಸಾಹ್ನ್
- ಇಸ್ಲಾಮಿಕ್ ಇತಿಹಾಸದ ಕಾಲಘಟ್ಟ
ಟಿಪ್ಪಣಿಗಳು
[ಬದಲಾಯಿಸಿ]- ↑ "ಹೆವೆನ್ ಅನ್ ಇರ್ಥ್: ಇಸ್ಲಾಂ", ನೊವೆಂಬರ್ ೨೩, ೨೦೦೪ ವಿಡಿಯೊ ಡೊಕ್ಯುಮೆಂಟರಿ, ಹಿಸ್ಟೊರಿ ಚಾನಲ್. ಪ್ರೊಡ್ಯುಸರ್/ಡೈರೆಕ್ಟರ್, ಸ್ಟೆಫೆನ್ ರೂಕ್. ಸ್ಕ್ರಿಪ್ಟ್‌ರೈಟರ್/ಹೊಸ್ಟ್: ಕ್ರಿಸ್ಟಿ ಕೆನೆಲಿ
- ↑ "ಶಾರ್ಟ್ ಹಿಸ್ಟೊರಿ ಒಫ್ ಜಾಮಾ ಮಸ್ಜಿದ್ ಡೆಲ್ಹಿ". Archived from the original on 2011-11-17. Retrieved 2011-01-23.
- ↑ "BBC News: Tourists shot near Delhi mosque".
ಉಲ್ಲೇಖಗಳು
[ಬದಲಾಯಿಸಿ]- ಜಾಮಾ ಮಸಿದಿ (ದೆಹಲಿ)ಪುಟ Archived 2006-12-02 ವೇಬ್ಯಾಕ್ ಮೆಷಿನ್ ನಲ್ಲಿ. ಇಂಡಿಯಾ ಇಮೇಜ್, ಭಾರತ ಸರ್ಕಾರ ಮಾಹಿತಿ ಕೇಂದ್ರ.
- ಜಾಮಾ ಮಸಿದಿ, ದೆಹಲಿ, ಪುಟ ಭಾರತದ ಪರಿಚಯ, ಪ್ರವಾಸಿ ಮಾಹಿತಿ ತಾಣ.
- ಜಾಮಾ ಮಸಿದಿ ಗೂಗಲ್ ನ್ಯೂಸ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about ಜಾಮಾ ಮಸೀದಿ, ದೆಹಲಿ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- JAMAMASJID.IN ದಿ ಜಾಮಾ ಮಸ್ಜಿದ್ ಒಫ್ ಡೆಲ್ಹಿ. Archived 2019-04-26 ವೇಬ್ಯಾಕ್ ಮೆಷಿನ್ ನಲ್ಲಿ.
- ಶಾರ್ಟ್ ಹಿಸ್ಟೊರಿ ಒಫ್ ದಿ ಜಾಮಾ ಮಾಸ್ಜಿದ್ ಒಫ್ ಡೆಲ್ಹಿ and ಇಟ್ಸ್ ಇಮಾಮ್ಸ್ Archived 2011-11-17 ವೇಬ್ಯಾಕ್ ಮೆಷಿನ್ ನಲ್ಲಿ.
- ಮೊರ್ ಅನ್ ಜಾಮಾ ಮಸ್ಜಿದ್ ಅಟ್ ಡೊರ್2ಇಂಡಿಯಾ Archived 2011-02-23 ವೇಬ್ಯಾಕ್ ಮೆಷಿನ್ ನಲ್ಲಿ.
- ಬಿಂಬಗಳು
- ಪಿಕ್ಚರ್ಸ್ ಒಫ್ ದಿ ಜಾಮಾ ಮಸ್ಜಿದ್ ಇನ್ ಡೆಲ್ಹಿ
- ಜಾಮಾ ಮಸ್ಜಿದ್ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
- Flickr: Photos tagged with "jamamasjid"
- ಸ್ಯಾಟೆಲೈಟ್ ಪಿಕ್ಚರ್ ಬೈ ಗೋಗಲ್ ಮ್ಯಾಪ್ಸ್
- Pages using gadget WikiMiniAtlas
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using the JsonConfig extension
- Pages with unresolved properties
- Coordinates on Wikidata
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons category link is on Wikidata
- Mosques in India
- ಡೆಲ್ಹಿಯ ಕಟ್ಟಡಗಳು ಹಾಗೂ ನಿರ್ಮಾಣಗಳು
- ಇಂಡಿಯಾದಲ್ಲಿನ ಮಸೀದಿಗಳು
- ಡೆಲ್ಹಿಯಲ್ಲಿನ ಧರ್ಮ
- ಡೆಲ್ಹಿಯ ಪ್ರವಾಸಿಗರ ಆಕರ್ಷಣೆಗಳು
- 1922 ರ ಸ್ಥಾಪನೆಗಳು
- 1650ರಲ್ಲಿ ಸ್ಥಾಪಿತವಾದ ಧಾರ್ಮಿಕ ಸಂಸ್ಥೆಗಳು
- ಮೊಗಲ್ ವಾಸ್ತುಶೈಲಿ
- ಐತಿಹಾಸಿಕ ಸ್ಮಾರಕಗಳು
- ಭಾರತದ ಇತಿಹಾಸ