ವಿಷಯಕ್ಕೆ ಹೋಗು

ಜಾನ್ ಕಾಲಿನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ ಕಾಲಿನ್ಸ್ (1742 – 2 ಮೇ 1808) ಇಂಗ್ಲಿಷ್ ನಟ ಹಾಗೂ ಕವಿ.

ಆರಂಭಿಕ ಜೀವನ

[ಬದಲಾಯಿಸಿ]

ಇಂಗ್ಲೆಂಡಿನ ಪಶ್ಚಿಮ ತೀರದ ಬಾತ್ ಎಂಬ ಸಣ್ಣ ಊರಲ್ಲಿ ಹುಟ್ಟಿದ. ದರ್ಜಿಯ ಮಗನಾದ ಈತ ಕೆಲಕಾಲ ಹೆಂಗಸರ ಉಡುಪುಗಳನ್ನು ತಯಾರಿಸುತ್ತಿದ್ದ. ಅಭಿನಯದಲ್ಲಿ ಪ್ರತಿಭೆಯಿದ್ದುದರಿಂದ ಹಾಸ್ಯ ಪಾತ್ರಗಳನ್ನು ವಹಿಸಿ ರಂಗದ ಮೇಲೆ ಮೆಚ್ಚುಗೆ ಗಳಿಸಿದ್ದೂ ಉಂಟು.

ಸಾಹಿತ್ಯ ರಚನೆ

[ಬದಲಾಯಿಸಿ]

1804ರಲ್ಲಿ ಪದ್ಯಸಂಗ್ರಹವೂಂದನ್ನು ಪ್ರಕಟಿಸಿದ. ಪಾಲ್‍ಗ್ರೇವ್‍ನ ಗೋಲ್ಡನ್ ಟ್ರೆಷರಿ ಎಂಬ ಪದ್ಯಸಂಕಲನದಲ್ಲಿ ಈತನ ಪದ್ಯವೊಂದಿದೆ. ಲಂಡನ್, ಡಬ್ಬಿನ್ ಮುಂತಾದ ಸ್ಥಳಗಳಲ್ಲಿ ಅಭಿನಯಿಸುತ್ತಿದ್ದ ದುಃಖಾಂತ, ಸುಖಾಂತ ನಾಟಕಗಳಿಲ್ಲಿ ಮುದುಕರ ಪಾತ್ರದಿಂದ ಹಿಡಿದು ಹಳ್ಳಿಯ ಹುಡುಗರ ಪಾತ್ರಗಳವರೆಗೆ ವಿವಿಧ ಪಾತ್ರಗಳನ್ನು ಈತ ನಿರ್ವಹಿಸುತ್ತಿದ್ದ. ತಾನೇ ರಚಿಸಿದ ಭಾವಗೀತೆಗಳನ್ನು ಅಭಿನಯಪೂರ್ಣವಾಗಿ, ಇಂಪಾಗಿ ಹಾಡುತ್ತಿದ್ದುದೇ ಈತನ ವೈಶಿಷ್ಟ್ಯ. ಕಥೆ, ಸಂಗೀತ, ಅಭಿನಯಗಳ ಕಲಸುಮೇಲೋಗರದಂತಿದ್ದ ಒಂದೇ ರೀತಿಯ ಮನೋರಂಜನೆ ಕಾರ್ಯಕ್ರಮವನ್ನು ನಾನಾ ಊರುಗಳಲ್ಲಿ ಬೇರೆ ಬೇರೆ ಹೆಸರಿನಿಂದ ಈತ ನೀಡುತ್ತಿದ್ದನಂತೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: