ಜಾನಕಿ ಎಂ ಬ್ರಹ್ಮಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನಕಿ ಎಂ ಬ್ರಹ್ಮಾವರ
Born
ಜಾನಕಿ

೨೦.೦೬.೧೯೫೦
ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ಮೂಡುಕುದ್ರು
Nationalityಭಾರತೀಯ
Educationಮಂಗಳೂರು ವಿ.ವಿಯಿಂದ ಕನ್ನಡ ಎಂ.ಎ ಹಾಗು ಬಿ.ಎಡ್ ಪದವಿ
Occupation(s)ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ, ಕರಾವಳಿ ಕರ್ನಾಟಕ ಲೇಖಕಿ ವಾಚಕಿಯರ ಸಂಘದ ಮಾಜಿ ಅಧ್ಯಕ್ಷೆ

ಜಾನಕಿ ಎಂ.ಬ್ರಹ್ಮಾವರ [೧][೨][೩] ತುಳು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು ಜಾನಕಿ ಎಂ.ಬ್ರಹ್ಮಾವರ. ತುಳು ಭಾಷೆಗೆ ಇವರ ಕೊಡುಗೆ ಅಪಾರ. ಇವರು ತ್ರಿಭಾಷಾ ಲೇಖಕಿಯಾಗಿದ್ದು ಇಂಗ್ಲಿಷ್,ಕನ್ನಡ ಹಾಗು ತುಳುವಿನಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಇವರು ತಮ್ಮ ಲೇಖನಗಳಲ್ಲಿ ವಾಸ್ತವಿಕತೆಗೆ ಹೆಚ್ಛಿನ ಮಹತ್ವವನ್ನು ನೀಡಿರುತ್ತಾರೆ.

ಜನನ-ಜೀವನ[ಬದಲಾಯಿಸಿ]

  • ಜನ್ಮ ದಿನಾಂಕ  : ೨೦.೬.೧೯೫೦
  • ಜನ್ಮ ಸ್ಥಳ  :ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ಮೂಡುಕುದ್ರು
  • ತಂದೆ-ತಾಯಿ :ಗುಂಡಿಬೈಲು ದಾರಪಾಲನೆ,ಮುತ್ತಕ್ಕ
  • ಪತಿ :ಸುಧಾಕರ ತೋನ್ಸೆ
  • ಮಕ್ಕಳು :ಜೋತ್ಸ್ನ ಪ್ರೀತಮ್, ಸೌಜ್ನಾ ಪ್ರೀತಮ್
  • ಶಿಕ್ಷಣ :ಪದವಿ- ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು,ಮಂಗಳೂರು ವಿ.ವಿಯಿಂದ ಕನ್ನಡ ಎಂ.ಎ ಹಾಗು ಬಿ.ಎಡ್ ಪದವಿ

ಸಾಹಿತ್ಯ ಕ್ಷೇತ್ರಕ್ಕೆ ಬರಲು ಕಾರಣ[ಬದಲಾಯಿಸಿ]

ತಮ್ಮ ಅಣ್ಣನ ಮಗ ಪ್ರಸನ್ನನ ಅಕಾಲಿಕ ಮರಣದ ದುಃಖದಿಂದ ಹೊರಬರಲು ಜಾನಕಿಯವರು ಆರಿಸಿಕೊಂಡ ದಾರಿಯೇ ಬರವಣಿಗೆ. ಅವರು ತುಳು ಭಾಷೆಯ ಮೂಲಕ ತಮ್ಮ ಸಾಹಿತ್ಯದ ಪಯಣವನ್ನು ಆರಂಭಿಸಿದರು. ಅವರು ತಮ್ಮ ಕವನಗಳನ್ನು 'ತುಷಾರ' ಮಾಸಪತ್ರಿಕೆಗೆ ಕಳುಹಿಸುತ್ತಿದ್ದರು. ಈ ಮೂಲಕ ಅವರ ಸಾಹಿತ್ಯದ ಮೇಲಿನ ಆಸಕ್ತಿ ಹೆಚ್ಛಿತು.

ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

  1. ಕಂಬಳ
  2. ಬಸುಕಣಿ
  3. ಅಜ್ಜಿ ಪುಲ್ಲಿನ ನಡುಟು
  4. ಲೆಪ್ಪು
  5. ಪೊಂಜೊಲೆಂಚಗೆ
  6. ತುಡರ್ ಸುಗಿಪು
  7. ಪ್ರಾರ್ಥನ ಗೀತೆಗಳು

ಕಾದಂಬರಿಗಳು[ಬದಲಾಯಿಸಿ]

  1. ಕುದುರುದ ಕೇದುಗೆ
  2. ಕಪ್ಪು ಗಿಡಿ
  3. ಯಗ ಮಗರ್ನಗ
  4. ರುಕ್ಕು

ಬಿಡಿ ಲೇಖನಗಳು[ಬದಲಾಯಿಸಿ]

  1. ಚಿತೆಗಂಜದ ವನಜಕ್ಕ
  2. ಸಾಧನಾಶೀಲೆ ಶೀಲಾ ಕೆ.ಶೆಟ್ಟಿ
  3. ಅಭಯದಾತೆ ಶಾಂತಿ ನೊರೊನ್ಹಾ

ಪ್ರವಾಸ ಕಥನ[ಬದಲಾಯಿಸಿ]

  1. ತಿರ್ಗಾಟದ ತಿರ್ಲ್

ಕತೆಗಳು[ಬದಲಾಯಿಸಿ]

  1. ಸಮ್ಮಂದ
  2. ಆಟಿಡೊಂಜಿ ದಿನ
  3. ರಾವಂದಿ ರೆಂಕೆ
  4. ಡುಮ್ಮಿ
  5. ತಾನೊಂದು ಬಗೆದರೆ
  6. ಶುಭೊದಯ

ಹನಿಗವನ[ಬದಲಾಯಿಸಿ]

ಜಾನಕಿಯವರ ಹನಿಗವನಗಳಲ್ಲಿ ಒಂದು ಹನಿ ಈ ಕೆಳಗಿನಂತಿದೆ

ಕಡೆದರೂ ಬೆಣ್ಣೆ ಬರಲಿಲ್ಲವೆಂದು

ಗೊಣಗುವ ಅಜ್ಜಿಯ ಬೆನ್ನಲ್ಲಿ

ಕಡೆಯದೆ ಬೆಣ್ಣೆ ಬರಬೇಕೆಂದು

ಸಿಡುಕುವ ಮೊಮ್ಮಗಳು

ಪ್ರಶಸ್ತಿಗಳು[ಬದಲಾಯಿಸಿ]

  1. 'ಕುದುರುದ ಕೇದಗೆ' ಕಾದಂಬರಿಗೆ''ಪಣಿಯಾಡಿ ಪ್ರಶಸ್ತಿ''
  2. 'ಕುದುರುದ ಕೇದಗೆ'ಯ ಕನ್ನಡ ಅನುವಾದ 'ಯಾರಿಗೆ ಯಾರುಂಟು ' ಕೃತಿಗೆ ೨೦೦೦ನೇ ವರ್ಷದ ಪುಸ್ತಕ ಬಹುಮಾನ
  3. 'ತಿರ್ಗಾಟದ ತಿರ್ಲ್' ಪ್ರವಾಸ ಕಥನಕ್ಕೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  4. 'ಯುಗ ಮಗರ್ನಗ' ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ
  5. 'ರುಕ್ಕು' ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ

ಇತರ ಮಾಹಿತಿಗಳು[ಬದಲಾಯಿಸಿ]

ದಲಿತ ಕವಿ ಸಿದ್ದಲಿಂಗಯ್ಯನವರ ಕನ್ನಡ ನಾಟಕ[೪] ತುಳುವಿಗೆ ಅನುವಾದಿಸಿದ್ದರೆ. ಇವರು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.tuluacademy.org/en/
  2. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  3. ಚಂದ್ರಗಿರಿ ನಾಡೋಜ, ಡಾ ಸಾರಾ ಅಬೂಬಕ್ಕರ್, ಅಭಿನಂಧನಾ ಗ್ರಂಥ, ಸಂಪಾದಕರು , ಡಾ ಸಬಿಹಾ ,ಸಿರಿವನ ಪ್ರಕಾಶನ, ಬೆಂಗಳೂರು ,ಪುಟ ಸಂಖ್ಯೆ ೩೫೩
  4. http://www.mangalorean.com/news