ವಿಷಯಕ್ಕೆ ಹೋಗು

ಜಾಂಟಿ ರೋಡ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jonty Rhodes

ಚಿತ್ರ:Flag of ದಕ್ಷಿಣ ಆಫ್ರಿಕಾ.svg [[ಕ್ರಿಕೆಟ್ ತಂಡ|]]
ವೈಯಕ್ತಿಕ ಮಾಹಿತಿ
ಪೂರ್ಣಹೆಸರು Jonathan Neil Rhodes
ಹುಟ್ಟು 7 27 1969
Pietermaritzburg, Natal Province, ದಕ್ಷಿಣ ಆಫ್ರಿಕಾ
ಬ್ಯಾಟಿಂಗ್ ಶೈಲಿ Right-handed
ಬೌಲಿಂಗ್ ಶೈಲಿ Right-arm medium
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ 13 November 1992: v India
ಕೊನೆಯ ಟೆಸ್ಟ್ ಪಂದ್ಯ 10 August 2000: v Sri Lanka
ODI ಪಾದಾರ್ಪಣೆ (cap dead) 26 February 1992: v Australia
ಕೊನೆಯ ODI ಪಂದ್ಯ 12 February 2003: v Kenya
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1988-1998 Natal
1998-2003 KwaZulu-Natal
1999 Ireland
2003 Gloucestershire
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIsFCLA
ಪಂದ್ಯಗಳು 52 245 164 371
ಒಟ್ಟು ರನ್ನುಗಳು 2532 5935 9546 8907
ಬ್ಯಾಟಿಂಗ್ ಸರಾಸರಿ 35.66 35.11 41.14 32.86
೧೦೦/೫೦ 3/17 2/33 22/52 2/51
ಅತೀ ಹೆಚ್ಚು ರನ್ನುಗಳು 117 121 172 121
ಬೌಲ್ ಮಾಡಿದ ಚೆಂಡುಗಳು 12 14 162 80
ವಿಕೆಟ್ಗಳು 0 0 1 2
ಬೌಲಿಂಗ್ ಸರಾಸರಿ 83.00 22.50
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0 0 0 0
೧೦ ವಿಕೆಟುಗಳು ಪಂದ್ಯದಲ್ಲಿ 0 n/a 0 n/a
ಶ್ರೇಷ್ಠ ಬೌಲಿಂಗ್ 1/13 1/2
ಕ್ಯಾಚುಗಳು /ಸ್ಟಂಪಿಂಗ್‍ಗಳು 34/– 105/– 127/– 158/–

ದಿನಾಂಕ 19 July, 2009 ವರೆಗೆ.
ಮೂಲ: CricInfo

ಜೊನಾಥನ್ ನೀಲ್ "ಜಾಂಟಿ" ರೋಡ್ಸ್ (ಜನನ 27 ಜುಲೈ 1969) ಅವರು ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ಮತ್ತು ಒಂದು ದಿನದ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಿದ್ದು, ಇವರು 1992 ರಿಂದ 2003 ರವರೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರವಾಗಿ ಆಟವಾಡಿದ್ದಾರೆ.

ರೋಡ್ಸ್ ಅವರು ದಕ್ಷಿಣ ಆಫ್ರಿಕಾದ ಪೀಟರ್‌ಮ್ಯಾರಿಟ್ಜ್‌ಬರ್ಗ್, ನಟಾಲ್ ಪ್ರಾಂತ್ಯದಲ್ಲಿ ಜನಿಸಿದರು. ಬಲಗೈ ಬ್ಯಾಟ್ಸ್‌ಮನ್ ಆಗಿ ರೋಡ್ಸ್ ಅವರು ತಮ್ಮ ತ್ವರಿತ ಓಡುವಿಕೆಗೆ ಹೆಸರಾಗಿದ್ದರು, ಆದರೆ ಇವರು ಪ್ರಮುಖವಾಗಿ ತಮ್ಮ ಫೀಲ್ಡಿಂಗ್ಗೆ, ನಿರ್ದಿಷ್ಠವಾಗಿ ಮೈದಾನದಲ್ಲಿನ ಫೀಲ್ಡಿಂಗ್ ಮತ್ತು ತಮ್ಮ ಹೆಚ್ಚು ಸಾಮಾನ್ಯ ಸ್ಥಾನವಾದ ಬ್ಯಾಕ್‌ವರ್ಡ್ ಪಾಯಿಂಟ್ನಿಂದ ಚೆಂಡನ್ನು ಎಸೆಯುವುದಕ್ಕೆ ಹೆಸರಾಗಿದ್ದರು. 2005 ರ ಕೊನೆಯ ಭಾಗದಲ್ಲಿ ಕ್ರಿಕ್‌ಇನ್ಫೋ ಸಿದ್ಧಪಡಿಸಿದ ವರದಿಯ ಪ್ರಕಾರ 1999 ಕ್ರಿಕೆಟ್ ವಿಶ್ವಕಪ್ನಿಂದ ರೋಡ್ಸ್ ಅವರು ಒಂದು ದಿನದ ಕ್ರಿಕೆಟ್ ಪಂದ್ಯಗಳಲ್ಲಿ ಯಾವುದೇ ಕ್ಷೇತ್ರರಕ್ಷಕನು ಮಾಡಿದ ಅತ್ಯಂತ ಹೆಚ್ಚಿನ ಸಂಖ್ಯೆಯ ರನ್ ಔಟ್ಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, ಇದು ಮೂರನೇ ಅತ್ಯಂತ ಹೆಚ್ಚಿನ ಯಶಸ್ವಿ ಮಟ್ಟವಾಗಿದೆ.[]

ತಮ್ಮ ವೃತ್ತಿಜೀವನದ ಸಂದರ್ಭದಲ್ಲಿ ರೋಡ್ಸ್ ಅವರು ಗ್ಲೌಸೆಸ್ಟರ್‌ಶೈರ್ ಕಂಟ್ರಿ ಕ್ರಿಕೆಟ್ ಕ್ಲಬ್, ಕ್ವಾಜುಲು-ನಟಾಲ್ ಮತ್ತು ನಟಾಲ್ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದರು. 2000 ರಲ್ಲಿ ರೋಡ್ಸ್ ಅವರು ಟೆಸ್ಟ್ ಕ್ರಿಕೆಟ್‌ನಿಂದ ಮತ್ತು 2003 ಕ್ರಿಕೆಟ್ ವಿಶ್ವ ಕಪ್ ಸಂದರ್ಭದಲ್ಲಿ ಆದ ಗಾಯದ ಬಳಿಕ 2003 ರಲ್ಲಿ ಒಂದು ದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.

ರೋಡ್ಸ್ ಅವರು ಹಾಕಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನೂ ಸಹ ಪ್ರತಿನಿಧಿಸಿದರು, ಮತ್ತು ಇವರನ್ನು ಬಾರ್ಸಿಲೋನಾದಲ್ಲಿ ನಡೆದ 1992 ಒಲಂಪಿಕ್ ಆಟಗಳಿಗೆ ತೆರಳುವ ತಂಡದ ಭಾಗವಾಗಿ ಆಯ್ಕೆ ಮಾಡಲಾಗಿತ್ತು; ಆದರೆ, ಪಂದ್ಯಾವಳಿಗೆ ತೆರಳಲು ತಂಡವು ಅರ್ಹತೆಗಳಿಸಲಿಲ್ಲ.[] 1996 ಒಲಂಪಿಕ್ಸ್ನಲ್ಲಿ ಆಟವಾಡಲು ಪರೀಕ್ಷಾ ಸ್ಪರ್ಧೆಗಳಿಗೆ ರೋಡ್ಸ್ ಅವರನ್ನು ಕರೆಯಲಾಗಿತ್ತು, ಆದರೆ ಮಂಡಿಯ ಗಾಯದ ಪರಿಣಾಮವಾಗಿ ಅವರು ಅರ್ಹತೆ ಗಳಿಸಲಿಲ್ಲ.[]

ವೃತ್ತಿಜೀವನದ ಮುಖ್ಯಾಂಶಗಳು

[ಬದಲಾಯಿಸಿ]

ಟೆಸ್ಟ್‌ ವೃತ್ತಿಜೀವನ

[ಬದಲಾಯಿಸಿ]

1992 ರ ನವೆಂಬರ್ 13 ರಂದು ಅವರ ತವರು ನೆಲವಾದ ಕಿಂಗ್ಸ್‌ಮೇಡ್, ಡರ್ಬಾನ್ನಲ್ಲಿ ನಡೆದ "ಸ್ನೇಹತ್ವ ಪ್ರವಾಸ" ದಲ್ಲಿ ಭಾರತ ವಿರುದ್ಧ ನಡೆದ ಪ್ರಥಮ ಟೆಸ್ಟ್‌ನಲ್ಲಿ ರೋಡ್ಸ್ ಅವರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಯನ್ನು ಮಾಡಿದರು ಮತ್ತು ಈ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ನಲ್ಲಿ 41 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾಗದೇ 26 ರನ್ ಗಳಿಸಿದರು.

1993-1994 ನೇ ಸಾಲಿನಲ್ಲಿ ಮೊರಾಟ್ವಾ ದಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿನ ಮೊದಲೇ ಟೆಸ್ಟ್ ಪಂದ್ಯದಲ್ಲಿ ರೋಡ್ಸ್ ಅವರು ಮೊದಲ ಟೆಸ್ಟ್ ಶತಕವನ್ನು ಬಾರಿಸಿದರು. ಕೊನೆಯ ದಿನದಂದು ಬ್ಯಾಟಿಂಗ್ ಮಾಡುತ್ತಾ, ರೋಡ್ಸ್ ಅವರು ಔಟಾಗದೇ 101 ರನ್ ಬಾರಿಸಿದರು ಮತ್ತು ಕ್ಲೈವ್ ಎಕ್‌ಸ್ಟೀನ್ ಅವರೊಡಗೂಡಿ ಪಂದ್ಯವನ್ನು ಡ್ರಾ ಮಾಡಿಸುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾವು ಎರಡನೇ ಪಂದ್ಯವನ್ನು ಗೆದ್ದು ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.[]

ದಕ್ಷಿಣ ಆಫ್ರಿಕಾದಲ್ಲಿ ನಡೆಯುವ 2003 ಕ್ರಿಕೆಟ್ ವಿಶ್ವಕಪ್ನ ವರೆಗೆ ಆಡುವುದನ್ನು ಮುಂದುವರಿಸುವ ಕಾರಣದಿಂದ ರೋಡ್ಸ್ ಅವರು 2001 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಘೋಷಿಸಿದರು. ಅವರ ಕೊನೆಯ ಟೆಸ್ಟ್ ಪಂದ್ಯವು 2000 ರ ಆಗಸ್ಟ್ 6 ರಂದು ಶ್ರೀಲಂಕಾ ತಂಡದ ವಿರುದ್ಧ ಕೊಲಂಬೋದ ಸಿಂಹಳೀಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಗಿತ್ತು. ರೋಡ್ಸ್ ಅವರು ಈ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 21 ಮತ್ತು 54 ರನ್ ಗಳಿಸಿದರು. ಶ್ರೀಲಂಕಾವು ಈ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿತು.

ಒಂದು ದಿನದ ಪಂದ್ಯಗಳ ವೃತ್ತಿಜೀವನ

[ಬದಲಾಯಿಸಿ]

1992 ರ ಫೆಬ್ರವರಿ 26 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ 1992 ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿನ ಆಸ್ಟ್ರೇಲಿಯ ವಿರುದ್ಧದ ದಕ್ಷಿಣ ಆಫ್ರಿಕಾದ ಪ್ರಾರಂಭಿಕ ಪಂದ್ಯದ ಮೂಲಕ ರೋಡ್ಸ್ ಅವರು ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆಯನ್ನು ಮಾಡಿದರು. ಆಸ್ಟ್ರೇಲಿಯ ತಂಡವು ಮೊದಲು ಬ್ಯಾಟಿಂಗ್ ಮಾಡಿ 170 ರನ್ ಗಳಿಸಿತು ಮತ್ತು ರೋಡ್ಸ್ ಅವರು ರನ್ ಔಟ್ ಮುಖಾಂತರ ಕ್ರೇಗ್ ಮ್ಯಾಕ್‌ಡರ್ಮಾಟ್ ಅವರನ್ನು ಔಟ್ ಮಾಡಿದರು. ದಕ್ಷಿಣ ಆಫ್ರಿಕಾವು 171 ರನ್ ಗಳಿಸಿ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳಿಂದ ಜಯಗಳಿಸಿತು; ರೋಡ್ಸ್ ಅವರು ಬ್ಯಾಟಿಂಗ್ ಮಾಡುವ ಅವಶ್ಯಕತೆ ಉಂಟಾಗಲಿಲ್ಲ.

ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ 1992 ರ ಮಾರ್ಚ್ 8 ರಂದು ಪಾಕಿಸ್ತಾನ ವಿರುದ್ಧ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾದ ಐದನೇ ಪಂದ್ಯದಲ್ಲಿ ರೋಡ್ಸ್ ಅವರು ಪ್ರಖ್ಯಾತಿಗೆ ಬಂದರು. ದಕ್ಷಿಣ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 211 ರನ್ ಗಳಿಸಿತು. ಮಳೆಯು ಅಡ್ಡಿಪಡಿಸಿದ್ದರಿಂದಾಗಿ ಪಾಕಿಸ್ತಾನದ ಇನ್ನಿಂಗ್ಸ್ ಅನ್ನು 36 ಓವರ್‌ಗಳಿಗೆ ಕಡಿತಗೊಳಿಸಲಾಯಿತು ಮತ್ತು ಗುರಿಯನ್ನು 194 ರನ್‌ಗಳಿಗೆ ಪರಿಷ್ಕರಿಸಲಾಯಿತು. ಆಟವು ಮರುಪ್ರಾರಂಭವಾದಾಗ ಇಂಜಮಾಮ್ ಉಲ್ ಹಕ್ ಮತ್ತು ಪಾಕಿಸ್ತಾನದ ನಾಯಕ ಇಮ್ರಾನ್ ಖಾನ್ ಅವರು ಇನ್ನಿಂಗ್ಸ್ ಅನ್ನು ಮರು ಆರಂಭಿಸಿದರು. ಸ್ಕೋರ್ 135/2 ಆಗಿದ್ದ ಸಂದರ್ಭದಲ್ಲಿ, ಆ ಸಂದರ್ಭದಲ್ಲಿ 48 ರನ್‌ಗಳಿಸಿ ಆಟವಾಡುತ್ತಿದ್ದ ಇಂಜಮಾಮ್ ಅವರು ರನ್‌‌ವೊಂದಕ್ಕೆ ಓಡಿದರು ಮತ್ತು ಅವರನ್ನು ಖಾನ್ ಹಿಂದಕ್ಕೆ ಕಳುಹಿಸಿದರು. ಚೆಂಡು ರೋಡ್ಸ್ ಅವರತ್ತ ತೆರಳಿತ್ತು ಮತ್ತು ಅರು ಬ್ಯಾಕ್‌ವರ್ಡ್ ಪಾಯಿಂಟ್‌ನಿಂದ ಓಡಿ ಬಂದು, ಚೆಂಡನ್ನು ಹಿಡಿದು ವಿಕೆಟ್‌ನತ್ತ ಇಂಜಮಾಮ್ ಅವರ ಹಿಂದೆ ಓಡಿದರು. ಕೈಯಲ್ಲಿ ಚೆಂಡನ್ನು ಹಿಡಿದ ರೋಡ್ಸ್ ಅವರು ಮುಂದಕ್ಕೆ ಹಾರಿ ವಿಕೆಟ್‌ನತ್ತ ಚೆಂಡನ್ನು ಎಸೆದು ರನ್ ಔಟ್‌ಗೆ ಕಾರಣರಾದರು. ಪ್ರಖ್ಯಾತ ಛಾಯಾಚಿತ್ರದ ವಿಷಯವಾಗಿದ್ದ ಈ ರನ್ ಔಟ್ ಅನ್ನು ಇನ್ನೂ ಸಹ ವಿಶ್ವಕಪ್‌ನ ಆಕರ್ಷಕ ಚಮತ್ಕಾರವೊಂದಾಗಿ ಪರಿಗಣಿಸಲಾಗಿದೆ ಮತ್ತು ಇದು ರೋಡ್ಸ್ ವೃತ್ತಿಜೀವನದ ಅವಿಸ್ಮರಣೀಯ ಕ್ಷಣವಾಗಿದೆ.[][] ಆ ನಂತರ ಪಾಕಿಸ್ತಾನದ ಇನ್ನಿಂಗ್ಸ್ ಕುಸಿತ ಕಂಡಿತು ಮತ್ತು ಅಂತಿಮವಾಗಿ ಅದರ ಇನ್ನಿಂಗ್ಸ್ 173/8 ಕ್ಕೆ ಕೊನೆಗೊಂಡು ದಕ್ಷಿಣ ಆಫ್ರಿಕಾವು ಇಪ್ಪತ್ತು ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

1993 ರ ನವೆಂಬರ್ 14 ರಂದು ರೋಡ್ಸ್ ಅವರು ಮುಂಬಯಿಯ ಬ್ರಾಬರ್ನ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆಯ ಐದು ಕ್ಯಾಚ್‌ಗಳನ್ನು ಹಿಡಿದು ಕ್ಷೇತ್ರರಕ್ಷಕನೊಬ್ಬನು (ವಿಕೆಟ್‌ ಕೀಪರ್ ಹೊರತುಪಡಿಸಿ) ಮಾಡಿದ ಅತ್ಯಧಿಕ ಔಟ್‌ಗಳ ಸಾಧನೆಯನ್ನು ಮಾಡಿದರು.

ದಕ್ಷಿಣ ಆಫ್ರಿಕಾದಲ್ಲಿ ನಡೆಯುವ 2003 ಕ್ರಿಕೆಟ್ ವಿಶ್ವಕಪ್ ಬಳಿಕ ಒಂದು ದಿನದ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತರಾಗಲು ತಾವು ಯೋಜಿಸಿರುವುದಾಗಿ ರೋಡ್ಸ್ ಅವರು ಘೋಷಿಸಿದರು. ಆದರೆ, ಅವರು ಕೀನ್ಯಾ ವಿರುದ್ಧದ ಪಂದ್ಯವೊಂದರಲ್ಲಿ ಗಾಯಗೊಂಡಾಗ ಅವರು ಪಂದ್ಯಾವಳಿಯನ್ನು ಮೊಟಕುಗೊಳಿಸಬೇಕಾಯಿತು. ಕೀನ್ಯಾದ ಇನ್ನಿಂಗ್ಸ್‌ನಲ್ಲಿ ಮೌರಿಸ್ ಒಡುಂಬೆಯವರು ರೋಡ್ಸ್ ಅವರತ್ತ ಗಾಳಿಯಲ್ಲಿ ಚೆಂಡನ್ನು ಹೊಡೆದರು. ರೋಡ್ಸ್ ಅವರು ಕ್ಯಾಚ್ ಅನ್ನು ಕೈಚೆಲ್ಲಿದರು ಮತ್ತು ಇದರ ನಡುವೆ ತಮ್ಮ ಕೈ ಮುರಿದುಕೊಂಡರು. ಇದು ಗುಣಮುಖವಾಗಲು ನಾಲ್ಕರಿಂದ ಐದು ವಾರಗಳು ತಗುಲಬಹುದೆಂದು ದಕ್ಷಿಣ ಆಫ್ರಿಕಾ ತಂಡದ ವೈದ್ಯಕೀಯ ಸಿಬ್ಬಂದಿಯವರು ಹೇಳಿದರು, ಪರಿಣಾಮವಾಗಿ ರೋಡ್ಸ್ ಅವರು ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಹೊರಗುಳಿದರು. ರೋಡ್ಸ್ ಅವರನ್ನು ತಂಡದಿಂದ ಹಿಂದಕ್ಕೆ ಕರೆಸಿಕೊಳ್ಳಲಾಯಿತು ಮತ್ತು ಅವರ ಬದಲಿಗೆ ಗ್ರೇಮ್ ಸ್ಮಿತ್ ಅವರಿಗೆ ಸ್ಥಾನ ನೀಡಲಾಯಿತು.

ನಿವೃತ್ತಿಯ ನಂತರ

[ಬದಲಾಯಿಸಿ]

ನಿವೃತ್ತಿಯ ನಂತರ ರೋಡ್ಸ್ ಅವರನ್ನು ಅಕೌಂಟ್ ಎಕ್ಸಿಕ್ಯೂಟಿವ್ ಆಗಿ ಸ್ಟಾಂಡರ್ಡ್ ಬ್ಯಾಂಕ್ ನೇಮಕ ಮಾಡಿಕೊಂಡಿತು ಮತ್ತು ಅವರು ದಕ್ಷಿಣ ಆಫ್ರಿಕಾದಲ್ಲಿ ಬ್ಯಾಂಕಿನ ಕ್ರಿಕೆಟ್ ಪ್ರಾಯೋಜಕತ್ವದಲ್ಲಿಯೂ ತೊಡಗಿಸಿಕೊಂಡಿದ್ದಾರೆ.[] ರೋಡ್ಸ್ ಅವರು ಇದೀಗ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಕ್ಷೇತ್ರರಕ್ಷಣೆಯ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[] ರೋಡ್ಸ್ ಅವರನ್ನು ಪ್ರಸ್ತುತ IPL ತಂಡವಾದ ಮುಂಬಯಿ ಇಂಡಿಯನ್ಸ್ ಕ್ಷೇತ್ರರಕ್ಷಣೆಯ ತರಬೇತುದಾರನಾಗಿ ನೇಮಕ ಮಾಡಿಕೊಂಡಿದೆ. ರೋಡ್ಸ್ ಅವರನ್ನು ತಂಡದ ಸಹಾಯಕ ತರಬೇತುದಾರರಾಗಿ ನೇಮಕ ಮಾಡಿಕೊಳ್ಳಲಾಗಿದೆ ಮತ್ತು ಅವರು 2011 ಕ್ರಿಕೆಟ್ ವಿಶ್ವಕಪ್ವರೆಗೆ ತಂಡದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಕೀನ್ಯಾದ ಕ್ರಿಕೆಟ್ ತಂಡವು ಘೋಷಣೆ ಮಾಡಿತು, ಅವರು ಕ್ಷೇತ್ರರಕ್ಷಣೆ ಮತ್ತು ಬ್ಯಾಟಿಂಗ್‌ನಲ್ಲಿ ಕೀನ್ಯಾ ತಂಡಕ್ಕೆ ಸಹಾಯ ಮಾಡಲಿದ್ದಾರೆ []

ರೋಡ್ಸ್ ಅವರು ಪೀಟರ್‌ಮೇರಿಟ್ಜ್‌ಬರ್ಗ್‌ನಲ್ಲಿ 1994 ರ ಏಪ್ರಿಲ್ 16 ರಂದು ಕ್ಯುವಾನ್ ಮ್ಯಾಕ್‌ಕಾರ್ತಿ ಅವರ ಸೋದರ ಮಗಳಾದ ಕೇಟ್ ಮ್ಯಾಕ್‌ಕಾರ್ತಿ ಅವರನ್ನು ವಿವಾಹವಾದರು. ಆನಂತರ ದಂಪತಿಗಳು ಬೇರ್ಪಡೆಯಾದರು.[]

ಪ್ರಶಸ್ತಿಗಳು

[ಬದಲಾಯಿಸಿ]
  • 1999 ರಲ್ಲಿ ರೋಡ್ಸ್ ಅವರನ್ನು ವಿಸ್ಡನ್ ವರ್ಷದ ಕ್ರಿಕೆಟಿಗರಲ್ಲಿ ಓರ್ವ ಆಟಗಾರನಾಗಿ ಚುನಾಯಿಸಲಾಯಿತು.
  • 2004 ರಲ್ಲಿ ರೋಡ್ಸ್ ಅವರನ್ನು SABC3 ನ ಗ್ರೇಟ್ ಸೌತ್ ಆಫ್ರಿಕನ್ಸ್ ದೂರದರ್ಶನ ಸರಣಿಯಲ್ಲಿ ಪ್ರಮುಖ ಪ್ರಮುಖ 100 ಅತ್ಯುತ್ತಮ ದಕ್ಷಿಣ ಆಫ್ರಿಕಾದ ಜನರಲ್ಲಿ 29 ನೇಯವರಾಗಿ ಚುನಾಯಿಸಲಾಯಿತು.

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]

ಉಲ್ಲೇಖಗಳು‌

[ಬದಲಾಯಿಸಿ]
  1. Basevi, Travis (9 November 2005). "Statistics - Run outs in ODIs". Retrieved 5 February 2007. {{cite web}}: Text "publisher Cricinfo" ignored (help)
  2. ೨.೦ ೨.೧ Oliver Brett (2003-02-13). "Fielder of dreams". BBC Sport. Retrieved 2007-01-04.
  3. "Hockey team has an admirer in Rhodes". Rediff.com. 2004-09-02. Retrieved 2007-01-04.
  4. Peter Robinson (28 June 2000). "History favours South Africa". Cricinfo. Retrieved 4 January 2007.
  5. Neil Manthorpe. "Player Profile: Jonty Rhodes". Cricinfo. Retrieved 2007-01-04.
  6. Brad Morgan (2004-01-30). "What are you up to now, Jonty?". SouthAfrica.info. Archived from the original on 2006-11-28. Retrieved 2007-01-04.
  7. ಕ್ರಿಕ್‌ಇನ್ಫೋ - ಬಾಬ್ ಅವರು ನನಗೆ ಕೋಚ್‌ಗಿಂತ ಹೆಚ್ಚಿನವರಾಗಿದ್ದರು - ರೋಡ್ಸ್
  8. http://www.cricinfo.com/kenya/content/story/484116.html
  9. "ಆರ್ಕೈವ್ ನಕಲು". Archived from the original on 2012-09-14. Retrieved 2011-04-20.