ಜರಾವಾ (ಬುಡಕಟ್ಟು ಜನಾಂಗ)
ಒಟ್ಟು ಜನಸಂಖ್ಯೆ | |
---|---|
ಸುಮಾರು ೨೫೦-೪೦೦ 380 (ಭಾರತದ ಜನಗಣತಿ ೨೦೧೧)[೧] | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
ಪಶ್ಚಿಮದ ಭಾಗದ ದಕ್ಷಿಣ ಅಂಡಮಾನ್ ದ್ವೀಪ,ಮಧ್ಯ ಅಂಡಮಾನ್ ದ್ವೀಪ (ಭಾರತ) | |
ಭಾಷೆಗಳು | |
ಜರಾವಾ ಭಾಷೆ, (ಒಂಗನ್ ಭಾಷೆಗಳಲ್ಲಿ ಒಂದು) | |
ಧರ್ಮ | |
ಸಾಂಪ್ರದಾಯಿಕ ಧರ್ಮ | |
ಸಂಬಂಧಿತ ಜನಾಂಗೀಯ ಗುಂಪುಗಳು | |
ಇತರೆ ಸ್ಥಳೀಯ ಅಂಡಮಾನೀಸ್ ಜನರು, ವಿಶೇಷವಾಗಿ ಒಂಗೆ ಜನರು |
ಜರಾವಾ (ಜಾರವಾ, ಜರ್ವಾ) ಗಳು ಭಾರತದ ಅಂಡಮಾನ್ ದ್ವೀಪಗಳ ಸ್ಥಳೀಯ ಬುಡಕಟ್ಟು ಜನರು. ಅಕಾಬೀಯಾ ಭಾಷೆಯಲ್ಲಿ, ಜರಾವಾ ಎಂದರೆ "ಇತರ ಜನರು" ಅಥವಾ "ಅಪರಿಚಿತರು", ಇದು ಗ್ರೇಟ್ ಅಂಡಮಾನೀಸ್ ಅವರಿಂದ ನೀಡಲ್ಪಟ್ಟಿದೆ ಎಂದು ನಂಬಲಾಗಿದೆ. ಆದರೆ ಆದರೆ, ಜರಾವಾ ತಮನ್ನು ಆಂಗ್ ಎಂದು ಕರೆಯುತ್ತಾರೆ. ಸ್ವಲ್ಪ ಸಮಯದ ಹಿಂದೆ ಲಿಟಲ್ ಅಂಡಮಾನ್ ನಿಂದ ಹೊರಟ ವಲಸೆಗಾರರ ವಂಶಸ್ಥರು ರುಟ್ಲ್ಯಾಂಡ್ ದ್ವೀಪ ಮತ್ತು ದಕ್ಷಿಣ ಅಂಡಮಾನಲಿ ಶಸ್ತ್ರಾಸ್ತ್ರಗಳ ಬಲದಿಂದ ನೇಲಸಿದವರು ಎಂದು ನಂಬಲಾಗಿದೆ[೨] ಅವರು ಮಧ್ಯ ಅಂಡಮಾನ್ ಮತ್ತು ದಕ್ಷಿಣ ಅಂಡಮಾನ್ ದ್ವೀಪಗಳ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ 250-400 ಸಂಖ್ಯೆಯ ವ್ಯಕ್ತಿಗಳಿರಬಹುದಾಗಿ ಅಂದಾಜಿಸಲಾಗಿದೆ. ಅವರು ಹೊರಗಿನ ಜನರೊಂದಿಗೆ ಪರಸ್ಪರ ಸಂಬಂಧವನ್ನು ದೂರವಿರಿಸಿದ್ದಾರೆ. ಅವರ ಸಮಾಜ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಇದುವರೆಗು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ [೩]. ಜರಾವಾ ಭಾರತದಲ್ಲಿ ಪರಿಶಿಷ್ಟ ಪಂಗಡವನ್ನಾಗಿ ಗೊತ್ತುಪಡಿಸಲಾಗಿದೆ [೪].
ಜಾರವಾಗಳನ್ನು ಭಾರತದಲ್ಲಿ ಆದಿವಾಸಿ ಗುಂಪು ಎಂದು ಗುರುತಿಸಲಾಗಿದೆ. ಇತರ ಸ್ಥಳೀಯ ಅಂಡಮಾನೀಸ್ ಜನರೊಂದಿಗೆ, ಅವರು ಹಲವು ಸಾವಿರ ವರ್ಷಗಳ ಕಾಲದಿಂದ ಈ ದ್ವೀಪಗಳಿ ವಾಸಿಸುತ್ತಿದ್ದರೆ. ಪ್ರಾಚೀನ ಕಾಲದಿಂದಲೂ ಅಂಡಮಾನ್ ದ್ವೀಪಗಳು ಹೊರಗಿನವರಿಗೆ ತಿಳಿದಿವೆ; ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಕೇಲವರು ಅವರನ್ನು ಭೇಟಿ ಮಡಿದಾರೆ ಮತ್ತು ಅಂತಹ ಸಂಪರ್ಕಗಳು ಪ್ರಧಾನವಾಗಿ ವಿರಳ ಮತ್ತು ತಾತ್ಕಾಲಿಕವಾಗಿರುತ್ತವೆ. ಅವರ ಇತಿಹಾಸದ ಹೆಚ್ಚಿನ ಭಾಗವು ಇತರ ಅಂಡಮಾನೀಸ್ ಗುಂಪುಗಳೊಂದಿಗೆ ಮಾತ್ರ ಗಮನಾರ್ಹ ಸಂಪರ್ಕವನ್ನು ಹೊಂದಿದೆ. ಹಲವು ದಶಕಗಳಲ್ಲಿ ಇವರ ಸಂಪರ್ಕವು ಗಮನಾರ್ಹವಾಗಿ ಕಡಿಮೆಯಾಗಿದೆ.
ಗುಣಲಕ್ಷಣಗಳು, ಸಂಸ್ಕೃತಿ, ಜೀವನ
[ಬದಲಾಯಿಸಿ]ಜರಾವಾ ಮೂಲತಹ ಜಾಂಗಿಲ್ ಬುಡಕಟ್ಟು ಜನಾಂಗದವರಾಗಿದ್ದು ಹಲವು ಶತಮಾನಗಳಿಂದ ಅಥವಾ ಮಿಲಿಯನ್ ವರ್ಷಗಳ ಹಿಂದೆಯೇ ವಿಭಜನೆ ಹೊಂದಿ ಹೊಸ ಜನಾಂಗವಾಗಿ ಬೆಳೆದು ಅಂತಿಮವಾಗಿ ಬದುಕುಳಿದವರು. ಜಾಂಗಿಲ್ (ರುಟ್ಲ್ಯಾಂಡ್ ಐಲೆಂಡ್ ಅಕಾ ಬೀಯಾ ಎಂದು ಸಹ ಕರೆಯಲ್ಪಡುತ್ತದೆ) ೧೯೩೧ ರ ಹೊತ್ತಿಗೆ ನಿರ್ನಾಮವಾಯಿತು[೫]. ಜಾರವಾಗಳು ಸಣ್ಣ ಗಾತ್ರದ, ಕಪ್ಪು ಚರ್ಮದ, ಸಣ್ಣ ಮತ್ತು ಬಿಗಿಯಾದ ಗುಂಗರು ಕೂದಲು, ವಿಶಾಲಾ, ದುಂಡಾದ ತಲೆ ಅವರ ಭೌತಿಕ ಲಕ್ಷಣಗಳಾಗಿವೆ[೬].
ಅವರು ಚಡ್ಡಾ ಎಂದು ಕರೆಯುವ ಸಣ್ಣ ಗುಡಿಸಲುಗಳಲಿ ವಾಸಿಸುತ್ತಾರೆ. ತಮ್ಮ ದೇಹಗಳನ್ನು ಮುಚ್ಚಿಕೊಳ್ಳಲು ಯಾವುದೇ ಉಡುಪು ಬಳಸದಿದ್ದರೂ, ಇತ್ತೀಚಿನ ದಿನಗಳಲ್ಲಿ ಕೆಲವರು ವಿವಿಧ ಮೂಲಗಳಿಂದ ಸಂಗ್ರಹಿಸದ ಬಟ್ಟೆಗಳನ್ನು ಬಳಸುತ್ತಿದಾರೆ. ಸಾಂಪ್ರದಾಯಿಕವಾಗಿ ಜರಾವಾಗಳು ಕಪ್ಪೆಚೀಪು, ಮಣ್ಣಿ, ಎಲೆಗಳಿಂದ ಮಾಡಿದ ವಸ್ತುಗಳನ್ನು ಮತ್ತು ಹೂವುಗಳನ್ನು ಅಲಂಕಾರಕ್ಕೆ ಬಳಸುತ್ತಾರೆ. ಎಲ್ಲ ವಯೋಮಾನದ ಪುರುಷರು ಮತ್ತು ಮಹಿಳೆಯರು ತಮ್ಮ ಮುಖ ಮತ್ತು ದೇಹವನ್ನು ಜೇಡಿಮಣ್ಣಿನಿಂದ ಅಲಂಕರಿಸುತ್ತಾರೆ. ಹಂದಿ ಅಥವಾ ಉಡ ತಿಂದ ನಂತರ ಅವರು ತಮ್ಮ ಮುಖ ಮತ್ತು ದೇಹವನ್ನು ಡಿಮಣ್ಣಿನಿಂದ ಅಲಂಕರಿಸುತ್ತಾರೆ ಹಾಗೂ ವಿನ್ಯಾಸಗಳನ್ನು ಮಾಡುತ್ತಾರೆ. ದೇಹ ಅಲಂಕಾರ ಮತ್ತು ವರ್ಣಚಿತ್ರಗಳು ಅವರ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಭಾಗವಾಗಿದೆ. ಅಲೆಯಂಥ, ಕ್ರಿಸ್-ಕ್ರಾಸ್ ಮತ್ತು ನೇರವಾದ ಕೆಲವು ನಿರ್ದಿಷ್ಟ ಜ್ಯಾಮಿತೀಯ ರೇಖೆಗಳನ್ನು ಮತ್ತು ವಿನ್ಯಾಸಗನ್ನು ಬೆರಳುಗಳು, ಉಗುರುಗಳು, ಚಿಪ್ಪುಗಳು ಅಥವಾ ಮರದ ಕೊರೆಯಚ್ಚುಗಳಿಂದ ರಚಿಸುತ್ತಾರೆ. ಇದನ್ನು ಅವರು ಥಾಂಟಾಂಗ್ ಎಂದು ಕರೆಯುತಾರೆ [೭].
ಸಂಪರ್ಕ, ವಸಾಹತುಗಳು ಮತ್ತು ಸ್ಥಳಾಂತರ
[ಬದಲಾಯಿಸಿ]19 ನೇ ಶತಮಾನಕ್ಕೆ ಮುಂಚಿತವಾಗಿ, ಜರಾವಾಗಳು ದಕ್ಷಿಣ ಅಂಡಮಾನ್ ಮತ್ತು ಹತ್ತಿರದ ದ್ವೀಪಗಳ ಆಗ್ನೇಯ ಭಾಗದಲ್ಲಿ ನೆಲೆಗೊಂಡಿದ್ದರು. 1789ರಲ್ಲಿ ಬ್ರಿಟಿಷ್ ವಸಾಹತು ಸ್ಥಾಪನೆಯೊಂದಿಗೆ ಅವರ ಜೋತೆ ಬಂದ ರೋಗದಿಂದಾಗಿ ಕೆಲವೇ ದಿನಗಳಲ್ಲಿ ಜರಾವಾ ಜನಸಂಖ್ಯೆ ಕ್ಷೀಣಿಸಿತು. ಕ್ರಮೇಣ ಜಾರಾವಾಗಳು ಪಶ್ಚಿಮ ಪ್ರದೇಶಗಳನ್ನು ತೆರೆದು ದಕ್ಷಿಣ ಮತ್ತು ಮಧ್ಯ ಅಂಡಮಾನ್ ಗಳನ್ನು ಹೊಸ ನೆಲೆಗಳನ್ನಾಗಿ ಮಾಡಿಕೊಂಡರು. ವಸಾಹತುಶಾಹಿ ಅಧಿಕಾರಿಗಳು ಹರಡುತ್ತಿದ್ದ ಅಫೀಮು ಮತ್ತು ಮದ್ಯ ಜರಾವಾ ಜನಸಂಖ್ಯೆ ಕ್ಷೀಣಿಸಲು ಒಂದು ಕಾರಣವಯಿತು. ಎರಡು ಶತಮಾನಗಳ ಹಿಂದೆ ಪ್ರಾರಂಭವಾದ ಭಾರತೀಯ ಮತ್ತು ಬರ್ಮಾ ವಸಾಹತುಗಾರರ ವಲಸೆ ಕೂಡ ಅವರ ಅವನತಿಗೆ ಕಾರಣವಾಗಿದೆ[೮].. 1997 ರಲ್ಲಿ ಸ್ಥಳೀಯ ಜನರೊಂದಿಗೆ ತಮ್ಮ ಸಂಪರ್ಕವನ್ನು ಪ್ರಾರಂಭಿಸುವ ಮೊದಲು, ಹೊರಗಿನ ಗುಂಪುಗಳಿಂದ ತಮ್ಮ ಸ್ವಾತಂತ್ರ್ಯ ಮತ್ತು ಪ್ರತ್ಯೇಕತೆಯನ್ನು ಕಾಪಾಡಿಕೊಂಡಿದರು ಹಾಗೂ ಹೊರಗಿನ ಜನರ ಆಕ್ರಮಣಗಳು ಮತ್ತು ಸಂಪರ್ಕದ ಪ್ರಯತ್ನಗಳನ್ನು ವಿಫಲಗೊಲಿಸುತ್ತಿದರು. 1998 ರಿಂದ ಅವರು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತಿದ್ದಾರೆ, ವಿಶೇಷವಾಗಿ ಪ್ರವಾಸಿಗರೊಮ್ದಿಗೆ, ಇಂತಹ ಸಂಪರ್ಕಗಳು ರೋಗಗಳನ್ನು ಹರಡಬಹುದಗಿದ್ದು ಜರಾವಾ ಜನಾಂಗಕ್ಕೆ ಬಹಳ ಅಪಾಯಕಾರಿಯಾಗಿದೆ [೯]. ಮೂಲ ಅಂಡಾಮೀಸ್ ಜನರಲ್ಲಿ, ಕೇವಲ ಸೆಂಟಿನೆಲೀಸ್ ಮಾತ್ರ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕದಿಂದ ಇದುವರೆಗು ದೂರವಿದ್ದಾರೆ, ಆದರು ಅವರ ಸಮಾಜ ಮತ್ತು ಸಂಪ್ರದಾಯಗಲ್ಲಿ ಬದಲವಣೆಗಳನ್ನು ಗುರಿತಿಸಲಗಿದೆ. ಇಂದು ಜರಾವಾಗಳು ಅಂಡಮಾನ್ ಟ್ರಂಕ್ ರಸ್ತೆಯಬದಿಯಲ್ಲಿ, ಅದರ ಬದಿಯಲ್ಲಿರುವ ಮಾರುಕಟ್ಟೆಯಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಮೀಸಲು ನೆಲೆಗಲ್ಲಿ ಪ್ರತಿದಿನ ಹೊರಗಿನವರ ಸಂಪರ್ಕ ಮಾಡುತ್ತಿದಾರೆ. ಈಗ ಕೆಲವು ಜರಾವಾ ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ, ಅವರಿಗೆ ವಿದ್ಯಾಭ್ಯಾಸ ಕೊಡಿಸಲು ಪ್ರಯತ್ನಿಸಿಲಾಗಿತ್ತಿದೆ[೧೦]. ಅಂಡಮಾನ್ ಟ್ರಂಕ್ ರಸ್ತೆ ಅವರ ಉಳಿವಿಗೆ ಒಂದು ಕಂಟಕವೆಗಿದೆ, ಅದು ಅವರ ಮೀಸಲು ನೆಲೆಗಳ ಮೂಲಕ ಹಾದುಹೊಗುತ್ತದೆ. ಜಾರವಾಗಳು ಅಂಡಮಾನ್ ದ್ವೀಪಗಳಲ್ಲಿ ಉಳಿದಿರುವ ನೆರ್ಗಿಟೊ ಜನಾಂಗದ ಏಕೈಕ ಅವಶೇಷಗಳಾಗಿದಾರೆ [೧೧].
1997ರಲ್ಲಿ ಕೆಲವೊಂದು ಜರಾವಾಗಳು ತಮ್ಮ ಕಾಡಿನ ಹೊರಗೆ ಮೊದಲ ಬಾರಿಗೆ ಹತ್ತಿರದ ನೆಲೆಗಳನ್ನು ಭೇಟಿ ಮಾಡಲು ಪ್ರಾರಂಭಿಸಿದವು. ಅದಾದ ಕೆಲವು ತಿಂಗಳೊಳಗೆ ಗಂಭೀರ ದಡಾರ ಸಾಂಕ್ರಾಮಿಕ ರೋಗಕ್ಕೆ ತುತ್ತಾದರು. 2006 ರಲ್ಲಿ ಜರಾವಾಗಳು ಮತ್ತೊಂಮೇ ದಡಾರಕ್ಕೆ ಬಲಿಯದರು[೧೨].
ಬೇಟೆ ಮತ್ತು ಆಹಾರ
[ಬದಲಾಯಿಸಿ]ಜರಾವಾ ಒಂದು ಅಲೆಮಾರಿ ಬುಡಕಟ್ಟು ಜನಾಂಗವಾಗಿದು, ಬಿಲ್ಲು, ಬಾಣಗಳು ಮತ್ತು ಇತರ ಕಲ್ಲುಗಳಿಂದ ಮಾಡಿದ ಸಾಧನಗಳನ್ನು ಬೇಟೆಯಾಡಲು ಬಳಸುತ್ತಾರೆ. ಜಾರವಾ ಬಿಲ್ಲು ಅನ್ನು "ಆವೋ" ಎಂದು ಕರೆಯುತ್ತಾರೆ. ಬಿಲ್ಲುಗಳನ್ನು ಚೂಇಡ್ (ಸಗೆಕಾ ಎಲಿಪ್ಟಿಕ) ಎಂಬ ಮರದ ರೇಂಬೆಗಳಿಂದ ಮಾಡುತ್ತಾರೆ. ಬಾಣವನ್ನು'ಪಾತೋ' ಎಂದು ಕರೆಯುತ್ತಾರೆ. ವಿವಿಧ ಬಗೆಯ ಬಾಣಗಳನ್ನು ಬೇಟೆ ಮತ್ತು ರಕ್ಷಣಾಗಾಗಿ ಬಳಸುತ್ತಾರೆ. ಸಣ್ಣ ಬಾಣಗಳನ್ನು ಅರೆಕ್ಕಾ ವುಡ್ (ಅರೆಕ್ಕಾ ಟ್ರೈಂಡಾ) ನಿಂದ ತಯಾರಿಸುತ್ತಾರೆ. ಉದ್ದವಾದ ಬಾಣಗಳನ್ನು ಮುರ್ರಾಯ ಪ್ಯಾನ್ಯುಲಾಟಾ ಎಂಬ ಮರದ ಕಾಂಡದಿಂದ ತಯಾರಿಸಲಾಗುತ್ತದೆ. ಈಟಿಯನ್ನು ತಯಾರಿಸಲು ಅದೇ ಕಾಂಡವನ್ನು ಬಳಸಲಾಗುತ್ತದೆ.ಸರಳವಾದ ಬಾಣದ ಸರಾಸರಿ ಉದ್ದವು ಸುಮಾರು 100 ಸೆಂ ಮೀ. ಕಬ್ಬಿಣದ ತಲೆ ಬಾಣವನ್ನು "ಆಟಹೋ" ಎಂದು ತಮ್ಮ ಭಾಷೆಯಲ್ಲಿ ಕರೆಯೂತ್ತಾರೆ. ಬೇಟೆಯಾಡಲು ಅಥವಾ ಯಾವುದೇ ದಾಳಿಗೆ ಹೋಗಬೇಕೆಂದರೆ ಅವರ ಕೆಕಾಡ್" ಎಂಬ ಎದೆ ಕವಚವನ್ನು ತೊಡುತ್ತಾರೆ. "ಎಂದು ಕರೆಯುತ್ತಾರೆ [೧೩] [೧೪]
ಅವರು ಸ್ಥಳೀಯ ಕಾಡು ಹಂದಿಗಳು, ಉಡಗಳನ್ನು ಬೇಟೆಯಾಡುತ್ತಾರೆರೆ . ಮೊದಲು ಬೇಟೆಯಾಡಲು ನಾಯಿಗಳನ್ನು ಸಾಕುತ್ತಿರಲಿಲ್ಲ, ಆದರೆ ಇತ್ತೀಚೆಗೆ ಓಂಜಸ್ ಮತ್ತು ಅಂಡಮಾನೀಸ್ ಗಳ ಹಾಗೆ ನಾಯಿಗಳನ್ನು ಸಾಕುತ್ತಿದಾರೆ. ಇವರು ದ್ವೀಪ ಬುಡಕಟ್ಟುಯಾದ್ದರಿಂದ, ಸಾಗರದಲ್ಲಿನ ಆಹಾರ ಮೂಲಗಳು ಅವರಿಗೆ ಹೆಚ್ಚು ಮುಖ್ಯವಾಗಿದೆ. ಪುರುಷರು ಆಳವಿಲ್ಲದ ನೀರಿನಲ್ಲಿ ಬಿಲ್ಲು ಮತ್ತು ಬಾಣಗಳಿಂದ ಮೀನು ಹಿಡಿಯುತ್ತಾರೆ. ಮಹಿಳೆಯರು ಬುಟ್ಟಿಗಳೊಂದಿಗೆ ಮೀನು ಹಿಡಿಯುತ್ತಾರೆ. ಮೃಧ್ವಂಗಿಗಳು, ಡುಗಾಂಗ್ಗಳು ಮತ್ತು ಕದಲ ಆಮೆಗಳು ಜರಾವಾ ಆಹಾರದ ಪ್ರಮುಖ ಭಾಗವಾಗಿದೆ. ಮಾಂಸ ಮತ್ತು ಕಡಲ ಆಹಾರದ ಜೊತೆಗೆ, ಜಾರವಾಗಳು ಅರಣ್ಯದಿಂದ ಹಣ್ಣು, ಗೆಡ್ಡೆಗಳು ಮತ್ತು ಜೇನುತುಪ್ಪವನ್ನು ಸಂಗ್ರಹಿಸತ್ತಾ[೧೫] [೧೬].
ಜರಾವಾ ಜನಾಂಗದ ಇಂದಿನ ಸ್ಥಿತಿಗತಿ
[ಬದಲಾಯಿಸಿ]ವ್ಯಾಪಕವಾದ ಜರಾವಾ ಭೂಮಿ ಅತಿಕ್ರಮಣ ಮತ್ತು ವ್ಯಾಪಾರೀ ಶೋಷಣೆಗೆ ಒಳಗಾಗಿ ಜರಾವಾ ಜನಾಂಗವು ನಸಿಸುತ್ತಿದೆ. ೧೯೭೦ ರ ದಶಕದಲ್ಲಿ ಅವರ ಹೊಸ ಪಶ್ಚಿಮ ಅರಣ್ಯ ತಾಯ್ನಾಡಿನ ಮೂಲಕ ಗ್ರೇಟ್ ಅಂಡಮಾನ್ ಟ್ರಂಕ್ ರಸ್ತೆಯನ್ನು ರಚಿಸಲಾಯಿತು. ಇದರಿಂದ ಜರಾವಾಗಳು ಪ್ರತಿದಿನ ಹೊರಗಿನವರ ಸಂಪರ್ಕ ಮಾಡುವಂತಯಿತು. ಜರಾವಾ ಜನಾಂಗದ ಉಳಿವಿಗಾಗಿ ಅಂಡಮಾನ್ ಮತ್ತು ನಿಕೋಬಾರ್ ಪರಿಸರ ವಿಜ್ಞಾನದ ಸೊಸೈಟಿ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಪುಣೆ ಮೂಲದ ಕಲ್ಪಾವಿಕ್ಷ್ ಅವರು ಅರ್ಜಿಯಲ್ಲಿ ಸೇರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹುದಡಿದರು. ೨೦೦೧ ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಹೆದ್ದಾರಿಯ ಯೋಜಿತ ವಿಸ್ತರಣೆಗಳನ್ನು ನಿಷೇಧಿಸಿತು, ಜರಾವಾಗಲನ್ನು ಸಂಪರ್ಕದಿಂದ ಮತ್ತು ಆಕ್ರಮಣದಿಂದ ರಕ್ಷಿಸಲು ಹಾಗೂ ಅವರನ್ನು ಸ್ಥಳಾಂತರಿಸುವ ಯಾವುದೇ ಕಾರ್ಯಕ್ರಮವನ್ನು ನಿಲ್ಲಿಸಲು ಆದೇಶಿಸಿತು[೧೭].
ಪ್ರವಾಸೋದ್ಯಮದ ಪರಿಣಾಮ
[ಬದಲಾಯಿಸಿ]ಖಾಸಗಿ ಕಂಪನಿಗಳು ನಿರ್ವಹಿಸುವ ದೃಶ್ಯವೀಕ್ಷಣೆಯ ಪ್ರವಾಸಗಳ ಪರಿಣಾವಾಗಿ, ಪ್ರವಾಸಿಗರು ಜರಾವಾಗಳ ವೀಕ್ಷಣೆ, ಛಾಯಾಚಿತ್ರ ಅಥವಾ ಸಂವಹನ ನಡೆಸಲು ಪ್ರಯತ್ನಿಸುತ್ತರೆ, ಇದು ಭಾರತೀಯ ಕಾನೂನಿನಡಿಯಲ್ಲಿ ಕಾನೂನು ಬಾಹಿರ. ಜರಾವಾಗಳು ಸಾಮಾನ್ಯವಾಗಿ ಹೆದ್ದಾರಿಯಿಂದ ಭಿಕ್ಷುಕನಾಗುತ್ತಾರೆ ಇದು ಒಂದು ಪ್ರಮುಖ ಸಮಸ್ಯೆಯಾಗಿದೆ. ಮಾರ್ಚ್ 2008 ರಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ಪ್ರವಾಸೋದ್ಯಮ ಇಲಾಖೆಯು ಜರಾವಾಗಳ ಸಂಪರ್ಕವನ್ನು, ಛಾಯಾಚಿತ್ರಗಳು, ಮೀಸಲು ಭೂಮಿ ಮೂಲಕ ಸಂಚರಿಸುವಾಗ ವಾಹನಗಳನ್ನು ನಿಲ್ಲಿಸುವುದು ಅಥವಾ ಸವಾರಿಗಳನ್ನು ಒದಗಿಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರವಾಸ ನಿರ್ವಾಹಕರಿಗೆ ಹೊಸ ಎಚ್ಚರಿಕೆ ನೀಡಿತು. ಮೂಲನಿವಾಸಿ ನಿಯಂತ್ರಣ, ೧೯೫೬ ರ ರಕ್ಷಣೆಯಡಿಯಲ್ಲಿ ಮತ್ತು ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನದ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಯಿತು[೧೮].
ಜನವರಿ ೨೧, ೨೦೧೩ ರಂದು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎಚ್.ಎಲ್.ಗೋಖಲೆ ಅವರ ಪೀಠವು ಜರಾವಾ ಪ್ರದೇಶದ ಮೂಲಕ ಹಾದುಹೋಗುವ ರಸ್ತೆಯನ್ನು ಮುಚ್ಚಲು ಮಧ್ಯಂತರ ಆದೇಶವನ್ನು ಹೊರಡಿಸಿತು. ಈ ಆದೇಶಕ್ಕೆ ಪ್ರತಿಕ್ರಿಯೆಯಾಗಿ, ಸ್ಥಳೀಯ ನಿವಾಸಿಗಳ ಪರವಾಗಿ ಅರ್ಜಿ ಸಲ್ಲಿಸಲಾಯಿತು. ಇಂದು ಅಂಡಮಾನ್ ಟ್ರಂಕ್ ರಸ್ತೆ ಅತ್ಯಂತ ಪ್ರಮುಖವಾದ ಮಾರ್ಗವಾಗಿದೆ ಮತ್ತು 350 ಕ್ಕಿಂತ ಹೆಚ್ಚು ಗ್ರಾಮಗಳನ್ನು ಸಂಪರ್ಕಿಸುತ್ತದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಮಾರ್ಚ್ ೫, ೨೦೧೩ ರಂದು ತನ್ನ ಹಿಂತೆಗೆದುಕೊಂಡಿತು, ರಸ್ತೆ ಸಂಪೂರ್ಣ ಮರು-ತೆರೆಯಲು ಅವಕಾಶ ಮಾಡಿಕೊಟ್ಟಿತು, ಆದರೆ ವಾಹನಗಳು ದಿನಕ್ಕೆ ನಾಲ್ಕು ಬಾರಿ ಮಾತ್ರ ಬೆಂಗಾವಲುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಿತು [೧೯].
ಉಲ್ಲೇಖಗಳು
[ಬದಲಾಯಿಸಿ]- ↑ http://www.censusindia.gov.in/2011census/PCA/SC_ST/PCA-A11_Appendix/ST-35-PCA-A11-APPENDIX.xlsx
- ↑ http://censusindia.gov.in/Ad_Campaign/drop_in_articles/06-Enumeration_of_Primitive_Tribes_in_A&N_Islands.pdf
- ↑ Kumar, Pramod (2012). Descriptive and Typological study of Jarawa (Ph.D.). Jawaharlal Nehru University
- ↑ https://web.archive.org/web/20131107225208/http://censusindia.gov.in/Tables_Published/SCST/ST%20Lists.pdf
- ↑ https://books.google.co.in/books?id=fiavPYCz4dYC&redir_esc=y
- ↑ http://www.and.nic.in/archives/C_Charter/Dir_tw/ecr/saa-2.pdf
- ↑ http://www.and.nic.in/archives/C_Charter/Dir_tw/ecr/saa-2.pdf
- ↑ Luigi Luca Cavalli-Sforza, Francesco Cavalli-Sforza (1995), The Great Human Diasporas: The History of Diversity and Evolution
- ↑ https://www.survivalinternational.org/tribes/jarawa
- ↑ https://web.archive.org/web/20090505064005/http://www.andaman.org/BOOK/originals/PandyaWelfare/pandya-jarawawelfare.htm
- ↑ "ಆರ್ಕೈವ್ ನಕಲು". Archived from the original on 2017-03-12. Retrieved 2017-03-12.
- ↑ http://news.bbc.co.uk/2/hi/south_asia/4987406.stm
- ↑ http://nopr.niscair.res.in/bitstream/123456789/564/1/IJTK%207%281%29%20%282008%29%2037-41.pdf
- ↑ http://www.and.nic.in/archives/C_Charter/Dir_tw/ecr/saa-2.pdf
- ↑ https://www.jstor.org/stable/40467418?seq=1#page_scan_tab_contents
- ↑ http://www.and.nic.in/archives/C_Charter/Dir_tw/ecr/saa-2.pdf
- ↑ http://www.indiatogether.org/gtroad-society
- ↑ https://hindi.oneindia.com/news/2008/03/05/nation-people-andaman-nicobar-jarawa-tribes.html
- ↑ http://www.bbc.com/news/world-asia-india-21681120