ಜಡ ಅನಿಲ

ವಿಕಿಪೀಡಿಯ ಇಂದ
Jump to navigation Jump to search

ಜಡ ಅನಿಲವು ನೀಡಿದ ಪರಿಸ್ಥಿತಿಗಳ ಅಡಿಯಲ್ಲಿ ರಾಸಾಯನಿಕ ಪ್ರತಿಕ್ರಿಯೆಗೆ ಒಳಗಾಗದ ಒಂದು ಅನಿಲ. ಇವು ಸಾಮಾನ್ಯವಾಗಿ ಹಲವಾರು ವಸ್ತುಗಳೊಡನೆ ರಾಸಾಯನಿಕ ಪ್ರತಿಕ್ರಿಯೆ ನೀಡದಂತಹ ಒಂದು ಅನಿಲ. ಜಡ ಅನಿಲಗಳನ್ನು ಒಂದು ಮಾದರಿಯ ಅನಗತ್ಯ ರಾಸಾಯನಿಕ ಪ್ರತಿಕ್ರಿಯೆಯನ್ನು ತಪ್ಪಿಸಲು ಬಳಸಲಾಗುತ್ತದೆ. ಈ ಅನಪೇಕ್ಷಿತ ರಾಸಾಯನಿಕ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಗಾಳಿಯಲ್ಲಿರುವ ಆಕ್ಸಿಜನ್ ಮತ್ತು ತೇವಾಂಶ ಉತ್ಕರ್ಷಣ ಮತ್ತು ಜಲವಿಚ್ಛೇದನೆಯ ಪ್ರತಿಕ್ರಿಯೆಗಳು. ಜಡ ಅನಿಲ ಎಂಬ ಪದವು ಸಂದರ್ಭಕ್ಕೆ ಅವಲಂಬಿಸಿ ಉಪಯೋಗಿಸಲ್ಪಡುವ ಶಬ್ದ ಏಕೆಂದರೆ ನೋಬಲ್ ಅನಿಲಗಳಾದ ಹಲವಾರು ಅನಿಲಗಳನ್ನು ಕೆಲವು ಪರಿಸಿತ್ಥಿಗಳಲ್ಲಿ ಪ್ರತಿಕ್ರಿಯಿಸುವಂತೆ ಮಾಡಬಹುದಾಗಿದೆ. ಶುದ್ಧೀಕರಿಸಿದ ಆರ್ಗಾನ್ ಮತ್ತು ಸಾರಜನಕ ಅನಿಲಗಳು ಸಾಮಾನ್ಯವಾಗಿ ತಮ್ಮ ಹೆಚ್ಚಿನ ನೈಸರ್ಗಿಕ ಸಮೃದ್ಧಿ ಮತ್ತು ಕಡಿಮೆ ಸಂಬಂಧಿತ ವೆಚ್ಚಗಳ ಕಾರಣದಿಂದ ಬಳಸಲಾಗುತ್ತದೆ. ನೋಬಲ್ ಅನಿಲಗಳು ಸಾಮಾನ್ಯವಾಗಿ ಧಾತುರೂಪದ ಅಂಶಗಳು. ಆದರೆ ಜಡ ಅನಿಲಗಳು ಅಗತ್ಯವಾಗಿ ಧಾತುರೂಪದವು ಅಲ್ಲ, ಅವು ಸಾಮಾನ್ಯವಾಗಿ ಒಂದು ಸಂಯುಕ್ತ ಅನಿಲ. ನೋಬಲ್ ಅನಿಲಗಳಂತೆಯೇ ಜಡ ಅನಿಲಗಳ ಅಪ್ರತಿಕ್ರಿಯೆಯ ಪ್ರವೃತ್ತಿಗೆ ಕಾರಣ ಅದರ ಹೊರಗಿನ ಎಲೆಕ್ಟ್ರಾನ್ ಶೆಲ್ಲಿನ ಸಂಪೂರ್ಣತೆ.

"https://kn.wikipedia.org/w/index.php?title=ಜಡ_ಅನಿಲ&oldid=967639" ಇಂದ ಪಡೆಯಲ್ಪಟ್ಟಿದೆ