ಚೀಜ಼್‍ಕೇಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Baked cheesecake with raspberries and blueberries.jpg

ಚೀಜ಼್‍ಕೇಕ್ ಒಂದು ಅಥವಾ ಹೆಚ್ಚು ಪದರಗಳನ್ನು ಹೊಂದಿರುವ ಒಂದು ಸಿಹಿ ಖಾದ್ಯ. ಮುಖ್ಯ, ಮತ್ತು ಅತ್ಯಂತ ದಪ್ಪನೆಯ ಪದರ ಮೃದು, ತಾಜಾ ಚೀಸ್ (ಸಾಮಾನ್ಯವಾಗಿ ಕ್ರೀಮ್ ಚೀಸ್ ಅಥವಾ ರೀಕಾಟಾ), ಮೊಟ್ಟೆಗಳು, ಮತ್ತು ಸಕ್ಕರೆಯ ಮಿಶ್ರಣವನ್ನು ಹೊಂದಿರುತ್ತದೆ; ಕೆಳ ಪದರವಿದ್ದರೆ ಅದು ಹಲವುವೇಳೆ ಪುಡಿಮಾಡಿದ ಕುಕಿಗಳು (ಅಥವಾ ಡೈಜೆಸ್ಟಿವ್ ಬಿಸ್ಕಿಟ್), ಗ್ರೇಯಮ್ ಕ್ರ್ಯಾಕರ್‍ಗಳು, ಪೇಸ್ಟ್ರಿ, ಅಥವಾ ಸ್ಪಂಜ್ ಕೇಕ್‍ನಿಂದ ತಯಾರಿಸಲಾದ ಒಂದು ಹಕ್ಕಳೆ ಅಥವಾ ಬುಡವನ್ನು ಹೊಂದಿರುತ್ತದೆ. ಅದು ಬೇಕ್ ಆಗಿರಬಹುದು ಅಥವಾ ಆಗದೇ ಇರಬಹುದು (ಸಾಮಾನ್ಯವಾಗಿ ಫ್ರಿಜ್‍ನಲ್ಲಿಡಲಾಗುತ್ತದೆ).