ಚಿತ್ರಗುಪ್ತ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದ್ರಗುಪ್ತ ದೇವಾಲಯ, ಖಜುರಾಹೊ

ಚಿತ್ರಗುಪ್ತ ದೇವಾಲಯವು ಭಾರತದ ಮಧ್ಯ ಪ್ರದೇಶ ರಾಜ್ಯದ ಖಜುರಾಹೊ ಪಟ್ಟಣದಲ್ಲಿ ಸ್ಥಿತವಾಗಿರುವ ೧೧ ನೇ ಶತಮಾನದ ಸೂರ್ಯ ದೇವಾಲಯವಾಗಿದೆ. ವಾಸ್ತುಕಲಾರೀತ್ಯ ಇದು ಹತ್ತಿರದ ಜಗದಂಬಿ ದೇವಾಲಯವನ್ನು ಬಹಳವಾಗಿ ಹೋಲುತ್ತದೆ.

ಶಾಸನ ಸಾಕ್ಷ್ಯಾಧಾರಗಳನ್ನು ಆಧರಿಸಿ, ದೇವಾಲಯದ ನಿರ್ಮಾಣದ ಕಾಲಮಾನವು ಕ್ರಿ.ಶ. 1020-1025 ಎಂದು ನಿರ್ಧರಿಸಬಹುದು. ಪ್ರಾಯಶಃ ಇದನ್ನು 23 ಫ಼ೆಬ್ರುವರಿ 1023 ರಂದು, ಮಹಾ ಶಿವರಾತ್ರಿಯ ಸಂದರ್ಭದಂದು ಪವಿತ್ರೀಕರಿಸಲಾಯಿತು.[೧]

ಇದು ಪ್ರದಕ್ಷಿಣಾ ಪಥವಿರುವ ಒಂದು ಒಳಕೋಣೆ, ಮುಖಮಂಟಪ, ಬಾಹುಗಳಿರುವ ಮಹಾಮಂಟಪ, ಮತ್ತು ಒಂದು ಪ್ರವೇಶದ್ವಾರ ಮಂಟಪವನ್ನು ಹೊಂದಿದೆ. ದೊಡ್ಡ ಹಜಾರವು ಅಷ್ಟಕೋನಾಕೃತಿಯ ಛಾವಣಿಯನ್ನು ಹೊಂದಿದ್ದು ಜಗದಂಬಿ ದೇವಾಲಯದಲ್ಲಿನ ಅನುಗುಣವಾದ ಛಾವಣಿಗಿಂತ ಹೆಚ್ಚು ಅಲಂಕೃತವಾಗಿದೆ.

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಗ್ರಂಥಸೂಚಿ[ಬದಲಾಯಿಸಿ]

  • Ali Javid; Tabassum Javeed (2008). World Heritage Monuments and Related Edifices in India. Algora. ISBN 978-0-87586-482-2. {{cite book}}: Invalid |ref=harv (help)
  • "Chitragupta Temple". Archaeological Survey of India, Bhopal Circle. Retrieved 2016-11-16.
  • "Alphabetical List of Monuments - Madhya Pradesh". Archaeological Survey of India, Bhopal Circle. Archived from the original on 2 November 2016. Retrieved 2016-11-16.
  • Deepak Kannal (1995). "Khajuraho: beginning of new iconological cycle". In R. T. Vyas (ed.). Studies in Jaina Art and Iconography and Allied Subjects. Abhinav Publications. ISBN 978-81-7017-316-8. {{cite book}}: Invalid |ref=harv (help)
  • Margaret Prosser Allen (1991). Ornament in Indian Architecture. University of Delaware Press. ISBN 978-0-87413-399-8. {{cite book}}: Invalid |ref=harv (help)
  • Rana P. B. Singh (2009). Cosmic Order and Cultural Astronomy. Cambridge Scholars. ISBN 9781443816076. {{cite book}}: Invalid |ref=harv (help)