ವಿಷಯಕ್ಕೆ ಹೋಗು

ಚಿತ್ತೂರು ವೇಣುಗೋಪಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೇಜರ್ ಜನರಲ್

ಚಿತ್ತೂರು ವೇಣುಗೋಪಾಲ್

ಪರಮ ವಿಷ್ಟ ಸೇವಾ ಪದಕ, ಮಹಾ ವೀರ ಚಕ್ರ
ಜನನ(೧೯೨೭-೧೧-೧೪)೧೪ ನವೆಂಬರ್ ೧೯೨೭
ತಿರುಪತಿ, ಆಂಧ್ರ ಪ್ರದೇಶ
ಮರಣ27 April 2021(2021-04-27) (aged 93)
ತಿರುಪತಿ, ಆಂಧ್ರ ಪ್ರದೇಶ
ವ್ಯಾಪ್ತಿಪ್ರದೇಶ India
ಶಾಖೆ Indian Army
ಸೇವಾವಧಿ೧೯೫೦–೧೯೮೬
ಶ್ರೇಣಿ(ದರ್ಜೆ) ಮೇಜರ್ ಜನರಲ್
ಘಟಕ೫/೧ ಗುರ್ಕಾ
ಅಧೀನ ಕಮಾಂಡ್೫/೧ ಗುರ್ಕಾ
ಭಾಗವಹಿಸಿದ ಯುದ್ಧ(ಗಳು)೧೯೭೧ ರ ಭಾರತ-ಪಾಕಿಸ್ತಾನ ಯುದ್ಧ
ಪ್ರಶಸ್ತಿ(ಗಳು)

ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲ ಅವರು (೧೪ ನವೆಂಬರ್ ೧೯೨೭-೨೭ ಏಪ್ರಿಲ್ ೨೦೨೧) ಭಾರತೀಯ ಸೇನೆಯ ದಂಡ ನಾಯಕರಾಗಿದ್ದರು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು.[]

ಆರಂಭಿಕ ಜೀವನ

[ಬದಲಾಯಿಸಿ]

ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲರು ಆಂಧ್ರಪ್ರದೇಶತಿರುಪತಿಯಲ್ಲಿ ೧೯೨೭ರ ನವೆಂಬರ್ ೧೪ರಂದು ಜನಿಸಿದರು. ಅವರ ತಂದೆಯ ಹೆಸರು ಶ್ರೀ ಸಿ. ಚಿನ್ನಸ್ವಾಮಿ.

ಸೇನಾ ವೃತ್ತಿಜೀವನ

[ಬದಲಾಯಿಸಿ]

ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲರನ್ನು ೧೯೫೦ರ ಡಿಸೆಂಬರ್ ೧೦ ರಂದು ೧ ನೇ ಗೂರ್ಖಾ ರೈಫಲ್ಸ್ (ದಿ ಮಲೌನ್ ರೆಜಿಮೆಂಟ್)ನಲ್ಲಿ ಭಾರತೀಯ ಸೇನೆಗೆ ನಿಯೋಜಿಸಲಾಯಿತು.

೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿದ್ದರು ಮತ್ತು ಪೂರ್ವ ವಲಯದ ಜೆಸ್ಸೋರ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ೫/೧ ಗೂರ್ಖಾ ರೈಫಲ್ಸ್ ಬೆಟಾಲಿಯನ್ ಅನ್ನು ಕಮಾಂಡಿಂಗ್‌ ಮಾಡುತ್ತಿದ್ದರು. ೧೯೭೧ರ ಡಿಸೆಂಬರ್ ೪ ರಂದು, ಅವರ ತುಕಡಿಯು ಉತ್ತಾಲಿ ಮತ್ತು ದರ್ಶನದಲ್ಲಿ ಉತ್ತಮವಾದ ಭದ್ರತೆಯ ಪಾಕಿಸ್ತಾನದ ನೆಲೆಗಳನ್ನು ಎದುರಿಸಿತು, ಇವು ವಿಸ್ತಾರವಾದ ಸಂವಹನ ಕಂದಕಗಳೊಂದಿಗೆ ಪರಸ್ಪರ ಸಂಪರ್ಕ ಹೊಂದಿದ ಕಾಂಕ್ರೀಟ್ ಪಿಲ್ಬಾಕ್ಸ್ಗಳ ಸರಣಿಯನ್ನು ಹೊಂದಿದ್ದವು. ಲೆಫ್ಟಿನೆಂಟ್ ಕರ್ನಲ್ ವೇಣುಗೋಪಾಲರು ದಾಳಿಯ ಯೋಜನೆಯನ್ನು ರೂಪಿಸಿದರು. ಅದನ್ನು ಅವರು ವೈಯಕ್ತಿಕವಾಗಿ ಮುನ್ನಡೆಸಿದರು. ಎರಡು ಸ್ಥಾನಗಳನ್ನು ವಶಪಡಿಸಿಕೊಂಡ ನಂತರ, ೫/೧ ಗೂರ್ಖಾ ರೈಫಲ್ಸ್ ಬೆಟಾಲಿಯನ್ ಶತ್ರು ಪಡೆಗಳನ್ನು ಬೆನ್ನಟ್ಟಿತು. ಇದು ಮೂರು ದಿನಗಳ ನಂತರ ಜೆನಿಡಾವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಅವರ ನಾಯಕತ್ವ ಮತ್ತು ಆಕ್ರಮಣಕಾರಿ ಯುದ್ಧ ಯೋಜನೆಗಳಿಂದಾಗಿ ಸೇನೆಯು ದೊಡ್ಡ ಲಾಭಗಳನ್ನು ಗಳಿಸಿದ್ದಕ್ಕಾಗಿ, ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "LT COL CHITOOR VENUGOPAL MAHA VIR CHAKRA". Indian Army, Govt of India official website.
  2. Chakravorty, B. (1995). Stories of Heroism: PVC & MVC Winners (in ಇಂಗ್ಲಿಷ್). 112: Allied Publishers. p. 367. ISBN 9788170235163.{{cite book}}: CS1 maint: location (link)
  3. "Maj Gen Chittoor Venugopal, PVSM, MVC". The War Decorated India & Trust.