ಚಿಟ್ಟು ಗಿಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚಿಟ್ಟು ಗಿಳಿ
Loriculus vernalis -Ganeshgudi, Karnataka, India -male-8-1c.jpg
Male in Karnataka, India
Conservation status
ವೈಜ್ಞಾನಿಕ ವರ್ಗೀಕರಣ
Kingdom: Animalia
Phylum: Chordata
Class: Aves
Order: Psittaciformes
Superfamily: Psittacoidea
Family: Psittaculidae
Subfamily: Agapornithinae
Genus: Loriculus
Species: L. vernalis
ದ್ವಿಪದ ಹೆಸರು
Loriculus vernalis
Sparrman, 1787

ಚಿಟ್ಟು ಗಿಳಿ (Indian lorikeet), ಇದನ್ನು ಹೊಟ್ಟು ಗಿಳಿ ಎಂದೂ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Loriculus vernalis.

ವಿವರಣೆ[ಬದಲಾಯಿಸಿ]

ಇವು ಕೇವಲ 14ಸೆಂ.ಮೀ ಉದ್ದವಿರುವ, ಭಾರತದ ಅತೀ ಪುಟ್ಟ ಗಿಳಿಗಳು. ದಟ್ಟ ಹಸಿರು ಮೈ ಬಣ್ಣದ ಈ ಗಿಳಿಗಳ ಹೊಟ್ಟೆಯ ಭಾಗ ಹಳದಿ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿದೆ. ಇವುಗಳು ನಸು ಹಳದಿ ಮಿಶ್ರಿತ ಕೆಂಪು ಕೊಕ್ಕನ್ನು ಹೊಂದಿವೆ. ಬಾಲದ ಮೇಲೆ ಕಪ್ಪು ಮಚ್ಚೆ ಇರುತ್ತದೆ.

ವ್ಯಾಪ್ತಿ[ಬದಲಾಯಿಸಿ]

ಈ ಗಿಳಿಗಳು ಸಹ್ಯಾದ್ರಿಯ ಕಾಡುಗಳಿಗೂ ಮತ್ತು ಅರೆ ಮಲೆನಾಡು ಪ್ರದೇಶಗಳಿಗೂ ಸೀಮಿತವಾಗಿವೆ.

ಆಹಾರ[ಬದಲಾಯಿಸಿ]

ಹೂವಿನ ರಸ ಮತ್ತು ಚಿಕ್ಕ ಹಣ್ಣುಗಳು ಇವುಗಳ ಆಹಾರ.

ಸಂತಾನೋತ್ಪತ್ತಿ[ಬದಲಾಯಿಸಿ]

ಇವುಗಳು ಮರಿಮಾಡುವ ಕಾಲ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಇರುತ್ತದೆ. ಇವು ಮರದ ಪೊಟರೆಯಲ್ಲಿ ಗೂಡು ಮಾಡಿ 2 ರಿಂದ 4 ಮೊಟ್ಟೆಗಳನ್ನು ಇಡುತ್ತವೆ.

  1. BirdLife International (2012). "Loriculus vernalis". IUCN Red List of Threatened Species. Version 2012.1. International Union for Conservation of Nature. Retrieved 16 July 2012.