ಚಿಕನ್-ಎಂಬ ವಿಶಿಷ್ಠ ಕಸೂತಿ ಕಲೆ
ನಮ್ಮ ದೇಶದ, ’ಉತ್ತರ ಪ್ರದೇಶ’ದ ಸುಪ್ರಸಿದ್ಧ ’ಕಸೂತಿ ಕಲೆ ಇದಾಗಿದೆ. ’ಲಖ್ನೋ’ ಪಟ್ಟಣದ ಕಲಾಕಾರರು, ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಮೇಲೆ, ಚಿತ್ತಾರ ರಚಿಸುವ ಈ ಕಲೆ, ಸುಮಾರು, ಮೂರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಕಲೆ ಮೂಲತಃ ’ಪರ್ಷಿಯಾ’ ದೇಶದ್ದು. (ಇಂದಿನ ಇರಾನ್) ’ಮುಘಲ್ ಬಾದಷಾ ಜಹಾಂಗೀರ್', ನ ಪತ್ನಿ, 'ನೂರ್ ಜಹಾನ್' ಳ ಪ್ರಯತ್ನದಿಂದ ಈ ಕಲೆ ಭಾರತ ತಲುಪಿರಬಹುದೆಂದು ಕೆಲವರ ಅಭಿಪ್ರಾಯ. ದೆಹಲಿಯಲ್ಲಿ 'ಮುಘಲ'ರ ಪ್ರಾಬಲ್ಯ ಕಡಿಮೆಯಾದಂದತೆ, 'ಚಿಕನ್ ಕಲೆ'ಯನ್ನೇ ಜೀವನೋಪಾಯಕ್ಕೆ ಅವಲಂಭಿಸಿದ್ದ ಕಾರೀಗಾರರು, ಜೀವನದ ನಿರ್ವಹಣೆಗೆ, ದಕ್ಷಿಣದ 'ಅವಧ್' ರಾಜ್ಯಕ್ಕೆ ವಲಸೆ ಬಂದರು. 'ಅವಧ್ ನವಾಬ'ರೂ ಈ ಕಲೆಗೆ ಪ್ರೋತ್ಸಾಹ ಕೊಟ್ಟರು. ಹಾಗಾಗಿ ಅಂದಿನ ದಿನಗಳಲ್ಲಿ 'ಚಿಕನ್' ಕಲೆಯಿಂದ ಶೋಭಿತ ವಸ್ತ್ರಗಳು 'ಲಖ್ನೋ' ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದ್ದವು.
ಚಿಕನ್ ಕಲೆಯ ವೈಶಿಷ್ಟ್ಯ
[ಬದಲಾಯಿಸಿ]'ಕಸೂತಿ'ಯನ್ನು ಹತ್ತಿಯ ಸೀರೆ ಮುಂತಾದ ವಸ್ತ್ರಗಳ ಮೇಲೆ ಮೂಡಿಸಬಹುದು, 'ಕುರ್ತಾ-ಸಲ್ವಾರ್' ಉಡುಪಿನ ಮೇಲೂ ಸೃಷ್ಟಿಸಬಹುದು. ಮೊದಲು ಬಟ್ಟೆಗಳ ಮೇಲೆ ಸೂಕ್ಷ್ಮವಾದ ವಿನ್ಯಾಸವನ್ನು ನಿರ್ಮಿಸಿ, ನಂತರ, 'ಕಸೂತಿ'ಯ ವಿನ್ಯಾಸಗಳಿಂದ ತುಂಬಲಾಗುತ್ತದೆ. 'ಚಿಕನ್' ಪ್ರಕಾರದ ಚಿತ್ರಕಲೆಯಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಭಿನ್ನ ಪ್ರಕಾರದ ವೈವಿಧ್ಯಮಯ ಮಾದರಿಯ ಕಸೂತಿ ಹೊಲಿಗೆಗಳಿವೆ.
ಜಾಲಿವರ್ಕ್
[ಬದಲಾಯಿಸಿ]ಈ ಪದ್ಧತಿಯಲ್ಲಿ ಚಿಕ್ಕಚಿಕ್ಕ ವಿನ್ಯಾಸಗಳನ್ನು ಕತ್ತರಿಸಿ, ಕಸೂತಿಯ ಜಾಲರಿಗಳಿಂದ ತುಂಬಿಸುವ 'ಜಾಲಿವರ್ಕ್' ಎಂಬ 'ವಿಶೇಷ ಕಸೂತಿ ಶೈಲಿ', ಇವುಗಳಲ್ಲಿ ಒಂದು ವಿಶಿಷ್ಟ ಮಾದರಿಯೆಂದು 'ಚಿಕನ್ ಕಲೆ'ಯನ್ನು ಬಲ್ಲವರು ಹೇಳುತ್ತಾರೆ.
ಬೇಡಿಕೆ ಹೆಚ್ಚು
[ಬದಲಾಯಿಸಿ]'ಚಿಕನ್ ಕಸೂತಿಯಿಂದ ಅಲಂಕೃತವಾದ ವಸ್ತ್ರ'ಗಳಿಗೆ, 'ಸೀರೆ, ಸಲ್ವಾರ್-ಕಮೀಜ್ ಉಡುಪು'ಗಳಿಗೆ 'ವಿದೇಶ' ಗಳಲ್ಲಿ ಭಾರಿ ಬೇಡಿಕೆಯಿದೆ.